ಬ್ರಿಟೀಷ್ ಪಾರ್ಲಿಮೆಂಟ್‌ನ ಸದಸ್ಯರಾಗಿ ಇಯಾನ್ ಬೋಥಮ್ ಆಯ್ಕೆ

ಇಂಗ್ಲೆಂಡ್‌ನ ದಿಗ್ಗಜ ಇಯಾನ್ ಬೋಥಮ್ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಇಯಾನ್ ಬೋಥಮ್ ಅವರನ್ನು ಬ್ರಿಟಿಷ್ ಪಾರ್ಲಿಮೆಂಟ್‌ನ 'ಹೌಸ್‌ ಆಫ್ ಲಾರ್ಡ್ಸ್'ನ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. 64 ವರ್ಷದ ಇಯಾನ್ ಬಾಥಮ್ ಇಂಗ್ಲೆಂಡ್ ತಂಡದ ನಾಯಕರಾಗಿದ್ದರು.

1977ರಿಂದ 1992ರ ಅವಧಿಯಲ್ಲಿ ಇಂಗ್ಲೆಂಡ್ ಪರವಾಗಿ 102 ಟೆಸ್ಟ್ ಪಂದ್ಯಗಳನ್ನು ಆಡಿದ ಬೋಥಮ್ ಬ್ರೆಕ್ಸಿಟ್‌ನ ಪ್ರಮುಖ ಬೆಂಬಲಿಗರಾಗಿದ್ದರು. 2011ರಲ್ಲಿ ಇಂಗ್ಲೆಂಡ್‌ನ ಮಹಿಳಾ ತಂಡದ ಮಾಜಿ ನಾಯಕಿ ರಾಚೆಲ್ ಹೆಹೋ ಫ್ಲಿಂಟ್ ನಂತರ ಈ ಗೌರವ ಪಡೆದ ಮೊದಲ ಕ್ರಿಕೆಟರ್ ಎನಿಸಿದ್ದಾರೆ ಬೋಥಮ್.

ಸೀಮಿತ ಓವರ್‌ಗಳ ತಂಡದಲ್ಲಿ ಸ್ಥಾನ ಪಡೆಯುವ ಭರವಸೆ ವ್ಯಕ್ತಪಡಿಸಿದ ರಹಾನೆ

ಈ ಮೊದಲು ಡೇವಿಡ್ ಶೆಫರ್ಡ್, ಕಾಲಿನ್ ಕೌಡ್ರೆ ಮತ್ತು ಲಿಯರಿ ಕಾನ್‌ಸ್ಟಾಂಟೈನ್ ಈ ಮೊದಲು ಬ್ರಿಟಿಷ್ ಪಾರ್ಲಿಮೆಂಟ್‌ನ ಹೌಸ್ ಆಫ್ ಲಾರ್ಡ್ಸ್‌ನ ಸದಸ್ಯರಾಗಿ ಗೌರವವನ್ನು ಪಡೆದಿದ್ದರು. 1981ರಲ್ಲಿ ಇಂಗ್ಲೆಂಡ್ ತಂಡ ಆ್ಯಶಸ್ ಸರಣಿ ಗೆಲ್ಲಲು ಬೋಥಮ್ ಪ್ರಮುಖ ಪಾತ್ರವಹಿಸಿದ್ದರು.

ಇಯಾನ್ ಬೋಥಮ್ ನಿವೃತ್ತಿಯ ನಂತರ ಲ್ಯುಕೇಮೊಯಾ ಕುರಿತು ಸಂಶೋಧನೆಗೆ ಹಣವನ್ನು ಸಂಗ್ರಹಿಸುವುದು, ವೀಕ್ಷಕ ವಿವರಣೆ ನೀಡುವುದು ಮತ್ತು ದತ್ತಿ ಅಭಿಯಾನಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಮೂಲಕ ಸಾಕಷ್ಟು ಸಕ್ರಿಯರಾಗಿದ್ದಾರೆ.

'ಯುಎಇ ಸುರಕ್ಷಿತವಲ್ಲ, ಐಪಿಎಲ್‌ಅನ್ನು ಭಾರತದಲ್ಲೇ ಆಯೋಜಿಸಿ'

ಬ್ರಿಟೀಷ್ ಪಾರ್ಲಿಮೆಂಟ್‌ನ ಹೌಸ್ ಆಫ್ ಲಾರ್ಡ್ಸ್ ಭಾರತದ ಸಂಸತ್‌ನ ರಾಜ್ಯಸಭೆಗೆ ಸಮನಾಗಿದೆ. ಭಾರತದಲ್ಲಿ ಈ ಹಿಂದೆ ಸಚಿನ್ ತೆಂಡೂಲ್ಕರ್ ರಾಜ್ಯ ಸಭೆಯ ಸದಸ್ಯರಾಗಿ ಗೌರವವನ್ನು ಪಡೆದುಕೊಂಡಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಿಕೊಳ್ಳಬಹುದು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Sunday, August 2, 2020, 13:50 [IST]
Other articles published on Aug 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X