ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿರಾಟ್ ಕೊಹ್ಲಿ Vs ಬಾಬರ್ ಅಜಂ : ಆತನನ್ನು ಮೀರಿಸಲು ಯಾರಿಗೂ ಸಾಧ್ಯವಿಲ್ಲ ಎಂದ ಮಾಜಿ ಪಾಕ್ ಕ್ರಿಕೆಟಿಗ

Dont Compare Babar Azam to Virat Kohli: No one Can Match Virat - Misbah-ul-Haq

ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ನಡುವಿನ ಅಭಿಮಾನಿಗಳ ನಡುವೆ ಆಗಾಗ್ಗೆ ಬಾಬರ್ ಅಜಮ್ ಮತ್ತು ವಿರಾಟ್ ಕೊಹ್ಲಿ ಇಬ್ಬರಲ್ಲಿ ಯಾರು ಶ್ರೇಷ್ಠ ಎನ್ನುವ ವಾದ ನಡೆಯುತ್ತದೆ. ಸಾಮಾಜಿಕ ಮಾಧ್ಯಮದಲ್ಲಿ ಇಬ್ಬರೂ ಆಟಗಾರರ ಅಭಿಮಾನಿಗಳು ವಾದ ಪ್ರತಿವಾದ ಮಾಡುತ್ತಲೇ ಇರುತ್ತಾರೆ.

ಕೆಲವೊಮ್ಮೆ ಮಾಜಿ ಕ್ರಿಕೆಟಿಗರು ಕೂಡ ಇವರಿಬ್ಬರ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದುಂಟು. ಹಲವು ಪಾಕಿಸ್ತಾನದ ಅಭಿಮಾನಿಗಳೇ ಬಾಬರ್ ಅಜಮ್‌ಗಿಂತ ಕೊಹ್ಲಿಯೇ ಶ್ರೇಷ್ಠ ಎಂದು ಹೇಳುವುದು ಕೂಡ ಉಂಟು.

BGT 2023: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಆಡೋದು ಅನುಮಾನBGT 2023: ಮೊದಲ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಸ್ಟಾರ್ ಆಲ್‌ರೌಂಡರ್ ಆಡೋದು ಅನುಮಾನ

ಈಗ ಇವರಿಬ್ಬರ ಮಧ್ಯೆ ಹೋಲಿಕೆ ಬಗ್ಗೆ ಪಾಕಿಸ್ತಾನ ತಂಡದ ಮಾಜಿ ನಾಯಕ ಮಿಸ್ಬಾ ಉಲ್ ಹಕ್ ಮಾತನಾಡಿದ್ದು ಆಸಕ್ತಿದಾಯಕ ಉತ್ತರ ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ ವಿರಾಟ್ ಕೊಹ್ಲಿಯನ್ನು ಮೀರಿಸುವ ಆಟಗಾರ ಮತ್ತೊಬ್ಬನಿಲ್ಲ ಎಂದು ಹೇಳಿವ ಮೂಲಕ ಕೊಹ್ಲಿ ಬಾಬರ್ ನಡುವಿನ ಹೋಲಿಕೆಗೆ ಅಂತ್ಯ ಹಾಡಿದ್ದಾರೆ.

ವಿರಾಟ್ ಕೊಹ್ಲಿಯ ಶ್ರೇಷ್ಠತೆಯನ್ನು ಬಾಬರ್ ಅಜಮ್‌ರೊಂದಿಗೆ ಹೋಲಿಸುವುದರಲ್ಲಿ ಯಾವುದೇ ಅರ್ಥವಿಲ್ಲ. ಕೊಹ್ಲಿಗೆ ಹೋಲಿಕೆ ಮಾಡಿದರೆ ಬಾಬರ್ ಕಡಿಮೆ ಕ್ರಿಕೆಟ್ ಆಡಿದ್ದಾರೆ, ಸದ್ಯಕ್ಕೆ ಇವರಿಬ್ಬರ ಮಧ್ಯೆ ಹೋಲಿಕೆ ಮಾಡಲು ಕೂಡ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ ಸಂಜು ಸ್ಯಾಮ್ಸನ್: ಕೆಸಿ ಕಾರಿಯಪ್ಪ ಕೂಡ ಸಾಥ್ಕಿಚ್ಚ ಸುದೀಪ್ ಮನೆಗೆ ಭೇಟಿ ನೀಡಿದ ಸಂಜು ಸ್ಯಾಮ್ಸನ್: ಕೆಸಿ ಕಾರಿಯಪ್ಪ ಕೂಡ ಸಾಥ್

