ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG vs NED: ಪಿಚ್ ಆಚೆ ಬಂದ ಎಸೆತಕ್ಕೆ ಬೃಹತ್ ಸಿಕ್ಸರ್ ಚಚ್ಚಿದ ಬಟ್ಲರ್; ವಿಡಿಯೋ ವೈರಲ್

ENG vs NED: Jos Buttler smashed sixer for double bounce delivery in the 3rd ODI

ಇಂಗ್ಲೆಂಡ್ ಏಕ ಕಾಲಕ್ಕೆ ಎರಡು ವಿವಿಧ ದೇಶಗಳ ಜತೆ ಅಂತರರಾಷ್ಟ್ರೀಯ ಕ್ರಿಕೆಟ್ ಸರಣಿಗಳನ್ನು ಆಡಿದೆ. ಒಂದೆಡೆ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದ್ದರೆ, ಮತ್ತೊಂದೆಡೆ ಇದೇ ಸಮಯದಲ್ಲಿ ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ನೆದರ್ಲೆಂಡ್ಸ್ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸಿ ಸರಣಿಯಲ್ಲಿ ವೈಟ್‌ವಾಷ್ ಸಾಧನೆ ಮಾಡಿದೆ.

ಒಂದೇ ಸಿನಿಮಾಗಾಗಿ ಕೈಜೋಡಿಸಲಿದ್ದಾರೆ ಧೋನಿ - ತಮಿಳು ನಟ ವಿಜಯ್; ನಾಯಕಿ ಈ ಖ್ಯಾತ ನಟಿ: ವರದಿಒಂದೇ ಸಿನಿಮಾಗಾಗಿ ಕೈಜೋಡಿಸಲಿದ್ದಾರೆ ಧೋನಿ - ತಮಿಳು ನಟ ವಿಜಯ್; ನಾಯಕಿ ಈ ಖ್ಯಾತ ನಟಿ: ವರದಿ

ಹೌದು, ನೆದರ್ಲೆಂಡ್ಸ್ ಪ್ರವಾಸವನ್ನು ಕೈಗೊಂಡಿದ್ದ ಇಂಗ್ಲೆಂಡ್ ಮೂರು ಪಂದ್ಯಗಳ ಏಕದಿನ ಸರಣಿಯ ಎಲ್ಲಾ ಪಂದ್ಯಗಳಲ್ಲಿಯೂ ಗೆದ್ದು ಬೀಗಿದ್ದು, ನೆದರ್ಲೆಂಡ್ಸ್ ತವರಿನಲ್ಲಿಯೇ ಮುಖಭಂಗಕ್ಕೆ ಒಳಗಾಗಿದೆ. ಇನ್ನು ಜೂನ್ 22ರ ಬುಧವಾರದಂದು ನೆದರ್ಲೆಂಡ್ಸ್‌ನ ಆಮ್ಸ್ಟೆಲ್ವೀನ್‌ನ ವಿ ಆರ್ ಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಇತ್ತಂಡಗಳ ನಡುವಿನ ತೃತೀಯ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ವಿಭಿನ್ನ ಸಿಕ್ಸರ್ ಬಾರಿಸುವ ಮೂಲಕ ಸುದ್ದಿಯಾಗಿದ್ದಾರೆ.

2013ರ ಈ ದಿನ ಮೆಲುಕು ಹಾಕಿದ ಐಸಿಸಿ: ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!2013ರ ಈ ದಿನ ಮೆಲುಕು ಹಾಕಿದ ಐಸಿಸಿ: ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಭಾರತ!

ಹೌದು, ನೆದರ್ಲೆಂಡ್ಸ್ ತಂಡ ನೀಡಿದ್ದ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಪರ ಜೋಸ್ ಬಟ್ಲರ್ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ಜೋಸ್ ಬಟ್ಲರ್ ಇನ್ನಿಂಗ್ಸ್‌ನ 29ನೇ ಓವರ್‌ನಲ್ಲಿ ಪಾಲ್ ವ್ಯಾನ್ ಮೀಕೆರೆನ್ ಎಸೆತಕ್ಕೆ ಭರ್ಜರಿ ಎರಡು ಬೌನ್ಸ್ ಎಸೆತವೊಂದಕ್ಕೆ ಸಿಕ್ಸರ್ ಚಚ್ಚಿದ್ದಾರೆ. ಮೀಕೆರೆನ್ ಎಸೆದ ಎಸೆತ ಎರಡು ಬೌನ್ಸ್ ಆಗಿತ್ತು ಹಾಗೂ ಎರಡನೇ ಬೌನ್ಸ್ ಪಿಚ್‌ನಿಂದ ಆಚೆ ಬಿದ್ದಿತ್ತು. ಆದರೆ ಈ ಎಸೆತವನ್ನು ಬಿಡದ ಜೋಸ್ ಬಟ್ಲರ್ ದೊಡ್ಡ ಹೊಡೆತ ಬಾರಿಸಿ ಚೆಂಡನ್ನು ಸಿಕ್ಸರ್‌ಗೆ ಅಟ್ಟಿದರು. ಹೀಗೆ ಜೋಸ್ ಬಟ್ಲರ್ ಬಹಳ ಅಪರೂಪದ ಎಸೆತಕ್ಕೆ ಸಿಕ್ಸರ್ ಬಾರಿಸಿರುವ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆ ವಿಡಿಯೋ ಮುಂದೆ ಇದೆ ವೀಕ್ಷಿಸಿ..

