ವೇಗದ ಬೌಲರ್ ಉಮ್ರಾನ್, ಅರ್ಷ್‌ದೀಪ್‌ಗೆ ಒಲಿದು ಬಂದ ಅದೃಷ್ಟ: ಟೀಮ್ ಇಂಡಿಯಾದಲ್ಲಿ ಅವಕಾಶ

ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾರತದ ಭವಿಷ್ಯದ ತಾರೆಗಳಾದ ಸ್ಪೀಡ್ ಸ್ಟಾರ್ ಉಮ್ರಾನ್ ಮಲ್ಲಿಕ್ ಮತ್ತು ಅರ್ಷ್‌ದೀಪ್‌ಸಿಂಗ್‌ ಮೊದಲ ಬಾರಿಗೆ ಟೀಂ ಇಂಡಿಯಾದಲ್ಲಿ ಅವಕಾಶ ನೀಡಲಾಗಿದೆ. ವಿಶೇಷ ಅಂದ್ರೆ ಈ ಇಬ್ಬರು ಪ್ರತಿನಿಧಿಸುವ ಐಪಿಎಲ್ ತಂಡಗಳಾದ ಸನ್‌ರೈಸರ್ಸ್ ಹೈದ್ರಾಬಾದ್ ಮತ್ತು ಪಂಜಾಬ್ ಕಿಂಗ್ಸ್‌ ಕೊನೆಯ ಲೀಗ್ ಪಂದ್ಯದಲ್ಲಿ ಇಂದು ಮುಖಾಮುಖಿಯಾಗಿವೆ.

ಮುಂಬೈನ ವಾಂಖೆಡೆ ಮೈದಾನದಲ್ಲಿ ಪಂಜಾಬ್ ಕಿಂಗ್ಸ್‌ ಮತ್ತು ಸನ್‌ರೈಸರ್ಸ್ ಹೈದ್ರಾಬಾದ್ ತಂಡಗಳು ಔಪಚಾರಿಕ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಆದ್ರೆ ಇಲ್ಲಿನ ವಿಶೇಷ ಪಂಜಾಬ್‌ ಯುವ ಬೌಲರ್ ಅರ್ಷ್‌ದೀಪ್‌ ಹಾಗೂ ಸನ್‌ರೈಸರ್ಸ್‌ನ ವೇಗದ ಬೌಲರ್ ಉಮ್ರಾನ್ ಮಲ್ಲಿಕ್‌ಗೆ ಭಾರತ ತಂಡದಲ್ಲಿ ಅವಕಾಶ ಸಿಕ್ಕಿರುವುದು ಇಬ್ಬರಿಗೂ ಸಂತೋಷವನ್ನ ಇಮ್ಮಡಿಗೊಳಿಸಿದೆ.

ಟೀಂ ಇಂಡಿಯಾ ಪರ ಆಡುವ ಕನಸು ಕಂಡಿದ್ದ ಉಮ್ರಾನ್

ಟೀಂ ಇಂಡಿಯಾ ಪರ ಆಡುವ ಕನಸು ಕಂಡಿದ್ದ ಉಮ್ರಾನ್

ಜಮ್ಮು ಕಾಶ್ಮೀರದ ಬೌಲರ್ ಸತತವಾಗಿ 150 kmph ಮಟ್ಟದಲ್ಲಿ ಬೌಲಿಂಗ್ ಮಾಡುವ ಮೂಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ರು. ಐಪಿಎಲ್ 2022ರ ಸೀಸನ್‌ನಲ್ಲಿ ದಾಖಲೆಯ ವೇಗದಲ್ಲಿ ಬೌಲಿಂಗ್ ಮಾಡಿ ಎದುರಾಳಿ ನಡುಕಕ್ಕೆ ಕಾರಣವಾಗಿದ್ರು. ಆದ್ರೀಗ ಟೀಂ ಇಂಡಿಯಾದಲ್ಲಿ ಅವಕಾಶ ಸಿಕ್ಕಿರುವುದು ಉಮ್ರಾನ್ ಮಲಿಕ್‌ಗೆ ತನ್ನ ಸಾಮರ್ಥ್ಯ ಸಾಭೀತುಪಡಿಸಲು ಸುವರ್ಣಾವಕಾಶ ಲಭಿಸಿದೆ.

