ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Eng vs NZ 3rd Test: ಪಂದ್ಯಕ್ಕೆ ಮಳೆ ಕಾಟ, ಸಂಕಷ್ಟದಲ್ಲಿ ನ್ಯೂಜಿಲೆಂಡ್

NZ vs Eng

ಹೆಡ್ಡಿಂಗ್ಲಿಯ ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಅಂತಿಮ ದಿನದಾಟದಲ್ಲಿ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಇಂಗ್ಲೆಂಡ್ ಹಿಡಿತ ಸಾಧಿಸಿದೆ. ಇಂಗ್ಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ ಕಿವೀಸ್ ತಂಡವು ಎರಡನೇ ಇನ್ನಿಂಗ್ಸ್‌ ಐದು ವಿಕೆಟ್ ನಷ್ಟಕ್ಕೆ 168ರನ್ ಕಲೆಹಾಕಿದ್ದು, 137ರನ್‌ಗಳ ಮುನ್ನಡೆಯನ್ನ ಪಡೆದಿದೆ.

ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್ ಸ್ಕೋರ್ 329ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಎದುರಾಳಿ ತಂಡದ ಬೌಲರ್ ಟ್ರೆಂಟ್ ಬೌಲ್ಟ್‌ ದಾಳಿಗೆ ತತ್ತರಿಸಿ ಹೋಗಿತ್ತು ಆದ್ರೆ ಎರಡು ಮತ್ತು ಮೂರನೇ ದಿನದಾಟದಲ್ಲಿ ಅಬ್ಬರಿಸಿದ ಜಾನಿ ಬೈಸ್ಟ್ರೋವ್ ಪಂದ್ಯದ ಗತಿಯನ್ನೇ ಬದಲಿಸಿದ್ದಾರೆ.

ಇಂಗ್ಲೆಂಡ್‌ಗೆ 31ರನ್‌ಗಳ ಮುನ್ನಡೆ

ಇಂಗ್ಲೆಂಡ್‌ಗೆ 31ರನ್‌ಗಳ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ 55ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಜಾನಿ ಬೈಸ್ಟ್ರೋವ್ 162, ಜೇಮಿ ಓವರ್ಟನ್ 97ರನ್‌ಗಳ ನೆರವಿನಿಂದ 360ರನ್ ಕಲೆಹಾಕಿತು. ಜೊತೆಗೆ ಅಮೂಲ್ಯವಾದ 31ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತು. ಒಂದು ಹಂತದಲ್ಲಿ ಹೀನಾಯ ಕುಸಿತ ಕಂಡಿದ್ದ ತಂಡಕ್ಕೆ ಜಾನಿ ಬೈಸ್ಟ್ರೋವ್ ಆಧಾರವಾದರು. ಹೀಗಾಗಿ ಇಂಗ್ಲೆಂಡ್ ಆಶ್ಚರ್ಯಕರ ರೀತಿಯಲ್ಲಿ ಅದ್ಭುತ ಮುನ್ನಡೆ ಪಡೆಯಿತು.

ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್‌ 4, ಟಿಮ್ ಸೌಥಿ 3, ವ್ಯಾಗ್ನರ್ 2, ಬ್ರೇಸ್‌ವೆಲ್ 1 ವಿಕೆಟ್ ಪಡೆದರು.

ಕೊಹ್ಲಿ, ಜಡ್ಡು, ಅಯ್ಯರ್ ಅರ್ಧಶತಕ, ಲೀಸೆಸ್ಟರ್‌ಶೈರ್‌ ವಿರುದ್ಧ ಭಾರತಕ್ಕೆ 366ರನ್‌ಗಳ ಮುನ್ನಡೆ

ಟಾಮ್ ಲಥಾಮ್ ಅರ್ಧಶತಕ, ಮತ್ತೆ ಕುಸಿದ ಕಿವೀಸ್

ಟಾಮ್ ಲಥಾಮ್ ಅರ್ಧಶತಕ, ಮತ್ತೆ ಕುಸಿದ ಕಿವೀಸ್

ಇದಕ್ಕೆ ಉತ್ತರವಾಗಿ ಎರಡನೇ ಇನ್ನಿಂಗ್ಸ್‌ ಆರಂಭಿಸಿರುವ ನ್ಯೂಜಿಲೆಂಡ್ ಟೀ ವಿರಾಮದ ವೇಳೆಗೆ ಎರಡನೇ ಇನ್ನಿಂಗ್ಸ್‌ 1 ವಿಕೆಟ್ ನಷ್ಟಕ್ಕೆ 125 ರನ್ ಕಲೆಹಾಕಿತು. ಆರಂಭಿಕ ಬ್ಯಾಟರ್ ವಿಲ್ ಯಂಗ್ ಬೇಗನೆ ಔಟಾದ ಬಳಿಕ ಎರಡನೇ ವಿಕೆಟ್‌ಗೆ ಟಾಮ್ ಲಥಾಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ತಾಳ್ಮೆಯುತ ಇನ್ನಿಂಗ್ಸ್‌ ಕಟ್ಟಿದರು.

