ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Dwayne Bravo : ಐಪಿಎಲ್‌ಗೆ ನಿವೃತ್ತಿ ಘೋಷಿಸಿ ಪೊಲಾರ್ಡ್‌ ದಾರಿ ಹಿಡಿದ ಸಿಎಸ್‌ಕೆ ಮಾಜಿ ಆಟಗಾರ!

Dwayne Bravo Retire From IPL And Is Appointed As Bowling Coach For CSK

ಮುಂಬೈ ಇಂಡಿಯನ್ಸ್ ತಂಡದಿಂದ ಹೊರಬೀಳುವ ಮುನ್ನವೇ ಐಪಿಎಲ್‌ಗೆ ವಿದಾಯ ಹೇಳಿದ್ದ ಕೀರನ್ ಪೊಲಾರ್ಡ್ ಅದೇ ತಂಡಕ್ಕೆ ಬ್ಯಾಟಿಂಗ್ ಕೋಚ್ ಆಗಿ ನೇಮಕಗೊಂಡಿದ್ದರು. ಈಗ ಸಿಎಸ್‌ಕೆ ತಂಡದ ಆಟಗಾರ ಕೂಡ ಇದೇ ಹಾದಿ ಹಿಡಿದಿದ್ದಾರೆ.

ಸಿಎಸ್‌ಕೆ ತಂಡದ ಹಿರಿಯ ಆಲ್‌ರೌಂಡರ್ ಡ್ವೇನ್ ಬ್ರಾವೋ ಅವರನ್ನು ಸಿಎಸ್‌ಕೆ ಮಿನಿ ಹರಾಜಿಗೆ ಮುನ್ನ ಬಿಡುಗಡೆ ಮಾಡಿತ್ತು. ಇದರ ಬೆನ್ನಲ್ಲೇ ಐಪಿಎಲ್‌ಗೆ ನಿವೃತ್ತಿ ಘೋಷಿಸಿರುವ ಬ್ರಾವೋ ಸಿಎಸ್‌ಕೆ ಬೌಲಿಂಗ್ ಆಗಿ ನೇಮಕಗೊಂಡಿದ್ದಾರೆ.

ಗಾಯದ ಸಮಸ್ಯೆ ಮತ್ತು ವಯಸ್ಸಿನ ಕಾರಣ ಬ್ರಾವೋ ಮೊದಲಿನಂತೆ ಪ್ರಭಾವಿ ಪ್ರದರ್ಶನ ನೀಡುವಲ್ಲಿ ವಿಫಲರಾದ ಕಾರಣ, ಬದಲೀ ಆಟಗಾರನ ತಂಡಕ್ಕೆ ಸೇರಿಸಿಕೊಳ್ಳಲು, ಸಿಎಸ್‌ಕೆ ಹಿರಿಯ ಆಟಗಾರನನ್ನು ತಂಡದಿಂದ ಬಿಡುಗಡೆ ಮಾಡಿತ್ತು.

ಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಆಸ್ಪತ್ರೆಗೆ ದಾಖಲುಆಸ್ಟ್ರೇಲಿಯಾದ ದಿಗ್ಗಜ ಕ್ರಿಕೆಟಿಗ ರಿಕಿ ಪಾಂಟಿಂಗ್ ಆಸ್ಪತ್ರೆಗೆ ದಾಖಲು

ಸಿಎಸ್‌ಕೆ ತಂಡದ ಬೌಲಿಂಗ್ ಕೋಚ್ ಲಕ್ಷ್ಮೀಪತಿ ಬಾಲಾಜಿ ಒಂದು ವರ್ಷ ವಿಶ್ರಾಂತಿ ಪಡೆಯಲು ನಿರ್ಧರಿಸಿರುವುದರಿಂದ ಅವರ ಸ್ಥಾನಕ್ಕೆ ಡ್ವೇನ್ ಬ್ರಾವೋ ಅವರನ್ನು ನೇಮಕ ಮಾಡಲಾಗಿದೆ. 2023ರ ಐಪಿಎಲ್‌ ಸೀಸನ್‌ಗೆ ಬ್ರಾವೋ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಬೌಲಿಂಗ್‌ ಕೋಚ್‌ ಆಗಿ ಕೆಲಸ ಮಾಡಲಿದ್ದಾರೆ.

