ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದುಲೀಪ್‌ ಟ್ರೋಫಿಯಲ್ಲಿ ದ್ವಿಶತಕ ಸಿಡಿಸಿದ ರಹಾನೆ, ಯಶಸ್ವಿ ಜೈಸ್ವಾಲ್!

Yashsvi jaiswal and Ajinkya Rahane

ಚೇತೇಶ್ವರ ಪೂಜಾರ ಅವರು ಕೌಂಟಿಯಲ್ಲಿ ಸತತ ಶತಕಗಳೊಂದಿಗೆ ಟೆಸ್ಟ್ ತಂಡದಲ್ಲಿ ಪುನರಾಗಮನ ಮಾಡಿದರು. ಆದ್ರೆ ಫಾರ್ಮ್ ವೈಫಲ್ಯದಿಂದ ಬಳಲುತ್ತಿರುವ ಅಜಿಂಕ್ಯ ರಹಾನೆ ಅವರನ್ನು ಟೆಸ್ಟ್ ತಂಡದಿಂದ ಕೈಬಿಡಲಾಗಿತ್ತು. ದುಲೀಪ್ ಟ್ರೋಫಿಗೆ ಪ್ರವೇಶಿಸುವ ಮೊದಲು, ನಾನು ಮೊದಲಿನಿಂದ ಪ್ರಾರಂಭಿಸಲು ಬಯಸುತ್ತೇನೆ ಎಂದು ರಹಾನೆ ಹೇಳಿದ್ದರು. ಅಂತೆಯೇ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸುವ ಮೂಲಕ ರಹಾನೆ ಮಿಂಚಿದ್ದಾರೆ. ರಾಷ್ಟ್ರೀಯ ತಂಡಕ್ಕೆ ಪುನರಾಗಮನ ಮಾಡುವ ಸಲುವಾಗಿ ರಹಾನೆ ಕೂಡ ದ್ವಿಶತಕ ಗಳಿಸಿದರು

ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಈಶಾನ್ಯದ ವಿರುದ್ಧ ಬೊಂಬಾಟ್ ಬ್ಯಾಟಿಂಗ್ ಪ್ರದರ್ಶಿಸಿದ ಪಶ್ಚಿಮ ವಲಯವು, ನಾಯಕ ರಹಾನೆ ನೇತೃತ್ವದಲ್ಲಿ ರನ್ ಪರ್ವತವನ್ನೇ ನಿರ್ಮಿಸಿದೆ.
ಕ್ವಾರ್ಟರ್ ಫೈನಲ್ ಹಂತದ ನಾಲ್ಕು ದಿನಗಳ ಪಂದ್ಯ ಚೆನ್ನೈನಲ್ಲಿ ನಡೆಯುತ್ತಿದೆ.

ಬೆಟ್ಟದಂತಹ ಸ್ಕೋರ್ ಕಲೆಹಾಕಿದ ರಹಾನೆ ಟೀಂ

ಬೆಟ್ಟದಂತಹ ಸ್ಕೋರ್ ಕಲೆಹಾಕಿದ ರಹಾನೆ ಟೀಂ

ಟಾಸ್ ಗೆದ್ದ ಈಶಾನ್ಯ ತಂಡದ ನಾಯಕ ಹೊಕೈಟೊ ಝಿಮೊಮಿ ಫೀಲ್ಡಿಂಗ್ ಆಯ್ದುಕೊಂಡರು. ಎರಡನೇ ದಿನದಾಟದ ಅಂತ್ಯಕ್ಕೆ ಪಶ್ವಿಮ ಜೋನ್‌ ತಂಡದ ಸ್ಕೋರ್ 123 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 590 ರನ್ ಗಳಿಸಿದೆ. ಆರಂಭಿಕ ಜೋಡಿ 43.4 ಓವರ್‌ಗಳಲ್ಲಿ 206 ರನ್ ಗಳಿಸಿತು. ಪೃಥ್ವಿ ಶಾ 121 ಎಸೆತಗಳಲ್ಲಿ 11 ಬೌಂಡರಿ ಹಾಗೂ 5 ಸಿಕ್ಸರ್‌ಗಳ ನೆರವಿನಿಂದ 113 ರನ್ ಗಳಿಸಿದರು.

