ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ENG vs NZ 2ನೇ ಟೆಸ್ಟ್: ನೆಲಕಚ್ಚಿದ್ದ ಇಂಗ್ಲೆಂಡ್‌ಗೆ ಬೈರ್‌ಸ್ಟೋ, ಓವರ್‌ಟನ್ ಆಸರೆ; 3ನೇ ದಿನದ ಲೈವ್ ಸ್ಕೋರ್

ENG vs NZ: England vs New Zealand 3rd Test 3rd day live score

ಒಂದೆಡೆ ಇಯಾನ್ ಮಾರ್ಗನ್ ನಾಯಕತ್ವದ ಇಂಗ್ಲೆಂಡ್ ನೆದರ್ ಲೆಂಡ್ಸ್ ಪ್ರವಾಸವನ್ನು ಕೈಗೊಂಡು ಏಕದಿನ ಸರಣಿಯಲ್ಲಿ ಕಣಕ್ಕಿಳಿದರೆ, ಮತ್ತೊಂದೆಡೆ ಬೆನ್ ಸ್ಟೋಕ್ಸ್ ನಾಯಕತ್ವದ ಇಂಗ್ಲೆಂಡ್ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಕಣಕ್ಕಿಳಿದಿದೆ.

ನಾಯಕನಾಗಿ ಅತಿಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರರ ಪಟ್ಟಿ; ಕೊಹ್ಲಿ, ಪಾಂಟಿಂಗ್ ಅಲ್ಲ ನಂಬರ್ 1!ನಾಯಕನಾಗಿ ಅತಿಹೆಚ್ಚು ಟೆಸ್ಟ್ ಶತಕ ಬಾರಿಸಿದ ಆಟಗಾರರ ಪಟ್ಟಿ; ಕೊಹ್ಲಿ, ಪಾಂಟಿಂಗ್ ಅಲ್ಲ ನಂಬರ್ 1!

ಇನ್ನು ಇತ್ತಂಡಗಳ ನಡುವಿನ ಮೊದಲೆರಡು ಟೆಸ್ಟ್ ಪಂದ್ಯಗಳು ಈಗಾಗಲೇ ಮುಕ್ತಾಯಗೊಂಡಿದ್ದು, ಎರಡೂ ಪಂದ್ಯಗಳಲ್ಲಿಯೂ ಪ್ರವಾಸಿ ನ್ಯೂಜಿಲೆಂಡ್ ವಿರುದ್ಧ ಆತಿಥೇಯ ಇಂಗ್ಲೆಂಡ್ ಭರ್ಜರಿ ಜಯ ಸಾಧಿಸುವುದರ ಮೂಲಕ 2-0 ಅಂತರದಲ್ಲಿ ಸರಣಿ ಕೈ ವಶ ಪಡಿಸಿಕೊಂಡಿದ್ದು, ಉಳಿದ ಅಂತಿಮ ಟೆಸ್ಟ್ ಪಂದ್ಯವನ್ನು ಗೆದ್ದು ವೈಟ್ ವಾಶ್ ಬಳಿಯುವ ಯೋಜನೆಯಲ್ಲಿದೆ.

ರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಆಡಿದ್ದ ಈ ಐವರು ಆಟಗಾರರು ಈಗ ತಂಡದಲ್ಲಿಯೇ ಇಲ್ಲ!ರಿಷಭ್ ಪಂತ್ ಪದಾರ್ಪಣೆ ಮಾಡಿದ್ದ ಪಂದ್ಯದಲ್ಲಿ ಆಡಿದ್ದ ಈ ಐವರು ಆಟಗಾರರು ಈಗ ತಂಡದಲ್ಲಿಯೇ ಇಲ್ಲ!

ಇನ್ನು ಪ್ರವಾಸಿ ನ್ಯೂಜಿಲೆಂಡ್‌ ಅಂತಿಮ ಟೆಸ್ಟ್ ಪಂದ್ಯ ಗೆದ್ದು ವೈಟ್ ವಾಶ್ ಮುಖಭಂಗ ತಪ್ಪಿಸಿಕೊಳ್ಳಬೇಕೆಂಬ ಯೋಜನೆಯೊಂದಿಗೆ ಕಣಕ್ಕಿಳಿದು, ಮೊದಲು ಬ್ಯಾಟಿಂಗ್ ಮಾಡಿ ಉತ್ತಮ ರನ್ ಕಲೆ ಹಾಕಿ, ಒಳ್ಳೆಯ ಬೌಲಿಂಗ್ ಆರಂಭವನ್ನು ಕೂಡಾ ಪಡೆದುಕೊಂಡಿತ್ತು. ಆದರೆ ಇಂಗ್ಲೆಂಡ್ ತಂಡದ ಬ್ಯಾಟ್ಸ್‌ಮನ್‌ಗಳಾದ ಜಾನಿ ಬೈರ್ ಸ್ಟೋ ಮತ್ತು ಜೇಮಿ ಓವರ್ಟನ್ ಎರಡನೇ ದಿನದಾಟದಲ್ಲಿ ನ್ಯೂಜಿಲೆಂಡ್ ಬೌಲರ್‌ಗಳಿಗೆ ಕಾಡಿ ಕುಸಿತ ಕಂಡಿದ್ದ ತಂಡಕ್ಕೆ ಆಸರೆಯಾಗಿದ್ದಾರೆ. ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ ತಂಡಗಳ ನಡುವಿನ ತೃತೀಯ ಟೆಸ್ಟ್ ಪಂದ್ಯದ ಮೂರನೇ ದಿನದಾಟದ ಲೈವ್ ಸ್ಕೋರ್ ಕೆಳಕಂಡಂತಿದೆ.