 ಸಿಎಸ್‌ಕೆ ತಂಡದ ಭಾಗವಾಗಿದ್ದ ಬ್ರಾವೋ

ಸಿಎಸ್‌ಕೆ ತಂಡದ ಭಾಗವಾಗಿದ್ದ ಬ್ರಾವೋ

2008ರಲ್ಲಿ ಐಪಿಎಲ್‌ ಚೊಚ್ಚಲ ಆವೃತ್ತಿಯಿಂದ ಬ್ರಾವೋ ಸಿಎಸ್‌ಕೆ ತಂಡದಲ್ಲಿದ್ದಾರೆ ಎಂದು ಹೇಳಿರುವ ಸಿಎಸ್‌ಕೆ, ಲಕ್ಷ್ಮೀಪತಿ ಬಾಲಾಜಿ ವೈಯಕ್ತಿಕ ಕಾರಣದಿಂದ ಈ ವರ್ಷ ವಿರಾಮ ಪಡೆಯುತ್ತಿದ್ದಾರೆ, ಅವರ ಬದಲಿಗೆ ಬ್ರಾವೋ ಬೌಲಿಂಗ್ ಕೋಚ್ ಆಗಿರಲಿದ್ದಾರೆ ಎಂದು ಹೇಳಿದ್ದಾರೆ.

ಕಳೆದ ಬಾರಿ ಐಪಿಎಲ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದ ಸಿಎಸ್‌ಕೆ ತಂಡ ಈ ಬಾರಿ ಸಾಕಷ್ಟು ಬದಲಾವಣೆ ಮಾಡಲು ನಿರ್ಧರಿಸಿದೆ. ಪರಿಣಾಮವಾಗಿ ಹಲವು ಆಟಗಾರರನ್ನು ಬಿಡುಗಡೆ ಮಾಡಿದ್ದು, ಬದಲೀ ಆಟಗಾರರನ್ನು ತಂಡಕ್ಕೆ ಸೇರಿಸಿಕೊಳ್ಳಲು ನೋಡುತ್ತಿದೆ.

ಪಂತ್‌ಗೆ ಮುಂದುವರಿದ ಬೆಂಬಲ: ಬಾಂಗ್ಲಾ ವಿರುದ್ಧ ಪಂತ್‌ಗೆ ಅವಕಾಶ ದೊರೆಯಬೇಕು ಎಂದ ಮಾಜಿ ಕ್ರಿಕೆಟಿಗ

ಹೊಸ ಜವಾಬ್ದಾರಿ ನಿಭಾಯಿಸಲು ಖುಷಿಯಾಗುತ್ತಿದೆ

ಹೊಸ ಜವಾಬ್ದಾರಿ ನಿಭಾಯಿಸಲು ಖುಷಿಯಾಗುತ್ತಿದೆ

ಬೌಲಿಂಗ್ ಕೋಚ್ ಆಗಿ ನೇಮಕವಾದ ಬಳಿಕ ಬ್ರಾವೋ ಪ್ರತಿಕ್ರಿಯೆ ನೀಡಿದ್ದು, ಹೊಸ ಜವಾಬ್ದಾರಿ ವಹಿಸಿಕೊಳ್ಳಲು ಉತ್ಸುಕನಾಗಿದ್ದೇನೆ ಎಂದು ಹೇಳಿದ್ದಾರೆ. "ನಾನು ಈ ಹೊಸ ಪ್ರಯಾಣಕ್ಕಾಗಿ ಎದುರು ನೋಡುತ್ತಿದ್ದೇನೆ, ನನ್ನ ಆಟದ ದಿನಗಳ ಕೊನೆಗೊಂಡ ನಂತರ ನಾನು ಏನು ಮಾಡುತ್ತಿದ್ದೆನೋ ಅದನ್ನು ನೋಡುತ್ತಿದ್ದೇನೆ. ಹೊಸ ಬೌಲರ್ ಗಳ ಜೊತೆ ಕೆಲಸ ಮಾಡಲು ಎದರು ನೋಡುತ್ತಿದ್ದೇನೆ" ಎಂದು ಬ್ರಾವೋ ಹೇಳಿದ್ದಾರೆ.

"ಆಟಗಾರನಿಂದ ಕೋಚ್‌ ಆಗಲು ನಾನು ಕೆಲವು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ ಎಂದು ನಾನು ಭಾವಿಸುವುದಿಲ್ಲ. ಆಡುತ್ತಿದ್ದ ವೇಳೆಯಲ್ಲಿ ನಾನು ಬೌಲರ್ ಗಳ ಜೊತೆ ಕೆಲಸ ಮಾಡಿದ್ದೇನೆ. ಬ್ಯಾಟರ್ ಗಳಿಗಿಂತ ಒಂದು ಹೆಜ್ಜೆ ಮುಂದೆ ಯೋಚನೆ ಮಾಡಲು ಯತ್ನಿಸುವ ಮೂಲಕ ಬೌಲರ್ ಗಳಿಗೆ ಸಹಾಯ ಮಾಡುತ್ತೇನೆ. ಒಂದೇ ವ್ಯತ್ಯಾಸವೆಂದರೆ ನಾನು ಇನ್ನು ಮೈದಾನದಲ್ಲಿ ನಿಲ್ಲುವುದಿಲ್ಲ! ಐಪಿಎಲ್ ಇತಿಹಾಸದಲ್ಲಿ ನಾನೇ ಪ್ರಮುಖ ವಿಕೆಟ್ ಟೇಕರ್ ಆಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಆದರೆ ಐಪಿಎಲ್ ಇತಿಹಾಸದ ಭಾಗವಾಗಲು ನನಗೆ ಸಂತೋಷವಾಗಿದೆ ಎಂದು ಡಿಜೆ ಬ್ರಾವೋ ಹೇಳಿದ್ದಾರೆ.

