ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

68ಕ್ಕೆ ಆಲೌಟ್ ಆದ ಇಂಗ್ಲೆಂಡ್: ಮೈಕಲ್ ವಾನ್‌ ಟ್ರೋಲ್ ಮಾಡಿ ಮಜಾ ಪಡೆದ ವಾಸಿಂ ಜಾಫರ್: ವಿಡಿಯೋ

Eng vs Aus: Wasim Jaffer trolls Former england skipper Vaughan with India 92 all out tweet

ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಮೂರನೇ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಹೀನಾಯವಾದ ಸೋಲು ಅನುಭವಿಸಿದೆ. ಇಂಗ್ಲೆಂಡ್ ತಂಡದ ಈ ಸೋಲಿಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಭಾರೀ ನಿರೀಕ್ಷೆಯೊಂದಿಗೆ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಇಂಗ್ಲೆಂಡ್ ಪಡೆ ಯಾವ ಹಂತದಲ್ಲಿಯೂ ಪ್ರತಿರೋಧವೊಡ್ಡುವಲ್ಲಿ ವಿಫಲವಾಗುತ್ತಿದ್ದು ಆತಿಥೇಯರಿಗೆ ಸುಲಭ ಸವಾಲಾಗಿದೆ. ಅದರಲ್ಲೂ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ ಕೇವಲ 68 ರನ್‌ಗಳಿಗೆ ಆಲೌಟ್ ಆಗಿದ್ದು ಪಂದ್ಯ ಕೇವಲ ಎರಡೂವರೆ ದಿನದಲ್ಲಿಯೇ ಅಂತ್ಯವಾಗಿದೆ.

ಇನ್ನು ಇಂಗ್ಲೆಂಡ್ ತಂಡ ಎರಡನೇ ಇನ್ನಿಂಗ್ಸ್‌ನಲ್ಲಿ ಕನಿಷ್ಠ ಮೊತ್ತಕ್ಕೆ ಆಲೌಟ್ ಆದ ಬಗ್ಗೆ ಈಗ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ. ಇಂತಾ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ವಾಸಿಂ ಜಾಫರ್ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್‌ ಅವರ ಕಾಲೆಳೆದಿದ್ದಾರೆ. ಈ ಹಿಂದೆ ಟೀಮ್ ಇಂಡಿಯಾ 100 ರನ್‌ಗಳಿಗಿಂತ ಕಡಿಮೆ ರನ್‌ಗೆ ಆಲೌಟ್ ಆಗಿದ್ದ ಸಂದರ್ಭದಲ್ಲಿ ವಾನ್ ಮಾಡಿದ್ದ ಟ್ವೀಟ್‌ವೊಂದನ್ನು ಉಲ್ಲೇಖಿಸಿ ವಾಸಿಂ ಜಾಫರ್ ಮೈಕಲ್ ವಾನ್‌ಗೆ ವ್ಯಂಗ್ಯವಾಡಿದ್ದಾರೆ.

ಆಶಸ್ ಸರಣಿ: ಮೆಲ್ಬರ್ನ್ ಟೆಸ್ಟ್‌ನಲ್ಲಿಯೂ ಇಂಗ್ಲೆಂಡ್‌ಗೆ ಹೀನಾಯ ಸೋಲು: ಟ್ರೋಫಿ ಆಸಿಸ್ ಕೈವಶಆಶಸ್ ಸರಣಿ: ಮೆಲ್ಬರ್ನ್ ಟೆಸ್ಟ್‌ನಲ್ಲಿಯೂ ಇಂಗ್ಲೆಂಡ್‌ಗೆ ಹೀನಾಯ ಸೋಲು: ಟ್ರೋಫಿ ಆಸಿಸ್ ಕೈವಶ

ಭಾರತ 92 ರನ್‌ಗಳಿಗೆ ಆಲೌಟ್ ಆಗಿದ್ದ ಸಂದರ್ಭದಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಮೈಕಲ್ ವಾನ್ ಭಾರತದ ಬ್ಯಾಟಿಂಗ್ ಸಾಮರ್ಥ್ಯವನ್ನು ಕುಟುಕಿ ಟ್ವಿಟ್ ಮಾಡಿದ್ದರು. "ಭಾರತ 92ಕ್ಕೆ ಆಲೌಟ್... ಈ ದಿನಗಳಲ್ಲಿಯೂ ಯಾವುದೇ ತಂಡ ನೂರು ರನ್‌ಗಳಿಗಿಂತ ಕಡಿಮೆ ರನ್‌ಗಳಿಗೆ ಆಲೌಟ್ ಆಗುತ್ತದೆ ಎಂಬುದನ್ನು ನಂಬುವುದು ಕೂಡ ಕಷ್ಟವಾಗುತ್ತದೆ" ಎಂದು ತಮಾಷೆಯಾಗಿದ್ದರು ಮೈಕಲ್ ವಾನ್.

