ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆತನನ್ನ ಟೀಂ ಇಂಡಿಯಾದಿಂದ ಕೈ ಬಿಟ್ರೆ, ನಿಜಕ್ಕೂ ನ್ಯಾಯವಲ್ಲ ಎಂದ ಆಕಾಶ್ ಚೋಪ್ರಾ

Shikar Dhawan

ಟೀಂ ಇಂಡಿಯಾ ಓಪನರ್ ಶಿಖರ್ ಧವನ್ ಏಕದಿನ ಕ್ರಿಕೆಟ್‌ನಲ್ಲಿ ಭಾರತದ ಉತ್ತಮ ಆರಂಭಿಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾಗಿದ್ದಾರೆ. ಅವರ ಎಲ್ಲಾ ಸಾಧನೆಗಳ ಹೊರತಾಗಿಯೂ, ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಿಂದ ಹೊರಗುಳಿಯುವ ಅಂಚಿನಲ್ಲಿದ್ದಾರೆ.

ವಿಜಯ್ ಹಜಾರೆ ಟ್ರೋಫಿಯಲ್ಲಿ ಮಹಾರಾಷ್ಟ್ರ ತಂಡವನ್ನ ಮುನ್ನಡೆಸುತ್ತಿರುವ, ಐಪಿಎಲ್‌ ಸೆನ್ಸೇಷನ್ ರುತುರಾಜ್ ಗಾಯಕ್ವಾಡ್ ಶಿಖರ್ ಧವನ್ ಸ್ಥಾನಕ್ಕೆ ಕಂಟಕವಾಗಿದ್ದಾರೆ. ಆದ್ರೂ ಮುಂಬರುವ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಶಿಖರ್ ಧವನ್‌ಗೆ ಬೆಂಬಲವಾಗಿ ಮಾಜಿ ಕ್ರಿಕೆಟಿಗ ಆಕಾಶ್ ಚೋಪ್ರಾ ನಿಂತಿದ್ದಾರೆ.

ವಿರಾಟ್ ಕೊಹ್ಲಿ ಆ್ಯಟಿಟ್ಯೂಡ್ ನನಗಿಷ್ಟ, ಆದ್ರೆ ಇತ್ತೀಚೆಗೆ ತುಂಬಾ ಜಗಳವಾಡುತ್ತಾನೆ ಎಂದ ಸೌರವ್ ಗಂಗೂಲಿ!ವಿರಾಟ್ ಕೊಹ್ಲಿ ಆ್ಯಟಿಟ್ಯೂಡ್ ನನಗಿಷ್ಟ, ಆದ್ರೆ ಇತ್ತೀಚೆಗೆ ತುಂಬಾ ಜಗಳವಾಡುತ್ತಾನೆ ಎಂದ ಸೌರವ್ ಗಂಗೂಲಿ!

ಧವನ್ ಅವರನ್ನು ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಭಾರತದ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ. ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಚೋಪ್ರಾ, ಐಸಿಸಿ ಏಕದಿನ ಕ್ರಿಕೆಟ್‌ನಲ್ಲಿ ಧವನ್ ಅವರ ಅದ್ಭುತ ದಾಖಲೆಯ ಬಗ್ಗೆಯೂ ಮಾತನಾಡಿದರು.

"12, 18, 14, 12 ಮತ್ತು 0 ವಿಜಯ್ ಹಜಾರೆ ಟ್ರೋಫಿಯಲ್ಲಿ ಧವನ್‌ರ ಕೊನೆಯ ಐದು ಸ್ಕೋರ್‌ಗಳಾಗಿವೆ. ಆದ್ರೂ ನೀವು ಅವನನ್ನು ಆಯ್ಕೆ ಮಾಡಬೇಕೇ? ಎಂಬ ಪ್ರಶ್ನೆಗೆ ನಾನು ಯೆಸ್ ಎನ್ನುತ್ತೇ. ಏಕೆಂದರೆ ಶಿಖರ್ ಧವನ್ ಭಾರತ ಪರ ಅದ್ಭುತವಾಗಿ ಆಡಿದ್ದಾರೆ. ಅವರು ಏಕದಿನ ಕ್ರಿಕೆಟ್‌ನಲ್ಲಿ ಅಸಾಧಾರಣ ಸಾಧನೆ ಮಾಡಿದ್ದಾರೆ. ನಾವು 2023 ರ ವಿಶ್ವಕಪ್ ಅನ್ನು ನೋಡಿದರೆ ಮಿಸ್ಟರ್ ಐಸಿಸಿ ಫಿಟ್ ಆಗಿದ್ರೆ ಏಕೆ ಕೈ ಬಿಡಬೇಕು'' ಎಂದು ಆಕಾಶ್ ಚೋಪ್ರಾ ಹೇಳಿದ್ದಾರೆ.