24,000 ರನ್‌ ಪೂರೈಸಿದ ವಿರಾಟ್ ಕೊಹ್ಲಿ: ಈ ಸಾಧನೆ ಮಾಡಿದ ವಿಶ್ವದ 7ನೇ ಬ್ಯಾಟರ್

ದ್ವಿಶತಕ ದಾಖಲಿಸಿದ ಅಜಿಂಕ್ಯ ರಹಾನೆ ಮತ್ತು ಯಶಸ್ವಿ ಜೈಸ್ವಾಲ್

ದ್ವಿಶತಕ ದಾಖಲಿಸಿದ ಅಜಿಂಕ್ಯ ರಹಾನೆ ಮತ್ತು ಯಶಸ್ವಿ ಜೈಸ್ವಾಲ್

ನಂತರ ಯಶಸ್ವಿ ಜೈಸ್ವಾಲ್ ಮತ್ತು ಅಜಿಂಕ್ಯ ರಹಾನೆ ಎರಡನೇ ವಿಕೆಟ್‌ಗೆ 333 ರನ್ ಸೇರಿಸಿದರು. ಯಶಸ್ವಿ 321 ಎಸೆತಗಳಲ್ಲಿ 228 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 22 ಬೌಂಡರಿ ಮತ್ತು ಮೂರು ಸಿಕ್ಸರ್‌ಗಳು ಸೇರಿದ್ದವು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ರಹಾನೆ 207 ರನ್ ಗಳಿಸಿ ಅಜೇಯರಾಗಿದ್ದಾರೆ. 264 ಎಸೆತಗಳ ಈ ಇನ್ನಿಂಗ್ಸ್‌ನಲ್ಲಿ 18 ಬೌಂಡರಿ ಹಾಗೂ 6 ಸಿಕ್ಸರ್‌ಗಳಿವೆ. ರಾಹುಲ್ ತ್ರಿಪಾಠಿ 38 ಎಸೆತಗಳಲ್ಲಿ 25 ರನ್ ಗಳಿಸಿ ಕ್ರೀಸ್‌ನಲ್ಲಿದ್ದಾರೆ.

ಏಷ್ಯಾ ಕಪ್‌ 2022: ಈ 3 ಆಟಗಾರರನ್ನ ಸರಿಯಾಗಿ ಬಳಸಿಕೊಳ್ಳದ ಟೀಂ ಇಂಡಿಯಾ, ಸೋಲಿಗೆ ಪ್ರಮುಖ ಕಾರಣ

ಪೂರ್ವ ಮತ್ತು ಉತ್ತರ ವಲಯ ನಡುವೆ 2 ಕ್ವಾರ್ಟರ್ ಫೈನಲ್ ಫೈಟ್‌

ಪೂರ್ವ ಮತ್ತು ಉತ್ತರ ವಲಯ ನಡುವೆ 2 ಕ್ವಾರ್ಟರ್ ಫೈನಲ್ ಫೈಟ್‌

ಪುದುಚೇರಿಯಲ್ಲಿ ನಡೆದ ಇನ್ನೊಂದು ಕ್ವಾರ್ಟರ್ ಫೈನಲ್‌ನಲ್ಲಿ ಪೂರ್ವ ವಲಯ ಮತ್ತು ಉತ್ತರ ವಲಯ ಮುಖಾಮುಖಿಯಾದವು. ಮನೋಜ್ ತಿವಾರಿ ಪೂರ್ವ ವಲಯದ ನಾಯಕರಾಗಿದ್ದರೆ, ಮಂದೀಪ್ ಸಿಂಗ್ ಉತ್ತರ ವಲಯವನ್ನು ಮುನ್ನಡೆಸುತ್ತಿದ್ದಾರೆ. ಉತ್ತರ ವಲಯ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು.

