ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹನುಮಾನ್ ಜಾತಿ ಚರ್ಚೆ ಬೇಡ, ಆತನೊಬ್ಬ ಕ್ರೀಡಾಪಟು: ಚೇತನ್ ಚೌಹಾಣ್

Dont discuss Lord Hanumans caste, he was a sportsman: Chetan Chauhan

ನವದೆಹಲಿ, ಡಿಸೆಂಬರ್ 24: ಹಿಂದೂಗಳ ಆರಾಧ್ಯ ಹನುಮಂತ ಒಬ್ಬ ಕ್ರೀಡಾಪಟು ಎಂದು ಭಾರತದ ಮಾಜಿ ಕ್ರಿಕೆಟಿಗ ಚೇತನ್ ಚೌಹಾಣ್ ಹೇಳಿದ್ದಾರೆ. ಹನುಮಂತ ಕ್ರೀಡಾಪಟುವಾಗಿದ್ದರಿಂದ ಆತನ ಜಾತಿಯ ಕುರಿತಾದ ಚರ್ಚೆ ಯಾರೂ ಮಾಡಬಾರದು ಎಂದವರು ತಿಳಿಸಿದ್ದಾರೆ.

ಮೆಲ್ಬರ್ನ್ ಟೆಸ್ಟ್: ಕೊಹ್ಲಿ, ಪೂಜಾರ, ರಹಾನೆಯತ್ತ ಆಸ್ಟ್ರೇಲಿಯಾ ವೇಗಿಗಳ ಕಣ್ಣು!ಮೆಲ್ಬರ್ನ್ ಟೆಸ್ಟ್: ಕೊಹ್ಲಿ, ಪೂಜಾರ, ರಹಾನೆಯತ್ತ ಆಸ್ಟ್ರೇಲಿಯಾ ವೇಗಿಗಳ ಕಣ್ಣು!

ಹನುಮಂತ ದೇವರನ್ನು ಮುಂದಿಟ್ಟು ಇತ್ತೀಚೆಗೆ ವಿವಾದ ಸೃಷ್ಟಿಸಲಾಗಿತ್ತು. ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ್ ಅವರು ಹನುಮಂತನನ್ನು ದಲಿತ ಎಂದರು ಎನ್ನುವ ಮಾತುಗಳು ಕೇಳಿ ಬಂದಿದ್ದವು. ಅನಂತರ ಉತ್ತರ ಪ್ರದೇಶದ ಬಿಜೆಪಿ ಮುಖಂಡ ಬುಕ್ಕಲ್ ನವಾಬ್ ಅವರೂ ಹನುಮಂತ ಒಬ್ಬ ಮುಸ್ಲಿಮ್ ಎಂದಿದ್ದರು.

ಹಿಂದೂಗಳ ದೇವರಾದ ಹನುಮಂತನನ್ನು ಮನಸ್ಸಿಗೆ ಬಂದಂತೆ ಹೀಗೆ ಜಾತಿ, ಧರ್ಮಕ್ಕೆ ಹೋಲಿಕೆ ಮಾಡುತ್ತಿರುವುದರ ಬಗ್ಗೆ ಮಾತನಾಡುತ್ತ ಬಿಜೆಪಿ ಮುಖಂಡ ಚೌಹಾಣ್, ಹನುಮಂತನನ್ನು ಮುಂದಿಟ್ಟುಕೊಂಡು ಧರ್ಮದ ಆಧಾರದಲ್ಲಿ ಚರ್ಚೆ ನಡೆಸಬಾರದು. ಆತ ಒಬ್ಬ ಕ್ರೀಡಾಪಟು ಎಂದಿದ್ದಾರೆ.

ರಮೇಶ್‌ರಿಂದ ನನಗೂ ನನ್ನ ಕುಟುಂಬಕ್ಕೂ ಸಮಸ್ಯೆಯಾಗಿತ್ತು: ಮಿಥಾಲಿ ರಾಜ್ರಮೇಶ್‌ರಿಂದ ನನಗೂ ನನ್ನ ಕುಟುಂಬಕ್ಕೂ ಸಮಸ್ಯೆಯಾಗಿತ್ತು: ಮಿಥಾಲಿ ರಾಜ್

ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಶನಿವಾರ (ಡಿಸೆಂಬರ್ 23) ಮಾತನಾಡುತ್ತ ಚೇತನ್, 'ಕ್ರೀಡಾಪಟುಗಳಲ್ಲಿ ಜಾತಿ, ಧರ್ಮದ ಹಂಗಿಲ್ಲ. ಎಲ್ಲಾ ಜಾತಿ-ಧರ್ಮದ ಕ್ರೀಡಾಪಟುಗಳು ಹನುಮಂತನನ್ನು ಪೂಜಿಸುತ್ತಾರೆ. ಹಾಗಾಗಿ ಆತ ಎಲ್ಲಾ ಕ್ರೀಡಾಪಟುಗಳ ಆರಾಧ್ಯ ದೈವ' ಎಂದರು.

ಬಾಕ್ಸಿಂಗ್‌ ಡೇ ಟೆಸ್ಟ್: 7ರ ಪುಟ್ಟ ಪೋರ ಷಿಲ್ಲರ್ ಆಸೀಸ್‌ಗೆ ಸಹ ನಾಯಕ!ಬಾಕ್ಸಿಂಗ್‌ ಡೇ ಟೆಸ್ಟ್: 7ರ ಪುಟ್ಟ ಪೋರ ಷಿಲ್ಲರ್ ಆಸೀಸ್‌ಗೆ ಸಹ ನಾಯಕ!

ಚೇತನ್ ಪ್ರತಾಪ್ ಸಿಂಗ್ ಚೌಹಾಣ್ ಅವರು ಭಾರತ ಪರ ಸುಮಾರು 40 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಮಹಾರಾಷ್ಟ್ರ ಮತ್ತು ದೆಹಲಿ ಪರ ರಣಜಿಯಲ್ಲೂ ಪಾಲ್ಗೊಂಡಿದ್ದಾರೆ. 1970ರ ಇಸವಿ ಸಂದರ್ಭ ಸುನಿಲ್ ಗವಾಸ್ಕರ್ ಅವರಿಗೆ ಚೇತನ್ ಆರಂಭಿಕ ಜೊತೆಗಾರನಾಗಿ ಮೈದಾನಕ್ಕಿಳಿಯುತ್ತಿದ್ದರು.

Story first published: Monday, December 24, 2018, 13:34 [IST]
Other articles published on Dec 24, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X