ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್‌ನಲ್ಲಿ ಸ್ಟೀವ್ ಸ್ಮಿತ್ ಪಾಲ್ಗೊಳ್ಳುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಕ್ಲಾರ್ಕ್

Dont think Smith is going to stay 11 weeks away from his partner for Rs 2.2 crore: Michael Clarke

ಈ ಬಾರಿಯ ಐಪಿಎಲ್‌ ಹರಾಜಿನಲ್ಲಿ ಆಸ್ಟ್ರೇಲಿಯಾದ ಬ್ಯಾಟ್ಸ್‌ಮನ್ ಸ್ಟೀವ್ ಸ್ಮಿತ್ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ 2.2 ಕೋಟಿಗೆ ಹರಾಜಾಗಿದ್ದಾರೆ. ಆದರೆ ಕಡಿಮೆ ಮೊತ್ತವನ್ನು ಈ ಬಾರಿಯ ಹರಾಜಿನಲ್ಲಿ ಪಡೆದುಕೊಂಡ ಕಾರಣ ಕುಟುಂಬವನ್ನು ತೊರೆದು ಭಾರತಕ್ಕೆ ತೆರಳುವುದು ಅನುಮಾನ ಎಂದು ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.

ಸ್ಮಿತ್ ಕಡಿಮೆ ಮೊತ್ತಕ್ಕೆ ಹರಾಜಾಗಿದ್ದು ತನಗೆ ಆಶ್ಚರ್ಯ ಮೂಡಿಸಿದೆ ಎಂದಿದ್ದಾರೆ. ಮುಂದುವರಿದು ಮಾತನಾಡಿದ ಅವರು "ಭಾರತಕ್ಕೆ ವಿಮಾನ ಹತ್ತುವ ಮುನ್ನ ಸ್ಮಿತ್‌ಗೆ ಮಂಡಿರಜ್ಜು ನೋವು ಕಾಣಿಸಿಕೊಂಡರೆ ಆಶ್ಚರ್ಯ ಪಡಬೇಕಿಲ್ಲ" ಎಂದು ತಮಾಷೆಯಾಗಿ ಹೇಳಿದ್ದಾರೆ.

ಭಾರತ vs ಇಂಗ್ಲೆಂಡ್: ಉಮೇಶ್ ಯಾದವ್‌ಗೆ ಶೀಘ್ರ ಫಿಟ್ನೆಸ್ ಟೆಸ್ಟ್ಭಾರತ vs ಇಂಗ್ಲೆಂಡ್: ಉಮೇಶ್ ಯಾದವ್‌ಗೆ ಶೀಘ್ರ ಫಿಟ್ನೆಸ್ ಟೆಸ್ಟ್

"ಸ್ಟೀವ್ ಸ್ಮಿತ್ ಅವರ ಟಿ20 ಪ್ರದರ್ಶನ ಉತ್ತಮವಾಗಿಲ್ಲ ಎಂಬುದು ನನಗೆ ತಿಳಿದಿದೆ. ಅದರಲ್ಲೂ ಕಳೆದ ಬಾರಿಯ ಐಪಿಎಲ್ ಪ್ರದರ್ಶನ ಕಳಪೆಯಾಗಿತ್ತು. ಆದರೆ ಅವರು ಪಡೆದುಕೊಂಡಿರುವ ಮೊತ್ತ ನನಗೆ ಆಶ್ಚರ್ಯವನ್ನುಂಟು ಮಾಡಿದೆ. ಆದರೆ ಅದು ಕೂಡ ಉತ್ತಮ ಮೊತ್ತವೇ ಆಗಿದೆ" ಎಂದು ಮೈಕಲ್ ಕ್ಲಾರ್ಕ್ ಹೇಳಿದ್ದಾರೆ.

"ಆದರೆ ಕಳೆದ ಬಾರಿ ಅವರು ಪಡದಿರುವುದು ಹಾಗೂ ಅವರ ಸ್ಥಾನ(ರಾಜಸ್ಥಾನ್ ರಾಯಲ್ಸ್ ನಾಯಕತ್ವ)ವನ್ನು ನೋಡಿದರೆ ಭಾರತಕ್ಕೆ ವಿಮಾ ಹತ್ತುವ ಮುನ್ನ ಅವರಿಗೆ ಮಂಡಿರಜ್ಜು ಕಾಣಿಸಿಕೊಂಡರೆ ನಾನು ಆಶ್ಚರ್ಯ ಪಡಲಾರೆ" ಎಂದು ಮೈಕಲ್ ಕ್ಲಾರ್ಕ್ ಹೇಳಿಕೊಂಡಿದ್ದಾರೆ.

ಐಪಿಎಲ್: ಶಾರುಖ್‌ ಖಾನ್‌ಗೆ ಕ್ರಿಸ್ ಗೇಲ್ ಭೇಟಿಯಾಗುವ ತವಕಐಪಿಎಲ್: ಶಾರುಖ್‌ ಖಾನ್‌ಗೆ ಕ್ರಿಸ್ ಗೇಲ್ ಭೇಟಿಯಾಗುವ ತವಕ

8 ವಾರಗಳ ಟೂರ್ನಿ ಹಾಗೂ ಕ್ವಾರಂಟೈನ್ ಅವಧಿ ಸೇರಿ 11 ವಾಗಳ ಕಾಲ ಸ್ಟೀವ್ ಸ್ಮಿತ್ ತನ್ನ ಮಡದಿ ಹಾಗೂ ಕುಟುಂಬವನ್ನು ಇಷ್ಟು 2.2 ಕೋಟಿ ರೂಪಾಯುಗಳಿಗಾಗಿ ದೂರವಿರುತ್ತಾರೆ ಎಂದು ನಾನು ಭಾವಿಸಲಾರೆ ಎಂದು ಕ್ಲಾರ್ಕ್ ಹೇಳಿದರು. ಇನ್ನು ಮುಂದಿನ ಐಪಿಎಲ್‌ನಲ್ಲಿ ಸ್ಟೀವ್ ಸ್ಮಿತ್ ಪಾಲ್ಗೊಂಡು ಜನರ ಭಾವನೆ ತಪ್ಪು ಎಂದು ಸಾಧಿಸುತ್ತಾರೆಯೇ ಎಂಬುದನ್ನು ಕುತೂಹಲದಿಂದ ನೋಡುತ್ತೇನೆ ಎಂದಿದ್ದಾರೆ

Story first published: Saturday, February 20, 2021, 15:29 [IST]
Other articles published on Feb 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X