ಪೂರ್ವ ವಲಯ ಮೊದಲ ಇನ್ನಿಂಗ್ಸ್ 397 ರನ್‌ಗಳಿಗೆ ಕೊನೆಗೊಂಡಿತು. ವಿರಾಟ್ ಸಿಂಗ್ 117 ರನ್ ಗಳಿಸಿದರು. 247 ಎಸೆತಗಳ ಇನ್ನಿಂಗ್ಸ್‌ನಲ್ಲಿ 12 ಬೌಂಡರಿ ಹಾಗೂ ಒಂದು ಸಿಕ್ಸರ್‌ಗಳಿವೆ. ಸುದೀಪ್ ಘರಾಮಿ 68, ಅನ್ಸ್ತಪ್ ಮಜುಂದಾರ್ 47, ಮನೋಜ್ ತಿವಾರಿ 27, ಶಹಬಾಜ್ ಅಹ್ಮದ್ 62 ರನ್ ಗಳಿಸಿದರು. ನವದೀಪ್ ಸೈನಿ ಮೂರು ವಿಕೆಟ್ ಪಡೆದರು. ಉತ್ತರ ವಲಯ ಎರಡನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೆ 65 ರನ್ ಗಳಿಸಿದೆ. ಇನ್ನೂ 332 ರನ್‌ಗಳ ಹಿಂದೆ ಉಳಿದಿದೆ. ಈ ಪಂದ್ಯವು ಪುದುಚೇರಿಯ ಎರಡನೇ ಗ್ರೌಂಡ್‌ನಲ್ಲಿ ನಡೆಯುತ್ತಿದೆ.

Virat Kohli ಇಷ್ಟೊಂದು ಕಾಮ್ ಆಗಿದ್ದದ್ದು ಯಾಕೆ ಗೊತ್ತಾ | *Cricket | OneIndia Kannada
ಭಾರತ ಎ vs ನ್ಯೂಜಿಲೆಂಡ್ ಎ ಮುಖಾಮುಖಿ

ಭಾರತ ಎ vs ನ್ಯೂಜಿಲೆಂಡ್ ಎ ಮುಖಾಮುಖಿ

ಇದೇ ವೇಳೆ ಹುಬ್ಬಳ್ಳಿಯಲ್ಲಿ ನಡೆದ ಎರಡನೇ ಅನಧಿಕೃತ ಟೆಸ್ಟ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿದ್ದವು. ಮಳೆಯಿಂದಾಗಿ ಮೊದಲ ದಿನ ಒಂದೇ ಒಂದು ಎಸೆತವೂ ನಡೆಯಲಿಲ್ಲ. ಟಾಸ್ ಗೆದ್ದ ಕಿವೀಸ್ ಫೀಲ್ಡಿಂಗ್ ಆಯ್ದುಕೊಂಡಿತು. ಎರಡನೇ ದಿನದಲ್ಲಿ 66 ಓವರ್‌ಗಳು ನಡೆದಿವೆ. ದಿನದಾಟದ ಅಂತ್ಯಕ್ಕೆ ಭಾರತ ತಂಡ 6 ವಿಕೆಟ್‌ಗೆ 229 ರನ್ ಗಳಿಸಿದೆ.

ನಾಯಕ ಪ್ರಿಯಾಂಕ್ ಪಾಂಚಾಲ್ 148 ಎಸೆತಗಳಲ್ಲಿ 87 ರನ್ ಗಳಿಸಿದರು. ವಿಕೆಟ್ ಕೀಪರ್ ಕೆಎಸ್ ಭರತ್ 104 ಎಸೆತಗಳಲ್ಲಿ 74 ರನ್ ಗಳಿಸಿ ಅಜೇಯರಾಗಿ ಉಳಿದಿದ್ದಾರೆ. ಅವಿಮನ್ಯು ಈಶ್ವರನ್ 22 ರನ್ ಗಳಿಸಿದರು. ರುತುರಾಜ್ ಗಾಯಕ್ವಾಡ್ 5, ರಜತ್ ಪಾಟಿದಾರ್ 4 ಮತ್ತು ತಿಲಕ್ ವರ್ಮಾ ಶೂನ್ಯಕ್ಕೆ ಔಟಾದರು. ಶಾರ್ದೂಲ್ ಟ್ಯಾಗೋರ್ 26 ರನ್ ಗಳಿಸಿದರು. ರಾಹುಲ್ ಚಹಾರ್ 4 ರನ್ ಗಳಿಸಿ ಅಜೇಯರಾಗಿದ್ದಾರೆ.

Story first published: Saturday, September 10, 2022, 7:39 [IST]
Other articles published on Sep 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X