''2021ರಲ್ಲಿ ಭಾರತ ಹೆಚ್ಚು ಏಕದಿನ ಕ್ರಿಕೆಟ್ ಆಡಿಲ್ಲ, ಹಾಗಾಗಿ ಅವರನ್ನು ಏಕೆ ಹೊರಗಿಡಬೇಕು? ಕೆಲವರು ಟಿ20 ವಿಶ್ವಕಪ್‌ನಲ್ಲೂ ಅವರನ್ನು ಆಯ್ಕೆ ಮಾಡಬೇಕೆಂದು ಒತ್ತಾಯಿಸಿದರು. ರುತುರಾಜ್ ರನ್ ಗಳಿಸುತ್ತಿದ್ದಾರೆ ಅಥವಾ ಅಯ್ಯರ್ ಅವರು ಓಪನಿಂಗ್ ಮಾಡಬಹುದು, ಅಥವಾ ರೋಹಿತ್-ರಾಹುಲ್ ಜೋಡಿ ಸೆಟ್ಟೇರಿದೆ, ಆದ್ರೂ ಕೂಡ ಅವರನ್ನು ಕೈಬಿಡುವುದು ತಪ್ಪು ನಿರ್ಧಾರ ಎಂದು ನಾನು ಭಾವಿಸುತ್ತೇನೆ''.

"ಅವನು ಕಳಪೆಯಾಗಿ ಆಡಿದರೆ, ನೀವು ಅವನನ್ನು ಬಿಟ್ಟುಬಿಡಿ, ಆದರೆ ಯಾರಾದರೂ ಉತ್ತಮವಾಗಿ ಆಡುತ್ತಿದ್ದರೆ, ಮತ್ತು ನಂತರ ನೀವು ಅವನನ್ನು ಬಿಡುತ್ತೀರಿ ಅಂದ್ರೆ, ಅದು ಸರಿಯಲ್ಲ'' ಎಂದು ಚೋಪ್ರಾ ಅಭಿಪ್ರಾಯ ಪಟ್ಟಿದ್ದಾರೆ.

Australia ಆಟಗಾರ ಗೆಲುವಿನ ಅಂಚಿನಲ್ಲಿ ಕುಣಿದು ಕುಪ್ಪಳಿಸಿದ್ದು ಹೀಗೆ | Oneindia Kannada

ಪ್ರಮುಖ ಅಂಶವೆಂದರೆ ಧವನ್ ಈ ವರ್ಷ ಏಕದಿನ ಪಂದ್ಯಗಳಲ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರ. ಅಲ್ಲದೆ ಶ್ರೀಲಂಕಾದ ಸೀಮಿತ ಓವರ್‌ಗಳ ಪ್ರವಾಸದ ವೇಳೆ ಭಾರತ ತಂಡದ ನಾಯಕರಾಗಿದ್ದರು. 2021 ರಲ್ಲಿ ಶಿಖರ್ ಧವನ್ ಆರಂಭಿಕ ಆಟಗಾರನಾಗಿ 59.40ರ ಸರಾಸರಿಯಲ್ಲಿ 297 ರನ್ ಗಳಿಸಿದ್ದಾರೆ.

Story first published: Saturday, December 18, 2021, 22:29 [IST]
Other articles published on Dec 18, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X