ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಇಸಿಬಿಯ 100 ಎಸೆತಗಳ ಕ್ರಿಕೆಟ್ 12 ವರ್ಷಗಳಿಗೂ ಹಳೆಯದು'

ECBs new format 12 years out of date

ಲಂಡನ್, ಏ. 28: ಇಂಗ್ಲೆಂಡ್ ತಂಡದ ಟೆಸ್ಟ್ ಮಾಜಿ ನಾಯಕ ಡೇವಿಡ್ ಗೋವರ್ ಇತ್ತೀಚೆಗೆ ಹೆಚ್ಚು ಸುದ್ದಿಯಲ್ಲಿರುವ ಹೊಸ 100 ಎಸೆತಗಳ ಕ್ರಿಕೆಟ್ ಸ್ವರೂಪವನ್ನು ಸ್ವಾಗತಿಸಿದ್ದಾರೆ. ಅದರ ಜೊತೆ ಜೊತೆಯಲ್ಲೇ 100 ಬಾಲ್ ಮಾದರಿಯ ಕ್ರಿಕೆಟ್ ಸುಮಾರು 12 ವರ್ಷಗಳಿಗೂ ಹೆಚ್ಚು ಹಳೆಯದು' ಎಂದಿದ್ದಾರೆ.

61ರ ಹರೆಯದ ಗೋವರ್ ಕಮೆಂಟರಿ ವೃತ್ತಿಗೆ ಬರುವ ಮುನ್ನ ಟೆಸ್ಟ್ ವೃತ್ತಿ ಜೀವನದಲ್ಲಿ ಒಟ್ಟು 8231 ರನ್ ಗಳಿಸಿದ್ದರು. ಗೋವರ್ ಈ ಬಗ್ಗೆ ಪ್ರತಿಕ್ರಿಯಿಸಿ, 'ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ (ಇಸಿಬಿ) 100 ಎಸೆತ ಮಾದರಿಯ ಕ್ರಿಕೆಟನ್ನು ಕೊಂಚ ಮುಂಚೆಯೇ ಆರಂಭಿಸಬೇಕಿತ್ತು. ಆದರೆ ಇನ್ನಾದರೂ ಆರಂಭಿಸುವುದರಲ್ಲಿದೆ ಅನ್ನುವುದು ಖುಷಿಯ ವಿಚಾರ' ಎಂದರು.

ಇಲ್ಲಿ ಡೇವಿಡ್ ಹೇಳಿದ್ದು ಲಘು ಓವರ್ ಕ್ರಿಕೆಟ್ ಹಿಂದೆಯೇ ಆರಂಭಗೊಂಡಿರುವುದರ ಕುರಿತಷ್ಟೇ. ಅಂದರೆ ಇಂಗ್ಲೆಂಡ್‌ ಮತ್ತು ವೇಲ್ಸ್ ಕ್ರಿಕೆಟ್ ಬೋರ್ಡ್ 2003ರಲ್ಲೇ ಟಿ20 ಮಾದರಿಯ ಕ್ರಿಕೆಟನ್ನು ಪರಿಚಯಿಸಿತ್ತು. ಆಬಳಿಕ ಹಂತ ಹಂತವಾಗಿ ಈ ಮಾದರಿ ಕ್ರಿಕಟ್ ಜನಪ್ರಿಯಗೊಳ್ಳುತ್ತಾ ಬಂತು.

ಹೀಗೆ ಮುಂದುವರೆದ ಈ ಲಘು ಓವರ್‌ಗಳ ಕ್ರಿಕೆಟ್ ಮಾದರಿಯ ಐಸಿಸಿ ವರ್ಲ್ಡ್ ಟಿ20 ಉದ್ಘಾಟನಾ ಪಂದ್ಯ ದಕ್ಷಿಣ ಆಫ್ರಿಕಾದಲ್ಲಿ2007ರಲ್ಲಿ ನಡೆದಿತ್ತು. ಈ ಪಂದ್ಯಾಟದ ಫೈನಲ್ ನಲ್ಲಿ ಭಾರತವು ಪಾಕಿಸ್ತಾನ ವಿರುದ್ಧ 5ರನ್ ಜಯ ಸಾಧಿಸಿತ್ತು. ಇದನ್ನೇ ಧ್ವನಿಸಿ ಗೋವರ್ ಹೊಸ ಮಾದರಿಯ ಚುಟುಕು ಕ್ರಿಕೆಟ್ ಅದು ಹೊಸತಲ್ಲ, 12 ವರ್ಷಗಳಿಗೂ ಹಳೆತು ಎಂದಿದ್ದಾರೆ. ಯಾಕೆಂದರೆ ಟಿ20 ಮಾದರಿಯಲ್ಲಿ ಒಟ್ಟು 120 ಎಸೆತಗಳಿರುತ್ತವೆ.

2020ರಲ್ಲಿ ಆರಂಭಿಸಲು ಉದ್ದೇಶಿಸಿರುವ ಹೊಸ ಮಾದರಿಯ ಪಂದ್ಯದಲ್ಲಿಒಟ್ಟು 8 ತಂಡಗಳು ಇರಲಿವೆ. ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್ ಅವರು ಹೊಸ ಮಾದರಿಯ ಈ ಕ್ರಿಕೆಟ್ ಹೆಚ್ಚು ಆಕರ್ಷಿಸಲ್ಪಟ್ಟು ಟೆಸ್ಟ್ ಮಾನ್ಯತೆ ಕಡಿಮೆಯಾಗಲಿದೆ ಎಂದಿದ್ದಾರೆ. ಮಾಜಿ ನಾಯಕ ಅಲಾಸ್ಟೇರ್ ಕುಕ್ ಈ ಮಾದರಿಯಿಂದ ಟೆಸ್ಟ್ ಆಕರ್ಷಣೆ ಕಡಿಮೆಯಾಗದಂತೆ ರಕ್ಷಿಸುವ ಅನಿವಾರ್ಯತೆಯಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

Story first published: Saturday, April 28, 2018, 15:32 [IST]
Other articles published on Apr 28, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X