ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿವೃತ್ತಿ ವಾಪಾಸ್ ಪಡೆದು ವಿಂಡೀಸ್ ತಂಡಕ್ಕೆ ಮರಳುವ ನಿರ್ಧಾರ ಪ್ರಕಟಿಸಿದ ಸ್ಟಾರ್ ಪ್ಲೇಯರ್!

Dwayne Bravo all set to come out of retirement after change of guard in West Indies Cricket Board

ವಿಂಡೀಸ್ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ತಮ್ಮ ನಿವೃತ್ತಿ ನಿರ್ಧಾರದಿಂದ ವಾಪಾಸ್ ಬಂದಿದ್ದಾರೆ. ಈ ಕುರಿತು ಬ್ರಾವೋ ಇವತ್ತು ಅಧಿಕೃತವಾಗಿ ಹೇಳಿಕೆನ್ನು ನೀಡಿದ್ದು ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಾಪಾಸ್ ಮರಳುತ್ತಿರೋದಾಗಿ ಸ್ಪಷ್ಟ ಪಡಿಸಿದ್ದಾರೆ.

ವೆಸ್ಟ್‌ ಇಂಡೀಸ್ ಕ್ರಿಕೆಟ್ ಮಂಡಳಿಯಲ್ಲಿ ಆಗಿಂದಾಗ ಗೊಂದಲಗಳು ಉಂಟಾಗುತ್ತಲೇ ಇರುತ್ತವೆ. ಅದರಲ್ಲು ಪ್ರಮುಖವಾಗಿ ಆಟಗಾರರ ಗುತ್ತಿಗೆ ವಿಚಾರವಾಗಿ ಆಟಗಾರರು ಹಾಗೂ ಆಡಳಿತ ಮಂಡಳಿ ಮಧ್ಯೆ ಅನೇಕ ಬಾರಿ ಬಿರುಕು ಕಾಣಿಸಿಕೊಂಡಿದೆ. ಇದೇ ಕಾರಣಕ್ಕೆ ವಿಂಡಿಸ್‌ನ ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ವರ್ಷದ ಹಿಂದೆ ನಿವೃತ್ತಿಯನ್ನು ಪ್ರಕಟಿಸಿದ್ದರು.

ವಿಂಡೀಸ್ ಕ್ರಿಕೆಟ್ ಆಡಳಿತ ಮಂಡಳಿಯಲ್ಲಿ ಇತ್ತೀಚೆಗೆ ಬದಲಾವಣೆಯಾಗಿದೆ. ಈ ಬದಲಾವಣೆ ಡ್ವೇಯ್ನ್ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಾಪಾಸ್ ಮರಳಲು ಪ್ರಮುಖ ಕಾರಣವಾಗಿದೆ. ಈ ಬಗ್ಗೆ ಮಾತನಾಡಿರುವ 36 ವರ್ಷದ ಆಲ್‌ರೌಂಡರ್ ಡ್ವೇಯ್‌ ಬ್ರಾವೋ ಆಡಳಿತ ಮಂಡಳಿಯಲ್ಲಿ ಸಕಾರಾತ್ಮಕ ಬೆಳವಣಿಗೆಯಾಗಿದೆ ಎಂದು ಹೇಳಿದ್ದಾರೆ.

ವೆಸ್ಟ್‌ ಇಂಡೀಸ್ ತಂಡಕ್ಕೆ ಸೇರ್ಪಡೆಗೊಳ್ಳಲು ಉತ್ಸುಕನಾಗಿದ್ದೇನೆ.

ವೆಸ್ಟ್‌ ಇಂಡೀಸ್ ತಂಡಕ್ಕೆ ಸೇರ್ಪಡೆಗೊಳ್ಳಲು ಉತ್ಸುಕನಾಗಿದ್ದೇನೆ.

ಡ್ವೇಯ್ನ್ ಬ್ರಾವೋ ತಂಡದ ಕೋಚ್ ಫಿಲ್ ಸಿಮ್ಮನ್ಸ್ ಮತ್ತು ನಾಯಕ ಕಿರಾನ್ ಪೊಲಾರ್ಡ್‌ ಜೊತೆ ತಂಡಕ್ಕೆ ಮರಳಿ ಸೇರ್ಪಡೆಗೊಳ್ಳಲು ಉತ್ಸುಕನಾಗಿದ್ದೇನೆ ಎಂದಿದ್ದಾರೆ. ಸಾಕಷ್ಟು ಪ್ರತಿಭಾನ್ವಿತ ಯುವ ಆಟಗಾರರು ತಂಡದಲ್ಲಿದ್ದಾರೆ. ಅನುಭವಿಗಳಾದ ನಾಯಕ ಪೊಲಾರ್ಡ್, ಸಿಮನ್ಸ್, ಹೋಲ್ಡರ್ ಜೊತೆಗೆ ತಾನು ಸಕಾರಾತ್ಮಕ ಬದಲಾವಣೆಯನ್ನು ತರುವ ವಿಶ್ವಾಸವಿದೆ ಎಂದಿದ್ದಾರೆ.

