ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರಶೀದ್‌ಗೆ ವಿರಾಟ್‌ ಕೊಹ್ಲಿ ಬೌಲ್ಡ್ ಆದ ವೀಡಿಯೋ ಹಂಚಿಕೊಂಡ ಇಸಿಬಿ

ECB posts video of India captain’s dismissal to Adil Rashid

ಲಂಡನ್, ಮೇ 9: ಏಕದಿನದಲ್ಲಿ 'ಔಟಾಗೋ ಸುಳಿವೇ ಇಲ್ಲದೆ ಔಟಾದೆನಲ್ಲ' ಅನ್ನೋ ಅಭಿವ್ಯಕ್ತ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮುಖದಲ್ಲಿ ಸುಳಿದಾಡಿದ್ದನ್ನು ನೀವು ಬಹಳಷ್ಟು ಸಾರಿ ಕಂಡಿರಲು ಸಾಧ್ಯವಿಲ್ಲ. ಆದರೆ ಅಂಥದ್ದೊಂದು ಅಭಿವ್ಯಕ್ತವನ್ನು ಇಂಗ್ಲೆಂಡ್ ಸ್ಪಿನ್ನರ್ ಆದಿಲ್ ರಶೀದ್, ಕೊಹ್ಲಿ ಮುಖದಲ್ಲಿ ತಂದಿದ್ದರು. ಆ ವೀಡಿಯೋವನ್ನು ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್ (ಇಸಿಬಿ) ಟ್ವಿಟರ್‌ನಲ್ಲಿ ಶೇರ್ ಮಾಡಿಕೊಂಡಿದೆ.

ಭಾರತದಲ್ಲಿ ಆಡೋದು ನಮ್ಮ ಪಾಲಿಗೆ ಬಲು ಕಷ್ಟಕರ: ಡೇವಿಡ್ ವಾರ್ನರ್ಭಾರತದಲ್ಲಿ ಆಡೋದು ನಮ್ಮ ಪಾಲಿಗೆ ಬಲು ಕಷ್ಟಕರ: ಡೇವಿಡ್ ವಾರ್ನರ್

ಈ ಪಂದ್ಯ ನಡೆದಿದ್ದು 2018ರಲ್ಲಿ ಹೆಡಿಂಗ್ಲಿಯಲ್ಲಿ. ಇಂಗ್ಲೆಂಡ್ vs ಭಾರತ ನಡುವಿನ 3ನೇ ಏಕದಿನ ಪಂದ್ಯವಿದು. ಇಂಗ್ಲೆಂಡ್ ಬೌಲರ್ ಆದಿಲ್ ರಶೀದ್ ಆವತ್ತು ಸುಳಿವೇ ಇಲ್ಲದೆ ವಿರಾಟ್ ಕೊಹ್ಲಿಯನ್ನು ಔಟ್ ಮಾಡಿದ್ದರು. ಅಚಾನಕ್ ಔಟ್ ಆಗಿದ್ದಕ್ಕಾಗಿ ಕೊಹ್ಲಿ ಮುಖದಲ್ಲೂ ಅಂದು ಅಚ್ಚರಿ ಕಾಣಿಸಿತ್ತು.

ಟಿ20 ವಿಶ್ವಕಪ್ ತಂಡ ಆಯ್ಕೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ : ಬಲಿಷ್ಠ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ!ಟಿ20 ವಿಶ್ವಕಪ್ ತಂಡ ಆಯ್ಕೆ ಮಾಡಿದ ಬಾಲಿವುಡ್ ನಟ ಸುನಿಲ್ ಶೆಟ್ಟಿ : ಬಲಿಷ್ಠ ತಂಡದಲ್ಲಿ ಯಾರಿದ್ದಾರೆ ಯಾರಿಲ್ಲ!

ಕೊಹ್ಲಿ ಔಟಾಗಿರುವ ಈ ವೀಡಿಯೋವನ್ನು ಇಸಿಬಿ, ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ಜೊತೆಗೆ, 'ನೀವು ಎದುರಿಸಿದ್ದರಲ್ಲಿ ಇದು ಅತ್ಯುತ್ತಮ ಎಸೆತವೆ ವಿರಾಟ್ ಕೊಹ್ಲಿ?' ಎಂದು ಸಾಲೊಂದನ್ನೂ ಬರೆದುಕೊಂಡಿದೆ. ಆವತ್ತಿನ ಪಂದ್ಯದಲ್ಲಿ ಶತಕದ ನಿರೀಕ್ಷೆಯಲ್ಲಿದ್ದ ಕೊಹ್ಲಿ 72 ಎಸೆತಗಳಲ್ಲಿ 71 ರನ್ ಬಾರಿಸಿ ವಿಕೆಟ್ ಒಪ್ಪಿಸಿದ್ದರು. ಇಂಗ್ಲೆಂಡ್ 8 ವಿಕೆಟ್‌ಗಳಿಂದ ಸುಲಭವಾಗಿ ಪಂದ್ಯ ಗೆದ್ದುಕೊಂಡಿತ್ತು.

ಪಂದ್ಯ ಮುಗಿಯುತ್ತಲೇ ಮಾತನಾಡಿಸಿದಾಗ, 'ಇದು ಖಂಡಿತವಾಗಿಯೂ ನನಗೆ ತುಂಬಾ ಸಮಾಧಾನ ಕೊಡುವ ಎಸೆತ. ಯಾಕೆಂದರೆ ಕೊಹ್ಲಿ ವಿಶ್ವದಲ್ಲೇ ಬೆಸ್ಟ್ ಪ್ಲೇಯರ್. ಎಲ್ಲಾ ಸಮಯದಲ್ಲೂ ನೀವು ಇಂಥ ಬಾಲೇ ಎಸೆಯಲು ಬಯಸುತ್ತೀರಿ. ಆದರೆ ಈ ಬಾರಿ ಇದು ತುಂಬಾ ಚೆನ್ನಾಗಿ ಬಂತು,' ಎಂದು ಅಂದು ರಶೀದ್ ಪ್ರತಿಕ್ರಿಯಿಸಿದ್ದರು.

Story first published: Saturday, May 9, 2020, 15:52 [IST]
Other articles published on May 9, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X