ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಲಾರ್ಡ್ಸ್‌ ಮೈದಾನದಲ್ಲಿ ಕ್ರಿಕೆಟ್ ವೃತ್ತಿಜೀವನಕ್ಕೆ ಅಂತ್ಯ ಹಾಡಿದ ಜೂಲನ್ ಗೋಸ್ವಾಮಿ

ಭಾರತದ ಲೆಜೆಂಡರಿ ವೇಗಿ ಜೂಲನ್ ಗೋಸ್ವಾಮಿ ಶನಿವಾರದಂದು ಐಕಾನಿಕ್ ಲಾರ್ಡ್ಸ್‌ನಲ್ಲಿ ವೈಭವದ ಅಂತರಾಷ್ಟ್ರೀಯ ವೃತ್ತಿಜೀವನಕ್ಕೆ ತೆರೆ ಎಳೆದರು, ಭಾರತವು ಮೂರನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ಅನ್ನು 3-0 ಅಂತರದಲ್ಲಿ ಸೋಲಿಸಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿದೆ.

ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ ಅಂತಿಮ ಓವರ್ ಅನ್ನು ಬೌಲಿಂಗ್ ಮಾಡಿದ ಜೂಲನ್ ಗೋಸ್ವಾಮಿ ಕೇಟ್‌ ಕ್ರಾಸ್‌ರನ್ನು ಬೋಲ್ಡ್ ಮಾಡಿದರು. ಜೂಲನ್ ಗೋಸ್ವಾಮಿ ಏಕದಿನ ಕ್ರಿಕೆಟ್‌ನಲ್ಲಿ ಪಡೆದ 255ನೇ ವಿಕೆಟ್ ಆಗಿದೆ. ಇದು ಅವರು 204ನೇ ಏಕದಿನ ಪಂದ್ಯವಾಗಿತ್ತು.

ಜೂಲನ್ ಗೋಸ್ವಾಮಿ ವಿದಾಯ ಪಂದ್ಯ: ಗಾರ್ಡ್ ಆಫ್ ಹಾನರ್ ನೀಡಿ ಗೌರವಿಸಿದ ಇಂಗ್ಲೆಂಡ್ ತಂಡಜೂಲನ್ ಗೋಸ್ವಾಮಿ ವಿದಾಯ ಪಂದ್ಯ: ಗಾರ್ಡ್ ಆಫ್ ಹಾನರ್ ನೀಡಿ ಗೌರವಿಸಿದ ಇಂಗ್ಲೆಂಡ್ ತಂಡ

ಸರಣಿಯ ಮೂರನೇ ಏಕದಿನ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ 10 ಓವರ್ ಗಳಲ್ಲಿ 30 ರನ್ ನೀಡಿ 2 ವಿಕೆಟ್ ಪಡೆದ ಭಾರತದ ಗೆಲುವಿನಲ್ಲಿ ಮುಖ್ಯ ಪಾತ್ರ ವಹಿಸಿದರು. ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ 20 ರನ್ ನೀಡಿ 1 ವಿಕೆಟ್ ಪಡೆದಿದ್ದರು. ಏಕದಿನ ಮಾದರಿಯಲ್ಲಿ ಮಹಿಳಾ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ದಾಖಲೆ ಭಾರತದ ಲೆಜೆಂಡರಿ ವೇಗಿ ಜೂಲನ್ ಗೋಸ್ವಾಮಿ ಹೆಸರಿನಲ್ಲಿದೆ.

ಇಂಗ್ಲೆಂಡ್‌ ವಿರುದ್ಧವೇ ಮೊದಲು ಮತ್ತು ಕೊನೆಯ ಪಂದ್ಯ

ಇಂಗ್ಲೆಂಡ್‌ ವಿರುದ್ಧವೇ ಮೊದಲು ಮತ್ತು ಕೊನೆಯ ಪಂದ್ಯ

ಜೂನ್ 2002 ರಲ್ಲಿ ಚೆನ್ನೈನಲ್ಲಿ ಇಂಗ್ಲೆಂಡ್ ವಿರುದ್ಧದ ಏಕದಿನ ಪಂದ್ಯದಲ್ಲಿ ಜೂಲನ್ ಗೋಸ್ವಾಮಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಅಂದು, ತನ್ನ ಮೊದಲ ಪಂದ್ಯದಲ್ಲೇ ಆಕೆ ಎರಡು ವಿಕೆಟ್ ಪಡೆದು ಮಿಂಚಿದ್ದರು.

