ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಜ್‌ಬಾಸ್ಟನ್ ಸ್ಟೇಡಿಯಂ ಇನ್ಮುಂದೆ ಕೊರೊನಾವೈರಸ್ ಪರೀಕ್ಷಾ ಕೇಂದ್ರ

Edgbaston stadium to become COVID-19 testing centre

ಬರ್ಮಿಂಗ್‌ಹ್ಯಾಮ್, ಏಪ್ರಿಲ್ 3: ಇಂಗ್ಲೆಂಡ್‌ನ ಬರ್ಮಿಂಗ್‌ಹ್ಯಾಮ್‌ನಲ್ಲಿರುವ ಎಜ್‌ಬಾಸ್ಟನ್ ಕ್ರಿಕೆಟ್ ಸ್ಟೇಡಿಯಂ ಇನ್ಮುಂದೆ ಕೊರೊನಾವೈರಸ್ ಪರಿಕ್ಷಾ ಕೇಂದ್ರವಾಗಿ ಮಾರ್ಪಾಡಾಗಲಿದೆ. ವಾರ್ವಿಕ್‌ಷೈರ್ ಕೌಂಟಿ ಕ್ರಿಕೆಟ್ ಕ್ಲಬ್ (ಡಬ್ಲ್ಯೂಸಿಸಿಸಿ) ಶುಕ್ರವಾರ (ಏಪ್ರಿಲ್ 3) ಇದನ್ನು ಘೋಷಿಸಿದೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿರಾಯಲ್ ಚಾಲೆಂಜರ್ಸ್ ಬೆಂಗಳೂರು ಬಗ್ಗೆ ಬಾಯ್ತೆರೆದ ವಿರಾಟ್ ಕೊಹ್ಲಿ

ಆತಂಕಾರಿಯಾಗಿ ವ್ಯಾಪಿಸುತ್ತಿರುವ ಕೋವಿಡ್-19 ಸೋಂಕಿನ ವಿರುದ್ಧ ಇಂಗ್ಲೆಂಡ್‌ನ ರಾಷ್ಟ್ರೀಯ ಆರೋಗ್ಯ ಸೇವಾ ಸಿಬ್ಬಂದಿ (ಎನ್‌ಎಚ್‌ಎಸ್) ಹೋರಾಡುತ್ತಿದ್ದು, ಕೊರೊನಾ ವೈರಸ್ ಪರೀಕ್ಷಾ ಕೇಂದ್ರವಾಗಿ ಎಜ್‌ಬಾಸ್ಟನ್ ಸ್ಟೇಡಿಯಂ ಅನ್ನು ಬಿಟ್ಟುಕೊಡುತ್ತಿದ್ದೇವೆ. ಕಾರ್ ಪಾರ್ಕಿಂಗ್‌ನ ಭಾಗವನ್ನು ಬರ್ಮಿಂಗ್‌ಹ್ಯಾಮ್‌ನಲ್ಲಿ ಕೆಲಸಮಾಡುವ ಆರೋಗ್ಯ ಸಿಬ್ಬಂದಿಯ ಪರೀಕ್ಷೆಗೆ ಮೀಸಲಿಡಲಾಗಿದೆ ಎಂದು ಡಬ್ಲ್ಯೂಸಿಸಿಸಿ ಹೇಳಿದೆ.

ಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಆಯ್ಕೆಯನ್ನೇ ವಿರೋಧಿಸಿದ್ದ ಧೋನಿಟೀಮ್ ಇಂಡಿಯಾಗೆ ವಿರಾಟ್ ಕೊಹ್ಲಿ ಆಯ್ಕೆಯನ್ನೇ ವಿರೋಧಿಸಿದ್ದ ಧೋನಿ

ಎನ್‌ಎಚ್‌ಎಸ್ ಸಿಬ್ಬಂದಿ ಎಡ್ಜ್‌ಬಾಸ್ಟನ್ ರಸ್ತೆ ಪ್ರವೇಶದ್ವಾರದ ಮೂಲಕ ಓಡುತ್ತಾರೆ, ಅವರು ವಾಹನದಲ್ಲಿ ಉಳಿದಿರುವಾಗ ಪರೀಕ್ಷಿಸಲಾಗುವುದು ಆ ಬಳಿಕ ಅವರಿಗೆ ಪರ್ಷೋರ್ ರಸ್ತೆಯ ಮೂಲಕ ನಿರ್ಗಮನಕ್ಕೆ ಅವಕಾಶ ಮಾಡಿಕೊಡಲಾಗುತ್ತದೆ ಎಂದು ಡಬ್ಲ್ಯೂಸಿಸಿಸಿ ತಿಳಿಸಿದೆ.

ಪಿಎಂ ಪರಿಹಾರ ನಿಧಿಗೆ 2 ವರ್ಷದ ವೇತನ ದೇಣಿಗೆ ನೀಡಿದ ಗೌತಮ್ ಗಂಭೀರ್ಪಿಎಂ ಪರಿಹಾರ ನಿಧಿಗೆ 2 ವರ್ಷದ ವೇತನ ದೇಣಿಗೆ ನೀಡಿದ ಗೌತಮ್ ಗಂಭೀರ್

'ಮೇ 29ರವರೆಗೆ ನಮ್ಮ ಕೌಂಟಿ ಕ್ರಿಕೆಟ್ ಕಾರ್ಯಕ್ರಮಗಳು, ಕಾನ್ಫರೆನ್ಸ್ ಮತ್ತು ಬ್ಯುಸಿನೆಸ್ ಚಟುವಟಿಕೆಗಳು ನಡೆಯುತ್ತಿಲ್ಲ. ಇಂಥ ಕಷ್ಟದ ಸಮಯದಲ್ಲಿ ಸ್ಥಳೀಯ ಸಮುದಾಯಕ್ಕೆ ಯಾವೆಲ್ಲ ರೀತಿಯಲ್ಲಿ ನೆರವು ನೀಡಬಹುದು ಎಂದು ನಮ್ಮ ಸಿಬ್ಬಂದಿ ನೋಡುತ್ತಿದ್ದಾರೆ,' ಡಬ್ಲ್ಯೂಸಿಸಿಸಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ನೀಲ್ ಸ್ನೋಬಾಲ್ ಹೇಳಿದ್ದಾರೆ.

Story first published: Friday, April 3, 2020, 17:01 [IST]
Other articles published on Apr 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X