ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದ್ರಾವಿಡ್ ಮತ್ತು ಕೊಹ್ಲಿ ಯಾವುದೇ ದೇಶದ ಪಿಚ್‌ನಲ್ಲೂ ಗೆಲ್ಲಲು ರೆಡಿಯಾಗಿದ್ದಾರೆ: ಸಾಬಾ ಕರೀಂ

Rahul dravid and virat kohli

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಹೊಸ ಕೋಚ್ ರಾಹುಲ್ ದ್ರಾವಿಡ್ ಯಾವುದೇ ದೇಶದ ಪಿಚ್‌ಗಳಲ್ಲೂ, ಕಠಿಣ ಟ್ರ್ಯಾಕ್‌ಗಳಲ್ಲಿ ಆಡಲು ರೆಡಿಯಾಗಿದ್ದಾರೆ ಎಂದು ಭಾರತದ ಮಾಜಿ ಕ್ರಿಕೆಟಿಗ ಸಾಬಾ ಕರೀಂ ಹೇಳಿದ್ದಾರೆ.

ಭಾರತ ಇತ್ತೀಚೆಗಷ್ಟೇ ಐಸಿಸಿ ಟೆಸ್ಟ್ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧದ 2 ಪಂದ್ಯಗಳ ಟೆಸ್ಟ್ ಸರಣಿಯನ್ನು 1-0ಯಿಂದ ವಶಪಡಿಸಿಕೊಂಡಿತು. ಅತ್ಯಂತ ಕುತೂಹಲಕಾರಿಯಾಗಿ ಕಂಡುಬಂದ ಕಾನ್ಪುರ ಟೆಸ್ಟ್ ಪಂದ್ಯದಲ್ಲಿ ಕೊನೆಯ ಹಂತದವರೆಗೂ ಜಯದ ಲಕ್ಷ್ಮೀ ಯಾರ ಕಡೆಗೂ ವಾಲಲಿಲ್ಲ. ಆದ್ರೆ ಕೊನೆಗೆ ಪಂದ್ಯವು ಡ್ರಾನಲ್ಲಿ ಕೊನೆಗೊಂಡಿತು. ಅದೇ ಮುಂಬೈ ಟೆಸ್ಟ್‌ನಲ್ಲಿ ನಾಯಕ ವಿರಾಟ್ ಕೊಹ್ಲಿ ಮುಂದಾಳತ್ವದಲ್ಲಿ ನಡೆದ ಪಂದ್ಯದಲ್ಲಿ ಭಾರತ 372ರನ್‌ಗಳ ಬೃಹತ್ ಗೆಲುವು ಸಾಧಿಸಿತು.

ಯಾವುದೇ ಪಿಚ್‌ನಲ್ಲೂ ಪಂದ್ಯ ಗೆಲ್ಲಿಸಬಲ್ಲ ಆಟಗಾರರಿದ್ದಾರೆ!

ಯಾವುದೇ ಪಿಚ್‌ನಲ್ಲೂ ಪಂದ್ಯ ಗೆಲ್ಲಿಸಬಲ್ಲ ಆಟಗಾರರಿದ್ದಾರೆ!

ಭಾರತದಲ್ಲಿನ ಪಿಚ್‌ಗಳು ಸಾಮಾನ್ಯವಾಗಿ ಸ್ಪಿನ್‌ ಬೌಲರ್‌ಗಳಿಗೆ ಸಹಾಯ ಮಾಡುತ್ತದೆ. ಹೀಗಾಗಿಯೇ ಯಾವುದೇ ವಿದೇಶಿ ಬ್ಯಾಟ್ಸ್‌ಮನ್ ಇಲ್ಲಿ ರನ್‌ಗಳಿಸಲು ಕಷ್ಟಕರವಾಗಿರುತ್ತದೆ. ಆದ್ರೆ ಕಾನ್ಪುರ ಪಿಚ್ ಹಾಗಿರಲಿಲ್ಲ, ತುಂಬಾ ಸ್ಪರ್ಧಾತ್ಮಕ ಪಿಚ್ ಅನ್ನು ನಾವು ಕಾಣಬಹುದಿತ್ತು. ಹೀಗಾಗಿಯೇ ನ್ಯೂಜಿಲೆಂಡ್ ಅಂತಿಮ ಸೆಷನ್‌ನಲ್ಲಿ ಕೊನೆಯ ವಿಕೆಟ್ ಉಳಿಸಿಕೊಂಡು ಪಂದ್ಯವನ್ನ ಡ್ರಾ ಮಾಡಿಕೊಳ್ಳಲು ಸಾಧ್ಯವಾಯಿತು.

