ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಪಿಲ್ ದೇವ್‌ ಜತೆ ಹಾರ್ದಿಕ್ ಪಾಂಡ್ಯಾ ಹೋಲಿಕೆ: ಕೆರಳಿದ ಗವಾಸ್ಕರ್‌

By Manjunatha
Dont compare Pandya with Kapil Dev: Sunil Gavaskar

ನವದೆಹಲಿ, ಆಗಸ್ಟ್ 07: ಕಪಿಲ್ ದೇವ್ ಶತಮಾನದ ಆಟಗಾರ, ಅಂತಹಾ ಮೇರು ಪ್ರತಿಭೆಯನ್ನು ಹಾರ್ದಿಕ್ ಪಾಂಡ್ಯಾ ಜತೆ ಹೋಲಿಸಬೇಡಿ ಎಂದು ಮಾಜಿ ಕ್ರಿಕೆಟಿಗ ಗವಾಸ್ಕರ್ ಹೇಳಿದ್ದಾರೆ.

ಇತ್ತೀಚೆಗೆ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಾ ಅನ್ನು ವಿಶ್ವಕಪ್ ವಿಜೇತ ಮಾಜಿ ಕ್ಯಾಪ್ಟನ್ ಕಪಿಲ್ ದೇವ್ ಅವರೊಂದಿಗೆ ಹೋಲಿಸಲಾಗುತ್ತಿತ್ತು. ಇದು ಸುನಿಲ್ ಗವಾಸ್ಕರ್ ಅವರನ್ನು ಕೆರಳಿಸಿದೆ.

ಪ್ರವಾಸದ ಬದಲಿಗೆ ಅಭ್ಯಾಸ ಮಾಡಿದ್ದರೆ ಭಾರತ ಟೆಸ್ಟ್‌ ಸೋಲುತ್ತಿರಲಿಲ್ಲ: ಗವಾಸ್ಕರ್ ಪ್ರವಾಸದ ಬದಲಿಗೆ ಅಭ್ಯಾಸ ಮಾಡಿದ್ದರೆ ಭಾರತ ಟೆಸ್ಟ್‌ ಸೋಲುತ್ತಿರಲಿಲ್ಲ: ಗವಾಸ್ಕರ್

ಈ ರೀತಿಯ ಹೋಲಿಕೆ ಮೂರ್ಖತನದ್ದು ಎಂದಿರುವ ಸುನಿಲ್ ಗವಾಸ್ಕರ್, 'ಕಪಿಲ್ ದೇವ್ ನೂರುವರ್ಷಕ್ಕೆ ಒಮ್ಮೆ ಕಂಡು ಬರುವಂತಹಾ ಅಪರೂಪದ ಪ್ರತಿಭೆ' ಎಂದು ಹೊಗಳಿದ್ದಾರೆ, ಜೊತೆಗೆ ಪಾಂಡ್ಯಾ ಅವರಲ್ಲಿ ಪ್ರತಿಭೆಯ ಕೊರತೆ ಇದೆ ಎಂಬುದನ್ನೂ ಅವರು ಹೇಳಿದ್ದಾರೆ.

ಕಪಿಲ್ ದೇವ್‌ರನ್ನು ಯಾರ ಜೊತೆಯೂ ಹೋಲಿಸಲಾಗದು

ಕಪಿಲ್ ದೇವ್‌ರನ್ನು ಯಾರ ಜೊತೆಯೂ ಹೋಲಿಸಲಾಗದು

ಕಪಿಲ್ ದೇವ್ ಅವರನ್ನು ಯಾರ ಜೊತೆಯೂ ಹೋಲಿಸಲು ಸಾಧ್ಯವಿಲ್ಲ ಎಂದಿರುವ ಅವರು, ಸಚಿನ್ ತೆಂಡೂಲ್ಕರ್ ಹಾಗೂ ಡಾನ್ ಬ್ರಾಡ್‌ಮನ್ ಅವರನ್ನು ಹೇಗೆಯಾರ ಜೊತೆಯೂ ಹೋಲಿಸಲು ಸಾಧ್ಯವಿಲ್ಲವೋ ಹಾಗೆ ಕಪಿಲ್ ಅವರನ್ನು ಯಾರೊಂದಿಗೂ ಹೋಲಿಸಲು ಸಾಧ್ಯವಿಲ್ಲ ಎಂದಿದ್ದಾರೆ.

ಟೆಸ್ಟ್ ಕ್ರಿಕೆಟ್ ನಲ್ಲಿ ಕಪಿಲ್ ದೇವ್ ದಾಖಲೆ ಮುರಿದ ಹಾರ್ದಿಕ್ ಪಾಂಡ್ಯ

ಶಿಖರ್ ಧವನ್ ಬದಲಾಗದ ಆಟಗಾರ

ಶಿಖರ್ ಧವನ್ ಬದಲಾಗದ ಆಟಗಾರ

ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ವಿಫಲರಾಗಿರುವ ಶಿಖರ್ ಧವನ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುನಿಲ್ ಗವಾಸ್ಕರ್, ಶಿಖರ್ ಧವನ್ ತಮ್ಮ ಆಟವನ್ನು ಪರಿಸ್ಥಿತಿಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುತ್ತಿಲ್ಲ ಹಾಗಾಗಿ ಅವರು ವಿಫಲರಾಗುತ್ತಿದ್ದಾರೆ ಎಂದರು.

