ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

498 ರನ್ ಚಚ್ಚಿ ಇತಿಹಾಸ ಬರೆದ ಇಂಗ್ಲೆಂಡ್; ಏಕದಿನ ಕ್ರಿಕೆಟ್‍ನಲ್ಲಿ ಹೆಚ್ಚು ರನ್ ಕಲೆಹಾಕಿರುವ ತಂಡಗಳ ಪಟ್ಟಿ

ENG vs NED: Top 5 List of teams with most runs total in ODI cricket

ವಿಶ್ವ ಕ್ರಿಕೆಟ್‍ನಲ್ಲಿ ಸದ್ಯ ಇಂಗ್ಲೆಂಡ್ ಅಬ್ಬರಿಸಿ ಬೊಬ್ಬಿರಿಯುತ್ತಿದೆ. ಒಂದೆಡೆ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2 ಪಂದ್ಯಗಳನ್ನು ಗೆದ್ದು ಬೀಗಿರುವ ಇಂಗ್ಲೆಂಡ್ ಈಗಾಗಲೇ ಸರಣಿಯನ್ನು ಕೈವಶಪಡಿಸಿಕೊಂಡಿದ್ದು, ಉಳಿದ ಪಂದ್ಯವನ್ನೂ ಗೆದ್ದು ವೈಟ್ ವಾಶ್ ಬಳಿಯುವ ಹಾದಿಯಲ್ಲಿದೆ.

IND vs SA: ವಿರಾಟ್ ಕೊಹ್ಲಿಯ ಈ ದಾಖಲೆ ಬ್ರೇಕ್ ಮಿಸ್ ಮಾಡಿದ ಇಶಾನ್ ಕಿಶನ್IND vs SA: ವಿರಾಟ್ ಕೊಹ್ಲಿಯ ಈ ದಾಖಲೆ ಬ್ರೇಕ್ ಮಿಸ್ ಮಾಡಿದ ಇಶಾನ್ ಕಿಶನ್

ಮತ್ತೊಂದೆಡೆ ಇದೇ ಸಮಯದಲ್ಲಿ ಮತ್ತೊಂದು ಇಂಗ್ಲೆಂಡ್ ತಂಡ ನೆದರ್ಲೆಂಡ್ಸ್ ಪ್ರವಾಸವನ್ನು ಕೈಗೊಂಡಿದ್ದು ನೆದರ್ಲೆಂಡ್ಸ್ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾಗವಹಿಸುತ್ತಿದೆ. ಈ ಸರಣಿಯ ಪ್ರಥಮ ಪಂದ್ಯ ನಿನ್ನೆಯಷ್ಟೆ ( ಜೂನ್ 17 ) ಅಮ್ಸ್ಟೆಲ್ವೀನ್‌ನ ವಿ ಆರ್ ಎ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡ ಬೌಲಿಂಗ್ ಆಯ್ದುಕೊಂಡು ಇಂಗ್ಲೆಂಡ್ ತಂಡಕ್ಕೆ ಮೊದಲು ಬ್ಯಾಟಿಂಗ್ ಮಾಡುವ ಅವಕಾಶವನ್ನು ನೀಡಿತು.

ರಣಜಿ ಸೆಮಿಫೈನಲ್‌: ಬೆಂಗಾಲ್ ಗೆಲುವಿಗೆ 254ರನ್ ಬಾಕಿ, ಮುಂಬೈಗೆ 662ರನ್ ಬೃಹತ್ ಮುನ್ನಡೆರಣಜಿ ಸೆಮಿಫೈನಲ್‌: ಬೆಂಗಾಲ್ ಗೆಲುವಿಗೆ 254ರನ್ ಬಾಕಿ, ಮುಂಬೈಗೆ 662ರನ್ ಬೃಹತ್ ಮುನ್ನಡೆ

ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಬ್ಬರಿಸಿ ಬೊಬ್ಬಿರಿದು ವಿಶ್ವ ದಾಖಲೆ ನಿರ್ಮಿಸಿದೆ. 50 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ ಇಂಗ್ಲೆಂಡ್ 498 ರನ್ ಕಲೆಹಾಕಿ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ತಂಡ ಎಂಬ ನೂತನ ವಿಶ್ವ ದಾಖಲೆ ಬರೆದಿದೆ. ಇಂಗ್ಲೆಂಡ್ ಪರ ಜೇಸನ್ ರಾಯ್ 1 ಮತ್ತು ನಾಯಕ ಇಯಾನ್ ಮಾರ್ಗನ್ 0 ಗಳಿಸಿದ್ದು ಬಿಟ್ಟರೆ ತಂಡದ ಉಳಿದ 4 ಆಟಗಾರರ ಪೈಕಿ ಫಿಲ್ ಸಾಲ್ಟ್, ಡೇವಿಡ್ ಮಲನ್ ಮತ್ತು ಜೋಸ್ ಬಟ್ಲರ್ ಶತಕಗಳನ್ನು ಬಾರಿಸಿದರೆ, ಲಿಯಾಮ್ ಲಿವಿಂಗ್ ಸ್ಟನ್ ಅಬ್ಬರದ ಅರ್ಧಶತಕ ಬಾರಿಸಿ ಮಿಂಚಿದರು. ಈ ಮೂಲಕ ಇಂಗ್ಲೆಂಡ್ ಬೃಹತ್ ಮೊತ್ತ ಗಳಿಸಿ ವಿಶ್ವ ದಾಖಲೆ ಬರೆದು ಆತಿಥೇಯ ನೆದರ್ಲೆಂಡ್ಸ್ ತಂಡವನ್ನು 266 ರನ್‌ಗಳಿಗೆ ಕಟ್ಟಿಹಾಕಿ 232 ರನ್‌ಗಳ ಬೃಹತ್ ಗೆಲುವನ್ನು ದಾಖಲಿಸಿತು. ಹೀಗೆ ಏಕದಿನ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ರನ್ ಕಲೆಹಾಕಿದ ತಂಡಗಳ ಟಾಪ್ 5 ಪಟ್ಟಿ ಹೇಗಿದೆ ಎಂಬುದನ್ನು ಈ ಕೆಳಕಂಡಂತೆ ಕಾಣಬಹುದು.

