ಟಿ20 ವಿಶ್ವಕಪ್‌ನಿಂದ ಹಿಂದೆ ಸರಿಯಬೇಕಾ ಕೊಹ್ಲಿ, ರೋಹಿತ್?: ದೊಡ್ಡ ಗಣೇಶ್ ಹೇಳಿದ್ದಿಷ್ಟು!

ಪ್ರತಿ ಆವೃತ್ತಿಯ ಐಪಿಎಲ್‌ನಲ್ಲಿಯೂ ಅನೇಕ ಯುವ ಪ್ರತಿಭೆಗಳು ಬೆಳಕಿಗೆ ಬರುವುದು ಸಾಮಾನ್ಯ. ಆದರೆ ಈ ಬಾರಿಯ ಆವೃತ್ತಿಯಲ್ಲಿ ಸಾಕಷ್ಟು ಭರವಸೆಯ ಕ್ರಿಕೆಟ್ ಅಭಿಮಾನಿಗಳ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡು ವಿಭಾಗದಲ್ಲಿಯೂ ಅದ್ಭುತ ಪ್ರದರ್ಶನಗಳು ಯುವ ಆಟಗಾರರಿಂದ ವ್ಯಕ್ತವಾಗುತ್ತಿದೆ. ಈ ಮೂಲಕ ಭಾರತೀಯ ಕ್ರಿಕೆಟ್ ತಂಡದಲ್ಲಿ ಅವಕಾಶ ಪಡೆಯಲು ಬಲವಾಗಿ ಕದ ತಟ್ಟುತ್ತಿದ್ದಾರೆ ಕೆಲ ಯುವ ಕ್ರಿಕೆಟಿಗರು.

ಹೀಗೆ ಯುವ ಪ್ರತಿಭೆಗಳ ಪ್ರದರ್ಶನದಿಂದ ಭಾರತೀಯ ಕ್ರಿಕೆಟ್ ಅಭಿಮಾನಿಗಳು ಸಂತಸ ಪಡುತ್ತಿದ್ದರೆ ಮತ್ತೊಂದೆಡೆ ಅನುಭವಿ ಆಟಗಾರರ ಪ್ರದರ್ಶನ ಅಷ್ಟೇ ಆತಂಕಕಾರಿಯಾಗಿದೆ. ಅದರಲ್ಲೂ ಭಾರತೀಯ ಕ್ರಿಕೆಟ್‌ನ ಅಗ್ರ ಆಟಗಾರರಾದ ವಿಶ್ವಶ್ರೇಷ್ಠ ಕ್ರಿಕೆಟಿಗರು ಎನಿಸಿಕೊಂಡಿರುವ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಇಬ್ಬರೂ ಈ ಬಾರಿಯ ಆವೃತ್ತಿಯಲ್ಲಿ ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಸ್ಥಿರ ಪ್ರದರ್ಶನ ನೀಡಲು ವಿಫಲ, ರನ್‌ರೇಟ್‌ನಲ್ಲಿ ಹಿನ್ನಡೆ, ಉತ್ತಮ ಆರಂಭವನ್ನು ದೊಡ್ಡ ಮೊತ್ತವನ್ನಾಗಿ ಪರಿವರ್ತಿಸಲು ಅಸಾಧ್ಯವಾಗುತ್ತಿರುವುದು ಈ ಇಬ್ಬರು ಆಟಗಾರರ ಪ್ರದರ್ಶನ ಕಳೆಗುಂದಲು ಕಾರಣವಾಗಿದೆ.

