ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Eng vs SA 1st Test: ಹರಿಣಗಳ ದಾಳಿಗೆ ತತ್ತರಿಸಿದ ಇಂಗ್ಲೆಂಡ್, 165ರನ್‌ಗಳಿಗೆ ಆಲೌಟ್‌

Kagiso Rabada

ಐತಿಹಾಸಿಕ ಲಂಡನ್‌ನ ಲಾರ್ಡ್ಸ್‌ ಮೈದಾನದಲ್ಲಿ ನಡೆಯುತ್ತಿರುವ ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಆತಿಥೇಯ ಆಂಗ್ಲರು ಮೊದಲ ಇನ್ನಿಂಗ್ಸ್‌ನಲ್ಲಿ ಕೇವಲ 165ರನ್‌ಗಳಿಗೆ ಆಲೌಟ್ ಆಗಿದ್ದಾರೆ.

ಮಳೆಯಿಂದಾಗಿ ಮೊದಲ ದಿನದಾಟದಂತ್ಯಕ್ಕೆ 6 ಪ್ರಮುಖ ವಿಕೆಟ್ ಕಳೆದುಕೊಂಡು 116ರನ್ ಕಲೆಹಾಕಿದ್ದ ಇಂಗ್ಲೆಂಡ್‌ ಇಂದು ಕೇವಲ 49 ಕಲೆಹಾಕುವ ಮೂಲಕ ಉಳಿದ ನಾಲ್ಕು ವಿಕೆಟ್ ಕಳೆದುಕೊಂಡು 165ರನ್‌ಗಳಿಗೆ ಸರ್ವಪತನಗೊಂಡಿದೆ. ದಕ್ಷಿಣ ಆಫ್ರಿಕಾ ಪರ ಕಗಿಸೊ ರಬಾಡ ದಾಳಿಗೆ ನೆಲಕಚ್ಚಿದ ಬೆನ್‌ ಸ್ಟೋಕ್ಸ್ ಪಡೆ ಮೊದಲ ಇನ್ನಿಂಗ್ಸ್‌ನಲ್ಲಿ ಹೀನಾಯ ಮುಖಭಂಗ ಎದುರಿಸಿದೆ.

ಕಗಿಸೊ ರಬಾಡ ಅಬ್ಬರದ ಬೌಲಿಂಗ್ ದಾಳಿ, ಐದು ವಿಕೆಟ್ ಗೊಂಚಲು

ಕಗಿಸೊ ರಬಾಡ ಅಬ್ಬರದ ಬೌಲಿಂಗ್ ದಾಳಿ, ಐದು ವಿಕೆಟ್ ಗೊಂಚಲು

ದಕ್ಷಿಣ ಆಫ್ರಿಕಾ ಪರ ಅದ್ಭುತ ಬೌಲಿಂಗ್ ದಾಳಿ ಮುಂದುವರಿಸಿದ ಕಗಿಸೊ ರಬಾಡ ಎರಡನೇ ದಿನದಾಟದಲ್ಲೂ ಆಂಗ್ಲರ ಬೆನ್ನತ್ತಿದರು. ಅಜೇಯ 61 ರನ್ ಕಲೆಹಾಕಿ ಎರಡನೇ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದ ಒಲ್ಲಿ ಪೋಪ್‌ಗೆ ರಬಾಡ ಬೌಲಿಂಗ್‌ನಲ್ಲಿ 74ರನ್‌ಗಳಿಸಿದ್ದಾಗ ಕ್ಲೀನ್ ಬೌಲ್ಡ್‌ ಆದ್ರು. ಈ ವಿಕೆಟ್ ಪತನದ ಬಳಿಕ ಇಂಗ್ಲೆಂಡ್ ಎಲ್ಲಿಯೂ ಚೇತರಿಸಿಕೊಳ್ಳಲಿಲ್ಲ.

ಸ್ಟುವರ್ಟ್ ಬ್ರಾಡ್ 15ರನ್‌ಗಳಿಸಿ ರಬಾಡಗೆ ವಿಕೆಟ್ ಒಪ್ಪಿಸಿದ್ರೆ, ಜ್ಯಾಕ್ ಲೀಚ್ 15 ರನ್‌ಗಳಿಸಿ ಮಾರ್ಕೊ ಜಾನ್ಸೆನ್‌ ಬೌಲಿಂಗ್‌ನಲ್ಲಿ ಬೌಲ್ಡ್‌ ಆದ್ರು. ಜೇಮ್ಸ್‌ ಆ್ಯಂಡರ್ಸಸ್ ಎದುರಿಸಿದ ಮೊದಲ ಎಸೆತದಲ್ಲೇ ಗೋಲ್ಡನ್ ಡಕೌಟ್ ಆಗುವ ಮೂಲಕ ಕಗಿಸೊ ರಬಾಡಗೆ ಐದನೇ ವಿಕೆಟ್‌ ಒಪ್ಪಿಸಿದ್ರು.