1
51778
ನ್ಯೂಜಿಲೆಂಡ್ ಪ್ರಥಮ ಇನ್ನಿಂಗ್ಸ್‌

ನ್ಯೂಜಿಲೆಂಡ್ ಪ್ರಥಮ ಇನ್ನಿಂಗ್ಸ್‌

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಡೆರಿಲ್ ಮಿಚೆಲ್ ಶತಕದ ನೆರವಿನಿಂದ 329 ರನ್ ಕಲೆಹಾಕಿ ಆಲೌಟ್ ಆಯಿತು. ಡೆರಿಲ್ ಮಿಚೆಲ್ 228 ಎಸೆತಗಳನ್ನು ಎದುರಿಸಿ 109 ರನ್ ಕಲೆಹಾಕಿದರೆ, ಟಾಮ್ ಬ್ಲಂಡೆಲ್ 122 ಎಸೆತಗಳಲ್ಲಿ 55 ರನ್ ಕಲೆ ಹಾಕಿದರು ಹಾಗೂ ಅಂತಿಮ ಹಂತದಲ್ಲಿ ಟಿಮ್ ಸೌದಿ 29 ಎಸೆತಗಳಲ್ಲಿ 33 ರನ್ ಚಚ್ಚಿದರು. ಇಂಗ್ಲೆಂಡ್ ತಂಡದ ಪರ ಜಾಕ್ ಲೀಚ್ 5 ವಿಕೆಟ್ ಪಡೆದುಕೊಂಡರೆ, ಸ್ಟುವರ್ಟ್ ಬ್ರಾಡ್ 3 ವಿಕೆಟ್, ಜೇಮಿ ಓವರ್‌ಟನ್ ಹಾಗೂ ಮ್ಯಾಟಿ ಪಾಟ್ಸ್ ತಲಾ ಒಂದೊಂದು ವಿಕೆಟ್ ಪಡೆದರು.

ಗುರಿ ಬೆನ್ನತ್ತಿ ಆಘಾತಕ್ಕೊಳಗಾದ ಇಂಗ್ಲೆಂಡ್

ಗುರಿ ಬೆನ್ನತ್ತಿ ಆಘಾತಕ್ಕೊಳಗಾದ ಇಂಗ್ಲೆಂಡ್

ಇತ್ತ ತನ್ನ ಮೊದಲನೇ ಇನ್ನಿಂಗ್ಸ್ ಬ್ಯಾಟಿಂಗ್ ಆರಂಭಿಸಿದ ಇಂಗ್ಲೆಂಡ್ 55 ರನ್‌ಗಳಿಗೆ ತನ್ನ 6 ವಿಕೆಟ್‍ಗಳನ್ನು ಕಳೆದುಕೊಂಡು ತೀರಾ ಸಂಕಷ್ಟಕ್ಕೆ ಸಿಲುಕಿತ್ತು. ಹೀಗೆ ಕಡಿಮೆ ಮೊತ್ತಕ್ಕೆ ತನ್ನ ಬಹುತೇಕ ಬ್ಯಾಟ್ಸ್‌ಮನ್‌ಗಳ ವಿಕೆಟ್‍ಗಳನ್ನು ಕಳೆದುಕೊಂಡ ಇಂಗ್ಲೆಂಡ್ ತಂಡಕ್ಕೆ ಆಸರೆಯಾದದ್ದು ಜಾನಿ ಬೈರ್ ಸ್ಟೋ ಮತ್ತು ಜೇಮಿ ಓವರ್ಟನ್ ಜೋಡಿ. ಈ ಜೋಡಿ 209 ರನ್‌ಗಳ ಜತೆಯಾಟವನ್ನಾಡಿದ ಕಾರಣ ಇಂಗ್ಲೆಂಡ್ ಎರಡನೇ ದಿನದಾಟದಂತ್ಯಕ್ಕೆ 6 ವಿಕೆಟ್ ನಷ್ಟಕ್ಕೆ 264 ರನ್ ಕಲೆಹಾಕಿ 65 ರನ್‌ಗಳ ಹಿನ್ನಡೆ ಅನುಭವಿಸಿದೆ. ಹೀಗೆ ಆಘಾತಕ್ಕೊಳಗಾಗಿದ್ದ ಇಂಗ್ಲೆಂಡ್ ತಂಡಕ್ಕೆ ಜಾನಿ ಬೈರ್ ಸ್ಟೋ ಮತ್ತು ಜೇಮಿ ಓವರ್ಟನ್ ಆಸರೆಯಾಗಿದ್ದಾರೆ. ಜಾನಿ ಬೈರ್ ಸ್ಟೋ 126 ಎಸೆತಗಳಲ್ಲಿ ಅಜೇಯ 130 ರನ್ ಕಲೆಹಾಕಿದ್ದರೆ, ಜೇಮಿ ಓವರ್ಟನ್ 106 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದ್ದಾರೆ.

ಪ್ಲೇಯಿಂಗ್ 11

ಪ್ಲೇಯಿಂಗ್ 11

ನ್ಯೂಜಿಲೆಂಡ್‌: ಟಾಮ್ ಲ್ಯಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್ ಮತ್ತು ನೀಲ್ ವ್ಯಾಗ್ನರ್

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ಜೇಮೀ ಓವರ್‌ಟನ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್ ಮತ್ತು ಜ್ಯಾಕ್ ಲೀಚ್

Story first published: Saturday, June 25, 2022, 15:39 [IST]
Other articles published on Jun 25, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X