ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

6 ಎಸೆತಗಳಲ್ಲಿ 28 ರನ್, 1 ರನ್‌ನಿಂದ ಇಂಗ್ಲೆಂಡ್‌ಗೆ ಮಣಿದ ವಿಂಡೀಸ್: ರೋಚಕ ಟಿ20 ಪಂದ್ಯಕ್ಕೆ ಸಾಕ್ಷಿಯಾದ ಕ್ರಿಕೆಟ್ ಜಗತ್ತು

Eng vs WI: West Indies lost 2nd t20 match against England by 1 run, Hinghlights

ವೆಸ್ಟ್ ಇಂಡೀಸ್ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಸರಣಿಯ ಎರಡನೇ ಪಂದ್ಯ ಅಭಿಮಾನಿಗಳನ್ನು ಅಕ್ಷರಶಃ ರೋಮಾಂಚಕ ಅನುಭವವನ್ನು ನೀಡಿದೆ. ವೆಸ್ಟ್ ಇಂಡೀಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟರ್‌ಗಳ ವೈಫಲ್ಯದ ನಂತರವೂ ಅಮೋಘ ಪ್ರದರ್ಶನ ನೀಡಿದ ಕೆಳ ಕ್ರಮಾಂಕದ ಆಟಗಾರರ ಸಾಹಸದಿಂದಾಗಿ ಗೆಲುವಿನ ಅತ್ಯಂತ ಸನಿಹಕ್ಕೆ ತಲುಪಿದ್ದ ವೆಸ್ಟ್ ಇಂಡೀಸ್ ಅಂತಿಮವಾಗಿ ಕೇವಲ ಒಂದು ರನ್‌ನಿಂದ ಸೋಲು ಅನುಭವಿಸಿದೆ.

ವೆಸ್ಟ್ ಇಂಡೀಸ್‌ಗೆ ಪ್ರವಾಸ ಕೈಗೊಂಡಿರುವ ಇಂಗ್ಲೆಂಡ್ ತಂಡ ಮೊದಲಿಗೆ ಐದು ಪಂದ್ಯಗಳ ಟಿ20 ಸರಣಿಯಲ್ಲಿ ಭಾಗಿಯಾಗಿದೆ. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಭರ್ಜರಿ ಗೆಲುವು ಸಾಧಿಸಿತ್ತು. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅತ್ಯಂತ ಕಳಪೆ ಪ್ರದರ್ಶನ ನೀಡಿದ ಇಂಗ್ಲೆಂಡ್ ಸಾಕಷ್ಟು ಟೀಕೆಗೂ ಗುರಿಯಾಗಿತ್ತು. ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡ ಎದುರಾಳಿಯನ್ನು ಮೊದಲಿಗೆ ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು.

4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು4 ಪಂದ್ಯಗಳಲ್ಲಿ ಹೀನಾಯ ಸೋಲು: ರಾಹುಲ್‌ ನಾಯಕತ್ವದ ಬಗ್ಗೆ ತುಟಿಬಿಚ್ಚಿದ ಕೋಚ್ ದ್ರಾವಿಡ್ ಹೇಳಿದ್ದಿಷ್ಟು

171 ರನ್‌ಗಳಿಸಿದ ಇಂಗ್ಲೆಂಡ್

171 ರನ್‌ಗಳಿಸಿದ ಇಂಗ್ಲೆಂಡ್

ಮೊದಲಿಗೆ ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್‌ ಪರವಾಗಿ ಆರಂಭಿಕ ಆಟಗಾರ ಜೇಸನ್ ರಾಯ್ ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು. ರಾಯ್ 45 ರನ್‌ಗಳ ಕೊಡುಗೆ ನೀಡಿದರು. ಮೊಯೀನ್ ಅಲಿ 31 ರನ್‌ಗಳ ಕೊಡುಗೆ ನೀಡಿದರು. ಟಾಮ್ ಬಾಂಟನ್ 25, ಕ್ರಿಸ್ ಜೋರ್ಡನ್ 27 ರನ್‌ಗಳ ಕೊಡುಗೆ ನೀಡಿದರು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ ಇಂಗ್ಲೆಂಡ್ ತಂಡ 8 ವಿಕೆಟ್ ಕಳೆದುಕೊಂಡು 171 ರನ್‌ಗಳಿಸಿತು. ವೆಸ್ಟ್ ಇಂಡೀಸ್ ಪರವಾಗಿ ಬೌಲಿಂಗ್‌ನಲ್ಲಿ ಜೇಸನ್ ಹೋಲ್ಡರ್ 2 ವಿಕೆಟ್ ಕಿತ್ತು ಮಿಂಚಿದರೆ ಫ್ಯಾಬಿಯನ್ ಅಲೆನ್ ಕೂಡ 2 ವಿಕೆಟ್ ಸಂಪಾದಿಸಿದರು.

