ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಏಷ್ಯಾಕಪ್‌ನಲ್ಲಿ ಭಾರತದ ಸೋಲಿಗೆ ತಡವಾಗಿ ಕಾರಣ ತಿಳಿಸಿದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್

Vikram rathore

ರೋಹಿತ್ ಶರ್ಮಾ ನೇತೃತ್ವದ ಭಾರತ ಟಿ20 ವಿಶ್ವಕಪ್‌ಗೂ ಮುನ್ನ ಸ್ವದೇಶದಲ್ಲಿ ಕೊನೆಯ ಟಿ20 ಸರಣಿಯನ್ನು ಆಡಲಿದೆ. ಬುಧವಾರದಿಂದ (ಸೆ.28) ತಿರುವನಂತಪುರಂನಲ್ಲಿ ಭಾರತ-ದಕ್ಷಿಣ ಆಫ್ರಿಕಾ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ.

ವಿಶ್ವಕಪ್‌ಗೆ ಮೊದಲು, ಮೆನ್ ಇನ್ ಬ್ಲೂ ಹಲವಾರು ವಿಭಾಗಗಳಲ್ಲಿನ ನ್ಯೂನತೆಗಳನ್ನು ತುಂಬುವ ಗುರಿಯನ್ನು ಹೊಂದಿದೆ. ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಆಸ್ಟ್ರೇಲಿಯಾ ವಿರುದ್ಧದ ಸರಣಿ ಗೆಲುವಿನಲ್ಲಿ ಬೌಲಿಂಗ್‌ನಲ್ಲಿ ತಮ್ಮ ಡೆತ್‌ ಓವರ್‌ ಅನ್ನು ಸುಧಾರಿಸುವ ಅಗತ್ಯತೆಯ ಬಗ್ಗೆ ಮಾತನಾಡಿದರು. ಪ್ರೋಟೀಸ್ ವಿರುದ್ಧ ಯಶಸ್ವಿಯಾಗಿ ಡೆತ್ ಓವರ್ ಬೌಲಿಂಗ್ ಮಾಡುವುದು ಭಾರತಕ್ಕೆ ಸವಾಲಾಗಿದೆ.

ಏಷ್ಯಾಕಪ್‌ನಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ

ಏಷ್ಯಾಕಪ್‌ನಲ್ಲಿ ಹೀನಾಯ ಸೋಲು ಕಂಡಿದ್ದ ಟೀಂ ಇಂಡಿಯಾ

ಏಷ್ಯಾಕಪ್‌ನಲ್ಲಿ ಭಾರತ ದಯನೀಯವಾಗಿ ವಿಫಲವಾಗಿದೆ. ಏಷ್ಯಾಕಪ್‌ನ ಸೂಪರ್ ಫೋರ್ ಹಂತದಿಂದ ಭಾರತ ಇದುವರೆಗೆ ಮೂರು ಪಂದ್ಯಗಳನ್ನು ಗೆದ್ದು ಮೂರರಲ್ಲಿ ಸೋತಿದೆ. ಫೈನಲ್‌ ಮುಖವನ್ನು ನೋಡದೆ ಹಿಂದಿರುಗಿದೆ. ಪಾಕಿಸ್ತಾನ, ಶ್ರೀಲಂಕಾ ವಿರುದ್ಧ ಸೋಲನ್ನ ಕಂಡು ಅಫ್ಘಾನಿಸ್ತಾನ ವಿರುದ್ಧ ಅಂತಿಮವಾಗಿ ಗೆಲುವು ಸಾಧಿಸಿದೆ.

ಏಷ್ಯಾಕಪ್‌ನಲ್ಲಿ ಭಾರತದ ಸೋಲಿಗೆ ಇಬ್ಬನಿ ಅಂಶ (ಡ್ಯೂ ಫ್ಯಾಕ್ಟರ್) ಕಾರಣ ಎಂದು ಟೀಂ ಇಂಡಿಯಾ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಹೇಳಿದ್ದಾರೆ. ಈ ಹಿಂದೆ ಯಾವುದೇ ಬ್ಯಾಟರ್‌ನಿಂದಾಗಿ ಸೋಲನ್ನ ಕಂಡಿಲ್ಲ ಎಂದಿದ್ದಾರೆ.