ಎರಡೂ ಪಂದ್ಯಗಳ ಫಲಿತಾಂಶವನ್ನ ನೋಡಿದ ನಂತರ, ಸ್ಪಿನ್ ಹೊರತುಪಡಿಸಿ ಯಾವುದೇ ಸವಾಲಿನ ಟ್ರ್ಯಾಕ್‌ನಲ್ಲೂ ಆಡಲು ಭಾರತ ತಂಡ ಸಿದ್ಧವಾಗಿದೆ ಎಂದು ಕರೀಂ ನಂಬಿದ್ದಾರೆ.

ಕೊಹ್ಲಿ- ದ್ರಾವಿಡ್ ಯಾವುದೇ ಪಿಚ್‌ನಲ್ಲೂ ಗೆಲ್ಲಲು ರೆಡಿಯಾಗಿದ್ದಾರೆ!

ಕೊಹ್ಲಿ- ದ್ರಾವಿಡ್ ಯಾವುದೇ ಪಿಚ್‌ನಲ್ಲೂ ಗೆಲ್ಲಲು ರೆಡಿಯಾಗಿದ್ದಾರೆ!

''ರಾಹುಲ್ ದ್ರಾವಿಡ್ ಮತ್ತು ವಿರಾಟ್ ಕೊಹ್ಲಿ ಯಾವುದೇ ರೀತಿಯ ಟ್ರ್ಯಾಕ್‌ನಲ್ಲಿ ಆಡಲು ಸಿದ್ಧರಾಗಿದ್ದಾರೆ. ಯಾವುದೇ ಸ್ಥಿತಿಯಲ್ಲೂ ಪಂದ್ಯಗಳನ್ನು ಗೆಲ್ಲುವ ಸಾಮರ್ಥ್ಯ ಮತ್ತು ಆಟಗಾರರನ್ನು ನಾವು ಹೊಂದಿದ್ದೇವೆ. ನ್ಯೂಜಿಲೆಂಡ್ ವಿರುದ್ಧದ ಎರಡು ಟೆಸ್ಟ್ ಪಂದ್ಯಗಳು ಇದನ್ನೇ ಸೂಚಿಸಿವೆ'' ಎಂದು ಕರೀಮ್ ಖೇಲ್‌ನೀತಿ ಯೂಟ್ಯೂಬ್ ಚಾನೆಲ್‌ನಲ್ಲಿ ಹೇಳಿದ್ದಾರೆ.

ಆ್ಯಷಸ್ ಸರಣಿ: ಬದ್ಧ ವೈರಿಗಳ ಮೊದಲ ಕಾದಾಟಕ್ಕೆ ಗಬ್ಬಾ ಪಿಚ್ ರೆಡಿ: ಪ್ಲೇಯಿಂಗ್ 11, ಪಿಚ್ ರಿಪೋರ್ಟ್

ಕುಗ್ಗಿದ ಆಟಗಾರನನ್ನ ಬೆಂಬಲಿಸುವ ವಾತಾವರಣವಿದೆ

ಕುಗ್ಗಿದ ಆಟಗಾರನನ್ನ ಬೆಂಬಲಿಸುವ ವಾತಾವರಣವಿದೆ

ಟೆಸ್ಟ್ ತಂಡದಲ್ಲಿನ ಆಟಗಾರರ ಮಾನಸಿಕ ಸ್ಥಿತಿ ಬಗ್ಗೆಯೂ ಮಾತನಾಡಿದ ಕರೀಮ್, ಮುಖ್ಯ ಕೋಚ್ ದ್ರಾವಿಡ್ ತಂಡದ ಪ್ರತಿಯೊಬ್ಬ ಸದಸ್ಯರಿಗೆ ಮೌಲ್ಯವನ್ನು ನೀಡಬೇಕು ಎಂದು ಭಾವಿಸುತ್ತಾರೆ. ನಾಯಕ ವಿರಾಟ್ ಕೊಹ್ಲಿ ಕೆಟ್ಟ ಫಾರ್ಮ್‌ನಿಂದ ಬಳಲುತ್ತಿರುವ ಆಟಗಾರರ ಬೆಂಬಲಕ್ಕೆ ನಿಲ್ಲುತ್ತಾರೆ ಎಂದಿದ್ದಾರೆ.

