ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪ್ರಥಮ ದರ್ಜೆ ಕ್ರಿಕೆಟ್ ಆರಂಭದ ಬಗ್ಗೆ ಮಹತ್ವದ ಹೇಳಿಕೆ ನೀಡಿದ ಬಿಸಿಸಿಐ ಅಧ್ಯಕ್ಷ ಗಂಗೂಲಿ

Domestic Cricket Will Happen Only After Coronavirus‌ says ganguly

ಐಪಿಎಲ್‌ಗೆ ದಿನಾಂಕ ಹೊಂದಿಸುವ ಪ್ರಯತ್ನದಲ್ಲಿರುವ ಬಿಸಿಸಿಐ ಪ್ರಥಮ ದರ್ಜೆ ಕ್ರಿಕೆಟ್ ಬಗ್ಗೆ ತನ್ನ ನಿರ್ಧಾರವನ್ನು ತೆಗೆದುಕೊಂಡಿದೆ. ಕೊರೊನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬಾರದ ಹೊರತು ದೇಸಿ ಕ್ರಿಕೆಟ್ ಟೂರ್ನಿ ಆರಂಭವಾಗದು ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದಾರೆ.

ದೇಶೀಯ ಕ್ರಿಕೆಟ್‌ನಲ್ಲಿ ಆಟಗಾರರು ಅಂತಾರಾಜ್ಯ ಪ್ರಯಾಣವನ್ನು ಮಾಡಬೇಕಿರುತ್ತದೆ. ಭಾರತ ದೊಡ್ಡ ದೇಶವಾಗಿದ್ದು ಪ್ರತೀ ಪಂದ್ಯಕ್ಕೂ ಆಟಗಾರರು ಬಹಳಷ್ಟು ಪ್ರಯಾಣ ಮಾಡಬೇಕಿರುತ್ತದೆ. ಸದ್ಯದ ಮಟ್ಟಿಗೆ ಈ ರೀತಿ ಪ್ರಯಾಣ ಆರೋಗ್ಯಕರವಲ್ಲ ಎಂದಿದ್ದಾರೆ ಸೌರವ್ ಗಂಗೂಲಿ.

ರೋಹಿತ್ ಟೀಮ್ ಇಂಡಿಯಾ ನಾಯಕನಾಗಲಿ: ಶರ್ಮಾ ಬೆಂಬಲಕ್ಕೆ ಐವರು ಹಿರಿಯ ಕ್ರಿಕೆಟಿಗರುರೋಹಿತ್ ಟೀಮ್ ಇಂಡಿಯಾ ನಾಯಕನಾಗಲಿ: ಶರ್ಮಾ ಬೆಂಬಲಕ್ಕೆ ಐವರು ಹಿರಿಯ ಕ್ರಿಕೆಟಿಗರು

ಯುವ ಆಟಗಾರರನ್ನು ಈ ಸಂದರ್ಭದಲ್ಲಿ ಮೈದಾನಕ್ಕಿಳಿಸಲು ಸಾಧ್ಯವಿಲ್ಲ. ದೇಶ ಸುರಕ್ಷಿತವಾಗದ ಹೊರತು ದೇಶೀಯ ಕ್ರಿಕೆಟ್‌ ಆರಂಭವಾಗುವುದಿಲ್ಲ ಎಂದು ಗಂಗೂಲಿ ಸ್ಪಷ್ಟವಾಗಿ ತಿಳಿಸಿದ್ದಾರೆ. ಕೊರೊನಾ‌ವೈರಸ್ ನಿಯಂತ್ರಣಕ್ಕೆ ಬಾರದ ಸಂದರ್ಭದಲ್ಲಿ ಯುವ ಆಟಗಾರರಿಗೆ ಈ ಒತ್ತಡ ನೀಡಲು ಸಾಧ್ಯವಿಲ್ಲ. ದೇಶ ಸುರಕ್ಷಿತವಾಗುವುದನ್ನು ಮೊದಲು ಬಯಸೋಣ ಎಂದು ಸೌರವ್ ವಿವರಿಸಿದ್ದಾರೆ.

ಭಾರತದಲ್ಲಿ ದೇಶೀಯ ಕ್ರಿಕೆಟ್ ಋತು ವಿಜಯ್ ಹಝಾರೆ ಟ್ರೋಫಿ ಆಗಸ್ಟ್ ಅಂತ್ಯದಲ್ಲಿ ನಡೆಯುವುದರೊಂದಿಗೆ ಪ್ರಾರಂಭವಾಗುತ್ತದೆ. ಬಳಿಕ ರಣಜಿ ಟ್ರೋಫಿ, ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ, ಇರಾನಿ ಟ್ರೋಫಿ ನಡೆಯುತ್ತದೆ. ಕಳೆದ ವರ್ಷದ ಋತುವಿನ ಇರಾನಿ ಟ್ರೋಫಿ ಲಾಕ್‌ಡೌನ್ ಕಾರಣದಿಂದಾಗಿ ರದ್ದಾಗಿತ್ತು.

ಏಷ್ಯಾ ಕಪ್ 2020 ಬಗ್ಗೆ ಪಿಸಿಬಿ ಉಲ್ಟಾ: ಆಯೋಜನೆ ಅಪಾಯಕಾರಿ ಎಂದ ಪಿಸಿಬಿ ಮುಖ್ಯಸ್ಥ

ಮತ್ತೊಂದೆಡೆ ಭಾರತದಲ್ಲಿ ಕೊರೊನಾವೈರಸ್ ಹಾವಳಿ ದಿನವೂ ದಾಖಲೆಯ ಸಂಖ್ಯೆಯಲ್ಲಿ ಹರಡುತ್ತಿದೆ. ಗುರುವಾರ ಒಂದೇ ದಿನ ದಾಖಲೆಯ 24,879 ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿತ್ತು. ಈ ಮೂಲಕ ಭಾರತದಲ್ಲಿ ಕೊರೊನಾ ವೈರಸ್ ಏಳೂವರೆಲಕ್ಷ ದಾಟಿ ಮುನ್ನುಗ್ಗಿದೆ. 487 ಹೊಸ ಸಾವು ಪ್ರಕರಣದೊಂದಿಗೆ 21,129 ಮಂದಿ ಒಟ್ಟಾರೆಯಾಗಿ ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ.

Story first published: Thursday, July 9, 2020, 22:13 [IST]
Other articles published on Jul 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X