ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

WTC final ಗೂ ಮುನ್ನ ನ್ಯೂಜಿಲೆಂಡ್‌ಗೆ ಆಘಾತ, ನಾಯಕ ಕೇನ್ ವಿಲಿಯಮ್ಸನ್ ತಂಡದಿಂದ ಹೊರಕ್ಕೆ!

Eng vs Nz: Kane Williamson ruled out of the second Test against England, Tom Latham will lead New Zealand

ಲಂಡನ್: ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಕುತೂಹಲಕಾರಿ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್ ಪಂದ್ಯಕ್ಕೂ ಮುನ್ನವೇ ನ್ಯೂಜಿಲೆಂಡ್‌ ತಂಡಕ್ಕೆ ದೊಡ್ಡ ಹಿನ್ನಡೆಯ ಸಂಗತಿಯೊಂದು ಕೇಳಿ ಬಂದಿದೆ. ನ್ಯೂಜಿಲೆಂಡ್ ತಂಡದಿಂದ ನಾಯಕ ಕೇನ್ ವಿಲಿಯಮ್ಸನ್ ಹೊರ ಬಿದ್ದಿದ್ದಾರೆ. ಮೊಣಕೈಗೆ ಗಾಯವಾಗಿರುವುದರಿಂದ ವಿಲಿಯಮ್ಸನ್ ಕೊಂಚ ಕಾಲ ತಂಡದಿಂದ ಹೊರಗಿರಲಿದ್ದಾರೆ.

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಬ್ಬೊಬ್ಬ ಅಥ್ಲೀಟ್‌ಗೆ ಎಷ್ಟೆಷ್ಟು ಫ್ರೀ ಕಾಂಡೋಮ್ಸ್ ಗೊತ್ತಾ?!ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಒಬ್ಬೊಬ್ಬ ಅಥ್ಲೀಟ್‌ಗೆ ಎಷ್ಟೆಷ್ಟು ಫ್ರೀ ಕಾಂಡೋಮ್ಸ್ ಗೊತ್ತಾ?!

ಸದ್ಯ ಇಂಗ್ಲೆಂಡ್ ಪ್ರವಾಸದಲ್ಲಿರುವ ನ್ಯೂಜಿಲೆಂಡ್ ಕ್ರಿಕೆಟ್‌ ತಂಡ ಆತಿಥೇಯರ ವಿರುದ್ಧ ಎರಡು ಪಂದ್ಯಗಳ ಟೆಸ್ಟ್‌ ಸರಣಿ ಆಡುತ್ತಿದೆ. ಇದರಲ್ಲಿ ಮೊದಲನೇ ಪಂದ್ಯ ಡ್ರಾದೊಂದಿಗೆ ಅಂತ್ಯಗೊಂಡಿತ್ತು. ಆದರೆ ದ್ವಿತೀಯ ಪಂದ್ಯಕ್ಕೆ ತಂಡ ಪ್ರಕಟವಾಗುವ ಮುನ್ನ ಕೇನ್ ವಿಲಿಯಮ್ಸನ್ ಗಾಯದಿಂದಾಗಿ ತಂಡದಿಂದ ಹೊರ ಬಿದ್ದಿದ್ದಾರೆ.

ನಿರಾಸೆ ಮೂಡಿಸಿದ್ದ ವಿಲಿಯಮ್ಸನ್

ನಿರಾಸೆ ಮೂಡಿಸಿದ್ದ ವಿಲಿಯಮ್ಸನ್

ಆರಂಭಿಕ ಟೆಸ್ಟ್‌ ಪಂದ್ಯದಲ್ಲಿ ವಿಲಿಯಮ್ಸನ್ ಕ್ರಮವಾಗಿ 13, 1 ರನ್ ಗಳಿಸಿ ನಿರಾಸೆ ಅನುಭವಿಸಿದ್ದರು. ಆ ಬಳಿಕ ವಿಲಿಯಮ್ಸನ್‌ ಮೊಣಕೈಗೆ ಗಾಯವಾಗಿತ್ತು. ಹೀಗಾಗಿ ಜೂನ್ 10-14ರ ವರೆಗೆ ನಡೆಯಲಿರುವ ನ್ಯೂಜಿಲೆಂಡ್-ಇಂಗ್ಲೆಂಡ್‌ ದ್ವಿತೀಯ ಟೆಸ್ಟ್‌ಗೆ ವಿಲಿಯಮ್ಸನ್ ಅಲಭ್ಯರಾಗಿರಲಿದ್ದಾರೆ.

ಟಾಮ್ ಲ್ಯಾಥಮ್‌ಗೆ ನಾಯಕತ್ವ

ಟಾಮ್ ಲ್ಯಾಥಮ್‌ಗೆ ನಾಯಕತ್ವ

ವಿಲಿಯಮ್ಸನ್ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್‌ಮನ್‌ ಟಾಮ್ ಲ್ಯಾಥಮ್ ಅವರು ನ್ಯೂಜಿಲೆಂಡ್ ತಂಡವನ್ನು ಮುನ್ನಡೆಸಲಿದ್ದಾರೆ. ಈಗಾಗಲೇ ಬೌಲಿಂಗ್‌ ಆಲ್ ರೌಂಡರ್ ಮಿಚೆಲ್ ಸ್ಯಾಂಟ್ನರ್ ಕೂಡ ಕೈ ಬೆರಳಿಗೆ ಗಾಯ ಮಾಡಿಕೊಂಡು ತಂಡದಿಂದ ಹೊರ ಬಿದ್ದಿದ್ದಾರೆ. ವೇಗಿ ಟ್ರೆಂಡ್ ಬೌಲ್ಟ್ ಲಭ್ಯರಿದ್ದು, ದ್ವಿತೀಯ ಟೆಸ್ಟ್‌ಗೆ ಮರಳುವ ನಿರೀಕ್ಷೆಯಿದೆ.

ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅನುಮಾನ

ಟೆಸ್ಟ್‌ ಚಾಂಪಿಯನ್‌ಶಿಪ್‌ಗೆ ಅನುಮಾನ

ಜೂನ್ 18-22ರ ವರೆಗೆ ಭಾರತ ಮತ್ತು ನ್ಯೂಜಿಲೆಂಡ್ ಮಧ್ಯೆ ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್ ನಡೆಯಲಿದೆ. ಇನ್ನು ಕೇವಲ 8 ದಿನಗಳು ಬಾಕಿ ಉಳಿದಿರುವುದರಿಂದ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ವಿಲಿಯಮ್ಸನ್ ಆಡ್ತಾರಾ ಇಲ್ವಾ ಅನ್ನೋದು ಅನುಮಾನ ಮೂಡಿಸಿದೆ.

Story first published: Wednesday, June 9, 2021, 17:43 [IST]
Other articles published on Jun 9, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X