ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇಂಗ್ಲೆಂಡ್ vs ನ್ಯೂಜಿಲೆಂಡ್: ಕೇನ್ ವಿಲಿಯಮ್ಸನ್‌ಗೆ ಕೋವಿಡ್ ದೃಢ: ಎರಡನೇ ಟೆಸ್ಟ್ ಪಂದ್ಯಕ್ಕೆ ಅಲಭ್ಯ

Eng vs NZ test series: New zealand skipper Kane Williamson miss 2nd Test match due to test positive for Covid

ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ತಂಡಕ್ಕೆ ಮತ್ತೊಂದು ಆಘಾತ ಬಂದೆರಗಿದೆ. ಮೊದಲ ಪಂದ್ಯದಲ್ಲಿ ಸೋಲು ಅನುಭವಿಸಿರುವ ನ್ಯೂಜಿಲೆಂಡ್ ತಂಡ ಎರಡನೇ ಪಂದ್ಯದಲ್ಲಿ ತಿರುಗಿ ಬೀಳುವ ಯೋಜನೆ ಹಾಕಿಕೊಂಡಿರುವಾಗ ತಂಡದ ನಾಯಕ ಕೇನ್ ವಿಲಿಯಮ್ಸನ್ ಎರಡನೇ ಪಂದ್ಯಕ್ಕೆ ಅಲಭ್ಯವಾಗುವಂತಾ ಸನ್ನಿವೇಶವುಂಟಾಗಿದೆ. ಕಿವೀಸ್ ನಾಯಕ ಕೇನ್ ವಿಲಿಯಮ್ಸನ್ ಅವರ ಕೊವಿಡ್ ವರದಿ ಪಾಸಿಟಿವ್ ಬಂದಿದ್ದು ಎರಡನೇ ಟೆಸ್ಟ್ ಪಂದ್ಯದಿಂದ ಹೊರಗುಳಿಯಲಿದ್ದಾರೆ.

ಗುರುವಾರ ಕೋವಿಡ್‌ನ ಕೆಲ ಲಕ್ಷಣಗಳು ಕಾಣಿಸಿಕೊಂಡ ಹಿನ್ನಲೆಯಲ್ಲಿ ಕೇನ್ ವಿಲಿಯಮ್ಸನ್ ರ್ಯಾಪಿಡ್ ಆಂಟಿಜನ್ ಪರೀಕ್ಷೆಗೆ ಒಳಗಾಗಿದ್ದರು. ಇದರಲ್ಲಿ ಪಾಸಿಟಿವ್ ಬಂದಿದ್ದು ಕಿವೀಸ್ ನಾಯಕ ಮುಂದಿನ ಐದು ದಿಇನಗಳ ಕಾಲ ಪ್ರತ್ಯೇಕವಾಗಿರಲಿದ್ದಾರೆ. ಕೇನ್ ವಿಲಿಯಮ್ಸನ್ ಅಲಭ್ಯತೆಯಲ್ಲಿ ಟಾಮ್ ಲಾಥಮ್ ತಂಡವನ್ನು ಮುನ್ನಡೆಸಲಿದ್ದಾರೆ.

IND vs SA: ಆತನನ್ನು ಬದಲಿಸದಿದ್ದರೆ ಟೀಮ್ ಇಂಡಿಯಾ ಸರಣಿಯನ್ನೇ ಸೋಲುತ್ತೆ ಎಂದ ನೆಟ್ಟಿಗರು!IND vs SA: ಆತನನ್ನು ಬದಲಿಸದಿದ್ದರೆ ಟೀಮ್ ಇಂಡಿಯಾ ಸರಣಿಯನ್ನೇ ಸೋಲುತ್ತೆ ಎಂದ ನೆಟ್ಟಿಗರು!

ಇನ್ನು ಈ ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಸೋಲು ಅನುಭವಿಸಿದ್ದು ಸರಣಿಯಲ್ಲಿ ಹಿನ್ನಡೆ ಅನುಭವಿಸಿದೆ. ಬ್ಯಾಟಿಂಗ್‌ನಲ್ಲಿ ವೈಫಲ್ಯತೆ ಅನುಭವಿಸಿದರೂ ಬೌಲಿಂಗ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಕಿವೀಸ್ ಬಳಗ ಪಂದ್ಯದಲ್ಲಿ ಸಾಕಷ್ಟು ಏರಿಳಿತವನ್ನು ಅನುಭವಿಸಿತು. ಆದರೆ ಅಂತಿಮವಾಗಿ ಜೋ ರೂಟ್ ಅವರ ಅಮೋಘ ಆಟದಿಂದಾಗಿ ನ್ಯೂಜಿಲೆಂಡ್ ಪಡೆ ಸೋಲು ಅನುಭವಿಸಬೇಕಾಯಿತು. ಒಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಕೂಡ ಈ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚಿದ್ದಾರೆ.

