ದ್ರಾವಿಡ್ 5ರಿಂದ 10 ವರ್ಷದ ಯೋಜನೆಯೊಂದಿಗೆ ಟೀಮ್ ಇಂಡಿಯಾ ಕೋಚ್ ಆಗುತ್ತಾರೆ ಎಂದ ಮಾಜಿ ಕ್ರಿಕೆಟಿಗ

ವಿಶ್ವ ಕ್ರಿಕೆಟ್ ಕಂಡ ಅತ್ಯುತ್ತಮ ಕ್ರಿಕೆಟಿಗರ ಸಾಲಿನಲ್ಲಿ ಪ್ರಮುಖರಾಗಿ ನಿಲ್ಲುವಂತಹ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ತಮ್ಮ ಕ್ರಿಕೆಟ್ ಜೀವನದಲ್ಲಿ ಹಲವಾರು ಅದ್ಭುತ ಪ್ರದರ್ಶನಗಳನ್ನು ನೀಡಿ ಇದೀಗ ಹಲವಾರು ಯುವಪ್ರತಿಭೆಗಳನ್ನು ಟೀಮ್ ಇಂಡಿಯಾಗೆ ನೀಡಿದ್ದಾರೆ. ಹೌದು, ತಾವು ಆಟಗಾರನಾಗಿದ್ದಾಗ ಬ್ಯಾಟ್ ಮೂಲಕ ಟೀಮ್ ಇಂಡಿಯಾಗೆ ಕೊಡುಗೆಗಳನ್ನು ನೀಡಿದ್ದ ರಾಹುಲ್ ದ್ರಾವಿಡ್ ಆಟಗಾರನಾಗಿ ನಿವೃತ್ತಿ ಹೊಂದಿದ ನಂತರ ತರಬೇತುದಾರನಾಗಿ ಭಾರತ ಕ್ರಿಕೆಟ್‌ಗೆ ದೊಡ್ಡ ಮಟ್ಟದ ಕೊಡುಗೆ ನೀಡಿದ್ದಾರೆ.

ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!ಟಿ20 ವಿಶ್ವಕಪ್: ಪಾಕ್ ವಿರುದ್ಧ ನ್ಯೂಜಿಲೆಂಡ್‌ ಸೋತರೂ ಈ ಕಾರಣಕ್ಕೆ ಭಾರತದ ಸೆಮಿಫೈನಲ್‌ ಪ್ರವೇಶ ಅನುಮಾನ!

ಭಾರತ ಅಂಡರ್ 19 ಮತ್ತು ಭಾರತ ಎ ತಂಡಗಳಿಗೆ ಕೋಚ್ ಆಗಿ ಕಾರ್ಯ ನಿರ್ವಹಿಸುವುದರ ಮೂಲಕ ರಾಹುಲ್ ದ್ರಾವಿಡ್ ಹಲವಾರು ಯುವ ಕ್ರಿಕೆಟಿಗರನ್ನು ಪ್ರತಿಭಾವಂತ ಕ್ರಿಕೆಟಿಗರಾಗಿ ತಿದ್ದಿ ಟೀಮ್ ಇಂಡಿಯಾಗೆ ಕೊಡುಗೆ ನೀಡಿದ್ದಾರೆ. ಹೀಗೆ ಯುವ ಕ್ರಿಕೆಟಿಗರನ್ನು ಪ್ರತಿಭಾವಂತರನ್ನಾಗಿ ರೂಪಿಸುವಲ್ಲಿ ಯಶಸ್ವಿಯಾಗಿರುವ ರಾಹುಲ್ ದ್ರಾವಿಡ್ ಇದೀಗ ರವಿಶಾಸ್ತ್ರಿ ನಂತರ ಭಾರತ ತಂಡದ ತರಬೇತುದಾರರಾಗಲು ಇತ್ತೀಚೆಗಷ್ಟೇ ಅರ್ಜಿ ಹಾಕಿದ್ದಾರೆ. ರಾಹುಲ್ ದ್ರಾವಿಡ್ ಅರ್ಜಿ ಸಲ್ಲಿಸಿದ ನಂತರ ಇತರೆ ಯಾವುದೇ ಕೋಚ್ ಅರ್ಜಿ ಸಲ್ಲಿಸಿದರೂ ಸಹ ಆಯ್ಕೆಯಾಗುವುದು ರಾಹುಲ್ ದ್ರಾವಿಡ್ ಮಾತ್ರ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.