ರಾಥೋಡ್ ಮಂಗಳವಾರ (ಸೆ. 27) ಸುದ್ದಿಗೋಷ್ಟಿಯಲ್ಲಿ, ನಾವು ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಪಂದ್ಯವನ್ನು ಗೆಲ್ಲಲು ಹಲವಾರು ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದು ಹೇಳಿದರು. ಆದರೆ ಟಾಸ್ ಮಹತ್ವ ಪಾತ್ರ ವಹಿಸುತ್ತದೆ. ಇಲ್ಲಿ ಬೌಲರ್‌ಗಳಿಗೆ ಹೆಚ್ಚಿನ ಕೆಲಸವಿಲ್ಲ. ಇಬ್ಬನಿಯು ಒಂದು ಅಂಶವಾಗಿರುವಲ್ಲಿ, ಪಂದ್ಯಗಳನ್ನು ಗೆಲ್ಲುವ ವ್ಯತ್ಯಾಸ ಇದೆ. ರನ್ ಚೇಸಿಂಗ್ ಸುಲಭವಾಗುತ್ತಿದೆ ಎಂದರು.

ಬೌಲರ್‌ಗಳ ಬೆಂಬಲಕ್ಕೆ ನಿಂತ ರಾಥೋಡ್

ಬೌಲರ್‌ಗಳ ಬೆಂಬಲಕ್ಕೆ ನಿಂತ ರಾಥೋಡ್

ಮೊಹಾಲಿಯಲ್ಲಿ ಈಗಷ್ಟೇ ಮುಕ್ತಾಯಗೊಂಡ ಆಸ್ಟ್ರೇಲಿಯಾ ಸರಣಿಯ ಮೊದಲ ಪಂದ್ಯದಲ್ಲಿ ಭಾರತವು ಮೊದಲು ಇನ್ನೂರಕ್ಕೂ ಹೆಚ್ಚು ರನ್ ಗಳಿಸಿದರೂ ಗೆಲುವು ಸಾಧಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಬೌಲರ್‌ಗಳು ಟೀಕೆಗೆ ಗುರಿಯಾಗಿದ್ದಾರೆ. ಬೌಲರ್‌ಗಳನ್ನು ದೂಷಿಸುವ ಬದಲು, ಪಂದ್ಯವನ್ನು ಕೊನೆಯ ಓವರ್‌ಗೆ ಕೊಂಡೊಯ್ದಿದ್ದಕ್ಕಾಗಿ ನಾನು ಅವರಿಗೆ ಮನ್ನಣೆ ನೀಡುತ್ತೇನೆ ಎಂದು ರಾಥೋಡ್ ಹೇಳಿದರು.

ICC T20 ವಿಶ್ವಕಪ್‌ 2022: ಭುವನೇಶ್ವರ್ ಕುಮಾರ್ ಸ್ಥಾನಕ್ಕೆ ಸಂಚಕಾರ!

ಪಂದ್ಯಗಳನ್ನು ಗೆಲ್ಲಲು ನಾವು ಖಂಡಿತವಾಗಿಯೂ ಮೊದಲು ಬ್ಯಾಟಿಂಗ್‌ನಲ್ಲಿ ಸುಧಾರಿಸಬೇಕಾಗಿದೆ. ಮೊದಲು ಬ್ಯಾಟಿಂಗ್ ಮಾಡುವ ಮೂಲಕ ಎದುರಾಳಿಗೆ ಸಾಕಷ್ಟು ರನ್ ಗುರಿ ನೀಡಲು ಭಾರತಕ್ಕೆ ಸಾಧ್ಯವಾಗುತ್ತಿಲ್ಲ ಎಂಬ ವಾದವನ್ನು ಒಪ್ಪಿಕೊಳ್ಳಲು ರಾಥೋಡ್ ನಿರಾಕರಿಸಿದ್ದಾರೆ. ಅವರ ಪ್ರಕಾರ, ಕಳೆದ ಟಿ20 ವಿಶ್ವಕಪ್‌ನಲ್ಲಿ ಮೊದಲು ಬ್ಯಾಟಿಂಗ್ ಮಾಡುವುದು ಆತಂಕಕಾರಿಯಾಗಿತ್ತು. ಆದರೆ ಅಂದಿನಿಂದ ನಾವು ಮೊದಲು ಬ್ಯಾಟಿಂಗ್ ಮಾಡಲು ಸಾಕಷ್ಟು ರನ್ ಕಲೆ ಹಾಕಿದ್ದೇವೆ. ಹಾಗಾಗಿ ಈ ವಿಚಾರದಲ್ಲಿ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ.