ಇನ್ನು ಬೆನ್ ಸ್ಟೋಕ್ಸ್ ನಾಯಕತ್ವದಲ್ಲಿ ಮೊದಲ ಪಂದ್ಯವನ್ನು ಗೆದ್ದಿರುವ ಇಂಗ್ಲೆಂಡ್ ಈಗ ಆತ್ಮವಿಶ್ವಾಸದಲ್ಲಿದೆ. ಮೂರು ಪಂದ್ಯಗಳ ಸರಣಿಯಲ್ಲಿ ಸದ್ಯ 1-0 ಅಂತರದಿಂದ ಮುನ್ನಡೆ ಸಾಧಿಸಿರುವ ಇಂಗ್ಲೆಂಡ್ ತವರಿನಲ್ಲಿ ಸರಣಿ ಗೆಲ್ಲುವ ಆತ್ಮವಿಶ್ವಾಸದಲ್ಲಿದೆ. ಈ ಮೂಲಕ ಕಳೆದ ವರ್ಷ ಅನುಭವಿಸಿದ್ದ ಸರಣಿ ಸೋಲಿಗೆ ತಿರುಗೇಟು ನೀಡಲು ಸಜ್ಜಾಗಿದೆ ಇಂಗ್ಲೆಂಡ್.

ಮೂರು ಟೆಸ್ಟ್ ಪಂದ್ಯಗಳ ಸರಣಿ ಇದಾಗಿದ್ದು ಮೊದಲ ಪಂದ್ಯ ಐತಿಹಾಸಿಕ ಲಾರ್ಡ್ಸ್ ಅಂಗಳದಲ್ಲಿ ನಡೆದಿತ್ತು. ಎರಡನೇ ಪಂದ್ಯ ನಾಟಿಂಗ್‌ಹ್ಯಾಮ್‌ನ ಟ್ರೆಂಟ್ ಬ್ರಿಡ್ಜ್‌ನಲ್ಲಿ ನಡೆಯಲಿದ್ದು ಇಂದು (ಜೂನ್ 10ರಂದು) ಆರಂಭವಾಗಲಿದೆ. ಅಂತಿಮ ಪಂದ್ಯ ಲೀಡ್ಸ್‌ನ ಹೆಡಿಂಗ್ಲೆಯಲ್ಲಿ ನಡೆಯಲಿದ್ದು ಜೂನ್ 23ರಿಂದ ಆರಂಭವಾಗಲಿದೆ.

ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಸಲುವಾಗಿ IPL ಆಫರ್ ತಿರಸ್ಕರಿಸಿದ 5 ಪ್ಲೇಯರ್ಸ್‌ಅಂತರಾಷ್ಟ್ರೀಯ ಕ್ರಿಕೆಟ್ ಆಡುವ ಸಲುವಾಗಿ IPL ಆಫರ್ ತಿರಸ್ಕರಿಸಿದ 5 ಪ್ಲೇಯರ್ಸ್‌

ನ್ಯೂಜಿಲೆಂಡ್ ಸ್ಕ್ವಾಡ್ ಹೀಗಿದೆ: ನ್ಯೂಜಿಲೆಂಡ್: ಟಾಮ್ ಲ್ಯಾಥಮ್, ವಿಲ್ ಯಂಗ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಡೇರಿಲ್ ಮಿಚೆಲ್, ಟಾಮ್ ಬ್ಲಂಡೆಲ್ (ವಿಕೆಟ್ ಕೀಪರ್), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ಕೈಲ್ ಜೇಮಿಸನ್, ಟಿಮ್ ಸೌಥಿ, ಅಜಾಜ್ ಪಟೇಲ್, ಟ್ರೆಂಟ್ ಬೌಲ್ಟ್, ಹೆನ್ರಿ ನಿಕೋಲ್ಸ್, ಮೈಕೆಲ್ ಬ್ರೇಸ್ವೆಲ್, ಕ್ಯಾಮ್ ಫ್ಲೆಚರ್, ನೀಲ್ ವ್ಯಾಗ್ನರ್, ಮ್ಯಾಟ್ ಹೆನ್ರಿ

India vs South Africa 1st T20: ಸೌತ್ ಆಫ್ರಿಕಾ ಭಾರತ ತಂಡವನ್ನ ಬಗ್ಗು ಬಡಿದಿದ್ದು ಹೀಗೆ! | *Cricket

ಇಂಗ್ಲೆಂಡ್ ಸ್ಕ್ವಾಡ್: ಝಾಕ್ ಕ್ರಾಲಿ, ಅಲೆಕ್ಸ್ ಲೀಸ್, ಆಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್ (ನಾಯಕ), ಬೆನ್ ಫೋಕ್ಸ್ (ವಿಕೆಟ್ ಕೀಪರ್), ಮ್ಯಾಟಿ ಪಾಟ್ಸ್, ಜ್ಯಾಕ್ ಲೀಚ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್ , ಹ್ಯಾರಿ ಬ್ರೂಕ್, ಕ್ರೇಗ್ ಓವರ್ಟನ್

Story first published: Friday, June 10, 2022, 13:28 [IST]
Other articles published on Jun 10, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X