"ತಂಡದ ಪ್ರತಿಯೊಬ್ಬ ಆಟಗಾರನು ತಾನು ತಂಡದ ಪ್ರಮುಖ ಸದಸ್ಯನೆಂದು ಭಾವಿಸುವುದನ್ನು ಖಚಿತಪಡಿಸಿಕೊಳ್ಳಲು ಉತ್ತಮವಾಗಿ ಸಂವಹನ ಮಾಡುವುದು ಕೋಚ್ ಮತ್ತು ಕ್ಯಾಪ್ಟನ್ ಕೆಲಸವಾಗಿದೆ. ತಂಡದೊಳಗೆ ಈ ಮಾತುಕತೆಗಳು ನಡೆದರೆ ಆಟಗಾರರು ಮಾನಸಿಕವಾಗಿ ಸಿದ್ಧಗೊಳ್ಳುತ್ತಾರೆ. ಏಕೆಂದರೆ ಕೆಲವೊಮ್ಮೆ ಆಟಗಾರರು ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಆಡುತ್ತಾರೆ. ಆದ್ರೆ ಈ ಪರಿಸ್ಥಿತಿ ಬರಬಾರದು.ಆಟಗಾರನು ತನ್ನನ್ನು ಕೋಚ್ ಮತ್ತು ನಾಯಕನು ಬೆಂಬಲಿಸಲು ಸಿದ್ಧ ಎಂದು ಭಾವಿಸಿದರೆ, ಅವನು ಹೆಚ್ಚು ಆತ್ಮವಿಶ್ವಾಸವನ್ನು ಹೊಂದುತ್ತಾನೆ "ಎಂದು ಕರೀಮ್ ಹೇಳಿದರು.

ಭಾರತದಲ್ಲಿ ಸತತ 14 ಸರಣಿ ಗೆದ್ದಿರುವ ಟೀಂ ಇಂಡಿಯಾ

ಭಾರತದಲ್ಲಿ ಸತತ 14 ಸರಣಿ ಗೆದ್ದಿರುವ ಟೀಂ ಇಂಡಿಯಾ

2012ರ ಡಿಸೆಂಬರ್‌ನಿಂದ ಈಚೆಗೆ ಭಾರತವು ತವರಿನಲ್ಲಿ 14 ಟೆಸ್ಟ್ ಸರಣಿಗಳನ್ನ ಆಡಿದ್ದು, ಒಂದೇ ಒಂದು ಸರಣಿಯನ್ನೂ ಕೈ ಚೆಲ್ಲದೆ ಅಜೇಯ 14 ಸರಣಿಗಳ ಜಯದೊಂದಿಗೆ ವಿಶ್ವದಾಖಲೆಯನ್ನ ನಿರ್ಮಿಸಿದೆ. ಇದುವರೆಗೂ ಆಸ್ಟ್ರೇಲಿಯಾ ತವರಿನಲ್ಲಿ ಎರಡು ಬಾರಿ 10 ಟೆಸ್ಟ್ ಸರಣಿ ಗೆದ್ದ ದಾಖಲೆ ಹೊಂದಿತ್ತು.

ಸದ್ಯ ಟೀಂ ಇಂಡಿಯಾ ಐಸಿಸಿ ಟೆಸ್ಟ್ ರ್ಯಾಂಕಿಂಗ್‌ನಲ್ಲಿ ನಂಬರ್ 1 ತಂಡವಾಗಿ ಹೊರಹೊಮ್ಮಿದ್ದು, ಡಿಸೆಂಬರ್ 26ರಿಂದ ದಕ್ಷಿಣ ಆಫ್ರಿಕಾ ವಿರುದ್ಧ ಹರಿಣಗಳ ನಾಡಲ್ಲಿ ಮೂರು ಟೆಸ್ಟ್ ಪಂದ್ಯಗಳನ್ನ ಆಡಲಿದೆ. ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಟೆಸ್ಟ್ ಸರಣಿ ಗೆದ್ದಿರುವ ಭಾರತಕ್ಕೆ, ದಕ್ಷಿಣ ಆಫ್ರಿಕಾದಲ್ಲಿ ಟೆಸ್ಟ್‌ ಸರಣಿ ಗೆಲುವು ಕಬ್ಬಿಣದ ಕಡಲೆಯಾಗಿದೆ. ಆದ್ರೆ ಈ ಬಾರಿ ಕೊಹ್ಲಿ ಪಡೆ ಆ ದಾಖಲೆಯನ್ನೂ ಮಾಡುತ್ತ ಎಂಬುದನ್ನ ಕಾದು ನೋಡ್ಬೇಕಿದೆ.

Story first published: Tuesday, December 7, 2021, 19:02 [IST]
Other articles published on Dec 7, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X