2021ರ ಸೀಸನ್‌ನಲ್ಲಿ ಮೊದಲು ನೆಟ್ ಬೌಲರ್ ಆಗಿದ್ದ ಉಮ್ರಾನ್

2021ರ ಸೀಸನ್‌ನಲ್ಲಿ ಮೊದಲು ನೆಟ್ ಬೌಲರ್ ಆಗಿದ್ದ ಉಮ್ರಾನ್

ಉಮ್ರಾನ್ ಐಪಿಎಲ್ 2021ರಲ್ಲಿ ಎಸ್‌ಆರ್‌ಎಚ್ ತಂಡದಲ್ಲಿ ಮೊದಲು ಸ್ಥಾನ ಪಡೆದಿರಲಿಲ್ಲ. ಎಡಗೈ ವೇಗಿ ಟಿ. ನಟರಾಜನ್ ಗಾಯಾಳುವಾಗಿ ಹೊರಬಿದ್ದರಿಂದ ಅಲ್ಪಾವಧಿಯಲ್ಲಿ ಬದಲಿಯಾಗಿ ತಂಡಕ್ಕೆ ಸೇರಿಕೊಂಡ್ರು. ಆದ್ರೆ ಕಡಿಮೆ ಸಮಯದಲ್ಲೇ ಈತ ಮನೆ ಮಾತಾದರು.

ಐಪಿಎಲ್ 2022ರ ಸೀಸನ್‌ನಲ್ಲಿ ಸತತ 13 ಬಾರಿ ವೇಗದ ಬೌಲಿಂಗ್ ಮೂಲಕ ಫಾಸ್ಟೆಸ್ಟ್ ಡೆಲಿವರಿ ಪ್ರಶಸ್ತಿ ಪಡೆದಿರುವ ಉಮ್ರಾನ್ 157kmph ವೇಗದಲ್ಲಿ ಬೌಲಿಂಗ್ ಮಾಡಿದ ಸಾಧನೆ ಹೊಂದಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲಿಯೇ ಎರಡನೇ ಅತ್ಯಂತ ವೇಗದ ಎಸೆತವಾಗಿದೆ.

ಜಸ್ಪ್ರೀತ್ ಬುಮ್ರಾ ದಾಖಲೆ: ಸತತ ಏಳು ಸೀಸನ್‌ಗಳಲ್ಲಿ ಈ ಸಾಧನೆ ಮಾಡಿದ ಏಕೈಕ ಬೌಲರ್

ಹಣ್ಣು ಮಾರಾಟ ಮಾಡಿ ಜೀವನ ನಡೆಸುವ ಉಮ್ರಾನ್ ತಂದೆ

ಹಣ್ಣು ಮಾರಾಟ ಮಾಡಿ ಜೀವನ ನಡೆಸುವ ಉಮ್ರಾನ್ ತಂದೆ

ಉಮ್ರಾನ್ ಮಲಿಕ್ ತಂದೆ ಅಬ್ದುಲ್ ರಷೀದ್ ಅವರು ಜಮ್ಮುವಿನ ಗುಜ್ಜರ್ ನಗರ್​ನವರು. ಜಮ್ಮು ನಗರದ ಶಾಹೀದಿ ಚೌಕ್​ನಲ್ಲಿ ಹಣ್ಣು ಮಾರಿ ಜೀವನ ನಡೆಸುತ್ತಾರೆ. ಆದರೆ, ಮಗನ ಕ್ರಿಕೆಟ್ ಆಸೆಗೆ ಯಾವತ್ತೂ ತಣ್ಣೀರೆರಚಿದವರಲ್ಲ. ಅವರ ಆಸೆ ಆಕಾಂಕ್ಷೆಗಳಿಗೆ ನೀರೆರದು ಪೋಷಿಸಿದ್ದಾರೆ.

ಅವರ ಮಹದಾಸೆಯಂತೆ ಉಮ್ರಾನ್ ಮಲ್ಲಿಕ್‌ಗೆ ಟೀಮ್ ಇಂಡಿಯಾದಲ್ಲಿ ಆಡುವ ಅವಕಾಶ ಸಿಕ್ಕಿದೆ. ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಚೊಚ್ಚಲ ಬಾರಿಗೆ ಭಾರತ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಐಪಿಎಲ್ 2022ರ ಸೀಸನ್‌ನಲ್ಲಿ 13 ಪಂದ್ಯಗಳಲ್ಲಿ 21 ವಿಕೆಟ್ ಕಬಳಿಸಿರುವ ಈತ ತಂಡದ ಪರ ಸ್ಟಾರ್ ಬೌಲರ್ ಆಗಿದ್ದಾರೆ.