ಇದಕ್ಕೆ ಭಾರತೀಯ ಕ್ರಿಕೆಟ್ ತಂಡದ ಮಾಜಿ ಆಟಗಾರ ವಾಸಿಂ ಜಾಫರ್ ತಮ್ಮದೇ ಶೈಲಿಯಲ್ಲಿ ತಮಾಷೆಯಾಗಿ ಕಾಲೆಳೆದಿದ್ದಾರೆ. ತಮಾಷೆಯ ವಿಡಿಯೋವೊಂದನ್ನು ಮಾಡಿ ವಾಸಿಂ ಜಾಫರ್ ಇಂಗ್ಲೆಂಡ್ ಮಾಜಿ ನಾಯಕನನ್ನು ವ್ಯಂಗ್ಯವಾಡಿದ್ದಾರೆ. ಇನ್ನು ವಾಸಿಂ ಜಾಫರ್ ಮಾಡಿರುವ ಈ ಟ್ವೀಟ್‌ಗೆ ಸ್ವತಃ ಮೈಕಲ್ ವಾನ್ ಕೂಡ ಪ್ರತಿಕ್ರಿಯಿಸಿದ್ದು "ವೆರಿ ಗುಡ್ ವಾಸಿಂ" ಎಂದು ತಮಾಷೆಯ ಧಾಟಿಯಲ್ಲಿಯೇ ಪ್ರತಿಕ್ರಿಯಿಸಿದ್ದಾರೆ.

ವಾಸಿಂ ಜಾಫರ್ ಹಾಗೂ ಮೈಕಲ್ ವಾನ್ ಇಬ್ಬರು ಕೂಡ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯವಾಗಿರುವ ಮಾಜಿ ಕ್ರಿಕೆಟರ್‌ಗಳಾಗಿದ್ದಾರೆ. ಅದರಲ್ಲೂ ವಾಸಿಂ ಜಾಫರ್ ಸದಾ ತಮಾಷೆಯಾಗಿ ಒಂದಲ್ಲಾ ಒಂದು ವಿಚಾರಗಳನ್ನು ಹಂಚಿಕೊಳ್ಳುವ ಮೂಲಕ ಕ್ರಿಕೆಟ್ ಪ್ರೇಮಿಗಳಿಗೆ ಸಾಕಷ್ಟು ಹತ್ತಿರವಾಗಿದ್ದಾರೆ. ಇನ್ನು ಮೈಕಲ್ ವಾನ್ ಭಾರತೀಯ ತಂಡವನ್ನು ಟೀಕಿಸುವ ಅವಕಾಶ ಸಿಕ್ಕಿದಾಗೆಲ್ಲಾ ಅದನ್ನು ಬಳಸಿಕೊಳ್ಳುವ ಪ್ರಯತ್ನ ಮಾಡಿದ್ದಾರೆ. ಆದರೆ ಬಹುತೇಕ ಸಂದರ್ಭಗಳಲ್ಲಿ ಅದು ವಾನ್ ಅವರಿಗೇ ತಿರುಗು ಬಾಣವಾಗಿತ್ತು. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಸರಣಿಯ ಸಂದರ್ಭದಲ್ಲಿಯೂ ಮೈಕಲ್ ವಾನ್ ಸನೇಕ ಬಾರಿ ಟೀಮ್ ಇಂಡಿಯಾವನ್ನು ಕಾಲೆಳೆಯುವ ಪ್ರಯತ್ನವನ್ನು ನಡೆಸಿದ್ದರು. ಆದರೆ ವಾಸಿಂ ಜಾಫರ್ ಅದಕ್ಕೆ ತಮ್ಮದೇ ಶೈಲಿಯಲ್ಲಿ ಉತ್ತರವನ್ನು ನೀಡಿ ಗಮನಸೆಳೆದಿದ್ದಾರೆ.

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊವಿಡ್-19 ಪಾಸಿಟಿವ್ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಕೊವಿಡ್-19 ಪಾಸಿಟಿವ್

ಮುದುಕರಿಂದ ತುಂಬಿ‌ದ ಚೀನಾ:ಟೆನ್ಷನ್ ಆದ ಚೀನಾ ಜನ್ರಿಗೆ ಕೊಟ್ಟಿರೋ ಆಫರ್ ನೋಡಿ | Oneindia Kannada

ಇನ್ನು ಮೆಲ್ಬರ್ನ್ ಟೆಸ್ಟ್‌ನಲ್ಲಿ 82 ರನ್‌ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ತಂಡ ಮತ್ತೊಮ್ಮೆ ಹೀನಾಯ ಆರಂಭವನ್ನು ಪಡೆದುಕೊಂಡಿತು. ಎರಡನೇ ದಿನದಾಟದ ಅಂತ್ಯಕ್ಕೆ ಎರಡನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ತಂಡ 4 ವಿಕೆಟ್ ಕಳೆದುಕೊಂಡು 31 ರನ್‌ಗಳಿಸಿತ್ತು. ಈ ಕುಸಿತ ಮೂರನೇ ದಿನವೂ ಮುಂದುವರಿದಿದ್ದು ಭೋಜನವಿರಾಮಕ್ಕೂ ಮುನ್ನವೇ ಆಲೌಟ್ ಆಗಿ ತನ್ನ ಇನ್ನಿಂಗ್ಸ್ ಮುಕ್ತಾಯಗೊಳಿಸಿದೆ. ಈ ಮೂಲಕ ಮತ್ತೊಂದು ಹೀನಾಯ ಸೋಲನ್ನು ಕಂಡಿದೆ ಜೋ ರೂಟ್ ಪಡೆ.

Story first published: Tuesday, December 28, 2021, 15:21 [IST]
Other articles published on Dec 28, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X