 ಕೊಹ್ಲಿ 4 ಶತಕ ಗಳಿಸಿದರೆ ಇತಿಹಾಸ

ಕೊಹ್ಲಿ 4 ಶತಕ ಗಳಿಸಿದರೆ ಇತಿಹಾಸ

ಕ್ರಿಕೆಟ್ ದೇವರು ಎಂದೇ ಕರೆಸಿಕೊಳ್ಳುವ ಸಚಿನ್ ತೆಂಡೂಲ್ಕರ್ ಏಕದಿನ ಶತಕದ ದಾಖಲೆಯನ್ನು ಮುರಿಯುವ ಹೊಸ್ತಿಲಲ್ಲಿದ್ದಾರೆ ವಿರಾಟ್ ಕೊಹ್ಲಿ. ಸಚಿನ್ ಏಕದಿನ ಕ್ರಿಕೆಟ್‌ನಲ್ಲಿ 49 ಶತಕಗಳನ್ನು ಬಾರಿಸುವ ಮೂಲಕ ಅಗ್ರಸ್ಥಾನದಲ್ಲಿದ್ದರೆ, ವಿರಾಟ್ ಕೊಹ್ಲಿ 46 ಶತಕಗಳನ್ನು ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇನ್ನು 4 ಶತಕ ಗಳಿಸಿದರೆ ಅವರು ಏಕದಿನ ಕ್ರಿಕೆಟ್‌ನಲ್ಲಿ 50 ಶತಕ ಸಿಡಿಸಿದ ಮೊದಲನೇ ಕ್ರಿಕೆಟಿಗ ಎನ್ನುವ ದಾಖಲೆ ಮಾಡಲಿದ್ದಾರೆ.

ಸದ್ಯ ಏಕದಿನ ಕ್ರಿಕೆಟ್‌ನಲ್ಲಿ ಐಸಿಸಿ ರ್‍ಯಾಂಕಿಂಗ್‌ನಲ್ಲಿ ನಂಬರ್ 1 ಬ್ಯಾಟರ್ ಆಗಿರುವ ಬಾಬರ್ ಅಜಂ ಮತ್ತು ವಿರಾಟ್ ಕೊಹ್ಲಿ ನಡುವೆ ಯಾರು ಉತ್ತಮ ಬ್ಯಾಟರ್ ಎನ್ನುವ ಚರ್ಚೆ ಆಗಾಗ ಮುನ್ನಲೆಗೆ ಬರುತ್ತದೆ.

ಮಿಸ್ಬಾ ಉಲ್‌ ಹಕ್ ಅಭಿಪ್ರಾಯವೇನು?

ಮಿಸ್ಬಾ ಉಲ್‌ ಹಕ್ ಅಭಿಪ್ರಾಯವೇನು?

ಪಾಕ್‌ ಟಿವಿಯೊಂದಿಗೆ ಮಾತನಾಡಿರುವ ಮಿಸ್ಬಾ ಉಲ್ ಹಕ್, ಆಧುನಿಕ ಕ್ರಿಕೆಟ್‌ನ ಶ್ರೇಷ್ಠ ಕ್ರಿಕೆಟಿಗನಾದ ವಿರಾಟ್ ಕೊಹ್ಲಿ ಜೊತೆ ಬಾಬರ್ ಅಜಮ್ ಹೋಲಿಕೆ ಮಾಡುವುದು ಅನ್ಯಾಯ ಎಂದು ಹೇಳಿದ್ದಾರೆ.

