ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ಇಂಗ್ಲೆಂಡ್: ಟೀಮ್ ಇಂಡಿಯಾಕ್ಕೆ ಎಚ್ಚರಿಸಿದ ಕಿರಣ್ ಮೋರೆ

England always come well prepared, India shouldnt take them lightly, says Kiran More

ನವದೆಹಲಿ: ಆಸ್ಟ್ರೇಲಿಯಾದಲ್ಲಿ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿ ಗೆದ್ದು ಇತಿಹಾಸ ನಿರ್ಮಿಸಿರುವ ಟೀಮ್ ಇಂಡಿಯಾ ಫೆಬ್ರವರಿ 5ರಿಂದ ಇಂಗ್ಲೆಂಡ್ ವಿರುದ್ಧ ಮತ್ತೊಂದು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಎದುರುಗೊಳ್ಳಲಿದೆ. ಮೊದಲ ಟೆಸ್ಟ್ ಪಂದ್ಯ ಫೆಬ್ರವರಿ 5ರಂದು ಚೆನ್ನೈಯ ಚಿದಂಬರಂ ಸ್ಟೇಡಿಯಂನಲ್ಲಿ ಆರಂಭಗೊಳ್ಳಲಿದೆ.

ವಿಜಯ್ ಹಜಾರೆ ಟ್ರೋಫಿಗೆ 22 ಮಂದಿಯ ತಂಡ ಪ್ರಕಟಿಸಿದ ಕರ್ನಾಟಕವಿಜಯ್ ಹಜಾರೆ ಟ್ರೋಫಿಗೆ 22 ಮಂದಿಯ ತಂಡ ಪ್ರಕಟಿಸಿದ ಕರ್ನಾಟಕ

ಆಸ್ಟ್ರೇಲಿಯಾದಲ್ಲಿ ಭಾರತದ ಸಾಧನೆಯನ್ನು ಭಾರತದ ಮಾಜಿ ಆಟಗಾರ ಕಿರಣ್ ಮೋರೆ ಶ್ಲಾಘಿಸಿದ್ದಾರೆ. ಆದರೆ ಭಾರತಕ್ಕೆ ಬರುತ್ತಿರುವ ಆಂಗ್ಲರನ್ನು ಹಗುರವಾಗಿ ಪರಿಗಣಿಸಬೇಡಿ. ಯಾಕೆಂದರೆ ಈ ತಂಡ ಶ್ರೀಲಂಕಾವನ್ನು 2-0ಯಿಂದ ಸೋಲಿಸಿದೆ ಎಂದು ಟೀಮ್ ಇಂಡಿಯಾವನ್ನು ಮೋರೆ ಎಚ್ಚರಿಸಿದ್ದಾರೆ.

'ಇಂಗ್ಲೆಂಡ್ ವಿರುದ್ಧ ಭಾರತ ಖಂಡಿತಾ ಒಳ್ಳೆಯ ಪ್ರದರ್ಶನ ನೀಡುತ್ತಿದೆ. ಆದರೆ ಇಂಗ್ಲೆಂಡ್ ಯಾವತ್ತಿಗೂ ಒಳ್ಳೆಯ ತಯಾರಿ ಮಾಡಿಕೊಂಡೇ ಭಾರತಕ್ಕೆ ಬರುತ್ತದೆ. ಅವರು ಭಾರತಕ್ಕೆ ಅಚ್ಚರಿ ನೀಡಬಲ್ಲರು. ಇಂಗ್ಲೆಂಡ್‌ನಲ್ಲಿ ಎರಡು ವಿಧದ ಸ್ಪಿನ್ನರ್‌ಗಳಿದ್ದಾರೆ. ಆಸ್ಟ್ರೇಲಿಯಾ ಸರಣಿ ಗೆದ್ದಿರುವ ಭಾರತ ಆಂಗ್ಲರನ್ನು ಹಗುರವಾಗಿ ಪರಿಗಣಿಸಬಾರದು,' ಎಂದು ಟೈಮ್ಸ್ ಆಫ್ ಇಂಡಿಯಾ ಜೊತೆ ಮೋರೆ ಹೇಳಿಕೊಂಡಿದ್ದಾರೆ.

ಒಲಿಂಪಿಕ್ ಪದಕ ವಿಜೇತ ಸೈಕ್ಲಿಸ್ಟ್ ರೈಸ್ಜಾರ್ಡ್ ಸುರ್ಕೊವ್ಸ್ಕಿ ನಿಧನಒಲಿಂಪಿಕ್ ಪದಕ ವಿಜೇತ ಸೈಕ್ಲಿಸ್ಟ್ ರೈಸ್ಜಾರ್ಡ್ ಸುರ್ಕೊವ್ಸ್ಕಿ ನಿಧನ

ಭಾರತಕ್ಕೆ ಪ್ರವಾಸ ಬಂದಿರುವ ಇಂಗ್ಲೆಂಡ್ ತಂಡ ಮೊದಲು ನಾಲ್ಕು ಪಂದ್ಯಗಳ ಟೆಸ್ಟ್ ಸರಣಿ ಆಡಲಿದೆ. ಬಳಿಕ ಐದು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಆರಂಭಿಕ ಎರಡು ಟೆಸ್ಟ್ ಪಂದ್ಯಗಳು ಚೆನ್ನೈಯ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯಲಿದೆ.

Story first published: Monday, February 1, 2021, 23:13 [IST]
Other articles published on Feb 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X