ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ಕ್ರಿಕೆಟ್‌ನಲ್ಲಿ ವಿಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ವಿಶಿಷ್ಠ ದಾಖಲೆ

Dwayne Bravo becomes first bowler to take 500 wickets in T20

ಪೋರ್ಟ್ ಆಫ್‌ ಸ್ಪೇನ್: ವೆಸ್ಟ್ ಇಂಡೀಸ್ ಆಲ್ ರೌಂಡರ್ ಡ್ವೇನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ 500 ವಿಕೆಟ್ ಪಡೆದ ವಿಶ್ವದ ಮೊದಲ ಬೌಲರ್‌ ಆಗಿ ಬ್ರಾವೋ ಗುರುತಿಸಿಕೊಂಡಿದ್ದಾರೆ. ಕೆರಿಬಿಯನ್ ಪ್ರೀಮಿಯರ್ ಲೀಗ್‌ (ಸಿಪಿಎಲ್‌)ನಲ್ಲಿ ಬ್ರಾವೋ ಈ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಬುಧವಾರ (ಆಗಸ್ಟ್ 26) ನಡೆದ ಸಿಪಿಎಲ್ 13ನೇ ಪಂದ್ಯದಲ್ಲಿ ಸೇಂಟ್ ಲೂಸಿಯಾ ಝೌಕ್ಸ್ ಮತ್ತು ಟ್ರನ್‌ಬಾಗೊ ನೈಟ್ ರೈಡರ್ಸ್ ತಂಡಗಳ ಕದನ ಈ ವಿಶೇಷ ದಾಖಲೆಗೆ ಸಾಕ್ಷಿ ಹೇಳಿದೆ.

ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್ ಮಾರಕ ವೇಗಿ ಜೇಮ್ಸ್ ಆ್ಯಂಡರ್ಸನ್!ವಿಶ್ವದಾಖಲೆ ನಿರ್ಮಿಸಿದ ಇಂಗ್ಲೆಂಡ್ ಮಾರಕ ವೇಗಿ ಜೇಮ್ಸ್ ಆ್ಯಂಡರ್ಸನ್!

ಟ್ರಿನಿಡಾಡ್‌ನ ಪೋರ್ಟ್ ಆಫ್‌ ಸ್ಪೇನ್‌ನಲ್ಲಿರುವ ಕ್ವೀನ್ಸ್ ಪಾರ್ಕ್‌ ಓವಲ್‌ನಲ್ಲಿ ನಡೆದ ಪಂದ್ಯದಲ್ಲಿ ಟ್ರಿನ್‌ಬಾಗೊ ನೈಟ್ ರೈಡರ್ಸ್ ಪ್ರತಿನಿಧಿಸಿದ್ದ ಬ್ರಾವೋ ಟಿ20 500 ವಿಕೆಟ್‌ಗಳ ದಾಖಲೆ ಪೂರೈಸಿಕೊಂಡಿದ್ದಾರೆ.

ಐಸಿಸಿ ಏಕದಿನ ರ್‍ಯಾಂಕಿಂಗ್ಸ್: ಟಾಪ್ 2ರಲ್ಲಿ ರನ್ ಮಷಿನ್, ಹಿಟ್‌ಮ್ಯಾನ್!ಐಸಿಸಿ ಏಕದಿನ ರ್‍ಯಾಂಕಿಂಗ್ಸ್: ಟಾಪ್ 2ರಲ್ಲಿ ರನ್ ಮಷಿನ್, ಹಿಟ್‌ಮ್ಯಾನ್!

ಟಿ20 ಕ್ರಿಕೆಟ್‌ನಲ್ಲಿ ಬ್ರಾವೋ ನಿರ್ಮಿಸಿರುವ ಅಪರೂಪದ, ಕುತೂಹಲಕಾರಿ ದಾಖಲೆಗಳ ಮಾಹಿತಿ ಇಲ್ಲಿದೆ.

ಸಿಪಿಎಲ್‌ನಲ್ಲಿ 100 ವಿಕೆಟ್

ಸಿಪಿಎಲ್‌ನಲ್ಲಿ 100 ವಿಕೆಟ್

ಸೇಂಟ್ ಲೂಸಿಯಾ ಝೌಕ್ಸ್ ಆರಂಭಿಕ ಬ್ಯಾಟ್ಸ್‌ಮನ್ ರಹಕೀಮ್ ಕಾರ್ನ್‌ವಾಲ್ (18 ರನ್) ವಿಕೆಟ್ ಮುರಿಯುವುದರೊಂದಿಗೆ ಬ್ರಾವೋ ಟಿ20ಯಲ್ಲಿ 500 ವಿಕೆಟ್ ಮೈಲಿಗಲ್ಲು ನೆಟ್ಟಿದ್ದಾರೆ. ಅಷ್ಟೇ ಅಲ್ಲ, ಸಿಪಿಎಲ್‌ನಲ್ಲಿ 100 ವಿಕೆಟ್ ಪಡೆದ ಮೊದಲ ಬೌಲರ್ ಆಗಿಯೂ ಬ್ರಾವೋ ಗುರುತಿಸಿಕೊಂಡಿದ್ದಾರೆ.

