ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಗೊತ್ತಿರುವುದನ್ನೇ ಮಾತನಾಡಬೇಡ: ಬಾಬರ್ ವಿರುದ್ಧ ಗುಡುಗಿದ ಅಖ್ತರ್, ಲತೀಫ್

Don’t speak about things we already know: Shoaib Akhtar slams Babar Azam

ಲಾಹೋರ್, ಮೇ 22: ಪಾಕಿಸ್ತಾನದ ಸ್ಟಾರ್ ಬ್ಯಾಟ್ಸ್‌ಮನ್ ಬಾಬರ್ ಅಝಾಮ್ ಇತ್ತೀಚೆಗೆ ಸೀಮಿತ ಓವರ್‌ಗಳ ಕ್ರಿಕೆಟ್‌ ನಾಯಕನಾಗಿ ಆರಿಸಲ್ಪಟ್ಟಿದ್ದಾರೆ. ಉದಯೋನ್ಮುಕ ಆಟಗಾರನಾಗಿ ವೇಗವಾಗಿ ಬೆಳೆಯುತ್ತಿರುವ ಬಾಬರ್ ಅತ್ಯುತ್ತಮ ಬ್ಯಾಟ್ಸ್‌ಮನ್‌ಗಳಾದ ವಿರಾಟ್ ಕೊಹ್ಲಿ, ಕೇನ್ ವಿಲಿಯಮ್ಸನ್, ಸ್ಟೀವ್ ಸ್ಮಿತ್, ಜೋ ರೂಟ್ ನೆನಪಿಸುವಂತಹ ಆಟ ಪ್ರದರ್ಶಿಸುತ್ತಿದ್ದಾರೆ.

ಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳುಕ್ರಿಕೆಟ್‌ ಇತಿಹಾಸದಲ್ಲಿ ದಾಖಲಾಗಿರುವ ಟಾಪ್ 5 ವೇಗದ ಅರ್ಧ ಶತಕಗಳು

ಆನ್ ಫೀಲ್ಡ್ ಮತ್ತು ಆಫ್ ಫೀಲ್ಡ್ ಎರಡರಲ್ಲೂ ಮಾದರಿ ಆಟಗಾರನಾಗಿ ಗುರುತಿಸಿಕೊಳ್ಳುತ್ತಿರುವ ಬಾಬರ್ ಅಝಾಮ್, ತನಗೆ ಇಂಗ್ಲೀಷ್ ಸ್ಪೀಕಿಂಗ್ ಸ್ಕಿಲ್ ಕಲಿಯುವ ಆಸೆಯಿದೆ ಎಂದು ಹೇಳಿಕೊಂಡಿದ್ದರು. ನಾಯಕನಾಗಿದ್ದವನು ಮಾಧ್ಯಮಗಳ ಮುಂದೆ ನಿಲ್ಲುವಾಗ ಭಾಷೆಯ ಅಡೆತಡೆ ಇರಬಾರದು. ಅದಕ್ಕೆ ತಾನು ಇಂಗ್ಲೀಷ್ ಕಲಿಯಲು ಬಯಸಿರುವುದಾಗಿ ಹೇಳಿದ್ದರು.

ಅತಿ ಹಿರಿಯ ಗೇಮಿಂಗ್ ಯೂಟ್ಯೂಬರ್: 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ಗೇಮರ್ ಅಜ್ಜಿಅತಿ ಹಿರಿಯ ಗೇಮಿಂಗ್ ಯೂಟ್ಯೂಬರ್: 90ರ ಹರೆಯದಲ್ಲಿ ಗಿನ್ನಿಸ್ ದಾಖಲೆ ಬರೆದ ಗೇಮರ್ ಅಜ್ಜಿ

