ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂಎಸ್ ಧೋನಿ ಉಲ್ಲೇಖಿಸಿ ಐಸಿಸಿ ಮಾಡಿದ ವೈರಲ್ ಟ್ವೀಟ್‌ನಲ್ಲೇನಿದೆ?!

Don’t leave your crease when MS Dhoni is behind: ICC’s Tweet wins hearts

ನವದೆಹಲಿ, ಫೆಬ್ರವರಿ 4: ಮಿಂಚಿನ ವೇಗದಲ್ಲಿ ಸ್ಟಂಪ್ಡ್ ಮಾಡುವುದರಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ಎತ್ತಿದ ಕೈ ಅನ್ನೋದು ಕ್ರಿಕೆಟ್ ಪ್ರಿಯರಿಗೆ ಗೊತ್ತಿದ್ದೇ ಇದೆ. ಈ ಕುರಿತು ಆಟಗಾರರಿಗೆ ಎಚ್ಚರಿಸಿ ಐಸಿಸಿ ಒಂದು ಟ್ವೀಟ್ ಮಾಡಿದೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಓಡಾಡುತ್ತಿದೆ.

ಧೋನಿಯ ಮಿಂಚಿನ ವೇಗದ ಕೈಗಳಿಗೆ ರಾಸ್ ಟೇಲರ್ ಬಲಿ: ವೈರಲ್ ವಿಡಿಯೋಧೋನಿಯ ಮಿಂಚಿನ ವೇಗದ ಕೈಗಳಿಗೆ ರಾಸ್ ಟೇಲರ್ ಬಲಿ: ವೈರಲ್ ವಿಡಿಯೋ

ಧೋನಿಯ ಮಿಂಚಿನ ವೇಗದ ಕೈಗಳಿಗೆ ಇತ್ತೀಚೆಗೆ ನ್ಯೂಜಿಲ್ಯಾಂಡ್ ಆಟಗಾರ ರಾಸ್ ಟೇಲರ್ ಅವರು ಬಲಿಯಾಗಿದ್ದರು. ಧೋನಿ ಸ್ಟಂಪ್ಡ್ ಮೂಲಕ ಆಟಗಾರರನ್ನು ಸುಲಭವಾಗಿ ಪೆವಿಲಿಯನ್‌ಗೆ ಅಟ್ಟುವ ಬಗ್ಗೆ ಅರಿವಿರುವ ಐಸಿಸಿ ಆಟಗಾರರಿಗೆ ಹೀಗೊಂದು ಟ್ವೀಟ್‌ ಮೂಲಕ ಸಲಹೆ ನೀಡಿದೆ.

ಸೇಂಟ್ ಲೂಸಿಯಾ ಟೆಸ್ಟ್‌ನಿಂದ ವಿಂಡೀಸ್ ನಾಯಕ ಹೋಲ್ಡರ್ ಅಮಾನತುಸೇಂಟ್ ಲೂಸಿಯಾ ಟೆಸ್ಟ್‌ನಿಂದ ವಿಂಡೀಸ್ ನಾಯಕ ಹೋಲ್ಡರ್ ಅಮಾನತು

ಟ್ವೀಟ್ ನಲ್ಲಿ ಐಸಿಸಿ 'ಸ್ಟಂಪ್‌ನ ಹಿಂದೆ ಧೋನಿ ನಿಂತಿದ್ದಾಗ ನೀವು ಯಾವತ್ತಿಗೂ ಕ್ರೀಸ್ ಬಿಡಬೇಡಿ' ಎಂದು ಬರೆದುಕೊಂಡಿದೆ. ಐಸಿಸಿಯ ಈ ಟ್ವೀಟ್ ಭಾರತೀಯ ಕ್ರೀಡಾಭಿಮಾನಿಗಳ ಹೆಮ್ಮೆಗೆ ಕಾರಣವಾಗಿದೆಯಲ್ಲದೆ ಧೋನಿಯ ಕೀಪಿಂಗ್ ಪ್ರತಿಭೆಯನ್ನು ವಿಶ್ವಕ್ಕೆ ಸಾರಿದೆ.

