ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಟೆಸ್ಟ್ WTC ಫೈನಲ್ ಪ್ರವೇಶಿಸಿದರೆ ಏಷ್ಯಾಕಪ್ ಮುಂದೂಡಿಕೆ: ಪಿಸಿಬಿ ಮುಖ್ಯಸ್ಥ

Ehsan Mani declares, ‘Asia Cup will be postponed if India reaches WTC Finals

ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್‌ ಹಂತಕ್ಕೇರಲು ಭಾರತ ಸಫಲವಾದರೆ ಏಷ್ಯಾ ಕಪ್‌ನಲ್ಲಿ ಭಾರತ ಪಾಲ್ಗೊಳ್ಳುವ ಬಗ್ಗೆ ಅನುಮಾನಗಳು ವ್ಯಕ್ತವಾಗಿತ್ತು. ಮುಂಬರುವ ಜೂನ್ ತಿಂಗಳಿನಲ್ಲೇ ಇವೆರಡೂ ಆಯೋಜನೆಗೆ ನಿಗದಿಯಾಗಿರುವುದು ಇದಕ್ಕೆ ಕಾರಣ. ಆದರೆ ಈ ಬಗ್ಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ಬಗ್ಗೆ ಸ್ಪಷ್ಟನೆಯನ್ನು ನೀಡಿದೆ.

ಭಾರತ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಹಂತಕ್ಕೇರಲು ಯಶಸ್ವಿಯಾದರೆ ಏಷ್ಯಾಕಪ್ ಟೂರ್ನಿಯನ್ನು ಮುಂದೂಡಲಾಗುತ್ತದೆ ಎಂದು ಪಿಸಿಬಿ ಮುಖ್ಯಸ್ಥ ಇಹ್ಸಾನ್ ಮನಿ ಹೇಳಿದ್ದಾರೆ. ಭಾನುವಾರ ಈ ಬಗ್ಗೆ ಇಹ್ಸಾನ್ ಮನಿ ಮಾಧ್ಯಗಳ ಮುಂದೆ ಖಚಿತ ನಿರ್ಧಾರವನ್ನು ಪ್ರಕಟಿಸಿದ್ದಾರೆ.

ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್ಐಪಿಎಲ್: ಟಾಮ್ ಬ್ಯಾಂಟನ್ ಐಪಿಎಲ್ ಬಿಡಲಿ ಎಂದ ಮೈಕಲ್ ವಾನ್

"ಏಷ್ಯಾಕಪ್ ಕಳೆದ ವರ್ಷ ಆಯೋಜನೆಯಾಗಬೇಕಿತ್ತು ಆದರೆ ಅದು ಈ ವರ್ಷಕ್ಕೆ ಮುಂದೂಡಿಕೆಯಾಗಿದೆ. ಆದರೆ ಈಗಿರುವ ಪರಿಸ್ಥಿತಿಯಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್ ನಡೆಯಲಿರುವ ಕಾರಣ ಜೂನ್ ತಿಂಗಳಿನಲ್ಲಿ ನಡೆಯುವ ಸಾಧ್ಯತೆಗಳು ಕಾಣಿಸುತ್ತಿಲ್ಲ. ಶ್ರೀಲಂಕಾ ಈ ಟೂರ್ನಿಯನ್ನು ಜೂನ್‌ನಲ್ಲಿಯೇ ನಡೆಸಲು ಪ್ರಯತ್ನಿಸುವುದಾಗಿ ಹೇಳಿದೆ" ಎಂದಿದ್ದಾರೆ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಇಹ್ಸಾನ್ ಮನಿ.

ಪಿಸಿಬಿಯ ಸಿಇಒ ಆಗಿರುವ ವಾಸಿಂ ಖಾನ್ ಕೂಡ ಇದೇ ರೀತಿಯಾಗಿ ಪ್ರತಿಕ್ರಿಯಿಸಿದ್ದು ಭಾರತ ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ ಫೈನಲ್ ಹಂತಕ್ಕೇರುವಂತೆ ಕಾಣಿಸುತ್ತಿದೆ. ಹಾಗಾಗಿ ಏಷ್ಯಾಕಪ್ ಟೂರ್ನಿಯ ಆಯೋಜನೆಯನ್ನು ಮುಂದೂಡುವ ಅಗತ್ಯ ಬೀಳಲಿದೆ ಎಂದು ವರ್ಚುವಲ್ ಮಾಧ್ಯಮಗೋಷ್ಠಿಯಲ್ಲಿ ಹೇಳಿಕೆ ನೀಡಿದ್ದಾರೆ.

ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟರೋಡ್ ಸೇಫ್ಟಿ ವರ್ಲ್ಡ್ ಸೀರೀಸ್: ದಂತೆಕತೆಗಳಿರುವ ಭಾರತ ತಂಡ ಪ್ರಕಟ

ಇನ್ನು ಇದೇ ಸಂದರ್ಭದಲ್ಲಿ ಪಾಕಿಸ್ಥಾನ್ ಕ್ರಿಕೆಟ್ ಸಂಸ್ಥೆಯ ಮುಖ್ಯಸ್ಥ ಇಹ್ಸಾನ್ ಮನಿ, ಈ ವರ್ಷದ ಟಿ20 ವಿಶ್ವಕಪ್ ಭಾರತದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ವಿಸಾ ವಿಚಾರವಾಗಿ ಐಸಿಸಿಗೆ ಪತ್ರವನ್ನು ಬರೆದಿರುವುದಾಗಿ ಹೇಳಿದ್ದಾರೆ. ನಮ್ಮ ಆಟಗಾರರಿಗೆ ಮಾತ್ರವಲ್ಲದೆ, ಅಭಿಮಾನಿಗಳು, ಪತ್ರಕರ್ತರು ಹಾಗೂ ಮಂಡಳಿಯ ಸದಸ್ಯರಿಗೆ ವೀಸಾ ನೀಡುವ ಬಗ್ಗೆ ಭಾರತದಿಂದ ನಾವು ಲಿಖಿತ ಭರವಸೆಯನ್ನು ನಿರೀಕ್ಷಿಸುತ್ತಿದ್ದೇವೆ" ಎಂದು ಮತ್ತೊಮ್ಮೆ ಇಹ್ಸಾನ್ ಮನಿ ಹೇಳಿದ್ದಾರೆ.

Story first published: Monday, March 1, 2021, 7:32 [IST]
Other articles published on Mar 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X