ಎಂಎಸ್ ಧೋನಿ ಬದಲಿಗೆ ಜಡೇಜಾರನ್ನು ಕ್ಯಾಪ್ಟನ್ ಮಾಡಿದ್ದು ತಪ್ಪು ನಿರ್ಧಾರ; CSKಗೆ ಬೆಂಡೆತ್ತಿದ ಸೆಹ್ವಾಗ್ಎಂಎಸ್ ಧೋನಿ ಬದಲಿಗೆ ಜಡೇಜಾರನ್ನು ಕ್ಯಾಪ್ಟನ್ ಮಾಡಿದ್ದು ತಪ್ಪು ನಿರ್ಧಾರ; CSKಗೆ ಬೆಂಡೆತ್ತಿದ ಸೆಹ್ವಾಗ್

ಈ ಕಳಪೆ ಪ್ರದರ್ಶನದ ಕಾರಣದಿಂದಾಗಿ ಕೆಲ ಕ್ರಿಕೆಟ್ ಪ್ರೇಮಿಗಳು ಮುಂದಿನ ವಿಶ್ವಕಪ್‌ನಿಂದ ಈ ಇಬ್ಬರು ದಿಗ್ಗಜ ಕ್ರಿಕೆಟ್ ಆಟಗಾರರು ಹಿಣದಕ್ಕೆ ಸರಿಯಲಿ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಈ ವಿಚಾರವಾಗಿ ಕೆಲ ಚರ್ಚೆಗಳು ನಡೆದಿದ್ದು ಇದಕ್ಕೆ ಮಾಜಿ ಕ್ರಿಕೆಟಿಗ ದೊಡ್ಡ ಗಣೇಶ್ ಗಮನಾರ್ಹ ಉತ್ತರವನ್ನು ನೀಡಿದ್ದಾರೆ.

"2007ರಲ್ಲಿ ಅನುಭವಿಗಳು ಮಾಡಿದ ನಿರ್ಧಾರ ಕೊಹ್ಲಿ, ರೋಹಿತ್ ಮಾಡಲಿ"

ಕ್ರಿಕೆಟ್ ವಿಶ್ಲೇಷಕ ಅರುಣ್ ಗೋಪಾಲಕೃಷ್ಣನ್ ಎಂಬವರು ಟ್ವಿಟ್ಟರ್‌ನಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದರು. 2007ರ ಟಿ20 ವಿಶ್ವಕಪ್‌ನಲ್ಲಿ ಸಚಿನ್ ತೆಂಡೂಲ್ಕರ್, ರಾಹುಲ್ ದ್ರಾವಿಡ್ ಹಾಗೂ ಇತರ ಅನುಭವಿ ಆಟಗಾರರು ಟಿ20 ವಿಶ್ವಕಪ್‌ನ ಭಾಗವಾಗದಿರಲು ನಿರ್ಧರಿಸಿದ್ದರು. ಅದೇ ರೀತಿಯಾಗಿ ಕಳಪೆ ಫಾರ್ಮ್‌ನಲ್ಲಿರುವ ಕಾರಣದಿಂದಾಗಿ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಿಂದ ತಾವಾಗಿಯೇ ಹಿಂದಕ್ಕೆ ಸರಿಯಲಿ" ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಇದು ಅಸಂಭವ ಎಂದ ದೊಡ್ಡ ಗಣೇಶ್

ಇದು ಅಸಂಭವ ಎಂದ ದೊಡ್ಡ ಗಣೇಶ್

ಈ ಟ್ವೀಟ್‌ಗೆ ದೊಡ್ಡ ಗಣೇಶ್ ಪ್ರತಿಕ್ರಿಯೆ ನೀಡಿದ್ದಾರೆ. ಈ ರೀತಿಯ ನಿರ್ಧಾರವನ್ನು ನಿರೀಕ್ಷಿಸುವುದು ಅಸಾಧ್ಯ ಎಂದಿರುವ ದೊಡ್ಡ ಗಣೇಶ್ ಅದಕ್ಕೆ ಕಾರಣವನ್ನೂ ನೀಡಿದ್ದಾರೆ. 2007ರಲ್ಲಿ ಇದ್ದ ಪರಿಸ್ಥಿತಿ ಹಾಗೂ ಈಗಿನ ಸ್ಥಿತಿ ಭಿನ್ನವಾಗಿದ್ದು ಈ ಹಂತದಲ್ಲಿ ವಿರಾಟ್ ಹಾಗೂ ರೋಹಿತ್ ಶರ್ಮಾ ಅವರಿಂದ ಆ ರೀತಿಯ ನಿರ್ಧಾರ ನಿರೀಕ್ಷಿಸುವುದು ಅಸಾಧ್ಯ ಎಂದಿದ್ದಾರೆ ದೊಡ್ಡ ಗಣೇಶ್.

