ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದುಲೀಪ್ ಟ್ರೋಫಿ ಕ್ರಿಕೆಟ್: ರೆಡ್-ಗ್ರೀನ್ ಪಂದ್ಯ ಡ್ರಾದಲ್ಲಿ ಅಂತ್ಯ

Duleep Trophy 2018 India Red vs India Green 1st match

ದಿಂಡಿಗಲ್, ಆಗಸ್ಟ್ 21: ಇಂಡಿಯಾ ರೆಡ್ ಮತ್ತು ಇಂಡಿಯಾ ಗ್ರೀನ್ ತಂಡಗಳ ನಡುವೆ ನಡೆದ ದುಲೀಪ್ ಟ್ರೋಫಿಯ ಮೊದಲ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿದೆ.

ರೆಡ್ ತಂಡ ಒಟ್ಟಾರೆ 290 ರನ್‌ಗಳ ಮುನ್ನಡೆ ಪಡೆದುಕೊಂಡಿದ್ದಾಗ ಪಂದ್ಯವನ್ನು ಡ್ರಾ ಎಂದು ಘೋಷಿಸಲಾಯಿತು. ರೆಡ್ ತಂಡದ ಪರ ಸಂಜಯ್ ರಾಮಸ್ವಾಮಿ ಮತ್ತು ಬಾಬಾ ಅಪರಾಜಿತ್ ಅಜೇಯ ಶತಕ ಗಳಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ 28 ರನ್ ಮುನ್ನಡೆ ಪಡೆದುಕೊಂಡಿದ್ದ ರೆಡ್, ಎರಡನೆ ಇನ್ನಿಂಗ್ಸ್‌ನಲ್ಲಿ ನಾಯಕ ಅಭಿನವ್ ಮುಕುಂದ್ (31) ವಿಕೆಟ್ ಕಳೆದುಕೊಂಡಿತು. ಬಳಿಕ ಸಂಜಯ್ ರಾಮಸ್ವಾಮಿ ಮತ್ತು ಬಾಬಾ ಅಪರಾಜಿತ್ ಮುರಿಯದ ಎರಡನೆಯ ವಿಕೆಟ್‌ಗೆ 210 ರನ್ ಕಲೆಹಾಕಿದರು.

ಅಶುತೋಷ್ ಸಿಂಗ್ ಮತ್ತು ಮಹಿರಿ ಹೀರ್ವಾನಿ ಅವರ ಅರ್ಧಶತಕದ ನೆರವಿನಿಂದ ರೆಡ್ ತಂಡ ಮೊದಲ ಇನ್ನಿಂಗ್ಸ್‌ನಲ್ಲಿ 337 ರನ್ ಕಲೆಹಾಕಿತ್ತು.

ಬಳಿಕ ಬ್ಯಾಟಿಂಗ್ ಆರಂಭಿಸಿದ ಇಂಡಿಯಾ ಗ್ರೀನ್ ತಂಡಕ್ಕೆ ಬಾಬಾ ಇಂದ್ರಜಿತ್ ಶತಕ ನೆರವಾಯಿತು. ಸುದೀಪ್ ಚಟರ್ಜಿ ಅರ್ಧಶತಕದ ಕಾಣಿಕೆ ನೀಡಿದರು. 309 ರನ್‌ಗೆ ಗ್ರೀನ್ ಸರ್ವಪತನಗೊಂಡಿತ್ತು. ವೇಗಿ ರಜನೀಶ್ ಗುರ್ಬಾನಿ ಏಳು ವಿಕೆಟ್ ಪಡೆದು ಗಮನಸೆಳೆದಿದ್ದರು.

ಮುಂದಿನ ಪಂದ್ಯ ಇಂಡಿಯಾ ರೆಡ್ ಮತ್ತು ಇಂಡಿಯಾ ಗ್ರೀನ್ ತಂಡಗಳ ನಡುವೆ ಆಗಸ್ಟ್ 23ರಿಂದ ಆರಂಭವಾಗಲಿದೆ.

ಸಂಕ್ಷಿಪ್ತ ಸ್ಕೋರ್
ಇಂಡಿಯಾ ರೆಡ್: ಮೊದಲ ಇನ್ನಿಂಗ್ಸ್ 337/10 (132.5) ಅಶುತೋಷ್ ಸಿಂಗ್ 80, ಮಿಹಿರ್ ಹೀರ್ವಾನಿ 61, ಸಂಜಯ್ ರಾಮಸ್ವಾಮಿ 37, ಅಂಕಿತ್ ರಜಪೂತ್ 57/4, ಕೆ. ವಿಘ್ನೇಶ್ 80/3

ಎರಡನೆಯ ಇನ್ನಿಂಗ್ಸ್: 262/1 (79) ಸಂಜಯ್ ರಾಮಸ್ವಾಮಿ 123*, ಬಾಬಾ ಅಪರಾಜಿತ್ 101*, ಅಭಿನವ್ ಮುಕುಂದ್ 31. ಅಂಕಿತ್ ರಜಪೂತ್ 40/1

ಇಂಡಿಯಾ ಗ್ರೀನ್: ಮೊದಲ ಇನ್ನಿಂಗ್ಸ್ 309/10 (111.3) ಸುದೀಪ್ ಚಟರ್ಜಿ 82, ಬಾಬಾ ಇಂದ್ರಜಿತ್ 109, ಗುರುಕೀರತ್ ಸಿಂಗ್ ಮನ್ 35, ರಜನೀಶ್ ಗುರ್ಬಾನಿ 81/7

ಫಲಿತಾಂಶ: ಡ್ರಾ, ಉಭಯ ತಂಡಗಳಿಗೆ ತಲಾ 2 ಅಂಕ

Story first published: Tuesday, August 21, 2018, 17:16 [IST]
Other articles published on Aug 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X