ಅವರ ಅನುಭವ ತಂಡಕ್ಕೆ ಸಹಕಾರಿ

ಅವರ ಅನುಭವ ತಂಡಕ್ಕೆ ಸಹಕಾರಿ

ಚೆನ್ನೈ ಸೂಪರ್ ಕಿಂಗ್ಸ್ ಸಿಇಒ ಕೆ.ಎಸ್ ವಿಶ್ವನಾಥನ್ ಮಾತನಾಡಿದ್ದು, "ಐಪಿಎಲ್‌ನಲ್ಲಿ ಅತ್ಯುತ್ತಮವಾದ ವೃತ್ತಿಜೀವನಕ್ಕಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರು ಒಂದು ದಶಕಕ್ಕೂ ಹೆಚ್ಚು ಕಾಲ ಸೂಪರ್ ಕಿಂಗ್ಸ್ ಕುಟುಂಬದ ನಿರ್ಣಾಯಕ ಸದಸ್ಯರಾಗಿದ್ದಾರೆ.
ಅವರೊಂದಿಗೆ ನಮ್ಮ ಬಾಂಧವ್ಯವನ್ನು ಮುಂದುವರೆಸಲು ಉತ್ಸುಕರಾಗಿದ್ದೇವೆ. ಅವರು ಸಾಕಷ್ಟು ಅನುಭವಿ ಆಟಗಾರರಾಗಿದ್ದಾರೆ. ಅವರ ಅನುಭವ ಮುಂದಿನ ದಿನಗಳಲ್ಲಿ ತಂಡಕ್ಕೆ ಸಹಕಾರಿಯಾಗಲಿದೆ. ಅವರ ಮಾರ್ಗದರ್ಶನದಲ್ಲಿ ಉತ್ತಮ ಬೌಲಿಂಗ್ ಪ್ರದರ್ಶನ ನೀಡುವ ವಿಶ್ವಾಸ ಇದೆ" ಎಂದು ಹೇಳಿದರು.

ಅತಿ ಹೆಚ್ಚು ವಿಕೆಟ್ ಪಡೆದಿರುವ ಬ್ರಾವೋ

ಅತಿ ಹೆಚ್ಚು ವಿಕೆಟ್ ಪಡೆದಿರುವ ಬ್ರಾವೋ

ಬ್ರಾವೋ 161 ಪಂದ್ಯಗಳಿಂದ 183 ವಿಕೆಟ್‌ಗಳೊಂದಿಗೆ ಐಪಿಎಲ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಬೌಲಿಂಗ್ ಮಾತ್ರವಲ್ಲದೆ, ಬ್ಯಾಟಿಂಗ್‌ನಲ್ಲಿ ಕೂಡ 130 ರ ಸ್ಟ್ರೈಕ್ ರೇಟ್‌ನಲ್ಲಿ 1560 ರನ್ ಗಳಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ 144 ಪಂದ್ಯಗಳನ್ನು ಆಡಿದ್ದು, 168 ವಿಕೆಟ್ ಪಡೆದು 1556 ರನ್ ಗಳಿಸಿದ್ದಾರೆ.

ಬ್ರಾವೋ 2011 ರಿಂದ ಸಿಎಸ್‌ಕೆ ತಂಡದ ಅವಿಭಾಜ್ಯ ಅಂಗವಾಗಿದ್ದಾರೆ. 2011, 2018 ಮತ್ತು 2021 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ ಐಪಿಎಲ್ ಚಾಂಪಿಯನ್ ಆಗುವಲ್ಲಿ ಮತ್ತು 2014ರಲ್ಲಿ ಸಿಎಸ್‌ಕೆ ಚಾಂಪಿಯನ್ಸ್ ಲೀಗ್ ಟಿ20 ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಐಪಿಎಲ್‌ ಸೀಸನ್‌ನಲ್ಲಿ 2013 ಮತ್ತು 2015ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆಯುವ ಮೂಲಕ ಪರ್ಪಲ್ ಕ್ಯಾಪ್ ಗೆದ್ದ ಆಟಗಾರ ಎನಿಸಿಕೊಂಡಿದ್ದರು.

Story first published: Friday, December 2, 2022, 16:49 [IST]
Other articles published on Dec 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X