ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG vs IND: ಇಂಗ್ಲೆಂಡ್ ಬಿಗಿಹಿಡಿತದಲ್ಲಿ 5ನೇ ಟೆಸ್ಟ್ ಪಂದ್ಯ; ಕೊನೆಯ ದಿನ ಭಾರತ ಗೆಲ್ಲಲು ಬೇಕು 7 ವಿಕೆಟ್

ENG vs IND 5th Test Day 4: Joe Root and Jonny Bairstow Dominate; India Need 7 Wickets To Win
Bairstow ಅವರು Kohli ಜೊತೆಗಿನ ಕಿರಿಕ್ ಬಗ್ಗೆ ಮಾತನಾಡಿದ್ದಾರೆ | OneIndia Kannada

ಸೋಮವಾರ ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಮರುನಿಗದಿಪಡಿಸಿದ ಐದನೇ ಟೆಸ್ಟ್‌ ಪಂದ್ಯದ ನಾಲ್ಕನೇ ದಿನದಂದು ಜಸ್ಪ್ರೀತ್ ಬುಮ್ರಾ ಅವರ ಅದ್ಭುತ ಸ್ಪೆಲ್ ಹೊರತಾಗಿಯೂ, ಭಾರತದ ವಿರುದ್ಧ ಸರಣಿ ಸಮಬಲಗೊಳಿಸಲು ಇಂಗ್ಲೆಂಡ್‌ಗೆ ಕೇವಲ 119 ರನ್ ಬೇಕಿದೆ ಮತ್ತು ಕೈಯಲ್ಲಿ ಏಳು ವಿಕೆಟ್‌ಗಳಿವೆ.

ಮೊದಲ ಇನ್ನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಿದ್ದ ಭಾರತ ತಂಡ, ಎರಡನೇ ಇನ್ನಿಂಗ್ಸ್‌ನಲ್ಲಿ ಕೇವಲ 245 ರನ್ ಗಳಿಸಿ ಆಲೌಟ್ ಆಯಿತು. ಒಟ್ಟು 377 ರನ್‌ಗಳ ಗೆಲುವಿನ ಗುರಿ ನೀಡಿದ ಭಾರತಕ್ಕೆ ಈಗ ಹಿನ್ನಡೆಯಾಗಿದ್ದು, ಸೋಲಿನ ದವಡೆಗೆ ಬಂದು ನಿಂತಿದೆ.

ಜೋ ರೂಟ್ ಮತ್ತು ಜಾನಿ ಬೈರ್‌ಸ್ಟೋವ್ ಕ್ರೀಸ್‌ಗೆ ಬಲವಾಗಿ ಅಂಟಿಕೊಂಡಿದ್ದು, ಜಸ್ಪ್ರೀತ್ ಬುಮ್ರಾ ಅವರ ವೀರಾವೇಶದ ಅಲ್ಪಾವಧಿಯದ್ದಾಗಿತ್ತು. ನಾಲ್ಕನೇ ವಿಕೆಟ್‌ಗೆ 150 ರನ್‌ಗಳ ಅಜೇಯ ಜೊತೆಯಾಟವನ್ನು ನಿರ್ಮಿಸಿದ ರೂಟ್- ಬೈರ್‌ಸ್ಟೋವ್ ಜೋಡಿ, ಬರ್ಮಿಂಗ್‌ಹ್ಯಾಮ್‌ನಲ್ಲಿ ಅಂತಿಮ ದಿನದಂದು ಮರುನಿಗದಿಪಡಿಸಲಾದ ಟೆಸ್ಟ್‌ನಲ್ಲಿ ಹಿಡಿತ ಸಾಧಿಸುವ ಭಾರತದ ಯೋಜನೆಯನ್ನು ವಿಫಲಗೊಳಿಸಿದರು.

ಮುರಿಯದ ನಾಲ್ಕನೇ ವಿಕೆಟ್‌ಗೆ 150 ರನ್ ಜೊತೆಯಾಟ

ಮುರಿಯದ ನಾಲ್ಕನೇ ವಿಕೆಟ್‌ಗೆ 150 ರನ್ ಜೊತೆಯಾಟ

ಮುರಿಯದ ನಾಲ್ಕನೇ ವಿಕೆಟ್‌ಗೆ ಜೋ ರೂಟ್ (76*) ಮತ್ತು ಬೈರ್‌ಸ್ಟೋವ್ (72*) ಜೋಡಿ 150 ರನ್ ಜೊತೆಯಾಟ ನೀಡಿದ್ದು, 4ನೇ ದಿನದಾಟದ ಮುಕ್ತಾಯಕ್ಕೆ ಇಂಗ್ಲೆಂಡ್ 3 ವಿಕೆಟ್‌ಗೆ 259 ರನ್ ಗಳಿಸಿ ಸುಸ್ಥಿತಿಯಲ್ಲಿದೆ.