'ವಿಷಯ ತಿಳಿಯದೇ ಮಾತನಾಡಬೇಡಿ'; ಮಂಡಿಯೂರಲು ನಿರಾಕರಿಸಿದ್ದರ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಡಿ ಕಾಕ್'ವಿಷಯ ತಿಳಿಯದೇ ಮಾತನಾಡಬೇಡಿ'; ಮಂಡಿಯೂರಲು ನಿರಾಕರಿಸಿದ್ದರ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ಡಿ ಕಾಕ್

ಹೀಗಾಗಿ ಸದ್ಯ ನಡೆಯುತ್ತಿರುವ ಪ್ರತಿಷ್ಠಿತ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿ ಮುಗಿದ ನಂತರ ಟೀಮ್ ಇಂಡಿಯಾ ಕೋಚ್ ಸ್ಥಾನದಿಂದ ರವಿಶಾಸ್ತ್ರಿ ಕೆಳಗಿಳಿಯಲಿದ್ದು ಆ ಸ್ಥಾನಕ್ಕೆ ರಾಹುಲ್ ದ್ರಾವಿಡ್ ಆಯ್ಕೆಯಾಗುವುದು ಬಹುತೇಕ ಖಚಿತವೆನ್ನಬಹುದು. ಹೀಗೆ ರಾಹುಲ್ ದ್ರಾವಿಡ್ ರವಿಶಾಸ್ತ್ರಿ ನಂತರ ಟೀಮ್ ಇಂಡಿಯಾ ಕೋಚ್ ಆಗುವುದು ಖಚಿತ ಎಂದು ಆಕಾಶ್ ಚೋಪ್ರಾ ಕೂಡ ಹೇಳಿಕೆ ನೀಡಿದ್ದು ಈ ಕೆಳಕಂಡಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

5ರಿಂದ 10 ವರ್ಷದ ನೀಲಿ ನಕ್ಷೆಯೊಂದಿಗೆ ರಾಹುಲ್ ದ್ರಾವಿಡ್ ಕೋಚ್ ಆಗುತ್ತಾರೆ

5ರಿಂದ 10 ವರ್ಷದ ನೀಲಿ ನಕ್ಷೆಯೊಂದಿಗೆ ರಾಹುಲ್ ದ್ರಾವಿಡ್ ಕೋಚ್ ಆಗುತ್ತಾರೆ

"ರವಿಶಾಸ್ತ್ರಿ ನಂತರ ರಾಹುಲ್ ದ್ರಾವಿಡ್ ಕೋಚ್ ಆದ ನಂತರ ಒಂದು ನೂತನ ಪ್ರಕ್ರಿಯೆಯನ್ನು ಜಾರಿಗೆ ತರುವುದು ಖಚಿತ. ರಾಹುಲ್ ದ್ರಾವಿಡ್ 5ರಿಂದ 10 ವರ್ಷದ ನೀಲಿನಕ್ಷೆಯ ಯೋಜನೆಯೊಂದಿಗೆ ತಂಡವನ್ನು ಸೇರಲಿದ್ದಾರೆ. ಕಡಿಮೆ ಅವಧಿಗೆ ರಾಹುಲ್ ದ್ರಾವಿಡ್ ಕೋಚ್ ಆಗುವುದಿಲ್ಲ 5ರಿಂದ 10 ವರ್ಷ ಇರಲಿದ್ದಾರೆ" ಎಂದು ಆಕಾಶ್ ಚೋಪ್ರಾ ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಇರುವ ಟೀಮ್ ಇಂಡಿಯಾ ಬಲಿಷ್ಠ

