ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನದ ಕಳಪೆ ಪ್ರದರ್ಶನಕ್ಕೆ ಛಾಟಿ ಬೀಸಿದ ಶೋಯೆಬ್ ಅಖ್ತರ್

Embarrassing Performance From Pakistan Against England Sayd Shoaib Akhtar

ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಆಟಗಾರ ಶೋಯೆಬ್ ಅಖ್ತರ್ ಪಾಕ್ ತಂಡದ ಪ್ರದರ್ಶನಕ್ಕೆ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಪಾಕಿಸ್ತಾನ ತಂಡ ಇಂಗ್ಲೆಂಡ್ ವಿರುದ್ಧ ನೀಡುತ್ತಿರುವ ಪ್ರದರ್ಶನ ಮುಜುಗರವನ್ನುಂಟು ಮಾಡುವಂತಿದೆ ಎಂದು ಶೋಯೆಬ್ ಅಖ್ತರ್ ಹೇಳಿಕೆಯನ್ನು ನೀಡಿದ್ದಾರೆ.

ಅಝರ್ ಅಲಿ ನೇತೃತ್ವದ ಪಾಕಿಸ್ತಾನ ಟೆಸ್ಟ್ ತಂಡ ಇಂಗ್ಲೆಂಡ್ ವಿರುದ್ಧ ಅಂತಿಮ ಪಂದ್ಯದಲ್ಲಿ ಕಳಪೆ ಪ್ರದರ್ಶನವನ್ನು ನೀಡುತ್ತಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಜ್ಯಾಕ್ ಕ್ರಾವ್ಲಿ ಹಾಗೂ ಜೋಸ್ ಬಟ್ಲರ್ ಭರ್ಜರಿ ಆಟದ ಸಹಯಾದಿಂದ ಇಂಗ್ಲೆಂಡ್ ತಂಡ ಬರೊಬ್ಬರಿ 583/8 ರನ್ ಗಳಿಸಿದೆ. ಕ್ರಾವ್ಲಿ 267 ರನ್ ಗಳಿಸಿದರೆ ಜೋಸ್ ಬಟ್ಲರ್ 152 ರನ್‌ಗಳ ಕೊಡುಗೆಯನ್ನು ನೀಡಿದ್ದಾರೆ.

ನಿವೃತ್ತಿ ಹೇಳಿದ ಆಟಗಾರರಿಗೆ ವಿದಾಯ ಪಂದ್ಯ: ಪಠಾಣ್ ನೀಡಿದ ಉಪಾಯಕ್ಕೆ ಜೈ ಎಂದ ನೆಟ್ಟಿಗರುನಿವೃತ್ತಿ ಹೇಳಿದ ಆಟಗಾರರಿಗೆ ವಿದಾಯ ಪಂದ್ಯ: ಪಠಾಣ್ ನೀಡಿದ ಉಪಾಯಕ್ಕೆ ಜೈ ಎಂದ ನೆಟ್ಟಿಗರು

ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್‌ಗೆ ಇಳಿದಿರುವ ಪಾಕಿಸ್ತಾನ ತಂಡ ಬ್ಯಾಟಿಂಗ್‌ನಲ್ಲೂ ವೈಫಲ್ಯತೆಯನ್ನು ಅನುಭವಿಸಿದೆ. ಎರಡನೇ ದಿನದಂತ್ಯದ ವೇಳೆಕೆ ಮೊದಲ ಇನ್ನಿಂಗ್ಸ್‌ನಲ್ಲಿ ಪಾಕಿಸ್ತಾನ ತಂಡ 24 ರನ್‌ಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದೆ. ಈ ಮೂಲಕ ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿ ಪಾಕಿಸ್ತಾನ ತಂಡ ಬಾರೀ ಹಿನ್ನೆಡೆಯನ್ನು ಅನುಭವಿಸಿದೆ.

ಈ ಬಗ್ಗೆ ಶೋಯೆಬ್ ಅಖ್ತರ್ "ಅಗ್ರೆಸ್ಸಿವ್ ಬೌಲರ್‌ಗಳನ್ನು ನಾನು ಕಂಡಿದ್ದೇನೆ. ಅವರು ವಿಕೆಟ್ ಪಡೆಯಲು ಕಾತರರಾಗಿರುತ್ತಾರೆ. ಆದರೆ ಪಾಕಿಸ್ತಾನದ ಈಗಿನ ಬೌಲರ್‌ಗಳಿಗೆ ಅದೇನು ಕಷ್ಠವಾಗುತ್ತಿದೆಯೇ ತಿಳಿಯುತ್ತಿಲ್ಲ. ಬೌಲಿಂಗ್‌ನಲ್ಲಿ ವಿಧಾನಗಳೇ ಕಾಣಿಸುತ್ತಿಲ್ಲ. ನಸೀಮ್ ಶಾ ಕೇವಲ ಒಂದು ಭಾಗಕ್ಕೆ ಮಾತ್ರವೇ ಬೌಲಿಂಗ್ ಮಾಡುತ್ತಾರೆ. ನಿಧಾನದ ಎಸೆತಗಳು, ಬೌನ್ಸರ್‌ಗಳೇ ಇಲ್ಲ ಎಂದು ಅಖ್ತರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಆರ್‌ಸಿಬಿ ಜೊತೆಗೆ ಕೊಹ್ಲಿ ಯುಎಇಗೆ ಪ್ರಯಾಣಿಸದ್ದಕ್ಕೆ ಕಾರಣ ಬಹಿರಂಗಆರ್‌ಸಿಬಿ ಜೊತೆಗೆ ಕೊಹ್ಲಿ ಯುಎಇಗೆ ಪ್ರಯಾಣಿಸದ್ದಕ್ಕೆ ಕಾರಣ ಬಹಿರಂಗ

ಆಕ್ರಮಣಶೀಲತೆಯ ಕೊರತೆ ಯಾಕಾಗುತ್ತಿದೆ ಎಂದು ನನಗೆ ತಿಳಿಯುತ್ತಿಲ್ಲ. ನಾವು ನೆಟ್ ಬೌಲರ್‌ಗಳು ಅಲ್ಲ, ನಾವು ಟೆಸ್ಟ್ ಪಂದ್ಯಗಳನ್ನು ಆಡುತ್ತಿದ್ದೇವೆ. ಈ ಪಂದ್ಯವನ್ನು ನೋಡುತ್ತಿದ್ದರೆ 2006ರ ಬಳಿಕ ಪಾಕಿಸ್ತಾನ ತಂಡ ವಿದೇಶದಲ್ಲಿ ಅತಿ ದೊಡ್ಡ ಸೋಲು ಕಾಣುವ ಸಾಧ್ಯತೆಯಿದೆ. ಪಾಕಿಸ್ತಾನ ಕ್ರಿಕೆಟ್‌ಗೆ ಇದು ಅತ್ಯಂತ ಮುಜುಗರವನ್ನುಂಟು ಮಾಡುವಂತಿದೆ ಎಂದು ಶೋಯೆಬ್ ಅಖ್ತರ್ ಕಿಡಿಕಾರಿದ್ದಾರೆ.

Story first published: Monday, August 24, 2020, 10:16 [IST]
Other articles published on Aug 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X