ರನ್ ಬೆನ್ನಟ್ಟಿದ ವಿಂಡೀಸ್‌ಗೆ ಸಂಕಷ್ಟ

ರನ್ ಬೆನ್ನಟ್ಟಿದ ವಿಂಡೀಸ್‌ಗೆ ಸಂಕಷ್ಟ

ಇನ್ನು ಇಂಗ್ಲೆಂಡ್ ತಂಡ ನೀಡಿದ 172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ ಆರಂಭಿಕ ಆಘಾತವನ್ನು ಅನುಭವಿಸಿತು. ತಂಡದ ಮೊತ್ತ 6 ಆಗುವಷ್ಟರಲ್ಲಿ ತಂಡದ ಇಬ್ಬರು ಆರಂಭಿಕ ಆಟಗಾರರು ಕೂಡ ವಿಕೆಟ್ ಕಳೆದುಕೊಂಡಿದ್ದರು. ನಿಕೋಲಸ್ ಪೂರನ್ ಹಾಗೂ ಡ್ಯಾರೆನ್ ಬ್ರಾವೋ ಸಣ್ಣ ಪ್ರತಿರೋಧವೊಡ್ಡಿದರೂ ಇವರ ವಿಕೆಟ್ ಕಳೆದುಕೊಂಡ ನಂತರ ವೆಸ್ಟ್ ಇಂಡೀಸ್ ಮತ್ತೊಮ್ಮೆ ಭಾರೀ ಕುಸಿತ ಕಂಡಿತು. 15.1 ಓವರ್‌ಗಳಲ್ಲಿ 98 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡು ಹೀನಾಯ ಸೋಲಿನ ಅಂಚಿಗೆ ಬಂದು ನಿಂತಿತ್ತು ವೆಸ್ಟ್ ಇಂಡೀಸ್.

ರೋಚಕ ತಿರುವು ನೀಡಿದ ಶೆಫರ್ಡ್, ಹುಸೈನ್

ರೋಚಕ ತಿರುವು ನೀಡಿದ ಶೆಫರ್ಡ್, ಹುಸೈನ್

ಆದರೆ ಈ ಸಂದರ್ಭದಲ್ಲಿ ಜೊತೆಯಾದ ರೊಮಾರೊಯೋ ಶೆಫರ್ಡ್ ಹಾಗೂ ಅಕೀಲ್ ಹುಸೇನ್ ಯಾರೂ ನಿರೀಕ್ಷಿಸದ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಸಿಕ್ಸರ್ ಬೌಂಡರಿಗಳ ಸುರಿಮಳೆಗೈದ ಈ ಇಬ್ಬರು ಆಟಗಾರರು ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಸಂಪೂರ್ಣವಾಗಿ ಹಿಮ್ಮೆಟ್ಟಿಸುತ್ತಾ ಸಾಗಿದರು. 28 ಎಸೆತಗಳನ್ನು ಎದುರಿಸಿದ ಶೆಫರ್ಡ್ ಐದು ಸಿಕ್ಸರ್ ಹಾಗೂ ಒಂದು ಬೌಂಡರಿ ನೆರವಿನಿಂದ 44 ರನ್‌ ಸಿಡಿಸಿದರೆ ಅಕೀಲ್ ಹುಸೈನ್ ಕೇವಲ 16 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ಮೂರು ಬೌಂಡರಿ ನೆರವಿನಿಂದ ಭರ್ಜರಿ 44 ರನ್ ಸಿಡಿಸಿದರು. ಆದರೆ ಕೇವಲ ಒಂದು ರನ್‌ಗಳ ಅಂತರದಿಮದ ವೆಸ್ಟ್ ಇಮಡೀಸ್ ಸೋಲು ಅನುಭವಿಸಿ ನಿರಾಸೆ ಕಂಡಿದೆ.