ದ. ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಕೆಎಲ್ ರಾಹುಲ್ ನಾಯಕ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಗೆ ಮರಳಿದ ಅನುಭವಿ ಆಟಗಾರ

ಅರ್ಷ್‌ದೀಪ್‌ ಸಿಂಗ್‌ಗೂ ಒಲಿದು ಬಂತು ಅದೃಷ್ಟ

ಅರ್ಷ್‌ದೀಪ್‌ ಸಿಂಗ್‌ಗೂ ಒಲಿದು ಬಂತು ಅದೃಷ್ಟ

ಪಂಜಾಬ್ ಕಿಂಗ್ಸ್ ತಂಡದ ಬೌಲರ್ ಅರ್ಷ್‌ದೀಪ್ ಸಿಂಗ್ ತಂಡದ ಪರ ಸ್ಥಿರ ಪ್ರದರ್ಶನ ನೀಡುವಲ್ಲಿ ಅತ್ಯಂತ ಯಶಸ್ಸು ಸಾಧಿಸಿರುವ ಯುವ ವೇಗಿ ಆಗಿದ್ದಾರೆ. ಎಡಗೈ ಬೌಲರ್ ಆಗಿರುವ ಈತ ಪವರ್‌ಪ್ಲೇ ಓವರ್‌ಗಳಲ್ಲಿ ಹಾಗೂ ಡೆತ್‌ ಓವರ್‌ಗಳಲ್ಲಿ ಉತ್ತಮ ಬೌಲಿಂಗ್ ದಾಳಿ ನಡೆಸುವ ಸಾಮರ್ಥ್ಯ ಹೊಂದಿದ್ದಾರೆ.

ಅರ್ಷ್‌ದೀಪ್ ಸಿಂಗ್ ಐಪಿಎಲ್ 2022ರ ಸೀಸನ್‌ನಲ್ಲಿ ಆಡಿರುವ 13 ಪಂದ್ಯಗಳಲ್ಲಿ 10 ವಿಕೆಟ್‌ಗಳನ್ನ ಪಡೆದಿದ್ದಾರೆ. ಮಧ್ಯಪ್ರದೇಶ ಮೂಲದ 23 ವರ್ಷದ ಅರ್ಷ್‌ದೀಪ್ ಸಿಂಗ್

2019ರಲ್ಲಿ ಐಪಿಎಲ್‌ಗೆ ಕಾಲಿಟ್ಟರು. ರಾಜಸ್ತಾನ್ ರಾಯಲ್ಸ್ ವಿರುದ್ಧ ಮೊದಲ ಪಂದ್ಯವನ್ನಾಡಿದ ಈ ಬೌಲರ್ ಇದುವರೆಗೂ 37 ಐಪಿಎಲ್ ಪಂದ್ಯಗಳನ್ನಾಡಿದ್ದು 40 ವಿಕೆಟ್ ಕಬಳಿಸಿದ್ದಾರೆ. 32 ರನ್‌ಗೆ 5 ವಿಕೆಟ್ ಪಡೆದಿರುವುದು ಆಲ್‌ ಟೈಂ ಬೆಸ್ಟ್ ಬೌಲಿಂಗ್ ಆಗಿದೆ.

2018ರ ಅಂಡರ್-19 ವಿಶ್ವಕಪ್ ತಂಡದಲ್ಲಿ ಆಡಿರುವ ಅರ್ಷ್‌ದೀಪ್ ಅಂಡರ್-23 ಮತ್ತು ಭಾರತ ಎ ತಂಡದಲ್ಲಿಯೂ ಕೂಡ ಆಡಿದ್ದಾರೆ.

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತದ ಸ್ಕ್ವಾಡ್‌

ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಗೆ ಭಾರತದ ಸ್ಕ್ವಾಡ್‌

ಕೆಎಲ್ ರಾಹುಲ್ (ನಾಯಕ), ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ದೀಪಕ್ ಹೂಡಾ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ಉಪ ನಾಯಕ) (ವಿಕೆಟ್ ಕೀಪರ್), ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ವೆಂಕಟೇಶ್ ಅಯ್ಯರ್, ಯುಜುವೇಂದ್ರ ಚಾಹಲ್, ಕುಲ್‌ದೀಪ್ ಯಾದವ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್ , ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಆವೇಶ್ ಖಾನ್, ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Sunday, May 22, 2022, 20:05 [IST]
Other articles published on May 22, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X