ENG vs NZ: ನ್ಯೂಜಿಲೆಂಡ್ ವಿರುದ್ಧ ಸತತ 2ನೇ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್‌

ಹೆಡಿಂಗ್ಲಿಯ ಲೀಡ್ಸ್ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ನಡುವಿನ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜಾನಿ ಬೈಸ್ಟ್ರೋವ್‌ ಒಂದರ ಹಿಂದೆ ಮತ್ತೊಂದು ಶತಕ ದಾಖಲಿಸಿದ್ದಾರೆ.

ನ್ಯೂಜಿಲೆಂಡ್ ಬೌಲಿಂಗ್ ದಾಳಿಗೆ ತತ್ತರಿಸಿದ್ದ ಇಂಗ್ಲೆಂಡ್ ತಂಡದ ಪರ ಏಳನೇ ವಿಕೆಟ್‌ಗೆ ಜೊತೆಯಾದ ಜಾನಿ ಬೈಸ್ಟ್ರೋವ್ ಮತ್ತು ಜೇಮಿ ಓವರ್ಟನ್ ಮ್ಯಾಜಿಕ್ ಇನ್ನಿಂಗ್ಸ್‌ ಆಡುವ ಮೂಲಕ ಕಿವೀಸ್‌ಗೆ ತಿರುಗೇಟು ನೀಡಿದೆ. ಇದೇ ವೇಳೆಯಲ್ಲಿ ಜಾನಿ ಬೈಸ್ಟ್ರೋವ್ ಸತತ ಎರಡನೇ ಶತಕ ದಾಖಲಿಸಿದ್ರು.

95 ಎಸೆತಗಳಲ್ಲಿ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್

95 ಎಸೆತಗಳಲ್ಲಿ ಶತಕ ದಾಖಲಿಸಿದ ಜಾನಿ ಬೈಸ್ಟ್ರೋವ್

ಕಿವೀಸ್ ಬೌಲರ್‌ಗಳನ್ನ ಮನಬಂದಂತೆ ದಂಡಿಸಿದ ಜಾನಿ ಬೈಸ್ಟ್ರೋವ್‌ ಕೇವಲ 95 ಎಸೆತಗಳಲ್ಲಿ ಶತಕ ದಾಖಲಿಸುವ ಮೂಲಕ ಮಿಂಚಿನ ಆಟವಾಟಿದ್ದಾರೆ. ಟೆಸ್ಟ್ ಪಂದ್ಯದಲ್ಲಿ 100ಕ್ಕು ಹೆಚ್ಚು ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಬೈಸ್ಟ್ರೋವ್ ಇನ್ನಿಂಗ್ಸ್‌ನಲ್ಲಿ 15 ಬೌಂಡರಿಗಳಿದ್ದವು.

ಜಾನಿ ಬೈಸ್ಟ್ರೋವ್‌ಗೆ ಉತ್ತಮ ಸಾಥ್ ನೀಡಿದ ಜೇಮಿ ಓವರ್ಟನ್ ಕೂಡ ಶತಕದತ್ತ ದಾಪುಗಾಲಿಡುತ್ತಿದ್ದು, ಈಗಾಗಲೇ 80ರ ಗಡಿದಾಟಿದ್ದಾರೆ.

ಟೆಸ್ಟ್‌ ಕ್ರಿಕೆಟ್‌ನಲ್ಲಿ ಒಂದೇ ದಿನ 500 ರನ್ ದಾಖಲಾಗಿದ್ದು ನಾಲ್ಕು ಬಾರಿ: ಯಾವಾಗೆಂದು ತಿಳಿಯಿರಿ

55ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್

55ರನ್‌ಗೆ 6 ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್

ನ್ಯೂಜಿಲೆಂಡ್‌ನ ಮೊದಲ ಇನ್ನಿಂಗ್ಸ್ ಸ್ಕೋರ್ 329ರನ್‌ಗಳಿಗೆ ಉತ್ತರವಾಗಿ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಎದುರಾಳಿ ತಂಡದ ಬೌಲರ್ ಟ್ರೆಂಟ್ ಬೌಲ್ಟ್‌ ದಾಳಿಗೆ ತತ್ತರಿಸಿ ಹೋಯಿತು. ಬೌಲ್ಟ್ ವೇಗಕ್ಕೆ ಆರಂಭಿಕರು ಸೇರಿದಂತೆ ಮೂವರು ಬ್ಯಾಟರ್‌ಗಳು ಸಿಂಗಲ್‌ ಡಿಜಿಟ್‌ಗೆ ಬೌಲ್ಟ್ ಆಗಿ ಪೆವಿಲಿಯನ್ ಸೇರಿದರು.