19 ಓವರ್‌ಗಳಲ್ಲಿ 3 ಮೇಡನ್ ಸಹಿತ 52 ರನ್ ನೀಡಿದ ಕಗಿಸೊ ರಬಾಡ 5 ವಿಕೆಟ್ ಪಡೆಯುವ ಮೂಲಕ ತಂಡದ ಪರ ಯಶಸ್ವಿ ಬೌಲರ್ ಎನಿಸಿಕೊಂಡ್ರು. ಇದಲ್ಲದೆ ಎನ್ರಿಕ್ ನೊರ್ಕಿಯಾ 3, ಮಾರ್ಕೊ ಜಾನ್ಸನ್ 2 ವಿಕೆಟ್ ಪಡೆದು ಮಿಂಚಿದರು. ಲುಂಗಿ ಎನ್‌ಗಿಡಿ ಐದು ಓವರ್ ಬೌಲ್ ಮಾಡಿ ಯಾವುದೇ ವಿಕೆಟ್ ಪಡೆಯಲಿಲ್ಲ.

ಆರು ತಿಂಗಳ ಬಳಿಕ ಅದ್ಭುತ ಕಂಬ್ಯಾಕ್ ಮಾಡಿದ ದೀಪಕ್ ಚಹಾರ್: ವಿಶ್ವಕಪ್‌ಗೆ ಆಯ್ಕೆಯಾಗುವ ಬೇಡಿಕೆ

ಮೊದಲ ದಿನದಾಟದಲ್ಲಿ ಮುಗ್ಗರಿಸಿದ್ದ ಇಂಗ್ಲೆಂಡ್

ಮೊದಲ ದಿನದಾಟದಲ್ಲಿ ಮುಗ್ಗರಿಸಿದ್ದ ಇಂಗ್ಲೆಂಡ್

ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪ್ರವಾಸ ದಕ್ಷಿಣ ಆಫ್ರಿಕಾ ಆತಿಥೇಯರಿಗೆ ಬ್ಯಾಟಿಂಗ್ ಆಹ್ವಾನಿಸಿತು. ನಾಯಕ ಡೀನ್ ಎಲ್ಗರ್ ನಿರ್ಧಾರವನ್ನ ಬೆಂಬಲಿಸಿದ ದಕ್ಷಿಣ ಆಫ್ರಿಕಾ ಬೌಲರ್‌ಗಳು ಇಂಗ್ಲೆಂಡ್‌ನ ಟಾಪ್ ಆರ್ಡರ್ ಬ್ಯಾಟರ್‌ಗಳನ್ನ ಪೆವಿಲಿಯನ್‌ಗೆ ಅಟ್ಟುವಲ್ಲಿ ಮೊದಲ ದಿನದಲ್ಲಿ ಯಶಸ್ವಿಯಾಗಿದ್ದಾರೆ.

ಮಳೆ ಬಂದು ಪಂದ್ಯ ಸ್ಥಗಿತಗೊಳ್ಳುವ ಮುನ್ನ ಇಂಗ್ಲೆಂಡ್ 32 ಓವರ್‌ಗಳಲ್ಲಿ 6 ಪ್ರಮುಖ ವಿಕೆಟ್ ಕಳೆದುಕೊಂಡು 116ರನ್ ಕಲೆಹಾಕಿತು. ಇದಾದ ಬಳಿಕ ಮಳೆ ನಿಲ್ಲದ ಕಾರಣ ಮೊದಲ ದಿನದಾಟವು ಕೇವಲ 32 ಓವರ್‌ಗಳಿಗೆ ಮುಕ್ತಾಯಗೊಂಡಿತು.

ಇಂಗ್ಲೆಂಡ್ ಪರ ಮೊದಲಿಗೆ ಅಲೆಕ್ಸ್ ಹೀಲ್ಸ್ ಕೇವಲ 5ರನ್‌ಗೆ ಕಗಿಸೊ ರಬಾಡಗೆ ವಿಕೆಟ್ ಒಪ್ಪಿಸಿದ್ರೆ, ನಂತರದಲ್ಲಿ ಝಾಕ್ ಕ್ರಾಲಿ ಕೇವಲ 9ರನ್‌ಗಳಿಸಿ ಏಡನ್ ಮಕ್ರಾಮ್‌ಗೆ ಕ್ಯಾಚಿತ್ತರು. ಈ ಮೂಲಕ ಇಬ್ಬರು ಓಪನರ್‌ಗಳ ವಿಕೆಟ್ ಪಡೆಯುವಲ್ಲಿ ರಬಾಡ ಯಶಸ್ವಿಯಾದರು.