ಭಾರತ ನಾಯಕ ಜಸ್ಪ್ರೀತ್ ಬುಮ್ರಾ ಅವರು ಇಂಗ್ಲೆಂಡ್‌ ಪರ 46 ರನ್‌ ಗಳಿಸಿ ಬ್ಯಾಟ್ ಬೀಸುತ್ತಿದ್ದ ಝಾಕ್ ಕ್ರಾಲಿ ಪಡೆದರು ಮತ್ತು ನಂತರ ಅಂತಿಮ ಸೆಷನ್‌ನ ಮೊದಲ ಎಸೆತದಲ್ಲಿ ಒಲ್ಲಿ ಪೋಪ್ ಅವರನ್ನು ಪೆವಿಲಿಯನ್‌ಗೆ ಕಳುಹಿಸಿದರು. ಎಡ್ಜ್‌ಬಾಸ್ಟನ್‌ನಲ್ಲಿ ನಡೆದ ಸರಣಿ ನಿರ್ಣಾಯಕ ಟೆಸ್ಟ್‌ನಲ್ಲಿ ಭಾರತದ ವಿರುದ್ಧ 378 ರನ್‌ಗಳ ಬೆನ್ನಟ್ಟಿದ ಆರಂಭಿಕ ಜೋಡಿ ಕೇವಲ 21.4 ಓವರ್‌ಗಳಲ್ಲಿ 107 ರನ್‌ಗಳನ್ನು ಸೇರಿಸುವ ಮೂಲಕ ಅಲೆಕ್ಸ್ ಲೀಸ್ ಮತ್ತು ಕ್ರಾಲಿ ಇಂಗ್ಲೆಂಡ್‌ಗೆ ಅದ್ಭುತ ಆರಂಭವನ್ನು ಒದಗಿಸಿದರು.

378-ರನ್ ಗುರಿ ನಿಗದಿಪಡಿಸಿದ ಭಾರತ

378-ರನ್ ಗುರಿ ನಿಗದಿಪಡಿಸಿದ ಭಾರತ

ಇನ್ನೂ ಒಂದು ದಿನ ಉಳಿದಿರುವಾಗ ಇಂಗ್ಲೆಂಡ್ ಸರಣಿಯನ್ನು 2-2 ರಲ್ಲಿ ಸಮಗೊಳಿಸಲು ಪರಿಪೂರ್ಣ ವೇದಿಕೆಯನ್ನು ನಿರ್ಮಿಸಿಕೊಂಡಿದೆ. ಇದೇ ವೇಳೆ 2019ರ ಲೀಡ್ಸ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 362-9ರ ಹಿಂದಿನ ಯಶಸ್ವಿ ರನ್ ಚೇಸ್ ಅನ್ನು ಇದು ಮೀರಿಸಲಿದೆ. ಕಿವೀಸ್ ವಿರುದ್ಧದ ಎಲ್ಲಾ ಮೂರು ಪಂದ್ಯಗಳಲ್ಲಿ ಗೆದ್ದು, ತಾವು ಆಕ್ರಮಣಕಾರಿ ಆಟವನ್ನು ಆಡುತ್ತೇವೆ ಎಂಬುದನ್ನು ಮತ್ತೊಮ್ಮೆ ನಿರೂಪಿಸಿದೆ.

ಇದಕ್ಕೂ ಮೊದಲು ಬೆನ್ ಸ್ಟೋಕ್ಸ್ ಅವರು ತಮ್ಮ ನಾಲ್ಕು ವಿಕೆಟ್‌ಗಳ ಸಾಧನೆಯೊಂದಿಗೆ ಭಾರತದ ಬ್ಯಾಟಿಂಗ್ ಬಲವನ್ನು ಕಟ್ಟಿಹಾಕಿದರು. ಇದರಿಂದಾಗಿ ಪ್ರವಾಸಿ ಭಾರತ ತಂಡ ಕೇವಲ 245 ರನ್‌ಗಳಿಗೆ ಆಲೌಟ್ ಆಯಿತು ಮತ್ತು ಇಂಗ್ಲೆಂಡ್‌ಗೆ ನಾಲ್ಕನೇ ದಿನದಂದು 378 ರನ್‌ಗಳ ಗೆಲುವಿನ ಗುರಿಯನ್ನು ನಿಗದಿಪಡಿಸಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ರಿಷಭ್ ಪಂತ್ 58 ರನ್

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ರಿಷಭ್ ಪಂತ್ 58 ರನ್

ಮ್ಯಾಥ್ಯೂ ಪಾಟ್ಸ್ (2/50) ಮತ್ತು ಸ್ಟುವರ್ಟ್ ಬ್ರಾಡ್ (2/58) 4ನೇ ದಿನದಂದು ಭಾರತ 125/3ಕ್ಕೆ ಬ್ಯಾಟಿಂಗ್ ಪುನರಾರಂಭಿಸಿದ ನಂತರ ಮೊದಲ ಸೆಷನ್‌ನಲ್ಲಿ ವಿಕೆಟ್ ಕಳೆದಕೊಂಡರು. ಚೇತೇಶ್ವರ ಪೂಜಾರ 66 ರನ್ ಗಳಿಸಿ ಸ್ಟುವರ್ಟ್ ಬ್ರಾಡ್‌ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ನಂ.6 ರಲ್ಲಿ ಹೊರನಡೆದ ಶ್ರೇಯಸ್ ಅಯ್ಯರ್ 19 ರನ್‌ ಗಳಿಸಿದ್ದಾಗ ಪಾಟ್ಸ್ ಹಾಕಿದ ಶಾರ್ಟ್ ಬಾಲ್ ತಂತ್ರಕ್ಕೆ ವಿಕೆಟ್ ನೀಡಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದ ರಿಷಭ್ ಪಂತ್ 58 ರನ್ ಗಳಿಸಿ ರಿವರ್ಸ್ ಶಾಟ್ ಆಡಲು ಪ್ರಯತ್ನಿಸಿ ಔಟಾದರೆ, ರವೀಂದ್ರ ಜಡೇಜಾ 23 ರನ್ ಗಳಿಸಿದ್ದಾಗ ವಿಕೆಟ್ ನೀಡಿದರು. ಉಳಿದ ಬ್ಯಾಟ್ಸ್‌ಮನ್‌ಗಳಾರು ಇಂಗ್ಲೆಂಡ್ ಬೌಲಿಂಗ್‌ಗೆ ಪ್ರತಿರೋಧ ತೋರಲಿಲ್ಲ.

Story first published: Monday, July 4, 2022, 23:54 [IST]
Other articles published on Jul 4, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X