ಟಾಪ್ 5 ಪಟ್ಟಿ

ಟಾಪ್ 5 ಪಟ್ಟಿ

ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ತಂಡಗಳ ಟಾಪ್ 5 ಪಟ್ಟಿ ಈ ಕೆಳಕಂಡಂತಿದೆ

1. ಇಂಗ್ಲೆಂಡ್ vs ನೆದರ್ಲೆಂಡ್ಸ್ - 498/4 - 19 ಜೂನ್ 2022

2. ಇಂಗ್ಲೆಂಡ್ vs ‌ಆಸ್ಟ್ರೇಲಿಯಾ - 481/6 - 17 ಜೂನ್ 2018

3. ಇಂಗ್ಲೆಂಡ್ vs ಪಾಕಿಸ್ತಾನ - 444/3 - 30 ಆಗಸ್ಟ್ 2016

4. ಶ್ರೀಲಂಕಾ vs ನೆದರ್ಲೆಂಡ್ಸ್‌ - 443/9 - 4 ಜುಲೈ 2006

5. ದಕ್ಷಿಣ ಆಫ್ರಿಕಾ vs ವೆಸ್ಟ್ ಇಂಡೀಸ್‌ - 439/2 - 18 ಜನವರಿ 2015

ತನ್ನದೇ ದಾಖಲೆ ಬರೆದ ಇಂಗ್ಲೆಂಡ್

ತನ್ನದೇ ದಾಖಲೆ ಬರೆದ ಇಂಗ್ಲೆಂಡ್

ನಿನ್ನೆ ನೆದರ್ಲೆಂಡ್ಸ್‌ ವಿರುದ್ಧ ಅಬ್ಬರಿಸಿದ ಇಂಗ್ಲೆಂಡ್ ಈ ಹಿಂದೆ ತಾನೇ ನಿರ್ಮಿಸಿದ್ದ ದಾಖಲೆಯನ್ನು ಮುರಿದಿದೆ. 2018ರಲ್ಲಿ ಆಸ್ಟ್ರೇಲಿಯಾ ವಿರುದ್ಧ 481 ರನ್ ಬಾರಿಸಿ ಏಕದಿನ ಕ್ರಿಕೆಟ್‍ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ್ದ ಇಂಗ್ಲೆಂಡ್ ಇದೀಗ 498 ರನ್ ಕಲೆಹಾಕಿ ತನ್ನ ಈ ಹಳೆಯ ದಾಖಲೆ ಮುರಿದು ನೂತನ ವಿಶ್ವದಾಖಲೆ ಬರೆದಿದೆ.

ಎಷ್ಟೇ ಪರ್ಫಾಮ್ ಮಾಡಿದ್ರು ಬಿಸಿಸಿಐ ಕಣ್ಣಿಗೆ ಬೀಳೋದು ಕಷ್ಟ | *Cricket | OneIndia Kannada
ಶತಕ ಬಾರಿಸಿದ ಮೂವರು

ಶತಕ ಬಾರಿಸಿದ ಮೂವರು

1.3 ಓವರ್‌ಗೆ 1 ರನ್ ಕಲೆಹಾಕಿ 1 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್ ಆರಂಭಿಕ ‌ಆಘಾತ ಅನುಭವಿಸಿತ್ತು. ನಂತರ ಅಬ್ಬರಿಸಿದ ಇಂಗ್ಲೆಂಡ್‌ನ ಆರಂಭಿಕ ಆಟಗಾರ ಫಿಲಿಫ್ ಸಾಲ್ಟ್ 93 ಎಸೆತಗಳಲ್ಲಿ 122 ರನ್, ಡೇವಿಡ್ ಮಲನ್ 109 ಎಸೆತಗಳಲ್ಲಿ 125 ರನ್ ಮತ್ತು ಜೋಸ್ ಬಟ್ಲರ್ 70 ಎಸೆತಗಳಲ್ಲಿ ಅಜೇಯ 162 ರನ್ ಚಚ್ಚಿ ಅಬ್ಬರಿಸಿದರು. ಇನ್ನುಳಿದಂತೆ ಲಿಯಾಮ್ ಲಿವಿಂಗ್ ಸ್ಟನ್ 22 ಎಸೆತಗಳಲ್ಲಿ ಅಜೇಯ 66 ರನ್ ಗಳಿಸಿದರು.

Story first published: Saturday, June 18, 2022, 9:43 [IST]
Other articles published on Jun 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X