ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಮತ್ತು ವಿಶ್ವಕಪ್‌ನ ಭವಿಷ್ಯ ನುಡಿದ ಟೀಮ್ ಇಂಡಿಯಾ ವೇಗಿ ಶಮಿ

Dont Think Ipl Will Be Possible This Year’: Mohammed Shami

ಕೊರೊನಾ ವೈರಸ್ ಇಡೀ ಜಗತ್ತನ್ನು ಆತಂಕದಲ್ಲಿ ದೂಡಿದೆ. ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದ್ದು ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಮಧ್ಯೆಯೂ ಇದರಲ್ಲಿ ಒಂದಷ್ಟು ಸಡಿಲಿಕೆಯನ್ನು ಈಗ ಮಾಡುವ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿದೆ. ಈ ಮಧ್ಯೆ ಕ್ರೀಡೆಗಳ ಭವಿಷ್ಯವೇನು ಎಂಬುದು ಪ್ರಶ್ನೆಯಾಗಿದೆ.

ಈ ವಿಚಾರವಾಗಿ ಟೀಮ್ ಇಂಡಿಯಾದ ವೇಗದ ಬೌಲರ್ ಮೊಹಮದ್ ಶಮಿ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ವರ್ಷ ಐಪಿಎಲ್ ನಡೆಯುವುದು ಸಾಧ್ಯವಿಲ್ಲ ಎಂದು ನನಗೆ ಅನಿಸುತ್ತಿದೆ ಎಂದು ಮೊಹಮದ್ ಶಮಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಜೊತೆಗೆ ಟಿ20 ವಿಶ್ವಕಪ್ ಕೂಡ ಮುಂದೂಡಬೇಕಾಗಬಹುದು ಎಂದಿದ್ದಾರೆ.

ತನ್ನ ನೆಚ್ಚಿನ ಆಲ್‌ ಟೈಮ್ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್ತನ್ನ ನೆಚ್ಚಿನ ಆಲ್‌ ಟೈಮ್ ಐಪಿಎಲ್ ತಂಡ ಪ್ರಕಟಿಸಿದ ಡೇವಿಡ್ ವಾರ್ನರ್

ಖಾಸಗೀ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ಮಾತಮಾಡಿದ ಶಮಿ "ನಾನು ಇರ್ಫಾನ್ ಪಠಾಣ್ ಜೊತೆಗೆ ಮಾತುಕತೆ ನಡೆಸುವ ಸಂದರ್ಭದಲ್ಲಿ ಅವರಲ್ಲೂ ಈ ಬಗ್ಗೆ ಚರ್ಚಿಸಿದ್ದೆ. ನನ್ನ ಪ್ರಕಾರ ಈ ವರ್ಷ ಐಪಿಎಲ್ ನಡೆಯಲು ಸಾಧ್ಯವಿಲ್ಲ ಎಂದು ಅವರಲ್ಲೂ ಹೇಳಿದ್ದೆ, ಜೊತೆಗೆ ವಿಶ್ವಕಪ್ ಕೂಡ ಈ ವರ್ಷ ನಡೆಯುವುದು ಅಸಾಧ್ಯದ ಮಾತು ಎಂದು ಶಮಿ ಹೇಳಿದ್ದಾರೆ.

ಈಗಿನ ಪರಿಸ್ಥಿತಿ ಎಲ್ಲವೂ ಅಂತ್ಯಗೊಳ್ಳಬೇಕು. ಪ್ರತಿಯೊಂದಕ್ಕೂ ಮುಂದೆ ಮರುವೇಳಾಪಟ್ಟಿಯನ್ನು ಸಿದ್ದಪಡಿಸಬೇಕು. ಎಲ್ಲಿ ಯಾವುದು ಸೂಕ್ತ ಎಂಬುದರ ಕುರಿತು ಚರ್ಚಿಸಿ ನಿರ್ಧಾರವನ್ನು ತೆಗೆದುಕೊಳ್ಳಬೇಕು. ಈ ಕಾರಣಗಳಿಂದಾಗಿ ಐಪಿಎಲ್ ಈ ವರ್ಷ ನಡೆಯುವುದು ಸಾಧ್ಯ ಎಂದು ನನಗನಿಸುತ್ತಿಲ್ಲ ಎಂದು ಶಮಿ ಹೇಳಿದ್ದಾರೆ.

ಕೆ.ಎಲ್ to ಡಿ.ಕೆ : ಐಪಿಎಲ್‌ನಲ್ಲಿ ತವರು ತಂಡವನ್ನು ಮುನ್ನಡೆಸದ ಐದು ಸ್ಟಾರ್ ಆಟಗಾರರುಕೆ.ಎಲ್ to ಡಿ.ಕೆ : ಐಪಿಎಲ್‌ನಲ್ಲಿ ತವರು ತಂಡವನ್ನು ಮುನ್ನಡೆಸದ ಐದು ಸ್ಟಾರ್ ಆಟಗಾರರು

ಇದೇ ಸಂದರ್ಭದಲ್ಲಿ ಶಮಿ ಆಟಗಾರರಿಗೂ ಲಾಕ್‌ಡೌನ್ ಮುಗಿದ ಬಳಿಕ ಹೊಂದಿಕೊಳ್ಳಲು ಸಮಯದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ. ಮತ್ತೆ ತಮ್ಮ ಲಯವನ್ನು ಪಡೆದುಕೊಳ್ಳಲು ಆಟಗಾರರಿಗೆ ಖಂಡಿತಾ ಕನಿಷ್ಟ ಒಂದು ತಿಂಗಳ ಸಮಯ ಬೇಕಾಗಬಹುದು. ನನಗೆ ಗೊತ್ತಿರುವಂತೆ ಶೇಕಡಾ 95 ರಷ್ಟು ಕ್ರಿಕೆಟಿಗರು ತಮ್ಮ ತಮ್ಮ ಮನೆಯೊಳಗೇ ಕಾಲ ಕಳೆಯುತ್ತಿದ್ದಾರೆ. ಹೀಗಾಗಿ ಹೆಚ್ಚಿನ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಟಗಾರರು ಮತ್ತೆ ಕಣಕ್ಕಿಳಿಯಲು ಒಂದಷ್ಟು ಸಮಯದ ಅವಶ್ಯಕತೆಯಿದೆ ಎಂದು ಹೇಳಿದ್ದಾರೆ.

Story first published: Thursday, May 7, 2020, 14:34 [IST]
Other articles published on May 7, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X