ಹೆಚ್ಚುವರಿ ಬ್ಯಾಟ್ಸ್‌ಮನ್‌ ಬೇಕು

ಹೆಚ್ಚುವರಿ ಬ್ಯಾಟ್ಸ್‌ಮನ್‌ ಬೇಕು

ಲಾರ್ಡ್ಸ್‌ನಲ್ಲಿ ನಡೆಯುವ ಎರಡನೇ ಟೆಸ್ಟ್‌ ಪಂದ್ಯಕ್ಕೆ ಭಾರತ ತಂಡವು ಒಬ್ಬ ಹೆಚ್ಚುವರಿ ಬ್ಯಾಟ್ಸ್‌ಮನ್‌ನೊಂದಿಗೆ ಕಣಕ್ಕಿಳಿಯುವುದು ಉತ್ತಮ ಎಂದು ಸುನಿಲ್ ಗವಾಸ್ಕರ್‌ ಸಲಹೆ ನೀಡಿದ್ದಾರೆ.

ಚೆತೇಶ್ವರ್ ಪೂಜಾರಾಗೆ ಅವಕಾಶ ಕೊಡಬೇಕು

ಚೆತೇಶ್ವರ್ ಪೂಜಾರಾಗೆ ಅವಕಾಶ ಕೊಡಬೇಕು

ಎರಡನೇ ಟೆಸ್ಟ್‌ನಲ್ಲಿ ಚೆತೇಶ್ವರ್ ಪೂಜಾರಾ ಅವರಿಗೆ ಅವಕಾಶ ಕೊಡಬೇಕು ಎಂದು ಸುನಿಲ್ ಗವಾಸ್ಕರ್ ಸಲಹೆ ನೀಡಿದ್ದಾರೆ. ಪೂಜಾರಾಗೆ ಟೆಸ್ಟ್‌ಗೆ ಬೇಕಾದ ತಾಳ್ಮೆ ಹಾಗೂ ತಂತ್ರಗಾರಿಕೆ ಇದೆ ಎಂದಿರುವ ಗವಾಸ್ಕರ್, ಲಾರ್ಡ್ಸ್‌ನ ಪಿಚ್ ಅಷ್ಟೇನು ಹಸಿರಾಗಿ ಇಲ್ಲದಿದ್ದರೆ ನಾನು ಉಮೇಶ್ ಯಾದವ್‌ನನ್ನು ಕೈಬಿಟ್ಟು ಚೆತೇಶ್ವರ ಪೂಜಾರಾಗೆ ಅವಕಾಶ ಕೊಡುತ್ತೇನೆ ಎಂದು ಹೇಳಿದ್ದಾರೆ.

ಟಾಸ್‌ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು

ಟಾಸ್‌ ಗೆದ್ದರೆ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು

ಎರಡನೇ ಟೆಸ್ಟ್‌ ಪಂದ್ಯದಲ್ಲಿ ಟಾಸ್ ಮಹತ್ವದ ಪಾತ್ರ ವಹಿಸುತ್ತದೆ ಎಂದಿರುವ ಸುನಿಲ್ ಗವಾಸ್ಕರ್, ಟಾಸ್ ಗೆದ್ದರೆ ಕಡ್ಡಾಯವಾಗಿ ಬ್ಯಾಟಿಂಗ್ ಆಯ್ಕೆ ಮಾಡಿಕೊಳ್ಳಬೇಕು. ಚೇಸಿಂಗ್‌ನಲ್ಲಿ ಬಹುತೇಕ ತಂಡಗಳು ಎಡವಿಬಿಡುತ್ತವೆ ಎಂದು ಅವರು ಹೇಳಿದ್ದಾರೆ.

ಭಾರತ ತಂಡದ ಮೇಲೆ ಹರಿಹಾಯ್ದ ಗವಾಸ್ಕರ್

ಭಾರತ ತಂಡದ ಮೇಲೆ ಹರಿಹಾಯ್ದ ಗವಾಸ್ಕರ್

ಮೊದಲ ಟೆಸ್ಟ್‌ ಪಂದ್ಯದಲ್ಲಿ ಸೋತಿದ್ದಕ್ಕೆ ಭಾರತ ತಂಡದ ಅಭ್ಯಾಸದ ಕೊರತೆಯೇ ಕಾರಣ ಎಂದು ಸುನಿಲ್ ಗವಾಸ್ಕರ್ ಜರಿದಿದ್ದಾರೆ. ಕೇವಲ ಕಾಟಾಚಾರಕ್ಕೆ ಒಂದು ಅಭ್ಯಾಸ ಪಂದ್ಯ ಮಾತ್ರ ಆಡಿದ್ದ ಭಾರತ ತಂಡದ ಆಟಗಾರರು ಬಿಡುವಿನ ಸಮಯವನ್ನು ಪ್ರವಾಸದಲ್ಲಿ ಕಳೆದಿದ್ದರು. ಅದರ ಬದಲಿಗೆ ಅಭ್ಯಾಸ ಮಾಡಿದ್ದರೆ ಗೆಲುವು ಸಾಧ್ಯವಾಗಿರುತ್ತಿತ್ತು ಎಂದರು.

Story first published: Tuesday, August 7, 2018, 15:14 [IST]
Other articles published on Aug 7, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X