ಅಂತಿಮ ಓವರ್‌ನಲ್ಲಿ ಹುಸೈನ್ ಅಬ್ಬರ

ಅಂತಿಮ ಓವರ್‌ನಲ್ಲಿ ಹುಸೈನ್ ಅಬ್ಬರ

19ನೇ ಓವರ್ ಅಂತ್ಯವಾಗುವ ವೇಳೆಗೆ ವೆಸ್ಟ್ ಇಂಡೀಸ್ ತಂಡ 142 ರನ್‌ಗಳಿಗೆ 8 ವಿಕೆಟ್ ಕಳೆದುಕೊಂಡಿತ್ತು. ಸ್ಟ್ರೈಕ್‌ನಲ್ಲಿ ಅಕೀಲ್ ಹುಸೇನ್ ಇದ್ದರೆ ಮೊದಲ ಮೂರು ಓವರ್‌ಗಳಲ್ಲಿ 17 ರನ್ ನೀಡಿ ಉತ್ತಮ ನಿಯಂತ್ರಣ ಸಾಧಿಸಿದ್ದ ಸಕೀಬ್ ಮಹಮ್ಮದ್ ಅಂತಿಮ ಓವರ್ ಎಸೆಯಲು ಕಣಕ್ಕಿಳಿದಿದ್ದರು. ಮೊದಲ ಎಸೆತ ವೈಟ್ ಆಗಿದ್ದರೆ ಎರಡನೇ ಎಸೆತದಲ್ಲಿ ಯಾವುದೇ ರನ್ ಬಾರಲಿಲ್ಲ. ನಂತರದ ಎರಡು ಎಸೆತಗಳಲ್ಲಿ ಹುಸೈನ್ ಸತತ ಬೌಂಡರಿ ಸಿಡಿಸಿದರು. ಮತ್ತೊಂದು ವೈಡ್ ಬಾಲ್ ಎಸೆದರು ಸಕೀಬ್. ಆದರೆ ನಂತರದ ಮೂರು ಎಸೆತಗಳಲ್ಲಿಯೂ ಅಕೀಲ್ ಹುಸೈನ್ ಭರ್ಜರಿ ಮೂರು ಸಿಕ್ಸರ್ ಸಿಡಿಸಿದರು. ಆದರೆ ಅಂತಿಮವಾಗಿ ವೆಸ್ಟ್ ಇಂಡೀಸ್ ಪಂದ್ಯವನ್ನು ಟೈ ಮಾಡಿಕೊಳ್ಳಲು ಒಂದು ರನ್‌ಗಳ ಕೊರತೆಯನ್ನು ಅನುಭವಿಸಿತು. ಹೀಗಾಗಿ ರೋಚಕ ಹೋರಾಟದ ಹೊರತಾಗಿಯೂ ಒಂದು ರನ್‌ಗಳ ಅಂತರದಿಂದ ವೆಸ್ಟ್ ಇಂಡೀಸ್ ಸೋಲು ಅನುಭವಿಸಿದೆ.

Virat Kohli ಮಗಳನ್ನ ಯಾರೂ ನೋಡ್ಬೇಡಿ ಶೇರ್ ಮಾಡ್ಬೇಡಿ!!ಯಾಕ್ ಗೊತ್ತಾ? | Oneindia Kannada
ಇತ್ತಂಡಗಳ ಆಡುವ ಬಳಗ

ಇತ್ತಂಡಗಳ ಆಡುವ ಬಳಗ

ವೆಸ್ಟ್ ಇಂಡೀಸ್ ಆಡುವ ಬಳಗ: ಬ್ರೆಂಡನ್ ಕಿಂಗ್, ಶಾಯ್ ಹೋಪ್ (ವಿಕೆಟ್ ಕೀಪರ್), ನಿಕೋಲಸ್ ಪೂರನ್, ಡ್ಯಾರೆನ್ ಬ್ರಾವೋ, ಕಿರಾನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಫ್ಯಾಬಿಯನ್ ಅಲೆನ್, ರೊಮಾರಿಯೋ ಶೆಫರ್ಡ್, ಓಡಿಯನ್ ಸ್ಮಿತ್, ಅಕೇಲ್ ಹೋಸೇನ್, ಶೆಲ್ಡನ್ ಕಾಟ್ರೆಲ್
ಬೆಂಚ್: ರೋವ್ಮನ್ ಪೊವೆಲ್, ರೋಸ್ಟನ್ ಚೇಸ್, ಕೈಲ್ ಮೇಯರ್ಸ್, ಹೇಡನ್ ವಾಲ್ಷ್, ಡೊಮಿನಿಕ್ ಡ್ರೇಕ್ಸ್

ಇಂಗ್ಲೆಂಡ್ ಆಡುವ ಬಳಗ: ಜೇಸನ್ ರಾಯ್, ಟಾಮ್ ಬ್ಯಾಂಟನ್, ಜೇಮ್ಸ್ ವಿನ್ಸ್, ಮೊಯಿನ್ ಅಲಿ, ಇಯಾನ್ ಮಾರ್ಗನ್ (ನಾಯಕ), ಸ್ಯಾಮ್ ಬಿಲ್ಲಿಂಗ್ಸ್ (ವಿಕೆಟ್ ಕೀಪರ್), ಲಿಯಾಮ್ ಡಾಸನ್, ಕ್ರಿಸ್ ಜೋರ್ಡಾನ್, ಆದಿಲ್ ರಶೀದ್, ಸಾಕಿಬ್ ಮಹಮೂದ್, ರೀಸ್ ಟೋಪ್ಲಿ
ಬೆಂಚ್: ಟೈಮಲ್ ಮಿಲ್ಸ್, ಲಿಯಾಮ್ ಲಿವಿಂಗ್ಸ್ಟೋನ್, ಹ್ಯಾರಿ ಬ್ರೂಕ್, ಡೇವಿಡ್ ಪೇನ್, ಫಿಲಿಪ್ ಸಾಲ್ಟ್, ಜಾರ್ಜ್ ಗಾರ್ಟನ್

Story first published: Monday, January 24, 2022, 15:41 [IST]
Other articles published on Jan 24, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X