ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಬಿಎಲ್ ಫ್ರಾಂಚೈಸಿ ಪರ್ತ್ ಸ್ಕಾರ್ಚರ್ಸ್‌ಗೆ ಸಹಿ ಹಾಕಿದ ಜೇಸನ್ ರಾಯ್

England batsman Jason Roy play for BBL franchise Perth Scorchers

ಲಂಡನ್: ಇಂಗ್ಲೆಂಡ್ ತಂಡದ ಆಕ್ರಮಣಕಾರಿ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಮುಂಬರಲಿರುವ ಬಿಗ್‌ ಬ್ಯಾಷ್ ಲೀಗ್‌ನಲ್ಲಿ ಆಡಲಿದ್ದಾರೆ. ಬಿಬಿಎಲ್ ಫ್ರಾಂಚೈಸಿ ಪರ್ತ್ ಸ್ಕಾರ್ಚರ್ಸ್ ಜೊತೆಗೆ ರಾಯ್ ಒಪ್ಪಂದ ಮಾಡಿಕೊಂಡಿದ್ದಾರೆ. ಟ್ವಿಟರ್‌ನಲ್ಲಿ ವಿಡಿಯೋ ಹಂಚಿಕೊಳ್ಳುವ ಮೂಲಕ ರಾಯ್ ಈ ವಿಚಾರ ತಿಳಿಸಿದ್ದಾರೆ.

'ನನ್ನ ಬೌಲಿಂಗ್‌ಗೆ ಚಚ್ಚುತ್ತಿದ್ದರು': ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಹೆಸರಿಸಿದ ಶೇನ್ ವಾರ್ನ್'ನನ್ನ ಬೌಲಿಂಗ್‌ಗೆ ಚಚ್ಚುತ್ತಿದ್ದರು': ಇಬ್ಬರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳ ಹೆಸರಿಸಿದ ಶೇನ್ ವಾರ್ನ್

'ಮುಂಬರಲಿರುವ ಬಿಗ್‌ ಬ್ಯಾಷ್ ಲೀಗ್‌ನಲ್ಲಿ ಪರ್ತ್ ಸ್ಕಾಚರ್ಸ್‌ನ ಟಾಪ್ ಆರ್ಡರ್‌ನಲ್ಲಿ ಆಕ್ರಮಣಕಾರಿ ಬ್ಯಾಟ್ಸ್‌ಮನ್ ಇರಲಿದ್ದಾರೆ. ಇಂಗ್ಲೆಂಡ್‌ನ ಸ್ಫೋಟಕ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್ ಸಹಿ ಹಾಕಿದ್ದಾರೆ,' ಎಂದು ಪರ್ತ್ ಸ್ಕಾಚರ್ಸ್ ಹೇಳಿದೆ.

'ಸ್ಕಾರ್ಚರ್ಸ್‌ ತಂಡ ತುಂಬಾ ಬಲಿಷ್ಠವಾಗಿದೆ. ಅವರ ತಂಡ ಸೇರಿಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ಕ್ಲಬ್‌ನ ಪರಿಸರ ತುಂಬಾ ಚೆನ್ನಾಗಿದೆ ಎಂದು ಕೇಳಿದ್ದೇನೆ. ಇಂಥ ಜಾಗದಲ್ಲಿ ತಮ್ಮ ಬೆಸ್ಟ್ ಪ್ರದರ್ಶನ ನೀಡಲು ಎಲ್ಲರೂ ಬಯಸುತ್ತಾರೆ,' ಎಂದು ಫ್ರಾಂಚೈಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ರಾಯ್ ಹೇಳಿಕೊಂಡಿದ್ದಾರೆ.

ಭಾರತ vs ಆಸ್ಟ್ರೇಲಿಯಾ 2020-21ರ ಕ್ರಿಕೆಟ್ ಸರಣಿ: ಟೆಸ್ಟ್‌, ಏಕದಿನ, ಟಿ20 ಸಂಪೂರ್ಣ ವೇಳಾಪಟ್ಟಿಭಾರತ vs ಆಸ್ಟ್ರೇಲಿಯಾ 2020-21ರ ಕ್ರಿಕೆಟ್ ಸರಣಿ: ಟೆಸ್ಟ್‌, ಏಕದಿನ, ಟಿ20 ಸಂಪೂರ್ಣ ವೇಳಾಪಟ್ಟಿ

'ತಂಡದ ಹುಡುಗರ ಜೊತೆ ಸೇರಿ ನನ್ನಿಂದ ಸಾಧ್ಯವಾದಷ್ಟು ಪಂದ್ಯಗಳನ್ನು ಗೆಲ್ಲಿಸಿಕೊಡಲು ಕಾತರನಾಗಿದ್ದೇನೆ,' ಎಂದು ರಾಯ್ ಹೇಳಿದ್ದಾರೆ. ರಾಯ್ ಅವರು ಇನ್ನೊಬ್ಬ ಇಂಗ್ಲೆಂಡ್ ಬ್ಯಾಟ್ಸ್‌ಮನ್ ಲಿಯಾಮ್ ಲಿವಿಂಗ್‌ಸ್ಟೋನ್ ಜೊತೆ ಪರ್ತ್ ತಂಡದಲ್ಲಿರಲಿದ್ದಾರೆ. ಲಿವಿಂಗ್‌ಸ್ಟೋನ್ ಕೂಡ ಇದೇ ಸೀಸನ್‌ನಲ್ಲಿ ಸ್ಕಾಚರ್ಸ್ ಸೇರಿಕೊಂಡಿದ್ದಾರೆ.

Story first published: Friday, October 23, 2020, 18:27 [IST]
Other articles published on Oct 23, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X