ವರ್ಷದ ಹಿಂದೆ ನಿವೃತ್ತಿ ಪ್ರಕಟಿಸಿದ್ದ ಬ್ರಾವೋ

ವರ್ಷದ ಹಿಂದೆ ನಿವೃತ್ತಿ ಪ್ರಕಟಿಸಿದ್ದ ಬ್ರಾವೋ

2018 ರಲ್ಲಿ ಡ್ವೇಯ್ನ್ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದರು. ವಿಂಡಿಸ್ ತಂಡದ ಪರವಾಗಿ 2016 ಸೆಪ್ಟೆಂಬರ್ ಬಳಿಕ ಯಾವುದೇ ಪಂದ್ಯಗಳಲ್ಲಿ ಕಾಣಿಸಿಕೊಂಡಿಲ್ಲ. ಪಾಕಿಸ್ತಾನದ ಜೊತೆಗೆ ಯುಎಇನಲ್ಲಿ ನಡೆದ ಸರಣಿಯಲ್ಲಿ ಬ್ರಾವೋ ಕೊನೆಯದಾಗಿ ಅಂತರಾಷ್ಟ್ರೀಯ ಪಂದ್ಯವನ್ನು ಆಡಿದ್ದರು.

ತಿಂಗಳ ಹಿಂದೆಯೇ ಸುಳಿವು

ತಿಂಗಳ ಹಿಂದೆಯೇ ಸುಳಿವು

ಕಳೆದ ನವೆಂಬರ್‌ನಲ್ಲಿ ಅಫ್ಘಾನಿಸ್ತಾನವನ್ನು 0-3 ಅಂತರದಲ್ಲಿ ಸೋಲಿಸಿ ಸರಣಿ ಕ್ಲೀನ್ ಸ್ವೀಪ್ ಮಾಡಿದ ವಿಂಡೀಸ್ ತಂಡವನ್ನು ಬ್ರಾವೋ ಅಭಿನಂದಿಸಿದ್ದರು. ಆಗಲೇ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಾಪಾಸ್ಸಾಗುವ ಸುಳಿವನ್ನು ಈ ಮೂಲಕ ನೀಡಿದ್ದರು. ಅದೀಗ ನಿಜವಾಗಿದೆ. 40 ಟೆಸ್ಟ್‌ 164 ಏಕದಿನ 66 ಅಂತರಾಷ್ಟ್ರೀಯ ಟಿಟ್ವೆಂಟಿ ಪಂದ್ಯಗಳಲ್ಲಿ ಬ್ರಾವೋ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಎಲ್ಲಾ ಫಾರ್ಮ್ಯಾಟ್‌ಗಳಲ್ಲಿ ಒಟ್ಟಾರೆ 6310 ರನ್ ಗಳಿಸಿರುವ ಬ್ರಾವೋ 337 ವಿಕೆಟ್‌ಗಳನ್ನು ಪಡೆದಿದ್ದಾರೆ.

ಲೀಗ್ ಪಂದ್ಯಗಳತ್ತ ಬ್ರಾವೋ ಗಮನ

ಲೀಗ್ ಪಂದ್ಯಗಳತ್ತ ಬ್ರಾವೋ ಗಮನ

ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ ಬಳಿಕ ಬ್ರಾವೋ ಲೀಗ್ ಟೂರ್ನಿಗಳತ್ತ ತಮ್ಮ ಸಂಪೂರ್ಣ ಗಮನ ನೀಡಿದ್ದರು. ಐಪಿಎಲ್, ಪಿಎಸ್‌ಎಲ್‌, ಬಿಬಿಎಲ್, ಸಿಪಿಎಲ್, ಮತ್ತು ಕೆನಡಾ ಲೀಗ್‌ನಲ್ಲಿ ತಂಡಗಳನ್ನು ಪ್ರತಿನಿಧಿಸುತ್ತಿದ್ದಾರೆ. ಅಬುದಾಬಿ ಟಿ10 ಲೀಗ್‌ನಲ್ಲೂ ಬ್ರಾವೋ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.

Story first published: Friday, December 13, 2019, 19:08 [IST]
Other articles published on Dec 13, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X