ಯೋಜನೆಯ ಪ್ರಕಾರ ಆಟವಾಡಬೇಕು

ಯೋಜನೆಯ ಪ್ರಕಾರ ಆಟವಾಡಬೇಕು

ಭಾರತ ತಂಡದಲ್ಲಿ ಆಡುವವರಿಗೆ ಹೆಚ್ಚು ಸಲಹೆ ನೀಡದೆ ತಮ್ಮ ಸ್ವಂತ ಶಕ್ತಿಯನ್ನು ನಂಬುವಂತೆ ಹೇಳಲಾಗುತ್ತದೆ ಎಂದು ರಾಥೋಡ್ ಹೇಳಿದರು. ಈ ಹಂತದಲ್ಲಿ ನಾವು ಯಾರಿಗೂ ಏನನ್ನೂ ಹೇಳುವುದಿಲ್ಲ ಎಂದರು. ಅರ್ಷದೀಪ್ ಸಿಂಗ್ ಐಪಿಎಲ್‌ನಲ್ಲಿ ಉತ್ತಮ ಬೌಲಿಂಗ್ ಮಾಡಿದ್ದಾರೆ. ಅದರಲ್ಲೂ ಡೆತ್ ಓವರ್ ಗಳಲ್ಲಿ ಚೆನ್ನಾಗಿ ಬೌಲಿಂಗ್ ಮಾಡಿದ್ದಾರೆ ಎಂದರು.

ಪರಿಣಾಮವಾಗಿ, ಬೌಲರ್‌ಗಳು ಯೋಜಿತ ರೀತಿಯಲ್ಲಿ ಬೌಲ್ ಮಾಡಬಹುದೆಂದು ಖಚಿತಪಡಿಸಿಕೊಳ್ಳಲು ನಾವು ಗುರಿಯನ್ನು ಹೊಂದಿದ್ದೇವೆ. ಬ್ಯಾಟರ್ ವಿರುದ್ಧ ಬೌಲಿಂಗ್ ಮಾಡುವುದು ಎಲ್ಲರಿಗೂ ಗೊತ್ತು. ಬೌಲರ್‌ಗಳು ತಮ್ಮ ಸಾಮರ್ಥ್ಯದಲ್ಲಿ ವಿಶ್ವಾಸದಿಂದ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಕಷ್ಟದ ಸಂದರ್ಭಗಳಲ್ಲಿ ಆರ್ಷದೀಪ್ ಒತ್ತಡವನ್ನು ನಿಭಾಯಿಸಬಲ್ಲರು ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಭಾರತ vs ದ. ಆಫ್ರಿಕಾ: ಶಿಖರ್ ಧವನ್ ದಾಖಲೆ ಮುರಿಯಲು ಸಜ್ಜಾದ ಸೂರ್ಯಕುಮಾರ್ ಯಾದವ್

ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ

ಬ್ಯಾಟಿಂಗ್ ಶೈಲಿಯಲ್ಲಿ ಬದಲಾವಣೆ

ಟಿ20 ವಿಶ್ವಕಪ್‌ಗೆ ಮುನ್ನ ಭಾರತದ ಬ್ಯಾಟಿಂಗ್ ವಿಧಾನದಲ್ಲಿ ಬದಲಾವಣೆಯನ್ನು ರಾಥೋಡ್ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ ಬ್ಯಾಟಿಂಗ್ ನಲ್ಲಿ ಆಗಲೇ ಬದಲಾವಣೆ ಕಾಣುತ್ತಿದೆ. ನಾವು ಸ್ವಲ್ಪ ಹೆಚ್ಚು ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದ್ದೇವೆ. ಸ್ಟ್ರೈಕ್ ರೇಟ್‌ನಷ್ಟೇ ಇಚ್ಛಾಶಕ್ತಿಯೂ ಮುಖ್ಯ. ಇದು ನಮ್ಮ ಆಟದಲ್ಲಿ ತೋರಿಸುತ್ತದೆ. ಒಟ್ಟಾರೆ ನಮ್ಮ ಬ್ಯಾಟಿಂಗ್ ಉತ್ತಮವಾಗಿ ಸಾಗುತ್ತಿದೆ. ಟಿ20 ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯಾದ ಪರಿಸ್ಥಿತಿಗೆ ಹೊಂದಿಕೊಳ್ಳುವುದು ಮುಖ್ಯ. ದೊಡ್ಡ ಸವಾಲುಗಳು ಕಾದಿವೆ. ಟಿ20 ವಿಶ್ವಕಪ್‌ನಲ್ಲಿ ಆಡುವವರಿಗೆ ಹೆಚ್ಚಿನ ಅವಕಾಶ ನೀಡುವ ಗುರಿ ಹೊಂದಿದ್ದೇವೆ. ಆದಾಗ್ಯೂ, ಇದು ಪಂದ್ಯದ ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ವಿಕ್ರಮ್ ರಾಥೋಡ್ ಹೇಳಿದ್ದಾರೆ.

Story first published: Wednesday, September 28, 2022, 0:07 [IST]
Other articles published on Sep 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X