ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಎಸ್‌ಕೆಯಲ್ಲಿ ಸೋಂಕು ಹಬ್ಬಿದರ ಬಗ್ಗೆ ದೀಪಕ್ ಚಾಹರ್ ಪ್ರತಿಕ್ರಿಯೆ

Dont know what went wrong: Deepak Chahar on Covid cases at CSK camp

ಚೆನ್ನೈ: ಬೋರ್ಡ್ ಆಫ್‌ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ ಅನ್ನು ಅಮಾನತುಗೊಳಿಸುವಾಗ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಕಂಡುಬಂದಿದ್ದ ಫ್ರಾಂಚೈಸಿಗಳಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಕೂಡ ಒಂದು.

WTC ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೆ ಭಾರತದ ತಂಡ ಪ್ರಕಟWTC ಫೈನಲ್ ಹಾಗೂ ಇಂಗ್ಲೆಂಡ್ ವಿರುದ್ಧದ 5 ಟೆಸ್ಟ್ ಪಂದ್ಯಗಳ ಸರಣಿಗೆ ಭಾರತದ ತಂಡ ಪ್ರಕಟ

ಎಂಎಸ್ ಧೋನಿ ನಾಯಕತ್ವದ ಸಿಎಸ್‌ಕೆಯಲ್ಲಿ ಸಿಇಒ ಕಾಸಿ ವಿಶ್ವನಾಥನ್, ಬೌಲಿಂಗ್‌ ಕೋಚ್ ಲಕ್ಷ್ಮೀಪತಿ ಬಾಲಾಜಿ ಮತ್ತು ಬಸ್‌ ಡ್ರೈವರ್‌ ಕೋವಿಡ್ ಪರೀಕ್ಷಾ ಫಲಿತಾಂಶಗಳು ಪಾಸಿಟಿವ್ ಬಂದಿದ್ದವು. ಇನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ನಲ್ಲಿ ಸಂದೀಪ್ ವಾರಿಯರ್, ವರುಣ್ ಚಕ್ರವರ್ತಿ, ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ವೃದ್ಧಿಮಾನ್ ಸಾಹ, ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಅಮಿತ್ ಮಿಶ್ರಾಗೂ ಸೋಂಕು ತಾಗಿತ್ತು.

ಮುಖ್ಯವಾಗಿ ಸಿಎಸ್‌ಕೆಯಲ್ಲಿ ಸೋಂಕು ಹಬ್ಬಿದ್ದರ ಬಗ್ಗೆ ತಂಡದ ವೇಗಿ ದೀಪಕ್ ಚಾಹರ್ ಪ್ರತಿಕ್ರಿಯಿಸಿದ್ದಾರೆ. 'ಒಬ್ಬ ವ್ಯಕ್ತಿ ಬಳಿ ಬಂದು ನಾವು ಐಸೊಲೇಶನ್‌ಗೆ ಹೋಗುವಂತೆ ಹೇಳಿದರು. ನಾವು ಪ್ರತೀ ದಿನ ಟೆಸ್ಟ್‌ ಮಾಡಿಸುತ್ತಿದ್ದೆವು. ರಿಪೋರ್ಟ್ ನೆಗೆಟಿವ್ ಬಂದಿದ್ದರಿಂದ ನಮಗದು ದೊಡ್ಡ ಸಮಾಧಾನ ತಂದಿತ್ತು,' ಎಂದು ಚಾಹರ್ ಹೇಳಿದ್ದಾರೆ.

ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!ಐಪಿಎಲ್ ನಡೆಯದಿದ್ರೆ ಬಿಸಿಸಿಐಗೆ ಆಗೋ ನಷ್ಟವೆಷ್ಟು?: ಸತ್ಯ ಬಾಯ್ಬಿಟ್ಟ ಗಂಗೂಲಿ!

ಮಾತು ಮುಂದುವರೆಸಿದ ಚಾಹರ್, 'ತಂಡದವರು ಐಸೊಲೇಶನ್‌ಗೆ ಹೋಗಬೇಕು ಹೇಳಿದ್ದು ಕೇಳಿ ನಾವು ಯಾರೂ ಭೀತಿಗೊಳ್ಳಲಿಲ್ಲ. ಆ ಸಂದರ್ಭವನ್ನು ನಾವು ಸರಿಯಾಗೇ ನಿಭಾಯಿಸಿದೆವು. ನನಗೆ ಗೊತ್ತಿರುವ ಹಾಗೆ ಯಾರೂ ಮಾರ್ಗಸೂಚಿ ಮೀರಿಲ್ಲ. ಆದರೂ ಸೋಂಕು ಹೇಗೆ ಹಬ್ಬಿತು ಅನ್ನೋದೇ ಗೊತ್ತಿಲ್ಲ,' ಎಂದಿದ್ದಾರೆ.

Story first published: Friday, May 7, 2021, 18:59 [IST]
Other articles published on May 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X