"ವಿರಾಟ್ ಕೊಹ್ಲಿ ಸಾಕಷ್ಟು ಕ್ರಿಕೆಟ್ ಆಡಿದ್ದಾರೆ. ಕೊಹ್ಲಿಗೆ ಹೋಲಿಕೆ ಮಾಡಿದರೆ, ಬಾಬರ್ ಅಜಮ್ ಹೆಚ್ಚಿನ ಕ್ರಿಕೆಟ್ ಆಡಿಲ್ಲ. ಬಾಬರ್ ಅಜಂ ಕೊಹ್ಲಿಯಷ್ಟೇ ಕ್ರಿಕೆಟ್ ಆಡಿದಾಗ ನೀವು ಹೋಲಿಕೆ ಮಾಡಬಹುದು. ಆದರೆ, ಸದ್ಯಕ್ಕೆ ಕೊಹ್ಲಿಯನ್ನು ಮೀರಿಸುವ ಆಟಗಾರ ಯಾರೂ ಇಲ್ಲ. ಬಾಬರ್ ಅಜಂ ಒಬ್ಬ ಕ್ಲಾಸ್ ಬ್ಯಾಟರ್, ಭವಿಷ್ಯದಲ್ಲಿ ಕೊಹ್ಲಿಯಂತೆಯೇ ಸಾಧನೆ ಮಾಡಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೊಹ್ಲಿಗೆ ಹೋಲಿಕೆ ಮಾಡಲಾಗದು" ಎಂದು ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್‌ಗೆ ಒಳ್ಳೆಯದಲ್ಲ

ಪಾಕಿಸ್ತಾನ ಕ್ರಿಕೆಟ್‌ಗೆ ಒಳ್ಳೆಯದಲ್ಲ

ಪಾಕ್ ತಂಡದ ನಾಯಕ ಬಾಬರ್ ಅಜಮ್ ಸತತ ಎರಡನೇ ವರ್ಷ ಐಸಿಸಿ ವರ್ಷದ ಪುರುಷರ ಕ್ರಿಕೆಟಿಗ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಬಾಬರ್ ಏಕದಿನ ಮಾದರಿಯಲ್ಲಿ ಉತ್ತಮ ಬ್ಯಾಟರ್ ಆಗಿದ್ದಾರೆ. ಪಾಕಿಸ್ತಾನದ ಕಳಪೆ ಫಲಿತಾಂಶಕ್ಕಾಗಿ ಬಾಬರ್ ಅಜಂರನ್ನು ಕೇವಲವಾಗಿ ನೋಡಬಾರದು ಎಂದು ಮಿಸ್ಬಾ ಉಲ್ ಹಕ್ ಹೇಳಿದ್ದಾರೆ.

ಬಾಬರ್ ಅಜಮ್ ಪಾಕಿಸ್ತಾನದ ಅತ್ಯುತ್ತಮ ಬ್ಯಾಟರ್‌ಗಳಲ್ಲಿ ಒಬ್ಬರು. ಏಕದಿನ ಮಾದರಿಯಲ್ಲಿ ಮಾತ್ರ ಅವರು ಉತ್ತಮ ಬ್ಯಾಟರ್ ಅಲ್ಲ, ಮೂರು ಮಾದರಿಯಲ್ಲಿ ಅವರು ಅಗ್ರ 5ನೇ ಸ್ಥಾನದೊಳಗೆ ಇದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾವು ಕಳಪೆ ಪ್ರದರ್ಶನ ನೀಡಿದ್ದೇನೆ ಅದಕ್ಕೆ ಬಾಬರ್ ಮಾತ್ರ ಜವಾಬ್ದಾರರಲ್ಲ, ಅವರೊಬ್ಬರನ್ನು ಗುರಿಯಾಗಿಸಿ ಟೀಕೆ ಮಾಡುವುದು ಪಾಕಿಸ್ತಾನದ ಕ್ರಿಕೆಟ್‌ಗೆ ಒಳ್ಳೆಯದಲ್ಲ ಎಂದು ಹೇಳಿದ್ದಾರೆ.

Story first published: Sunday, January 29, 2023, 15:49 [IST]
Other articles published on Jan 29, 2023
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X