ಪಂದ್ಯ ಗೆದ್ದ ಇಂಗ್ಲೆಂಡ್

ಪಂದ್ಯ ಗೆದ್ದ ಇಂಗ್ಲೆಂಡ್

ಇನ್ನು ಆಮ್ಸ್ಟೆಲ್ವೀನ್‌ನ ವಿ ಆರ್ ಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅತಿಥೇಯ ನೆದರ್ಲೆಂಡ್ಸ್ 49.2 ಓವರ್‌ಗಳಲ್ಲಿ 244 ರನ್ ಕಲೆಹಾಕಿ ಆಲ್‌ಔಟ್ ಆಯಿತು. ಇತ್ತ ಈ ಸಾಮಾನ್ಯ ಗುರಿಯನ್ನು ಬೆನ್ನತ್ತಿದ ಇಂಗ್ಲೆಂಡ್ ಕೇವಲ 30.1 ಓವರ್‌ಗಳಲ್ಲಿಯೇ 2 ವಿಕೆಟ್ ನಷ್ಟಕ್ಕೆ 248 ರನ್ ಚಚ್ಚಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿ ಸರಣಿಯಲ್ಲಿ ವೈಟ್‌ವಾಷ್ ಸಾಧನೆ ಮಾಡಿತು.

ಜೇಸನ್ ರಾಯ್ ಪಂದ್ಯಶ್ರೇಷ್ಠ

ಜೇಸನ್ ರಾಯ್ ಪಂದ್ಯಶ್ರೇಷ್ಠ

ಇನ್ನು ಈ ಪಂದ್ಯದಲ್ಲಿ ಇಂಗ್ಲೆಂಡ್ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಜೇಸನ್ ರಾಯ್ 86 ಎಸೆತಗಳನ್ನು ಎದುರಿಸಿ 101 ರನ್ ಚಚ್ಚಿ ಶತಕದ ಸಂಭ್ರಮ ಆಚರಿಸಿಕೊಂಡು ಅಜೇಯರಾಗಿ ಉಳಿದುಕೊಂಡರು. ಜೇಸನ್ ರಾಯ್ ಅವರ ಈ ಶತಕದಲ್ಲಿ 15 ಬೌಂಡರಿಗಳೂ ಸೇರಿವೆ. ಹೀಗೆ ಶತಕ ಸಿಡಿಸಿ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಜೇಸನ್ ರಾಯ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಟೀಮ್ ಇಂಡಿಯಾಗೆ ಐಸಿಸಿಯಿಂದ ಖಡಕ್ ಎಚ್ಚರಿಕೆ | *Cricket | OneIndia Kannada
ಜೋಸ್ ಬಟ್ಲರ್ ಸರಣಿ ಶ್ರೇಷ್ಠ

ಜೋಸ್ ಬಟ್ಲರ್ ಸರಣಿ ಶ್ರೇಷ್ಠ

ಈ ಪಂದ್ಯದಲ್ಲಿ 64 ಎಸೆತಗಳಲ್ಲಿ ಅಜೇಯ 86 ರನ್ ಚಚ್ಚಿದ ಜೋಸ್ ಬಟ್ಲರ್ ಮೊದಲ ಏಕದಿನ ಪಂದ್ಯದಲ್ಲಿ 70 ಎಸೆತಗಳಲ್ಲಿ ಅಜೇಯ 162 ರನ್ ಚಚ್ಚಿ ಅಬ್ಬರಿಸಿದ್ದರು. ಹೀಗೆ ಸರಣಿಯ ಎರಡು ಪಂದ್ಯಗಳಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ.

Story first published: Thursday, June 23, 2022, 16:46 [IST]
Other articles published on Jun 23, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X