ಸ್ವಲ್ಪದರಲ್ಲೇ ವಿಶ್ವದಾಖಲೆ ಮಿಸ್ ಮಾಡಿಕೊಂಡ ಜಾಸ್ ಬಟ್ಲರ್‌: ABD ರೆಕಾರ್ಡ್‌ ಸೇಫ್!

ಆಮ್ಸ್ಟೆಲ್ವೀನ್ ವಿಆರ್‌ಎ ಕ್ರಿಕೆಟ್ ಮೈದಾನದಲ್ಲಿ ನಡೆಯುತ್ತಿರುವ ನೆದರ್ಲೆಂಡ್ಸ್‌ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ವಿಶ್ವದಾಖಲೆಯ ರನ್‌ಗಳನ್ನ ಕಲೆಹಾಕಿದ್ದು, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾಸ್ ಬಟ್ಲರ್‌ ಸ್ವಲ್ಪದರಲ್ಲೇ ವಿಶ್ವದಾಖಲೆಯನ್ನ ಮಿಸ್ ಮಾಡಿಕೊಂಡಿದ್ದಾರೆ.

ಮೈದಾನದ ಮೂಲೆ ಮೂಲೆಗೆ ಚೆಂಡಿನ ದರ್ಶನ ಮಾಡಿಸಿದ ಜಾಸ್ ಬಟ್ಲರ್ 70 ಎಸೆತಗಳಲ್ಲಿ ಅಜೇಯ 162 ರನ್‌ಗಳನ್ನ ಸಿಡಿಸಿದ್ರು. 231.43 ರ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡಿದ ಜಾಸ್ ಬಟ್ಲರ್ ಬ್ಯಾಟ್‌ನಿಂದ 7 ಬೌಂಡರಿ ಮತ್ತು 14 ಅಮೋಘ ಸಿಕ್ಸರ್‌ಗಳು ಸಿಡಿದಿವೆ.

ಅಂತಿಮ ಎಸೆತದವರೆಗೂ ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆಗೂಡಿ ಇಂಗ್ಲೆಂಡ್ ತಂಡದ ಸ್ಕೋರನ್ನು 500ರ ಗಡಿ ಸಮೀಪಿಸಿದ ಜಾಸ್ ಬಟ್ಲರ್ ಸ್ವಲ್ಪದರಲ್ಲೇ ವಿಶ್ವದಾಖಲೆಯಿಂದ ವಂಚಿತರಾದರು.

65 ಎಸೆತಗಳಲ್ಲಿ 150 ರನ್ ದಾಖಲಿಸಿದ ಬಟ್ಲರ್

65 ಎಸೆತಗಳಲ್ಲಿ 150 ರನ್ ದಾಖಲಿಸಿದ ಬಟ್ಲರ್

65 ಎಸೆತಗಳಲ್ಲಿ 150 ರನ್ ಸಿಡಿಸಿದ ಬಟ್ಲರ್‌ ಏಕದಿನ ಕ್ರಿಕೆಟ್‌ನಲ್ಲಿ ವೇಗದ 150 ರನ್‌ ಸಿಡಿಸಿದ ಎರಡನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಆದ್ರೆ 64 ಎಸೆತಗಳಲ್ಲಾದ್ರೂ ಬಟ್ಲರ್ ಈ ಸಾಧನೆ ಮಾಡಿದ್ರೆ, ದಕ್ಷಿಣ ಆಫ್ರಿಕಾದ ಸೂಪರ್ ಸ್ಟಾರ್ ಎಬಿ ಡಿವಿಲಿಯರ್ಸ್ ದಾಖಲೆಗಾದ್ರೂ ಸರಿಗಟ್ಟುತ್ತಿದ್ರು.

2015ರಲ್ಲಿ ಸೂಪರ್‌ಸ್ಪೋರ್ಟ್‌ ಪಾರ್ಕ್‌ನಲ್ಲಿ ನಡೆದ ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಪಂದ್ಯದಲ್ಲಿ ಎಬಿ ಡಿವಿಲಿಯರ್ಸ್ ವೇಗದ ಶತಕ ಹಾಗೂ 150ರನ್ ದಾಖಲಿಸಿದ್ದ ಎಬಿಡಿ 64 ಎಸೆತಗಳಲ್ಲಿ ಈ ಗಡಿಯನ್ನು ಮುಟ್ಟಿದರು. ಇದಕ್ಕೂ ಮೊದಲು ಕೇವಲ 31 ಎಸೆತಗಳಲ್ಲಿ ಶತಕದ ಗಡಿದಾಟಿದ್ದರು.

ಏಕದಿನ ಕ್ರಿಕೆಟ್‌ನಲ್ಲಿ 498 ರನ್: ಮುಂದುವರಿದ ಬಟ್ಲರ್ ಅಬ್ಬರ, ತನ್ನದೇ ವಿಶ್ವದಾಖಲೆ ಮುರಿದ ಇಂಗ್ಲೆಂಡ್

ಕೇವಲ ಎರಡು ಎಸೆತಗಳಲ್ಲಿ ವಿಶ್ವದಾಖಲೆ ಮಿಸ್

ಕೇವಲ ಎರಡು ಎಸೆತಗಳಲ್ಲಿ ವಿಶ್ವದಾಖಲೆ ಮಿಸ್

ಆದ್ರೆ ಕೇವಲ ಎರಡು ಎಸೆತಗಳಲ್ಲಿ ವಿಶ್ವದಾಖಲೆಯ ಮಿಸ್ ಮಾಡಿಕೊಂಡ ಬಟ್ಲರ್ 65 ಎಸೆತಗಳಲ್ಲಿ 150ರನ್ ಕಲೆಹಾಕಿದರು. ಅಂತಿಮವಾಗಿ 162ರನ್ ಕಲೆಹಾಕಿ ಅಜೇಯರಾಗಿ ಉಳಿದ್ರು. ಐಪಿಎಲ್ 2022ರ ಸೀಸನ್‌ನಲ್ಲಿ ನಾಲ್ಕು ಶತಕ ದಾಖಲಿಸಿ ಆರೆಂಜ್ ಕ್ಯಾಪ್ ಗೆದ್ದಿದ್ದ ಬಟ್ಲರ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲೂ ತಮ್ಮ ಭರ್ಜರಿ ಪರ್ಫಾಮೆನ್ಸ್ ಮುಂದುವರಿಸಿದ್ದಾರೆ.