ರಬಾಡಗೆ ಉತ್ತಮ ಸಾಥ್ ನೀಡಿದ ವೇಗದ ಬೌಲರ್ ಅನ್ರಿಕ್ ನೊರ್ಕಿಯಾ ಮೂರು ವಿಕೆಟ್ ಕಬಳಿಸಿದ್ರು. ಜಾನಿ ಬೈಸ್ಟ್ರೋವ್ 0, ಬೆನ್ ಸ್ಟೋಕ್ಸ್‌ 20, ಬೆನ್‌ ಫೋಕ್ಸ್‌ 6ರನ್‌ಗೆ ನೊರ್ಕಿಯಾಗೆ ವಿಕೆಟ್ ಒಪ್ಪಿಸಿದರು. ಇದರ ಜೊತೆಗೆ ಇನ್‌ ಫಾರ್ಮ್ ಬ್ಯಾಟರ್ ಜೋ ರೂಟ್‌ರನ್ನು ಎಲ್‌ಬಿಡಬ್ಲ್ಯೂ ಬಲೆಗೆ ಕೆಡವುವಲ್ಲಿ ಮಾರ್ಕೊ ಜಾನ್ಸನ್ ಯಶಸ್ವಿಯಾದ್ರು.

ಇಂಗ್ಲೆಂಡ್ ಪರ ಏಕಾಂಗಿ ಹೋರಾಟ ನಡೆಸಿದ ಒಲ್ಲಿ ಪೋಪ್ 87 ಎಸೆತಗಳಲ್ಲಿ ಅಜೇಯ 61 ರನ್ ಕಲೆಹಾಕಿ ತಂಡದ ಸ್ಕೋರ್ 100ರ ಗಡಿದಾಟಲು ನೆರವಾದ್ರು. ಆದ್ರೆ ಎರಡನೇ ದಿನದಾಟದಲ್ಲಿ ಒಲ್ಲಿ ಪೋಪ್ ಆಟ 74ರನ್‌ಗೆ ಕೊನೆಗೊಂಡಿತು. ಇಂಗ್ಲೆಂಡ್ 165ರನ್‌ಗಳಿಗೆ ಸರ್ವಪತನಗೊಂಡಿದ್ದು, ಹರಿಣಗಳು ಮೇಲುಗೈ ಸಾಧಿಸಿದ್ದಾರೆ.

ಚಾಹಲ್-ಧನಶ್ರೀ ದಾಂಪತ್ಯ ಜೀವನದಲ್ಲಿ ಬಿರುಕು?: ನನ್ನ ಹೊಸ ಜೀವನ ಶುರು ಎಂದ ಚಾಹಲ್!

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ದಕ್ಷಿಣ ಆಫ್ರಿಕಾ
ಡೀನ್ ಎಲ್ಗರ್ (ನಾಯಕ), ಸರೆಲ್ ಎರ್ವೀ, ಕೀಗನ್ ಪೀಟರ್ಸನ್, ಏಡೆನ್ ಮಾರ್ಕ್ರಾಮ್, ರಾಸ್ಸಿ ವ್ಯಾನ್ ಡೆರ್ ಡಸ್ಸೆನ್, ಕೈಲ್ ವೆರ್ರೆನ್ನೆ (ವಿಕೆಟ್ ಕೀಪರ್), ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡ, ಆನ್ರಿಚ್ ನಾರ್ಟ್ಜೆ, ಲುಂಗಿ ಎನ್ಗಿಡಿ

ಬೆಂಚ್‌: ಲುಥೋ ಸಿಪಾಮ್ಲಾ, ಸೈಮನ್ ಹಾರ್ಮರ್, ಖಯಾ ಜೊಂಡೋ, ರಿಯಾನ್ ರಿಕೆಲ್ಟನ್, ಗ್ಲೆಂಟನ್ ಸ್ಟೌರ್ಮನ್


ಇಂಗ್ಲೆಂಡ್
ಅಲೆಕ್ಸ್ ಲೀಸ್, ಝಾಕ್ ಕ್ರಾಲಿ, ಒಲ್ಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋ, ಬೆನ್ ಸ್ಟೋಕ್ಸ್(ನಾಯಕ), ಬೆನ್ ಫೋಕ್ಸ್(ವಿಕೆಟ್ ಕೀಪರ್), ಸ್ಟುವರ್ಟ್ ಬ್ರಾಡ್, ಜ್ಯಾಕ್ ಲೀಚ್, ಮ್ಯಾಟಿ ಪಾಟ್ಸ್, ಜೇಮ್ಸ್ ಆಂಡರ್ಸನ್

ಬೆಂಚ್‌: ಆಲಿ ರಾಬಿನ್ಸನ್, ಕ್ರೇಗ್ ಓವರ್ಟನ್, ಹ್ಯಾರಿ ಬ್ರೂಕ್

Story first published: Thursday, August 18, 2022, 17:41 [IST]
Other articles published on Aug 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X