ನಿನ್ನ ಮಾತಿನ ಕೌಶಲವನ್ನು ನೀನು ಸುಧಾರಿಸಿಕೊಳ್ಳಬೇಕು ಎಂದು ಬಾಬರ್‌ಗೆ ಮಾಜಿ ಕ್ರಿಕೆಟಿಗ ತನ್ವೀರ್ ಅಹ್ಮದ್ ಈ ಮೊದಲು ಸಲಹೆ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿರುವ ಬಾಬರ್, ಇಂಗ್ಲೀಷ್ ಕಲಿಯುವತ್ತ ಯೋಚಿಸಿದ್ದರು. ಆದರೆ ಇದು ಪಾಕ್ ಮಾಜಿ ಆಟಗಾರರಾದ ಶೋಯೆಬ್ ಅಖ್ತರ್‌ ಮತ್ತು ರಶೀದ್ ಲತೀಫ್ ಅವರಿಗೆ ಸರಿ ಕಾಣಿಸಿಲ್ಲ.

'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್'ಆತ'ನನ್ನು ಆರ್‌ಸಿಬಿಗೆ ಆರಿಸುವಂತೆ ಕೊಹ್ಲಿಗೆ ಹೇಳಿದ್ದೆ: ಪಾರ್ಥಿವ್ ಪಟೇಲ್

'ಕಳೆದ 10 ವರ್ಷಗಳಿಂದಲೂ ನಮಗೆ ಗೊತ್ತಿರುವ ವಿಚಾರವನ್ನೇ ಮತ್ತೆ ಮತ್ತೆ ಮಾತನಾಡಬೇಡ. ಬಾಬರ್ ತನ್ನ ಸಂವಹನ ಕೌಶಲ, ವ್ಯಕ್ತಿತ್ವ, ತಂಡ ಮುನ್ನಡೆಸು ಸಾಮರ್ಥ್ಯ, ಫಿಟ್‌ನೆಸ್ ಮಟ್ಟ ಇದನ್ನೆಲ್ಲ ವೃದ್ಧಿಸಿಕೊಳ್ಳಬೇಕಿದೆ. ಆತ ಕಲಿಯೋದು ಸಾಕಷ್ಟಿದೆ,' ಎಂದು ಅಖ್ತರ್ ಹೇಳಿದ್ದಾರೆ.

ಇಂಗ್ಲೆಂಡ್‌ ಕ್ರಿಕೆಟ್‌ನ ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಮತ್ತೆ ಮೈದಾನಕ್ಕೆಇಂಗ್ಲೆಂಡ್‌ ಕ್ರಿಕೆಟ್‌ನ ಸ್ಟುವರ್ಟ್ ಬ್ರಾಡ್, ಕ್ರಿಸ್ ವೋಕ್ಸ್ ಮತ್ತೆ ಮೈದಾನಕ್ಕೆ

'ಪತ್ರಿಕಾಗೋಷ್ಠಿಯ ಮುಂದೆ ನಾಯಕ ಕುಳಿತಿರುವಾಗ ಆಟದ ಬಗ್ಗೆ ದೂರದೃಷ್ಟಿಯ ಮಾತುಗಳನ್ನಾಡಬೇಕು. ಆದರೆ ಬಾಬರ್‌ಗೆ ಅದರ ಕೊರತೆಯಿದೆ. ನಮ್ಮ ನಾಯಕ ಭಾಷೆ ಗೊತ್ತಿಲ್ಲದ ವಿಷಯವನ್ನೇ ಮುಖ್ಯ ವಿಚಾರವೆಂಬಂತೆ ಮಾತನಾಡಿದ್ದಾರೆ. ನಮಗೀಗಾಗಲೇ ಗೊತ್ತಿರುವ, ಕೊಹ್ಲಿ-ಬಾಬರ್ ಹೋಲಿಸಿರುವುದರ ಬಗ್ಗೆ ಮಾತನಾಡಿದ್ದಾರೆ,' ಎಂದು ರಶೀದ್ ಲತೀಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Story first published: Friday, May 22, 2020, 12:24 [IST]
Other articles published on May 22, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X