"ಟಿ20 ಮಾದರಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ"

ಟಿ20 ವಿಶ್ವಕಪ್‌ನಿಂದ ಹಿಂದಕ್ಕೆ ಸರಿಯುವ ಚರ್ಚೆಗೆ ದೊಡ್ಡ ಗಣೇಶ್ ಈ ರೀತಿಯಾಗಿ ಪ್ರತಿಕ್ರಿಯಿಸಿದ್ದಾರೆ. "ಇದನ್ನು ನಿರೀಕ್ಷಿಸುವುದು ಅಸಾಧ್ಯ. 2007ರಲ್ಲಿ ಹಿರಿಯ ಆಟಗಾರರು ಟಿ20 ಮಾದರಿಯನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಟಿ20 ವಿಶ್ವಕಪ್‌ನಿಂದ ಅನುಭವಿ ಆಟಗಾರರು ಹಿಂದಕ್ಕೆ ಸರಿಯಲು ಅದೇ ಪ್ರಮುಖ ಕಾರಣವಾಗಿತ್ತು. ಆದರೆ ಈಗ ಟಿ20 ವಿಶ್ವಕಪ್‌ನ ಗಾತ್ರ ದೊಡ್ಡದಾಗಿದೆ. ಇದನ್ನು ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಳೆದುಕೊಳ್ಳಲು ಇಚ್ಚಿಸುವುದಿಲ್ಲ" ಎಂದಿದ್ದಾರೆ ದೊಡ್ಡ ಗಣೇಶ್.

David Warner ಶತಕ ಗಳಿಸಲು ಬಹಳ ಹತ್ತಿರದಲ್ಲಿದ್ದರು | Oneindia Kannada
ವರ್ಷಾಂತ್ಯದಲ್ಲಿ ನಡೆಯಲಿದೆ ಟಿ20 ವಿಶ್ವಕಪ್

ವರ್ಷಾಂತ್ಯದಲ್ಲಿ ನಡೆಯಲಿದೆ ಟಿ20 ವಿಶ್ವಕಪ್

ಈ ಬಾರಿ ವರ್ಷಾಂತ್ಯದಲ್ಲಿ ಟಿ20 ವಿಶ್ವಕಪ್ ಆಸ್ಟ್ರೇಲಿಯಾದಲ್ಲಿ ನಡೆಯಲಿದೆ. ಅಕ್ಟೋಬರ್ ನವೆಂಬರ್ ಅವಧಿಯಲ್ಲಿ ಈ ಪ್ರತಿಷ್ಟಿತ ಟೂರ್ನಮೆಂಟ್ ನಡೆಯಲಿದ್ದು ಎಲ್ಲಾ ತಂಡಗಳು ತೀವ್ರ ಪೈಪೋಟಿ ನಡೆಸಲಿದೆ. ಕಳೆದ ಬಾರಿಯ ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾ ತಂಡವೇ ಚಾಂಪಿಯನ್ ಆಗಿದ್ದು ತೀವ್ರ ಕುತೂಹಲ ಮೂಡಿಸಿದೆ. ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾದ ಪ್ರಮುಖ ಆಟಗಾರರು ಫಾರ್ಮ್ ಕಳೆದುಕೊಂಡಿರುವುದು ತಂಡದ ಮ್ಯಾನೇಜ್‌ಮೆಂಟ್‌ನ ಚಿಂತೆ ಹೆಚ್ಚಿಸಿದೆ. ಟಿ20 ವಿಶ್ವಕಪ್‌ಗೆ ಮುನ್ನ ನಡೆಯಲಿರುವ ಕೆಲ ಸರಣಿಗಳು ಭಾರತಕ್ಕೆ ಬಹಳ ಪ್ರಮುಖ ಎಂಬುದು ಸ್ಪಷ್ಟ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Thursday, May 5, 2022, 18:59 [IST]
Other articles published on May 5, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X