ಸರಿಯಾಗಿ ಹೇಳಿದ್ದೀರಿ

ಐಸಿಸಿ ಮಾಡಿರುವ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಆದಿತ್ಯ ಶರ್ಮಾ, ಐಸಿಸಿ ಸರಿಯಾಗಿ ಹೇಳಿದೆ ಎಂದು ಬರೆದುಕೊಂಡಿದ್ದಾರಲ್ಲದೆ ಧೋನಿ ಸ್ಟಂಪ್ಡ್ ಮಾಡಿರುವ ವಿಡಿಯೋವೊಂದನ್ನೂ ಹಾಕಿಕೊಂಡಿದ್ದಾರೆ.

ಯೋಕೋ ಒನ್‌ಗೆ ಐಸಿಸಿ ರಿಪ್ಲೆ

'ನಮ್ಮ ಜೀವನ ಚೇತರಿಕೆ ಕಾಣಲು, ಹೊಳೆಯುವಂತಾಗಲು ಒಂದೊಳ್ಳೆ ಸಲಹೆ ಕೊಡಿ' ಎಂದು ಜಪಾನ್ ಮಲ್ಟಿ ಮೀಡಿಯಾ ಆರ್ಟಿಸ್ಟ್ ಯೋಕೋ ಒನ್ ಮಾಡಿರುವ ಟ್ವೀಟ್‌ಗೆ ಐಸಿಸಿ ತಮಾಷೆ, ವಾಸ್ತವ ಎರಡನ್ನೂ ಸೇರಿಸಿ ಪ್ರತಿಕ್ರಿಯಿಸಿದ್ದು ಸದ್ಯ ವೈರಲ್ ಆಗಿರುವ ಟ್ವೀಟ್.

ಐಸಿಸಿ ಟ್ವೀಟ್

'ಸ್ಟಂಪ್‌ನ ಹಿಂದೆ ಧೋನಿ ನಿಂತಿದ್ದಾಗ ನೀವು ಯಾವತ್ತಿಗೂ ಕ್ರೀಸ್ ಬಿಡಬೇಡಿ' ಎಂದು ಐಸಿಸಿ ಮಾಡಿರುವ ಟ್ವೀಟ್ ಇಲ್ಲಿದೆ. ಧೋನಿ ಕೀಪಿಂಗ್‌ ಮಾಡುತ್ತಿದ್ದಾಗ ಕ್ರೀಸ್ ಬಿಡದ ಬ್ಯಾಟ್ಸ್ಮನ್ ಉತ್ತಮ ಪ್ರದರ್ಶನ ನೀಡಬಲ್ಲ, ಶೈನ್ ಆಗಬಲ್ಲ ಎಂಬರ್ಥದ ಟ್ವೀಟ್ ಇದು.

ರಾಸ್ ಟೇಲರ್ ಬಲಿ

ಮೌಂಟ್‌ಮೌಂಗನ್ಯುಯಿಯ ಬೇ ಓವಲ್‌ನಲ್ಲಿ ಶನಿವಾರ (ಜನವರಿ 26) ನಡೆದ ನ್ಯೂಜಿಲ್ಯಾಂಡ್-ಭಾರತ ದ್ವಿತೀಯ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ, ಕಿವೀಸ್ ಸ್ಫೋಟಕ ಬ್ಯಾಟ್ಸ್ಮನ್ ರಾಸ್ ಟೇಲರ್ ಅವರನ್ನು ಸ್ಟಂಪ್ಡ್ ಮಾಡಿ ಕೇವಲ 22 ರನ್ನಿಗೆ ಪೆವಿಲಿಯನ್‌ಗೆ ಕಳುಹಿಸಿದ್ದರು.

Story first published: Monday, February 4, 2019, 13:23 [IST]
Other articles published on Feb 4, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X