ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಜೋಫ್ರಾ ಆರ್ಚರ್ ಬಲಗೈಗೆ ಶಸ್ತ್ರ ಚಿಕಿತ್ಸೆ: ಇಸಿಬಿ ಮಾಹಿತಿ

ECB provides health update on Jofra Archer: Pacer to undergo surgery to his right hand on Monday

ಭಾರತ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಪಾಮ್ಗೊಳಡಿದ್ದ ಇಂಗ್ಲೆಂಡ್ ವೇಗಿ ಜೋಫ್ರಾ ಆರ್ಚರ್ ಟಿ20 ಸರಣಿಗೆ ಅಲಭ್ಯರಾಗಿ ಇಂಗ್ಲೆಂಡ್‌ಗೆ ಮರಳಿದ್ದಾರೆ. ದೀರ್ಘ ಕಾಲದಿಂದ ಕೈ ನೋವಿನಿಂದ ಬಳಲುತ್ತಿರುವ ಕಾರಣ ಹೆಚ್ಚಿನ ಪರೀಕ್ಷೆಗಾಗಿ ಅವರು ತಂಡವನ್ನು ತೊರೆದಿದ್ದರು. ಈಗ ಈ ಬಗ್ಗೆ ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಬೋರ್ಡ್ ಮಾಹಿತಿಯನ್ನು ನೀಡಿದ್ದು ಆರ್ಚರ್‌ಗೆ ಶಸ್ತ್ರ ಚಿಕಿತ್ಸೆಯ ಅಗತ್ಯವಿರುವುದನ್ನು ಹೇಳಿದೆ.

ಇಸಿಬಿ ಶನಿವಾರ ಜೋಫ್ರಾ ಆರ್ಚರ್ ಅವರ ಹೆಲ್ತ್‌ ಅಪ್‌ಡೇಟ್ ಬಹಿರಂಗಪಡಿಸಿದೆ. ಅವರ ಬಲಗೈ ಸ್ಕ್ಯಾನಿಂಗ್ ಮಾಡಲಾಗಿದ್ದು ವೈದ್ಯಕೀಯ ಸಿದ್ದಂದಿಗಳು ಅದರ ವಿಮರ್ಶೆಯನ್ನು ಮಾಡಿದ್ದಾರೆ. ಹೀಗಾಗಿ ಸೋಮವಾರದಂದು ಜೋಫ್ರಾ ಆರ್ಚರ್ ಶಸ್ತ್ರ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿಸಿದೆ.

ಐಪಿಎಲ್: ಮೊಹಮ್ಮದ್ ಶಮಿ ಫಿಟ್ನೆಸ್‌ ಬಗ್ಗೆ ಅಪ್‌ಡೇಟ್ ಕೊಟ್ಟ ಕುಂಬ್ಳೆಐಪಿಎಲ್: ಮೊಹಮ್ಮದ್ ಶಮಿ ಫಿಟ್ನೆಸ್‌ ಬಗ್ಗೆ ಅಪ್‌ಡೇಟ್ ಕೊಟ್ಟ ಕುಂಬ್ಳೆ

ಕಳೆದ ಜನವರಿ ತಿಂಗಳಿನಲ್ಲಿ ಭಾರತಕ್ಕೆ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಪ್ರವಾಸಕ್ಕೆ ಕೆಲವೇ ದಿನಗಳ ಮುನ್ನ ಮನೆ ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಕೈನೋವಿಗೆ ಒಳಗಾಗಿದ್ದರು. ಇದಕ್ಕೆ ಇಸಿಬಿ ವೈದ್ಯಕೀಯ ಸಿಬ್ಬಂದಿಗಳ ತಂಡ ಚಿಕಿತ್ಸೆಯನ್ನು ನೀಡುತ್ತಾ ಸರಣಿಗೆ ಅಲಭ್ಯರಾಗದಂತೆ ನೋಡಿಕೊಂಡಿದ್ದರು. ಆದರೆ ಟಿ20 ಸರಣಿಯ ಬಳಿಕ ವೈದ್ಯಕೀಯ ಸಿಬ್ಬಂದಿಗಳು ಜೋಫ್ರಾ ಆರ್ಚರ್ ಯುಕೆಗೆ ಮರಳಿ ಚಿಕಿತ್ಸೆಗೆ ಒಳಗಾಗುವುದು ಸೂಕ್ತ ಎಂಬ ನಿರ್ಧಾರಕ್ಕೆ ಬರಲಾಗಿತ್ತು. ಹೀಗಾಗಿ ಏಕದಿನ ಸರಣಿಯಿಂದ ಹೊರಗುಳಿದು ಇಂಗ್ಲೆಂಡ್‌ಗೆ ಆರ್ಚರ್ ಮರಳಿದ್ದಾರೆ.

ಜೋಫ್ರಾ ಆರ್ಚರ್ ಮೊಣಕೈ ನೋವಿಗೆ ಒಳಗಾಗಿರುವುದು ಐಪಿಎಲ್‌ನ ಫ್ರಾಂಚೈಸಿಯಾದ ರಾಜಸ್ಥಾನ್ ರಾಯಲ್ಸ್‌ಗೂ ತಲೆನೋವಾಗಿ ಪರಿಣಮಿಸಿದೆ. ಶಸ್ತ್ರ ಚಿಕಿತ್ಸೆಗೆ ಆರ್ಚರ್ ಒಳಗಾಗುತ್ತಿರುವ ಕಾಲ ಕೆಲ ದಿನಗಳ ವಿಶ್ರಾಂತಿಯ ಅಗತ್ಯ ಅವರಿಗಿದೆ. ಹೀಗಾಗಿ ಆರಂಭಿಕ ಕೆಲ ಪಂದ್ಯಗಳಿಂದ ಆರ್ಚರ್ ಹೊರಗುಳಿಯುವ ಸಾಧ್ಯತೆಯಿದೆ.

ಶತಕ ಬಾರಿಸಲು ವಿಫಲವಾಗುತ್ತಿರುವ ವಿಚಾರದ ಕುರಿತು ಮೌನ ಮುರಿದ ಕೊಹ್ಲಿಶತಕ ಬಾರಿಸಲು ವಿಫಲವಾಗುತ್ತಿರುವ ವಿಚಾರದ ಕುರಿತು ಮೌನ ಮುರಿದ ಕೊಹ್ಲಿ

ಇನ್ನು ಭಾರತ ಹಾಗೂ ಇಂಗ್ಲೆಂಡ್ ನಡುವಿನ ಏಕದಿನ ಸರಣಿಯಲ್ಲಿ ಎರಡು ತಂಡಗಳು ಕೂಡ ಮೊದಲ ಎರಡು ಪಂದ್ಯಗಳನ್ನು ಗೆದ್ದುಕೊಂಡಿದ್ದು ಸರಣಿಯನ್ನು ಸಮಬಲಗೊಳಿಸಿದೆ. ಅಂತಿಮ ಪಂದ್ಯ ಭಾನುವಾರ ನಡೆಯಲಿದ್ದು ಗೆಲ್ಲುವ ತಂಡ ಸರಣಿಯನ್ನು ವಶಕ್ಕೆ ಪಡೆದುಕೊಳ್ಳಲಿದೆ.

Story first published: Sunday, March 28, 2021, 8:44 [IST]
Other articles published on Mar 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X