ದ್ವಿತೀಯ ಸ್ಥಾನದಲ್ಲಿ ಮಾಲಿಂಗ

ದ್ವಿತೀಯ ಸ್ಥಾನದಲ್ಲಿ ಮಾಲಿಂಗ

ಬ್ರಾವೋ ಬಿಟ್ಟರೆ ಟಿ20 ಮಾದರಿಯಲ್ಲಿ 400 ವಿಕೆಟ್ ಕೂಡ ಪಡೆದ ಬೌಲರ್‌ಗಳಿಲ್ಲ. ಬ್ರಾವೋ ಬಳಿಕ ಶ್ರೀಲಂಕಾ ವೇಗಿ ಲಸಿತ್ ಮಾಲಿಂಗ ದ್ವಿತೀಯ ಸ್ಥಾನದಲ್ಲಿದ್ದಾರೆ. ಮಾಲಿಂಗ ಟಿ20 ಕ್ರಿಕೆಟ್ ಮಾದರಿಯಲ್ಲಿ 390 ವಿಕೆಟ್‌ಗಳನ್ನು ಪಡೆದಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ 71 ಪಂದ್ಯಗಳಲ್ಲಿ 59 ವಿಕೆಟ್‌ ಸಾಧನೆ ಬ್ರಾವೋ ಹೊಂದಿದ್ದಾರೆ.

ಸಿಪಿಎಲ್, ಐಪಿಎಲ್ ಎರಡರಲ್ಲೂ ಯಶಸ್ವಿ

ಸಿಪಿಎಲ್, ಐಪಿಎಲ್ ಎರಡರಲ್ಲೂ ಯಶಸ್ವಿ

36ರ ಹರೆಯದ ಡ್ವೇನ್ ಬ್ರಾವೋ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಪ್ರತಿನಿಧಿಸುತ್ತಿದ್ದಾರೆ. ಐಪಿಎಲ್‌ನಲ್ಲೂ ಯಶಸ್ವಿ ಬೌಲರ್ ಎನಿಸಿರುವ ಬ್ರಾವೋ 118 ವಿಕೆಟ್ ಮುರಿದಿದ್ದಾರೆ. ಐಪಿಎಲ್‌ನಲ್ಲಿ ಸಿಎಸ್‌ಕೆ ಪ್ರತಿನಿಧಿಸಿ, ಸಿಪಿಎಲ್‌ನಲ್ಲಿ ಟಿಕೆಆರ್‌ ಪ್ರತಿನಿಧಿಸಿ 3 ಬಾರಿ ಟ್ರೋಫಿ ಗೆದ್ದ ಹಿರಿಮೆ ಬ್ರಾವೋ ಅವರದ್ದು.

ಬ್ರಾವೋ ವೇಗದ ದಾಖಲೆಗಳು

ಬ್ರಾವೋ ವೇಗದ ದಾಖಲೆಗಳು

ಚುಟುಕು ಮಾದರಿ ಕ್ರಿಕೆಟ್ ಟಿ20ಯಲ್ಲಿ 300, 400 ಮತ್ತು 500 ವಿಕೆಟ್‌ಗಳನ್ನು ವೇಗವಾಗಿ ಪಡೆದ ದಾಖಲೆಯೂ ಬ್ರಾವೋ ಹೆಸರಿನಲ್ಲಿದೆ. ಇನ್ನು ಹೆಚ್ಚು ಟಿ20 ಕ್ರಿಕೆಟ್ ಪಂದ್ಯಗಳಲ್ಲಿ ಪಾಲ್ಗೊಂಡ ದಾಖಲೆ ಪರಿಗಣಿಸಿದರೆ ಬ್ರಾವೋ ದ್ವಿತೀಯ ಸ್ಥಾನ ಪಡೆಯುತ್ತಾರೆ. ಮೊದಲ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ಮತ್ತೊಬ್ಬ ಅನುಭವಿ ಕೀರನ್ ಪೊಲಾರ್ಡ್ ಬರುತ್ತಾರೆ.

Story first published: Thursday, August 27, 2020, 18:28 [IST]
Other articles published on Aug 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X