ಅಲೆಕ್ಸ್ ಹೇಲ್ಸ್ (4), ಜಾಕ್ ಕ್ರಾವ್ಲಿ (6), ಒಲ್ಲಿ ಪೋಪ್ (5) ಬೋಲ್ಟ್‌ಗೆ ವಿಕೆಟ್ ಒಪ್ಪಿಸಿದ್ರೆ, ಬೆನ್‌ ಸ್ಟೋಕ್ಸ್ (18) ಮತ್ತು ಬೆನ್ ಫೋಕ್ಸ್‌ (0) ನೀಲ್‌ ವ್ಯಾಗ್ನರ್‌ಗೆ ವಿಕೆಟ್ ಒಪ್ಪಿಸಿದ್ರು. ಇನ್ನೂ ಇಂಗ್ಲೆಂಡ್‌ನ ಇನ್‌ಫಾರ್ಮ್ ಬ್ಯಾಟರ್ ಜೋ ರೂಟ್‌ ಈ ಬಾರಿ ಕೇವಲ 5ರನ್‌ಗೆ ಟಿಮ್ ಸೌಥಿ ಬೌಲಿಂಗ್‌ನಲ್ಲಿ ಔಟಾದ್ರು.

ಹೀಗೆ 55ರನ್‌ಗೆ ಆರು ವಿಕೆಟ್ ಕಳೆದುಕೊಂಡಿದ್ದ ಇಂಗ್ಲೆಂಡ್ ಪರ ಪ್ರತಿ ದಾಳಿ ನಡೆಸಿದ ಜಾನಿ ಬೈಸ್ಟ್ರೋವ್ ಮತ್ತು ಜೇಮಿ ಓವರ್ಟನ್‌ ಅದ್ಭುತ ಆಟವಾಡುವ ಮೂಲಕ ಕುಸಿದ ತಂಡವನ್ನ ಮೇಲಕ್ಕೆತ್ತಿದ್ದಾರೆ. ಏಳನೇ ವಿಕೆಟ್‌ಗೆ ಈ ಜೋಡಿ 190ಕ್ಕೂ ಹೆಚ್ಚು ರನ್ ಕಲೆಹಾಕಿದ್ದು, ನ್ಯೂಜಿಲೆಂಡ್ ವಿರುದ್ಧ ದಾಖಲೆಯ ಜೊತೆಯಾಟ ಇದಾಗಿದೆ.

ರಣಜಿ ಫೈನಲ್: ಮಧ್ಯಪ್ರದೇಶ ಭರ್ಜರಿ ಬ್ಯಾಟಿಂಗ್, ಯಶ್ ದುಬೆ ಹಾಗೂ ಶುಭಂ ಶರ್ಮಾ ಸೆಂಚುರಿ ದಾಖಲು

ಟ್ರೆಂಟ್‌ಬ್ರಿಡ್ಜ್‌ನಲ್ಲಿ ವೇಗದ ಶತಕ ದಾಖಲಿಸಿದ್ದ ಜಾನಿ ಬೈಸ್ಟ್ರೋವ್‌

ಟ್ರೆಂಟ್‌ಬ್ರಿಡ್ಜ್‌ನಲ್ಲಿ ವೇಗದ ಶತಕ ದಾಖಲಿಸಿದ್ದ ಜಾನಿ ಬೈಸ್ಟ್ರೋವ್‌

ನ್ಯೂಜಿಲೆಂಡ್ ವಿರುದ್ಧ ಕಳೆದ ಎರಡನೇ ಟೆಸ್ಟ್‌ ಪಂದ್ಯದಲ್ಲೂ ಇಂಗ್ಲೆಂಡ್ ತಂಡದ ಅಬ್ಬರದ ಇನ್ನಿಂಗ್ಸ್‌ ಆಡಿದ್ದು ಇದೇ ಜಾನಿ ಬೈಸ್ಟ್ರೋವ್ . ಟೆಸ್ಟ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ಪರ ಎರಡನೇ ವೇಗದ ಶತಕ ದಾಖಲಿಸಿದ ಜಾನಿ ಟಿ20 ಸ್ಟೈಲ್‌ನಲ್ಲಿ ಬ್ಯಾಟ್ ಬೀಸಿದ್ದರು. ಕೇವಲ 77 ಎಸೆತಗಳಲ್ಲಿ ಶತಕ ದಾಖಲಿಸಿದ ಇಂಗ್ಲೆಂಡ್ ಬ್ಯಾಟರ್, ತಂಡವನ್ನ ಗೆಲುವಿನ ದಡ ತಲುಪಿಸುವ ಹೊತ್ತಿನಲ್ಲಿ 92 ಎಸೆತಗಳಲ್ಲಿ 136 ರನ್ ಸಿಡಿಸಿ ವಿಕೆಟ್ ಒಪ್ಪಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 14 ಬೌಂಡರಿ ಮತ್ತು ಏಳು ಅಮೋಘ ಸಿಕ್ಸರ್‌ಗಳಿದ್ದವು.

For Quick Alerts
ALLOW NOTIFICATIONS
For Daily Alerts
Story first published: Friday, June 24, 2022, 23:00 [IST]
Other articles published on Jun 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X