ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ ವಿರುದ್ಧ ಮತ್ತೊಂದು ಭರ್ಜರಿ ಜಯ ಸಾಧಿಸಿದ ಇಂಗ್ಲೆಂಡ್: ನ್ಯೂಜಿಲೆಂಡ್‌ಗೆ ವೈಟ್‌ವಾಶ್ ಮುಖಭಂಗ

Eng vs NZ: England won final match by 7 wickets series and won series by 3-0

ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಅಂತಿಮ ಪಂದ್ಯದಲ್ಲಿಯೂ ಇಂಗ್ಲೆಂಡ್ ತಂಡ ಭರ್ಜರಿ ಗೆಲುವು ಸಾಧಿಸಿದೆ. ಈ ಗೆಲುವಿನೊಂದಿಗೆ ಇಂಗ್ಲೆಂಡ್ ತಂಡ ಸರಣಿಯ ಮೂರು ಪಂದ್ಯದಲ್ಲಿಯೂ ಗೆಲುವು ಸಾಧಿಸಿದ್ದು ವೈಟ್‌ವಾಶ್ ಮೂಲಕ ವಶಕ್ಕೆ ಪಡೆದಿದೆ.

ಐದನೇ ದಿನ ಇಂಗ್ಲೆಂಡ್ ಮುಂದೆ ಸುಲಭ ಸವಾಲಿತ್ತು. ಅಂತಿಮ ದಿನ 113 ರನ್‌ಗಳನ್ನು ಗಳಿಸುವ ಸವಾಲು ಇಂಗ್ಲೆಂಡ್ ಮುಂದಿದ್ದು ಜೋ ರೂಟ್ ಹಾಗೂ ಒಲ್ಲೀ ಪೋಪ್ ಕ್ರೀಸ್ ಕಾಯ್ದಿರಿಸಿಕೊಂಡಿದ್ದರು. ಒಲ್ಲಿ ಪೋಪ್ 81 ರನ್‌ಗಳಿಸಿದ್ದರೆ ಜೋ ರೂಟ್ 55 ರನ್‌ಗಳಿಸಿ ಕ್ರೀಸ್ ಕಾಯ್ದುಕೊಂಡಿದ್ದರು. ಒಲ್ಲೀ ಪೋಪ್ ಇಂದು ಕೇವಲ 1 ರನ್‌ಗಳಿಸಿ ವಿಕೆಟ್ ಕಳೆದುಕೊಂಡ ಬಳಿಕ ಜಾನು ಬೈರ್‌ಸ್ಟೋವ್ ಕಣಕ್ಕಿಳಿದರು.

ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

2ನೇ ವೇಗದ ಅರ್ಧ ಶತಕ ಸಿಡಿಸಿದ ಬೈರ್‌ಸ್ಟೋವ್

2ನೇ ವೇಗದ ಅರ್ಧ ಶತಕ ಸಿಡಿಸಿದ ಬೈರ್‌ಸ್ಟೋವ್

ಅಂತಿಮ ದಿನದಾಟದಲ್ಲಿ ಕಣಕ್ಕಿಳಿದ ಜಾನಿ ಬೈರ್‌ಸ್ಟೋವ್ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಟೂರ್ನಿಯುದ್ದಕ್ಕೂ ಅದ್ಭುತ ಫಾರ್ಮ್‌ನಲ್ಲಿರುವ ಜಾನಿ ಬೈರ್‌ಸ್ಟೋವ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್‌ನಲ್ಲಿ ಎರಡನೇ ಅತಿ ವೇಗದ ಅರ್ಧ ಶತಕ ಸಿಡಿಸಿದ್ದಾರೆ ಜಾನಿ ಬೈರ್‌ಸ್ಟೋವ್. 30 ಎಸೆತದಲ್ಲಿ ಅರ್ಧ ಶತಕದ ಗಡಿ ತಲುಪಿದ ಬೈರ್‌ಸ್ಟೋವ್ ಅಂತಿಮವಾಗಿ 44 ಎಸೆತಗಳಲ್ಲಿ 71 ರನ್ ಬಾರಿಸಿ ಅಜೇಯವಾಗುಳಿದರು.