ಟಾಮ್ ಲಥಾಮ್ 100 ಎಸೆತಗಳನ್ನ ಎದುರಿಸಿ 76ರನ್ ಕಲೆಹಾಕಿ ಔಟಾದ್ರೆ, ಇದ್ರ ನಂತರದಲ್ಲಿ ಡೆವೊನ್ ಕಾನ್ವೆ 11, ನಾಯಕ ಕೇನ್ ವಿಲಿಯಮ್ಸನ್ 48, ಹೆನ್ರಿ ನಿಕೋಲ್ಸ್ 7ರನ್‌ಗಳಿಸಿ ವಿಕೆಟ್ ಒಪ್ಪಿಸಿದ್ರು.

Eng vs NZ 3ನೇ ಟೆಸ್ಟ್‌: ಶೇನ್ ವಾರ್ನ್ ಕುರಿತ ಜಾಹೀರಾತು ಪ್ರಸಾರ, ಅಭಿಮಾನಿಗಳ ಆಕ್ರೋಶ

ಅಂತಿಮ ಸೆಷನ್‌ನಲ್ಲಿ ಮಳೆ ಅಡ್ಡಿ, ಸಂಕಷ್ಟದಲ್ಲಿ ನ್ಯೂಜಿಲೆಂಡ್

ಅಂತಿಮ ಸೆಷನ್‌ನಲ್ಲಿ ಮಳೆ ಅಡ್ಡಿ, ಸಂಕಷ್ಟದಲ್ಲಿ ನ್ಯೂಜಿಲೆಂಡ್

ಮೂರನೇ ದಿನದಾಟದ ಅಂತಿಮ ಸೆಷನ್‌ಗೆ ಮಳೆ ಅಡ್ಡಿಪಡಿಸಿತು. ಆದ್ರೆ ಅದಕ್ಕೂ ಮೊದಲೇ ನ್ಯೂಜಿಲೆಂಡ್ ಇಂಗ್ಲೆಂಡ್ ದಾಳಿಗೆ ತತ್ತರಿಸಿದೆ. 168ರನ್‌ಗಳಿಸಿ ಐದು ವಿಕೆಟ್ ಕಳೆದುಕೊಂಡಿರುವ ಕಿವೀಸ್ 137ರನ್‌ಗಳ ಮುನ್ನಡೆ ಪಡೆದಿದೆ.

ಡೆರಿಲ್ ಮಿಚೆಲ್ ಅಜೇಯ 4, ಟಾಮ್ ಬ್ಲಂಡೆಲ್ ಅಜೇಯ 5 ರನ್ ಕಲೆಹಾಕಿ ನಾಲ್ಕನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಆದ್ರೆ 137ರನ್‌ಗಳಷ್ಟೇ ಮುನ್ನಡೆ ಸಾಧಿಸಿರುವ ಕಿವೀಸ್ ಪಡೆಯು ಇನ್ನೂ ಎರಡು ದಿನಗಳು ಟೆಸ್ಟ್ ಬಾಕಿ ಇರುವುದರಿಂದ ಬೃಹತ್ ಲೀಡ್ ಪಡೆಯಬೇಕಾದ ಅನಿವಾರ್ಯತೆ ಇದೆ. ಆದ್ರೆ ಬಹುತೇಕ ಬ್ಯಾಟರ್‌ಗಳು ಈಗಾಗಲೇ ಪೆವಿಲಿಯನ್ ಸೇರಿರುವುದರಿಂದ ನ್ಯೂಜಿಲೆಂಡ್ ಮತ್ತೊಂದು ಪಂದ್ಯ ಸೋತು ವೈಟ್‌ವಾಶ್ ಮುಖಭಂಗ ಎದುರಿಸುವ ಭಯ ಎದುರಾಗಿದೆ.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಇಂಗ್ಲೆಂಡ್
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಜೇಮೀ ಓವರ್‌ಟನ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್

ನ್ಯೂಜಿಲೆಂಡ್
ಟಾಮ್ ಲ್ಯಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್

Story first published: Sunday, June 26, 2022, 0:16 [IST]
Other articles published on Jun 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X