47 ಎಸೆತಗಳಲ್ಲಿ ಶತಕ ಸಿಡಿಸಿ ಮಿಂಚಿದ ಜಾಸ್ ಬಟ್ಲರ್ ಇಂಗ್ಲೆಂಡ್ ಪರ ವೇಗದ ಶತಕ ಸಿಡಿಸಿದ ಎರಡನೇ ಬ್ಯಾಟರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಮೊದಲ ಮೂರು ಸ್ಥಾನಗಳಲ್ಲಿ ಬಟ್ಲರ್ ಆಕ್ರಮಿಸಿಕೊಂಡಿದ್ದಾರೆ. ಪಾಕಿಸ್ತಾನ ಪರ ಕೇವಲ 46 ಎಸೆತಗಳಲ್ಲಿ ಶತಕ ದಾಖಲಿಸಿರುವ ಬಟ್ಲರ್ ವೇಗದ ಶತಕ ಸಿಡಿಸಿದ್ದು, ಇಂದು ದೇಶದ ಪರ ಎರಡನೇ ವೇಗದ ಶತಕ ಮುಟ್ಟಿದ್ರು. ಇದಾದ ಬಳಿಕ ಪಾಕಿಸ್ತಾನ ವಿರುದ್ಧವೇ ಬಟ್ಲರ್ 50 ಎಸೆತಗಳಲ್ಲಿ ಮೂರಂಕಿ ಗಡಿ ದಾಟಿದ್ದಾರೆ.

ಏಕದಿನ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ವೇಗದ ಅರ್ಧಶತಕ ದಾಖಲಿಸಿದ ಲಿಯಾಮ್ ಲಿವಿಂಗ್‌ಸ್ಟೋನ್

Virat Kohli & Babar Azam ಒಂದೇ ತಂಡದಲ್ಲಿ ಆಡೋದು ಗ್ಯಾರೆಂಟಿ | *Cricket | Oneindia Kannada
ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ದಾಖಲೆ ಮುರಿದ ಇಂಗ್ಲೆಂಡ್

ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ದಾಖಲೆ ಮುರಿದ ಇಂಗ್ಲೆಂಡ್

ಬಟ್ಲರ್ ಅಷ್ಟೇ ಅಲ್ಲದೆ ಫಿಲಿಪ್ ಸಾಲ್ಟ್‌ 122, ಡೇವಿಡ್ ಮಲನ್ 125 ರನ್ ಕಲೆಹಾಕುವ ಮೂಲಕ ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ತನ್ನದೇ ದಾಖಲೆ ಮುರಿದು ಗರಿಷ್ಠ ಮೊತ್ತ ಕಲೆಹಾಕಿತು. ಇಂಗ್ಲೆಂಡ್ ನಿಗದಿತ 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 498 ರನ್ ಕಲೆಹಾಕಿದೆ.

ಉಭಯ ತಂಡಗಳ ಪ್ಲೇಯಿಂಗ್ 11

ನೆದರ್ಲೆಂಡ್

ವಿಕ್ರಮ್‌ಜಿತ್ ಸಿಂಗ್, ಮ್ಯಾಕ್ಸ್ ಓಡೌಡ್, ಮೂಸಾ ಅಹ್ಮದ್, ಬಾಸ್ ಡಿ ಲೀಡೆ, ಟಾಮ್ ಕೂಪರ್, ಸ್ಕಾಟ್ ಎಡ್ವರ್ಡ್ಸ್ (ವಿಕೆಟ್ ಕೀಪರ್), ಪೀಟರ್ ಸೀಲಾರ್ (ನಾಯಕ), ಲೋಗನ್ ವ್ಯಾನ್ ಬೀಕ್, ಫಿಲಿಪ್ ಬೋಯಿಸೆವೈನ್, ಶೇನ್ ಸ್ನೇಟರ್, ಆರ್ಯನ್ ದತ್

ಇಂಗ್ಲೆಂಡ್

ಜೇಸನ್ ರಾಯ್, ಫಿಲಿಪ್ ಸಾಲ್ಟ್, ಡೇವಿಡ್ ಮಲನ್, ಇಯಾನ್ ಮಾರ್ಗನ್ (ನಾಯಕ), ಜೋಸ್ ಬಟ್ಲರ್ (ವಿಕೆಟ್ ಕೀಪರ್), ಲಿಯಾಮ್ ಲಿವಿಂಗ್‌ಸ್ಟೋನ್, ಮೊಯಿನ್ ಅಲಿ, ಸ್ಯಾಮ್ ಕರ್ರಾನ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ರೀಸ್ ಟೋಪ್ಲಿ

For Quick Alerts
Subscribe Now
For Quick Alerts
ALLOW NOTIFICATIONS
For Daily Alerts
Story first published: Friday, June 17, 2022, 19:54 [IST]
Other articles published on Jun 17, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X