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ಅಲ್ಪ ಮುನ್ನಡೆ

ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್‌ಗೆ ಅಲ್ಪ ಮುನ್ನಡೆ

ಇಂಗ್ಲೆಂಡ್‌ಗೆ 31ರನ್‌ಗಳ ಮುನ್ನಡೆ ಮೊದಲ ಇನ್ನಿಂಗ್ಸ್‌ನಲ್ಲಿ 55ರನ್‌ಗೆ 6 ವಿಕೆಟ್‌ ಕಳೆದುಕೊಂಡಿದ್ದ ಇಂಗ್ಲೆಂಡ್‌ಗೆ ಜಾನಿ ಬೈಸ್ಟ್ರೋವ್ 162, ಜೇಮಿ ಓವರ್ಟನ್ 97ರನ್‌ಗಳ ನೆರವಿನಿಂದ 360ರನ್ ಕಲೆಹಾಕಿತು. ಜೊತೆಗೆ ಅಮೂಲ್ಯವಾದ 31ರನ್‌ಗಳ ಮುನ್ನಡೆಯನ್ನು ಪಡೆದುಕೊಂಡಿತು. ಒಂದು ಹಂತದಲ್ಲಿ ಹೀನಾಯ ಕುಸಿತ ಕಂಡಿದ್ದ ತಂಡಕ್ಕೆ ಜಾನಿ ಬೈಸ್ಟ್ರೋವ್ ಆಧಾರವಾದರು. ಹೀಗಾಗಿ ಇಂಗ್ಲೆಂಡ್ ಆಶ್ಚರ್ಯಕರ ರೀತಿಯಲ್ಲಿ ಅದ್ಭುತ ಮುನ್ನಡೆ ಪಡೆಯಿತು. ನ್ಯೂಜಿಲೆಂಡ್ ಪರ ಟ್ರೆಂಟ್ ಬೌಲ್ಟ್‌ 4, ಟಿಮ್ ಸೌಥಿ 3, ವ್ಯಾಗ್ನರ್ 2, ಬ್ರೇಸ್‌ವೆಲ್ 1 ವಿಕೆಟ್ ಪಡೆದರು.

ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲವಾದ ಕಿವೀಸ್ ದಾಂಡಿಗರು

ಎರಡನೇ ಇನ್ನಿಂಗ್ಸ್‌ನಲ್ಲಿ ವಿಫಲವಾದ ಕಿವೀಸ್ ದಾಂಡಿಗರು

ವಿಲಿಯಮ್ಸನ್ ಮ್ಯಾಜಿಕ್ ಮೊದಲ ಇನ್ನಿಂಗ್ಸ್‌ನಲ್ಲಿ 329ರನ್ ಕಲೆಹಾಕಿದ್ದ ನ್ಯೂಜಿಲೆಂಡ್, ಎರಡನೇ ಇನ್ನಿಂಗ್ಸ್‌ನಲ್ಲಿ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಆರಂಭಿಕ ಬ್ಯಾಟರ್ ವಿಲ್ ಯಂಗ್ (8) ಬೇಗನೆ ಔಟಾದ ಬಳಿಕ ಮೊದಲ ಇನ್ನಿಂಗ್ಸ್‌ನಲ್ಲಿ ಸೊನ್ನೆ ಸುತ್ತಿದ್ದ ಟಾಮ್ ಲಥಾಮ್ ತಂಡಕ್ಕೆ ಆಧಾರವಾದ್ರು . ಎರಡನೇ ವಿಕೆಟ್‌ಗೆ ಟಾಮ್ ಲಥಾಮ್ ಮತ್ತು ನಾಯಕ ಕೇನ್ ವಿಲಿಯಮ್ಸನ್ ತಾಳ್ಮೆಯುತ ಇನ್ನಿಂಗ್ಸ್‌ ಕಟ್ಟಿದರು. ಟಾಮ್ ಲಥಾಮ್ 100 ಎಸೆತಗಳನ್ನ ಎದುರಿಸಿ 76ರನ್ ಕಲೆಹಾಕಿ ಔಟಾದ್ರೆ, ಇದ್ರ ನಂತರದಲ್ಲಿ ಡೆವೊನ್ ಕಾನ್ವೆ 11, ನಾಯಕ ಕೇನ್ ವಿಲಿಯಮ್ಸನ್ 48, ಹೆನ್ರಿ ನಿಕೋಲ್ಸ್ 7ರನ್‌ಗಳಿಸಿ ವಿಕೆಟ್ ಒಪ್ಪಿಸಿ ತಂಡದ ಕುಸಿತಕ್ಕೆ ಕಾರಣವಾದ್ರು.

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಇಂಗ್ಲೆಂಡ್: ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್, ಜೇಮೀ ಓವರ್‌ಟನ್, ಮ್ಯಾಟಿ ಪಾಟ್ಸ್, ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್
ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ವಿಲ್ ಯಂಗ್, ಡೆವೊನ್ ಕಾನ್ವೇ, ಕೇನ್ ವಿಲಿಯಮ್ಸನ್ (ನಾಯಕ), ಹೆನ್ರಿ ನಿಕೋಲ್ಸ್, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಮೈಕೆಲ್ ಬ್ರೇಸ್‌ವೆಲ್, ಟಿಮ್ ಸೌಥಿ, ಟ್ರೆಂಟ್ ಬೌಲ್ಟ್, ನೀಲ್ ವ್ಯಾಗ್ನರ್

Story first published: Tuesday, June 28, 2022, 10:33 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X