ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮತ್ತೆ ವೆಸ್ಟ್‌ಇಂಡೀಸ್ ತಂಡ ಪ್ರತಿನಿಧಿಸುತ್ತಾರಾ ಬ್ರಾವೋ?

Dwayne Bravo keeps door open for an international return

ಆಲ್‌ರೌಂಡರ್ ಡ್ವೇಯ್ನ್ ಬ್ರಾವೋ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. ಟಿ-ಟ್ವೆಂಟಿ ಮಾದರಿ ಕ್ರಿಕೆಟ್‌ಗೆ ಹೇಳಿ ಮಾಡಿಸಿದಂತಿರುವ ಈ ಆಟಗಾರ ಟ್ಟಿ-ಟ್ವೆಂಟಿ ಲೀಗ್‌ಗಳತ್ತ ಗಮನಹರಿಸಲು ಅಂತರಾಷ್ಟ್ರೀಯ ಕ್ರಿಕೆಟ್‌ನಿಂದಲೇ ದೂರವಾಗಿದ್ದರು. ಈ ಮಧ್ಯೆ ಮತ್ತೆ ಬ್ರಾವೋ ವೆಸ್ಟ್‌ಇಂಡೀಸ್‌ ತಂಡಕ್ಕೆ ಮರಳಲಿದ್ದಾರೆ ಎಂಬ ಸುದ್ದಿಗಳು ಹರಿದಾಡತೊಡಗಿತ್ತು. ಈ ಊಹಾಪೋಹಗಳಿಗೆ ಮತ್ತಷ್ಟು ಪುಷ್ಠಿ ನೀಡುವಂತಾ ಹೇಳಿಕೆಯನ್ನು ಸ್ವತಃ ಬ್ರಾವೋ ನೀಡಿದ್ದಾರೆ.

ಜಮಿಮಾ ಬ್ಯಾಟಿಂಗ್, ರಾಧಾ ಬೌಲಿಂಗ್‌ಗೆ ಶರಣಾದ ವಿಂಡೀಸ್ ವನಿತಾ ತಂಡಜಮಿಮಾ ಬ್ಯಾಟಿಂಗ್, ರಾಧಾ ಬೌಲಿಂಗ್‌ಗೆ ಶರಣಾದ ವಿಂಡೀಸ್ ವನಿತಾ ತಂಡ

ಡ್ವೇಯ್ನ್ ಬ್ರಾವೋ ಅಬುದಾಬಿ ಟಿ-10ಲೀಗ್‌ನಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಕ್ರೀಡಾಕೂಟದಲ್ಲಿ ಮರಾಠಾ ಅರೇಬಿಯನ್ಸ್‌ ತಂಡವ್ನು ಬ್ರಾವೋ ಪ್ರತಿನಿಧಿಸಲಿದ್ದಾರೆ. ಮರಾಠಾ ಅರೇಬಿಯನ್ಸ್‌ನ ಐಕಾನಿಕ್ ಈ ಹಿನ್ನೆಲೆಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಬ್ರಾವೋ ಮಾತನಾಡಿದರು. ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಕುತೂಲಕಾರಿಯಾಗಿ ಉತ್ತರವನ್ನು ನೀಡಿದ್ದಾರೆ.

ಡ್ವೇಯ್ನ್ ಬ್ರಾವೋ 2018ರ ಅಕ್ಟೋಬರ್‌ನಲ್ಲಿ ವಿದಾಯವನ್ನು ಹೇಳಿದ್ದರು. ಅದಾದ ಬಳಿಕ ವಿವಿಧ ದೇಶಗಳು ಏರ್ಪಡಿಸುವ ಟಿ-ಟ್ವೆಂಟಿ ಲೀಗ್‌ಗಳತ್ತ ತಮ್ಮ ಸಂಪೂರ್ಣ ಗಮನ ಕೇಂದ್ರೀಕರಿಸಿದ್ದರು. ಇದೀಗ ಮತ್ತೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಮರಳುವ ಕುರಿತಾಗಿ ಸ್ಪಷ್ಟವಾಗಿ ಉತ್ತರಿಸದಿದ್ದರೂ ಆ ಕುರಿತಾಗಿ ಒಲವನ್ನು ಹೊಂದಿದ್ದಾರೆ ಎಂಬುದು ಸ್ಪಷ್ಟವಾಗಿದೆ.

ಐಪಿಎಲ್ 2020: ತಂಡ ಬಿಟ್ಟು ಮತ್ತೊಂದು ತಂಡ ಸೇರಿದ ಎಲ್ಲಾ ಆಟಗಾರ ಪಟ್ಟಿ!Speaking to the Maratha Arabians' media ahead of the competition, Bravo kept the door open for a sensational comeback to international cricket. When he was quizzed by those in attendance about a possible return, he replied with 'hopefully', thereby throwing another hint that he might make his way into the international fold, after all. Earlier, on the 10th of November, the all-rounder had posted a cryptic Instagram message, wherein he stated,

ಡ್ವೇವ್ನ್ ಬ್ರಾವೋ ಮಾಧ್ಯಮಗಳು ಕೇಳಿದ ಪ್ರಶ್ನೆಗೆ 'ಆಶಾದಾಯಿಕವಾಗಿರಿ' ಎಂದಷ್ಟೇ ಹೇಳೀದ್ದಾರೆ. ಈ ಉತ್ತರ ಕುತೂಹಲಕ್ಕೆ ಕಾರಣವಾಗಿದ.ಎ ಇಷ್ಟು ಮಾತ್ರವಲ್ಲ ಇದಕ್ಕೂ ಮುನ್ನ ಬ್ರಾವೋ ಇನ್‌ಸ್ಟಾಗ್ರಾಮ್‌ನಲ್ಲೂ ಕೂಡ ಇದೇ ರೀತಿ ಅರ್ಥದ ಪೋಸ್ಟ್‌ವೊಂದನ್ನು ಮಾಡಿದ್ದರು.

ಸಂಭಾವನೆಗೆ ಸಂಬಂಧಪಟ್ಟಂತೆ ವೆಸ್ಟ್‌ಇಂಡೀಸ್‌ ಕ್ರಿಕೆಟ್‌ ಮಂಡಳಿ ಅನೇಕ ವಿವಾದಗಳನ್ನು ಮಾಡಿಕೊಂಡಿದೆ. ಅನೇಕ ಬಾರಿ ಬಹಿರಂಗವಾಗಿಯೇ ಕ್ರಿಕೆಟಿಗರು ಈ ವಿಚಾರವಾಗಿ ಪ್ರತಿಭಟನೆಯನ್ನೂ ಕೂಡ ವ್ಯಕ್ತಪಡಿಸಿದ್ದರು. ಹೀಗಾಗಿ ವೆಸ್ಟ್ಇಂಡೀಸ್ ಆಟಗಾರರು ಟಿ-ಟ್ವೆಂಟಿ ಲೀಗ್‌ಗಳ ಕಡೆಗೆ ಹೆಚ್ಚಿನ ಗಮನ ಹರಿಸುತ್ತಿದ್ದಾರೆ.

Story first published: Friday, November 15, 2019, 16:53 [IST]
Other articles published on Nov 15, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X