ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಸಿಪಿಎಲ್ 2020: ಸಿಪಿಎಲ್‌ನ ಯಶಸ್ವಿ ನಾಯಕ ಡ್ವೆಯ್ನ್ ಬ್ರಾವೋ ಈ ಬಾರಿ ಕೇವಲ ಆಟಗಾರ ಮಾತ್ರ!

Dwayne Bravo: From Trinbago Knight Riders Captain To Player, All-rounder Comes Full Circle

ಡ್ವೇಯ್ನ್ ಬ್ರಾವೋ ಟಿ20 ಕ್ರಿಕೆಟ್‌ನಲ್ಲಿ ತಮ್ಮದೇ ಛಾಪು ಮೂಡಿಸಿದ ಆಟಗಾರ. ಆಲ್‌ರೌಂಡರ್ ಆಗಿರುವ ಬ್ರಾವೋ ವಿಶ್ವದ ಬಹುತೇಕ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ತವರು ನಾಡಿನ ಕೆರಿಬಿಯನ್ನ ಪ್ರೀಮಿಯರ್ ಲೀಗ್‌ನಲ್ಲೂ ಎರಡು ಬಾರಿ ಚಾಂಪಿಯನ್ ತಂಡದ ನಾಯಕನಾಗಿ ಯಶಸ್ಸನ್ನು ಕಂಡಿದ್ದಾರೆ.

2017 ಹಾಗೂ 2018ರ ಆವೃತ್ತಿಯಲ್ಲಿ ಟ್ರಿನ್ ಬ್ಯಾಗೋ ನೈಟ್ ರೈಡರ್ಸ್ ತಂಡದ ನಾಯಕನಾಗಿ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ ಕೀರ್ತಿ ಡ್ವೇಯ್ನ್ ಬ್ರಾವೋಗೆ ಸಲ್ಲುತ್ತದೆ. ಆದರೆ ಈ ಬಾರಿಯ ಟೂರ್ನಿಯಲ್ಲಿ ಟ್ರಿನ್‌ಬ್ಯಾಗೋ ನೈಟ್‌ರೈಡರ್ಸ್ ತಂಡದಲ್ಲೇ ಬ್ರಾವೋ ಕಾಣಿಸಿಕೊಳ್ಳುತ್ತಿದ್ದರೂ ಕೇವಲ ಆಟಗಾರನಾಗಿ ಮಾತ್ರವೇ ಇರಲಿದ್ದಾರೆ. ನಾಯಕತ್ವ ಕಿರಾನ್ ಪೊಲಾರ್ಡ್ ಹೆಗಲೇರಿದೆ.

ಲಂಕಾ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜನ್ನು ಕಂಗೆಡಿಸಿದ್ದರು ಇಬ್ಬರು ವೇಗಿಗಳು: ಓರ್ವ ಭಾರತೀಯಲಂಕಾ ಕ್ರಿಕೆಟ್‌ನ ಬ್ಯಾಟಿಂಗ್ ದಿಗ್ಗಜನ್ನು ಕಂಗೆಡಿಸಿದ್ದರು ಇಬ್ಬರು ವೇಗಿಗಳು: ಓರ್ವ ಭಾರತೀಯ

ಈ ಬದಲಾವಣೆಗೆ ಕಾರಣವೂ ಇದೆ. ಡ್ವೇಯ್ನ್ ಬ್ರಾವೋ ಕಳೆದ ಆವೃತ್ತಿಯ ಟೂರ್ನಿಯಲ್ಲಿ ಪಾಲ್ಗೊಂಡಿರಲಿಲ್ಲ. ಗಾಯಗೊಂಡಿದ್ದ ಬ್ರಾವೋ ಸಿಪಿಎಲ್‌ನ 7ನೇ ಆವೃತ್ತಿಯನ್ನು ತಪ್ಪಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ತಂಡದ ನಾಯಕತ್ವದ ಜವಾಬ್ಧಾರಿಯನ್ನು ಕಿರಾನ್ ಪೊಲಾರ್ಡ್‌ಗೆ ವಹಿಸಲಾಗಿತ್ತು.

ಕಳೆದ ಆವೃತ್ತಿಯ ನಾಯಕನನ್ನೇ ಈ ಬಾರಿಯೂ ಮುಂದುವರಿಸುವ ನಿರ್ಧಾರವನ್ನು ತಂಡದ ಮ್ಯಾನೇಜ್‌ಮೆಂಟ್ ತೆಗೆದುಕೊಂಡಿದೆ. ಆದರೆ ತಮಡದ ಈ ನಿರ್ಧಾರಕ್ಕೆ ಸ್ವತಃ ಬ್ರಾವೋ ಸಂತಸವನ್ನು ವ್ಯಕ್ತಪಡಿಸಿದ್ದಾರೆ. ನಾನು ಹಾಗೂ ಪೊಲಾರ್ಡ್ ಆಪ್ತ ಗೆಳೆಯರು. ಆತನ ನಾಯಕತ್ವದಲ್ಲಿ ಆಡಲು ನಾನು ಅತ್ಯಂತ ಉತ್ಸುಕನಾಗಿದ್ದೇನೆ ಎಂದು ಬ್ರಾವೋ ಪ್ರತಿಕ್ರಿಯಿಸಿದ್ದಾರೆ.

4 ತಿಂಗಳ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ4 ತಿಂಗಳ ಐಪಿಎಲ್ ಪ್ರಾಯೋಜಕತ್ವಕ್ಕೆ ಬಿಡ್ ಆಹ್ವಾನಿಸಿದ ಬಿಸಿಸಿಐ

ಟಿಕೆಆರ್ ತಂಡದ ಮ್ಯಾನೇಜರ್ ಆಗಿರುವ ವೆಂಕಿ ಮೈಸೂರು ಈ ಬಗ್ಗೆ ಮಾತನಾಡಿದ್ದಾರೆ. ಪ್ರತಿ ವರ್ಷವೂ ಡ್ವೆಯ್ನ್ ಬ್ರಾವೋ ನನ್ನ ಬಳಿ ಬಂದು ನಾಯಕತ್ವದ ಜವಾಬ್ಧಾರಿಯನ್ನು ಬೇರೊಬ್ಬರಿಗೆ ವಹಿಸುವಂತೆ ಕೇಳಿಕೊಳ್ಳುತ್ತಿದ್ದರು. ಆಟದ ಮೇಲೆ ಸಂಪೂರ್ಣ ಗಮನಹರಿಸುವ ಸಲುವಾಗಿ ಈ ನಿರ್ಧಾರವನ್ನು ಮಾಡಿಕೊಂಡಿದ್ದರು. ಹೀಗಾಗಿ ಕಿರಾನ್ ಪೊಲಾರ್ಡ್ ಅವರೇ ನಾಯಕತ್ವದಲ್ಲಿ ಮುಂದುವರಿಯಲಿದ್ದಾರೆ ಎಂದು ಹೇಳಿದ್ದಾರೆ.

Story first published: Wednesday, August 12, 2020, 10:12 [IST]
Other articles published on Aug 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X