ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

31 ವರ್ಷಕ್ಕೆ ನಿವೃತ್ತಿಯ ಕಾರಣ ಬಹಿರಂಗಪಡಿಸಿದ ದೊಡ್ಡ ಗಣೇಶ್

Dodda Ganesh Opens Up On His Early Retirement From The Game

ಕರ್ನಾಟಕ ರಣಜಿ ತಂಡದಲ್ಲಿ ದೊಡ್ಡ ಗಣೇಶ್ ಸಾಕಷ್ಟು ಖ್ಯಾತಿಯನ್ನು ಪಡೆದ ಆಟಗಾರ. ಭಾರತ ರಾಷ್ಟ್ರೀಯ ತಂಡವನ್ನೂ ಪ್ರತಿನಿಧಿಸಿದ್ದ ಈ ವೇಗದ ಬೌಲರ್ ಕ್ರಿಕೆಟ್‌ಗೆ ಬೇಗನೆ ನಿವೃತ್ತಿಯನ್ನು ಘೋಷಿಸಿದ್ದರು. 31ನೇ ವಯಸ್ಸಿನಲ್ಲಿ ಕ್ರಿಕೆಟ್ ಇನ್ನೂ ಸಾಕಷ್ಟು ಉಳಿದಿರುವಂತೆಯೇ ನಿವೃತ್ತಿ ಘೋಷಿಸಿದ್ದು ಕುತೂಹಲಕ್ಕೂ ಕಾರಣವಾಗಿತ್ತು. ಆದರೆ ಈಗ ಈ ಪ್ರಶ್ನೆಗೆ ಸ್ವತಃ ದೊಡ್ಡ ಗಣೇಶ್ ಪ್ರತಿಕ್ರಿಯಿಸಿದ್ದಾರೆ.

ಕರ್ನಾಟಕ ತಂಡವನ್ನು ರಣಜಿಯಲ್ಲಿ ಪ್ರತಿನಿಧಿಸುತ್ತಿದ್ದ ಭಾರತ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದರು, ಆದರೆ ಅಲ್ಲಿ ಗಮನಾರ್ಹ ಪ್ರದರ್ಶನ ನೀಡುವಲ್ಲಿ ವಿಫಲರಾಗಿ ತಂಡದಿಂದ ಹೊರಬಿದ್ದರು. ನಾಲ್ಕು ಟೆಸ್ಟ್ ಹಾಗೂ ಒಂದು ಏಕದಿನ ಪಂದ್ಯದಲ್ಲಷ್ಟೇ ದೊಡ್ಡ ಗಣೇಶ್ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಅವರು ಅದ್ಭುತ ಪ್ರದರ್ಶನ ಮುಂದುವರಿದಿತ್ತು.

ನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳುನೀವು ಇಂದಿಗೂ ನಿಜವೆಂದು ನಂಬಿರುವ ಕ್ರಿಕೆಟ್ ಲೋಕದ 3 ಅತಿ ದೊಡ್ಡ ಸುಳ್ಳುಗಳು

ಆದರೆ ದೊಡ್ಡ ಗಣೇಶ್ 31ನೇ ವಯಸ್ಸಿಗೆ ನಿವೃತ್ತಿಯನ್ನು ತೆಗೆದುಕೊಳ್ಳುವುದು ಉತ್ತಮ ಎಂಬ ನಿರ್ಧಾರಕ್ಕೆ ಬಂದಿದ್ದರು. ಅದಕ್ಕೆ ಕಾರಣವನ್ನೂ ಅವರು ನೀಡಿದ್ದಾರೆ. ಕರ್ನಾಟಕ ತಂಡದಲ್ಲಿದ್ದ ಯುವ ಕ್ರಿಕೆಟಿಗರಿಗೆ ಅವಕಾಶವನ್ನು ನೀಡಬೇಕು ಎಂಬುದು ಅವರ ಮನಸಿನಲ್ಲಿ ಬಂದಿತ್ತು ಎಂದು ಅವರು ಹೇಳಿಕೊಂಡಿದ್ದಾರೆ.

"ಆ ಸಂದರ್ಭದಲ್ಲಿ ವಿನಯ್ ಕುಮಾರ್ ಬರುತ್ತಿದ್ದರು. ಅವರ ತಂಡದಲ್ಲಿ ಅವಕಾಶಕ್ಕಾಗಿ ಸಾಕಷ್ಟು ಕಷ್ಟಪಡುತ್ತಿದ್ದರು. ಅಭಿಮನ್ಯು ಮಿಥುನ್ ಕೂಡ ಸಾಕಷ್ಟು ಪರಿಶ್ರಮ ಪಡುತ್ತಿದ್ದರು. ಈ ಯುವ ಆಟಗಾರರಿಗೆ ತಾನು ಅಡ್ಡಿಯಾಗುತ್ತಿದ್ದೇನೆ ಎನಿಸಿತ್ತು. ನಾನಂತು ಮತ್ತೆ ರಾಷ್ಟ್ರೀಯ ತಂಡವನ್ನು ಸೇರುವುದು ಸಾಧ್ಯವಿಲ್ಲ ಎನಿಸಿದ ಕಾರಣ ನಿವೃತ್ತಿಯ ನಿರ್ಧಾರಕ್ಕೆ ಬಂದಿದ್ದೆ ಎಂದು ಸ್ಪೋರ್ಟ್ಸ್ ಕೀಡಾ ಸುದ್ದಿ ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ದೊಡ್ಡ ಗಣೇಶ್ ಹೇಳಿದ್ದಾರೆ.

ಸ್ಟೀವ್ ವಾಗೆ ಬೆದರಿಕೆ ಹಾಕಿದ್ದ ಅಂಬ್ರೋಸ್: 25 ವರ್ಷಗಳ ನಂತರ ಕಾರಣ ಬಹಿರಂಗಸ್ಟೀವ್ ವಾಗೆ ಬೆದರಿಕೆ ಹಾಕಿದ್ದ ಅಂಬ್ರೋಸ್: 25 ವರ್ಷಗಳ ನಂತರ ಕಾರಣ ಬಹಿರಂಗ

ವಿನಯ್ ಕುಮಾರ್ ಪರಿಶ್ರಮವನ್ನು ನೋಡುತ್ತಿದ್ದಾಗ ಆತನಿಗೆ ಸುದೀರ್ಘ ವರತ್ತಿ ಜೀವನವಿದೆ ಎನಿಸಿತ್ತು. ಆತ ಕಳೆದ ವರ್ಷದವರೆಗೂ ಕರ್ನಾಟಕ ತಂಡವನ್ನು ಪ್ರತಿನಿಧಿಸಿದ್ದರು, ನಾಯಕನಾಗಿಯೂ ಮುನ್ನಡೆಸಿದ್ದರು. ಹಲವು ಪ್ರಶಸ್ತಿಗಳನ್ನು ಕರ್ನಾಟಕಕ್ಕೆ ತಂದುಕೊಟ್ಟಿದ್ದಾರೆ ಎಂದು ದೊಡ್ಡ ಗಣೇಶ್ ಹೇಳಿದ್ದಾರೆ.

Story first published: Wednesday, May 27, 2020, 18:01 [IST]
Other articles published on May 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X