ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಂಜು ಪ್ರತಿಭೆಯನ್ನು ಧೋನಿಗೆ ಹೋಲಿಸಿದ ಶಶಿ ತರೂರ್: ಗಂಭೀರ್ ಬಳಿಕ ಶ್ರೀಶಾಂತ್ ಆಕ್ಷೇಪ

Dont Compare Sanju Samson To Dhoni : Sreesanth Reacts To Shashi Tharoor

ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಸತತ ಎರಡು ಇನ್ನಿಂಗ್ಸ್‌ಗಳಲ್ಲಿ ಶ್ರೇಷ್ಠ ಪ್ರದರ್ಶನವನ್ನು ನೀಡಿ ಮಿಂಚಿರುವ ಸಂಜು ಸ್ಯಾಮ್ಸನ್ ಪ್ರತಿಭೆಗೆ ಪ್ರಶಂಸೆಯ ಸುರಿಮಳೆಯೇ ಬಂದಿದೆ. ಎಲ್ಲಾ ಕ್ರಿಕೆಟ್ ಅಭಿಮಾನಿಗಳಂತೆಯೇ ಸಂಜು ಸ್ಯಾಮ್ಸನ್ ಆಟವನ್ನು ಕೇರಳದ ಕಾಂಗ್ರೆಸ್ ಎಂಪಿ ಶಶಿ ತರೂರ್ ಕೂಡ ಕೊಂಡಾಡಿದ್ದರು. ಭವಿಷ್ಯದ ಧೋನಿ ಸಂಜು ಸ್ಯಾಮ್ಸನ್ ಎಂದು ಬಣ್ಣಿಸಿದ್ದರು.

ಆದರೆ ಸಂಜು ಸ್ಯಾಮ್ಸನ್ ಬ್ಯಾಟಿಂಗನ್ನು ಧೋನಿಗೆ ಹೋಲಿಸಿದಕ್ಕೆ ಮಾಜಿ ಕ್ರಿಕೆಟಿಗ ಹಾಲಿ ಸಂಸದ ಗೌತಮ್ ಗಂಭೀರ್ ಆಕ್ಷೇಪಿಸಿ ಟ್ವೀಟ್ ಮಾಡಿದ್ದರು. ಈಗ ಮತ್ತೋರ್ವ ಕ್ರಿಕೆಟಿಗ ಶ್ರೀಶಾಂತ್ ಕೂಡ ಶಶಿ ತರೂರ್ ಬಣ್ಣನೆಗೆ ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. ಆತ ಮುಂದಿನ ಧೋನಿ ಅಲ್ಲ. ಆತ ಏಕೈಕ ಸಂಜು ಸ್ಯಾಮ್ಸನ್ ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.

ದಾಖಲೆ ಸನಿಹದಲ್ಲಿದ್ದಾರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕ್ವಿಂಟನ್ ಡಿ ಕಾಕ್ದಾಖಲೆ ಸನಿಹದಲ್ಲಿದ್ದಾರೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕ್ವಿಂಟನ್ ಡಿ ಕಾಕ್

ಶಶಿ ತರೂರ್ ಟ್ವೀಟ್‌ಗೆ ಪ್ರತಿಕ್ರಿಯಿಸುತ್ತಾ ಶ್ರೀಶಾಂತ್ "ಆತ ಭವಿಷ್ಯದ ಧೋನಿ ಅಲ್ಲ. ಈತ ಏಕೈಕ ಸಂಜು ಸ್ಯಾಮ್ಸನ್. ಈತ 2015ರಿಂದ ಎಲ್ಲಾ ಮಾದರಿ ಕ್ರಿಕೆಟ್‌ನಲ್ಲೂ ನಿರಂತರವಾಗಿ ಆಡುತ್ತಿರಬೇಕಾಗಿತ್ತು. ಯಾರೊಂದಿಗೂ ಆತನನ್ನು ಹೋಲಿಕೆ ಮಾಡಬೇಡಿ. ಸರಿಯಾದ ಅವಕಾಶವನ್ನು ಆತನಿಗೆ ನೀಡಿದ್ದರೆ ಭಾರತ ತಂಡಕ್ಕೂ ಇದೇ ರೀತಿ ಆಡುತ್ತಿದ್ದರು ಹಾಗೂ ವಿಶ್ವಕಪ್ ಗೆಲ್ಲುತ್ತಿದ್ದರು" ಎಂದು ಶ್ರೀಶಾಂತ್ ಟ್ವೀಟ್ ಮಾಡಿದ್ದಾರೆ.

ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ ಸಂಜು ಸ್ಯಾಮ್ಸನ್ ಆಟವನ್ನು ಹೊಗಳುತ್ತಾ ಶಶಿ ತರೂರ್ ''ರಾಜಸ್ಥಾನ್ ರಾಯಲ್ಸ್‌ ಸಂಪೂರ್ಣವಾಗಿ ನಂಬಲಾಗದ ಗೆಲುವು ಕಂಡಿದೆ. ಸಂಜು ಸ್ಯಾಮ್ಸನ್ ಅವರನ್ನು ದಶಕದಿಂದ ತಿಳಿದಿದ್ದೇನೆ. ಆತ 14 ವರ್ಷದವನಿದ್ದಾಗ ಅವನಿಗೆ ನೀನು ಮುಂದಿನ ಧೋನಿ ಆಗಲಿದ್ದೀಯ ಎಂದು ಹೇಳಿದ್ದೆ. ಆ ದಿನ ಇಲ್ಲಿದೆ. ಅವನ ಈ ಎರಡು ಅದ್ಭುತ ಐಪಿಎಲ್ ಇನ್ನಿಂಗ್ಸ್ ವಿಶ್ವ ದರ್ಜೆಯ ಆಟಗಾರನೊಬ್ಬ ಬಂದಿದ್ದಾನೆಂದು ನಿಮಗೆ ತಿಳಿಸುತ್ತಿದೆ'' ಎಂದು ಶಶಿ ತರೂರ್ ಟ್ವೀಟ್ ಮಾಡಿದ್ದರು.

ಬೆಂಗಳೂರು-ಮುಂಬೈ ಮುಖಾಮುಖಿಯ ಸೋಲು-ಗೆಲುವಿನ ಅಂಕಿ-ಅಂಶಗಳುಬೆಂಗಳೂರು-ಮುಂಬೈ ಮುಖಾಮುಖಿಯ ಸೋಲು-ಗೆಲುವಿನ ಅಂಕಿ-ಅಂಶಗಳು

ಇದಕ್ಕೆ ಗೌತಮ್ ಗಂಭೀರ್ "ಸಂಜು ಸ್ಯಾಮ್ಸನ್ ಅವರನ್ನು ಯಾರೊಂದಿಗೂ ಹೋಲಿಕೆ ಮಾಡುವ ಅಗತ್ಯವಿಲ್ಲ. ಅವರು ಭಾರತೀಯ ಕ್ರಿಕೆಟ್‌ನ ಸಂಜು ಸ್ಯಾಮ್ಸನ್ ಆಗಿಯೇ ಇರುತ್ತಾರೆ ಎಂದು ಟ್ವೀಟ್ ಮೂಲಕ ತರೂರ್ ಬಣ್ಣನೆಗೆ ತಮ್ಮ ಆಕ್ಷೇಪವನ್ನು ವ್ಯಕ್ತಪಡಿಸಿದ್ದರು.

Story first published: Monday, September 28, 2020, 21:52 [IST]
Other articles published on Sep 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X