ಆಕೆಯ ಚೊಚ್ಚಲ ಟೆಸ್ಟ್ ಪಂದ್ಯವನ್ನು ಕೂಡ 2002ರ ಜುಲೈ ತಿಂಗಳಲ್ಲಿ ಇಂಗ್ಲೆಂಡ್ ವಿರುದ್ಧವೇ ಆಡಿದ್ದರು. ಅದಾದ ನಾಲ್ಕು ವರ್ಷಗಳ ನಂತರ ಅವರು ಮೊದಲ ಟಿ20 ಪಂದ್ಯವನ್ನು ಆಡಿದರು, ಅದೂ ಕೂಡ ಇಂಗ್ಲೆಂಡ್ ತಂಡದ ವಿರುದ್ಧವೇ ಎನ್ನುವುದು ವಿಶೇಷ. ಈಗ ಏಕದಿನ ಮಾದರಿ ಕ್ರಿಕೆಟ್‌ನ ಕೊನೆಯ ಪಂದ್ಯವನ್ನೂ ಇಂಗ್ಲೆಂಡ್ ವಿರುದ್ಧವೇ ಆಡುವ ಮೂಲಕ ತಮ್ಮ ಕ್ರಿಕೆಟ್ ವೃತ್ತಿ ಜೀವನಕ್ಕೆ ವಿದಾಯ ಹೇಳಿದರು.

ದಿನೇಶ್ ಕಾರ್ತಿಕ್ ಧರಿಸುವ ಹೆಲ್ಮೆಟ್ ಹೇಗೆ ವಿಭಿನ್ನ, ಅದರ ವಿಶೇಷತೆಗಳೇನು ಗೊತ್ತಾ?

ಎರಡು ವಿಶ್ವಕಪ್‌ ಫೈನಲ್‌ನಲ್ಲಿ ಭಾಗಿ

ಎರಡು ವಿಶ್ವಕಪ್‌ ಫೈನಲ್‌ನಲ್ಲಿ ಭಾಗಿ

ಜೂಲನ್ ಗೋಸ್ವಾಮಿ 2005 ಮತ್ತು 2017 ರಲ್ಲಿ ಎರಡು ವಿಶ್ವಕಪ್ ಫೈನಲ್‌ಗಳಲ್ಲಿ ಆಡಿದ್ದಾರೆ. 2017 ರ ವಿಶ್ವಕಪ್ ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ನಾಯಕಿ ಮೆಗ್ ಲ್ಯಾನಿಂಗ್ ಅವರನ್ನು ಔಟ್ ಮಾಡಿದ ಅವರ ಎಸೆತವು ಇತಿಹಾಸದಲ್ಲಿ ಒಂದಾಗಿ ಉಳಿಯುತ್ತದೆ.

204 ಏಕದಿನ, 12 ಟೆಸ್ಟ್ ಮತ್ತು 68 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನು ಆಡಿರುವ 39 ವರ್ಷದ ಜೂಲನ್ ಗೋಸ್ವಾಮಿ, ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ಈಗ ನಿವೃತ್ತಿ ತೆಗೆದುಕೊಂಡಿದ್ದಾರೆ. ಭಾರತದ ಮತ್ತೋರ್ವ ಕ್ರಿಕೆಟ್ ತಾರೆ ಮಿಥಾಲಿ ರಾಜ್ ತಿಂಗಳ ಹಿಂದಷ್ಟೆ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದರು.

ಜೂಲನ್ ಗೋಸ್ವಾಮಿಗೆ ಲಾರ್ಡ್ಸ್‌ ಮೈದಾನದಲ್ಲಿ ವಿಶೇಷ ಗೌರವ

ಜೂಲನ್ ಗೋಸ್ವಾಮಿಗೆ ಲಾರ್ಡ್ಸ್‌ ಮೈದಾನದಲ್ಲಿ ವಿಶೇಷ ಗೌರವ

ಭಾರತ ಹಾಗೂ ಇಂಗ್ಲೆಂಡ್ ವನಿತೆಯರ ನಡುವಿನ ಏಕದಿನ ಸರಣಿಯ ಅಂತಿಮ ಪಂದ್ಯದಲ್ಲಿ ಲಾರ್ಡ್ಸ್‌ ಮೈದಾನದಲ್ಲಿ ಅಂತಿಮ ಪಂದ್ಯ ಆಡುತ್ತಿರುವ ಲೆಜೆಂಡರಿ ಕ್ರಿಕೆಟರ್ ಜೂಲನ್ ಗೋಸ್ವಾಮಿಗೆ ಇಂಗ್ಲೆಂಡ್ ವನಿತೆಯರ ತಂಡ ಭಾರತೀಯ ಆಟಗಾರ್ತಿಗೆ ಗಾರ್ಡ್ ಆಫ್ ಹಾನರ್ ನೀಡುವ ಮೂಲಕ ಗೌರವಿಸಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 169 ರನ್ ಗಳಿಸಿ ಆಲೌಟ್ ಆಯಿತು. ಈ ಸಂದರ್ಭದಲ್ಲಿ 9ನೇ ಕ್ರಮಾಂಕದಲ್ಲಿ ಜೂಲನ್ ಗೋಸ್ವಾಮಿ ಬ್ಯಾಟಿಂಗ್‌ಗೆ ಇಳಿದರು. ಈ ವೇಳೆ ಇಂಗ್ಲೆಂಡ್ ತಂಡದ ಆಟಗಾರ್ತಿಯರು ಜೂಲನ್ ಗೋಸ್ವಾಮಿಗೆ ಗಾರ್ಡ್ ಆಫ್ ಹಾನರ್ ನೀಡಿದ್ದಾರೆ.

Story first published: Sunday, September 25, 2022, 1:43 [IST]
Other articles published on Sep 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X