ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಚಿಯರ್ ಲೀಡರ್ಸ್ ಬೇಡ, ರಾಮಭಜನೆ ಇರ್ಲಿ: ದಿಗ್ವಿಜಯ್ ಸಿಂಗ್

ಐಪಿಎಲ್‌ ಪಂದ್ಯಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ನೀಡಲು ಮಧ್ಯಪ್ರದೇಶ ಸಿಎಂ ನಿರಾಕರಿಸುತ್ತಿದ್ದಾರೆ. ಆಯೋಜಕರೆ ನೀವು ಚಿಯರ್ ಲೀಡರ್ಸ್ ಗೆ ರಾಮನ ಭಜನೆಗೆ ಡ್ಯಾನ್ಸ್ ಮಾಡಲು ಹೇಳಿ ಎಂದು ದಿಗ್ವಿಜಯ್ ಸಿಂಗ್ ಗೇಲಿ ಮಾಡಿದ್ದಾರೆ.

By Mahesh

ಇಂದೋರ್, ಮಾರ್ಚ್ 26: ಐಪಿಎಲ್ ಚಿಯರ್ ಲೀಡರ್ಸ್ ಬೇಡ, ರಾಮಭಜನೆ ಇರ್ಲಿ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ಹೇಳಿದ್ದು ಕೇಳಿ ಎಲ್ಲರ ಹುಬ್ಬೇರಿದೆ. ರಾಮಭಜನೆ ಮೇಲೆ ಯಾವಾಗಿಂದ ಇವರಿಗೆ ಭಕ್ತಿ ಬಂತು ಎಂದು ಒಂದು ಕ್ಷಣ ಎನಿಸಿರಬಹುದು. ಆದರೆ, ವಿಷ್ಯ ಬೇರೆಯೇ ಇದೆ.

ಐಪಿಎಲ್‌ ಪಂದ್ಯಗಳಿಗೆ ಮನರಂಜನಾ ತೆರಿಗೆ ವಿನಾಯಿತಿ ನೀಡಲು ಮಧ್ಯಪ್ರದೇಶ ಸಿಎಂ ನಿರಾಕರಿಸುತ್ತಿದ್ದಾರೆ. ಆಯೋಜಕರೆ ನೀವು ಚಿಯರ್ ಲೀಡರ್ಸ್ ಗೆ ರಾಮನ ಭಜನೆಗೆ ಡ್ಯಾನ್ಸ್ ಮಾಡಲು ಹೇಳಿ ಎಂದು ದಿಗ್ವಿಜಯ್ ಸಿಂಗ್ ಗೇಲಿ ಮಾಡಿದ್ದಾರೆ.

Drop IPL cheerleaders, play tunes in praise of Lord Rama, Digvijay suggests

ಐಪಿಎಲ್ ಎಂದರೆ ಮನರಂಜನೆ, ಆದರೆ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಪಂದ್ಯಗಳಿಗೆ ಮನರಂಜನಾ ತೆರಿಗೆ ಮನ್ನಾ ಮಾಡಲು ಏನೋ ಸಮಸ್ಯೆ ಕಾಡುತ್ತಿದೆ. ಬಹುಶಃ ಚಿಯರ್ ಲೀಡರ್ಸ್ ಬದಲಿಗೆ ರಾಮಧ್ಯಾನ ಭಜನೆ ಹಾಕಿದರೆ ಉಪಯೋಗ ಆಗಬಹುದೇನೋ ಎಂದು ದಿಗ್ವಿಜಯ್ ಸಿಂಗ್ ವ್ಯಂಗ್ಯವಾಡಿದ್ದಾರೆ.

ಪಂದ್ಯಗಳಲ್ಲಿ ಆಟಗಾರರು ಸಿಕ್ಸ್, ಫೋರ್ ಬಾರಿಸಿದರೆ ಅಥವಾ ವಿಕೆಟ್ ಬಿದ್ದಾಗ ಚೀಯರ್‌ ಲಿಡರ್ಸ್‌ ಕುಣಿಯುತ್ತಾರೆ. ಇರದಲ್ಲಿ ತಪ್ಪೇನಿಲ್ಲ. ಒಂದು ವೇಳೆ ಅದು ತಪ್ಪು ಅನಿಸಿದ್ರೆ ರಾಮನ ಹಾಡು ಹಾಕಲಿ ಎಂದು ಹೇಳಿದ್ದಾರೆ.

ಏಪ್ರಿಲ್ 8,10 ಹಾಗೂ 20 ರಂದು ಇಂದೋರ್‌ ನಲ್ಲಿ ನಡೆಯಲಿರುವ ಮೂರು ಐಪಿಎಲ್‌ ಪಂದ್ಯಗಳಿಗೆ ತೆರಿಗೆ ಮಿನಾಯಿತಿ ನೀಡಲು ಮಧ್ಯಪ್ರದೇಶ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಸುದ್ದಿ ತಿಳಿದ ಬಳಿಕ ದಿಗ್ವಿಜಯ್ ಸಿಂಗ್ ಈ ರೀತಿ ಪ್ರತಿಕ್ರಿಯಿಸಿದ್ದಾರೆ.

Story first published: Wednesday, January 3, 2018, 10:04 [IST]
Other articles published on Jan 3, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X