ಪ್ರಸ್ತುತ ಇರುವ ಟೀಮ್ ಇಂಡಿಯಾ ಬಲಿಷ್ಠ

"ರಾಹುಲ್ ದ್ರಾವಿಡ್ ಬಂದ ನಂತರ ಟೀಮ್ ಇಂಡಿಯಾ ಮತ್ತಷ್ಟು ಬಲಿಷ್ಠವಾಗಲಿದೆ. ಹಾಗಂದ ಮಾತ್ರಕ್ಕೆ ಈಗಿರುವ ಟೀಮ್ ಇಂಡಿಯಾ ಉತ್ತಮ ಪ್ರದರ್ಶನವನ್ನು ನೀಡುತ್ತಿಲ್ಲ ಎಂದೇನಲ್ಲ. ಈಗಿರುವ ಟೀಮ್ ಇಂಡಿಯಾ ಆಸ್ಟ್ರೇಲಿಯಾ ನೆಲದಲ್ಲಿ ಆಸ್ಟ್ರೇಲಿಯಾ ತಂಡವನ್ನು ಸೋಲಿಸಿದೆ ಹಾಗೂ ಇಂಗ್ಲೆಂಡ್ ನೆಲದಲ್ಲಿ ಇಂಗ್ಲೆಂಡ್ ತಂಡಕ್ಕೆ ಮಣ್ಣುಮುಕ್ಕಿಸಿದೆ. ಟೆಸ್ಟ್ ಶ್ರೇಯಾಂಕದಲ್ಲಿ ಕಳೆದ ಐದಾರು ವರ್ಷಗಳಿಂದ ಟಾಪ್ 5ರ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳುತ್ತಾ ಬಂದಿದ್ದು ರಾಹುಲ್ ದ್ರಾವಿಡ್ ತಂಡವನ್ನು ಸೇರಿದ ನಂತರ ಈ ಯಶಸ್ಸು ಮತ್ತಷ್ಟು ಉಲ್ಬಣವಾಗಲಿದೆ" ಎಂದು ಆಕಾಶ್ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕನ್ನಡಿಗ KL ರಾಹುಲ್ ಗೆ ಬಿಗ್ ಶಾಕ್ ಕೊಟ್ಟ ಪಂಜಾಬ್ ಟೀಂನ ಮಾಲೀಕ | Oneindia Kannada
ದ್ರಾವಿಡ್ - ಕೊಹ್ಲಿ - ರೋಹಿತ್ ಶರ್ಮಾ ಕಾಂಬಿನೇಷನ್ ಅಬ್ಬರಿಸಲಿದೆ

ದ್ರಾವಿಡ್ - ಕೊಹ್ಲಿ - ರೋಹಿತ್ ಶರ್ಮಾ ಕಾಂಬಿನೇಷನ್ ಅಬ್ಬರಿಸಲಿದೆ

ಇನ್ನೂ ಮುಂದುವರಿದು ಮಾತನಾಡಿರುವ ಆಕಾಶ್ ಚೋಪ್ರಾ ಟೀಮ್ ಇಂಡಿಯಾಗೆ ರಾಹುಲ್ ದ್ರಾವಿಡ್ ಕೋಚ್ ಆಗಿ ಆಯ್ಕೆಯಾದ ನಂತರ ಟೆಸ್ಟ್ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ರಾಹುಲ್ ದ್ರಾವಿಡ್ ಕಾಂಬಿನೇಷನ್ ಅತ್ಯುತ್ತಮವಾಗಿರಲಿದೆ, ಅದೇ ರೀತಿ ಟಿ ಟ್ವೆಂಟಿ ಕ್ರಿಕೆಟ್ ತಂಡಕ್ಕೆ ರೋಹಿತ್ ಶರ್ಮಾ ನಾಯಕನಾಗಲಿದ್ದು ರಾಹುಲ್ ದ್ರಾವಿಡ್ ತರಬೇತಿ ತಂಡವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲಿದೆ ಎಂದು ಆಕಾಶ್ ಚೋಪ್ರಾ ವಿಶ್ವಾಸ ವ್ಯಕ್ತಪಡಿಸಿದರು.

For Quick Alerts
ALLOW NOTIFICATIONS
For Daily Alerts
Story first published: Thursday, October 28, 2021, 19:47 [IST]
Other articles published on Oct 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X