ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಿಸ್ಬಾಗೆ ಪಾಕ್‌ ತಂಡದ ಪ್ರಧಾನ ಕೋಚ್‌ & ಮುಖ್ಯ ಆಯ್ಕೆದಾರನ ಹುದ್ದೆ

Misbah likely to be head coach 2019.jpg

ಲಾಹೋರ್‌, ಆಗಸ್ಟ್‌ 16: ಪಾಕಿಸ್ತಾನ ಕ್ರಿಕೆಟ್‌ನ ಅತ್ಯಂತ ಶಿಸ್ತಿನ ಆಟಗಾರ ಎಂದೇ ಖ್ಯಾತಿ ಪಡೆದಿದ್ದ ಮಾಜಿ ನಾಯಕ ಮಿಸ್ಬಾ ಉಲ್‌ ಹಕ್‌, ಪಾಕ್‌ ತಂಡದ ನೂತನ ಪ್ರಧಾನ ಕೋಚ್‌ ಮತ್ತು ಮುಖ್ಯ ಆಯ್ಕೆದಾರನಾಗಿ ಎರಡು ಉನ್ನತ ಹುದ್ದೆಗಳನ್ನು ಹೊಂದುವ ಸಾಧ್ಯತೆ ಬಲವಾಗಿದೆ.

ಕೋಚ್‌ ಮತ್ತು ಮುಖ್ಯ ಕೋಚ್‌ ಆಯ್ಕೆ ವಿಚಾರದಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ನೂತನ ನಿಯಮಗಳನ್ನು ಜಾರಿಗೆ ತಂದಿದ್ದು, ಈ ನಿಯಮದ ಅನುಸಾರ ಮಿಸ್ಬಾ ಉಲ್‌ ಹಕ್‌ಗೆ ಈ ಎರಡೂ ಜವಾಬ್ದಾರಿ ವಹಿಸಲು ಮುಂದಾಗಿದೆ. ಮಿಸ್ಬಾ ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಟೆಸ್ಟ್‌ ಕ್ರಿಕೆಟ್‌ನಲ್ಲಿ ನಂ.1 ಶ್ರೇಯಾಂಕ ಪಡೆದ ಸಾಧನೆ ಮಾಡಿತ್ತು.

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯೂನಿವರ್ಸ್‌ ಬಾಸ್‌!ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಯೂನಿವರ್ಸ್‌ ಬಾಸ್‌!

ಲಾಲೋರ್‌ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಆಗಸ್ಟ್‌ 22ರಿಂದ ಸೆಪ್ಟೆಂಬರ್‌ 7ರವರೆಗೆ 17 ದಿನಗಳ ಕಾಲ 20 ಕ್ರಿಕೆಟಿಗರನ್ನು ಒಳಗೊಂಡ ಕ್ರಿಕೆಟ್‌ ಶಿಬಿರವನ್ನು ಆಯೋಜಿಸಿದ್ದು, ಮಿಸ್ಬಾ ಉಲ್‌ಹಕ್‌ ಅವರನ್ನು ಗುರುವಾರ ಶಿಬಿರದ ಮುಖ್ಯಸ್ಥ'ನನ್ನಾಗಿ ನೇಮಕ ಮಾಡಿದೆ.

ಇನ್ನು ಪಾಕಿಸ್ತಾನದ ಮಾಧ್ಯಮಗಳಲ್ಲಿನ ವರದಿಗಳ ಪ್ರಕಾರ ಶಿಬಿರದಲ್ಲಿ ಪಾಲ್ಗೊಳ್ಳಲಿರುವ ಕ್ರಿಕೆಟಿಗರನ್ನು ಮಿಸ್ಬಾ ಆಯ್ಕೆ ಮಾಡಿದ್ದು, ಅವರಿಗೆ ತರಬೇತಿ ನೀಡಲಿದ್ದಾರೆ. ಈ ಮೂಲಕ ಕೋಚ್‌ ಮತ್ತು ಆಯ್ಕೆದಾರನಾಗಿ ಎರಡೂ ಜವಾಬ್ದಾರಿಯನ್ನು ಮಿಸ್ಬಾ ನಿಭಾಯಿಸಬಲ್ಲರೇ ಎಂಬುದನ್ನು ಪರೀಕ್ಷಿಸಲಾಗುತ್ತಿದೆ ಎಂದು ವರದಿ ಹೇಳಿವೆ.

ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬಳಿ ಕ್ಷಮೆಯಾಚಿಸಿದ ಡೇಲ್ ಸ್ಟೇನ್‌!ಟೀಮ್‌ ಇಂಡಿಯಾ ನಾಯಕ ವಿರಾಟ್‌ ಕೊಹ್ಲಿ ಬಳಿ ಕ್ಷಮೆಯಾಚಿಸಿದ ಡೇಲ್ ಸ್ಟೇನ್‌!

ವಿಶ್ವಕಪ್‌ನಲ್ಲಿ ಪಾಕಿಸ್ತಾನ ತಂಡದ ಕಳಪೆ ಪ್ರದರ್ಶನ ಹಿನ್ನೆಲೆಯಲ್ಲಿ ಮಾಜಿ ಕೋಚ್‌ ಮಿಕಿ ಆರ್ಥರ್‌ ಅವರೊಟ್ಟಿಗಿನ ಒಪ್ಪಂದವನ್ನು ಪಿಸಿಬಿ ಕಳೆದ ವಾರ ಅಂತ್ಯಗೊಳಿಸಿತ್ತು. ಜೊತೆಗೆ ಬ್ಯಾಟಿಂಗ್‌ ಕೋಚ್‌ ಗ್ರ್ಯಾಂಟ್‌ ಫ್ಲವರ್‌ ಮತ್ತು ಬೌಲಿಂಗ್‌ ಕೋಚ್‌ ಅಝರ್‌ ಮಹ್ಮೂದ್‌ ಅವರ ಒಪ್ಪಂದವನ್ನೂ ಅಂತ್ಯಗೊಳಿಸಲಾಗಿತ್ತು.

ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ 75ರಿಂದ 80 ಶತಕ ದಾಖಲಿಸಲಿದ್ದಾರಂತೆ!

ಕಳೆದ ತಿಂಗಳು ಅಂತ್ಯಗೊಂಡ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಗ್ರೂಪ್‌ ಹಂತದಲ್ಲಿ 5ನೇ ಸ್ಥಾನ ಪಡೆಯುವ ಮೂಲಕ ಸ್ಪರ್ಧೆಯಿಂದ ಹೊರಬಿದ್ದಿತ್ತು. ಪಾಕ್‌ ತಂಡದ ಕೋಚ್‌ ಸ್ಥಾನ ಕಳೆದುಕೊಂಡ ಬಳಿಕ ಬೇಸರ ವ್ಯಕ್ತ ಪಡಿಸಿದ್ದ ಕೋಚ್‌ ಮಿಕಿ ಆರ್ಥರ್‌, "ತಂಡವನ್ನು ಮೇಲೆತ್ತುವ ಸಲುವಾಗಿ ತಾವು ಸರ್ವಾಂಗೀಣ ಪ್ರಯತ್ನ ನಡೆಸಿದ್ದಾಗಿ," ಹೇಳಿಕೊಂಡಿದ್ದರು.

Story first published: Friday, August 16, 2019, 15:35 [IST]
Other articles published on Aug 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X