ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತೀಯ ನೆಲದಲ್ಲಿ ಇಂಗ್ಲೆಂಡ್ ಬ್ಯಾಟಿಂಗ್ ಗುಣಮಟ್ಟ ಸಾಕಾಗದು: ಆ್ಯಂಡ್ರೋ ಸ್ಟ್ರಾಸ್

England batting in Indian conditions is not good enough, says Andrew Strauss

ಭಾರತದ ವಿರುದ್ಧದ ಅಂತಿಮ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನವನ್ನು ನೀಡಿದ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳನ್ನು ಇಂಗ್ಲೆಂಡ್ ತಂಡದ ಮತ್ತೋರ್ವ ಮಾಜಿ ಕ್ರಿಕೆಟಿಗ ಟೀಕಿಸಿದ್ದಾರೆ. ಮೈಕಲ್ ವಾನ್ ಕೆವಿನ್ ಪೀಟರ್ಸನ್ ಬಳಿಕ ಆಂಡ್ರೋ ಸ್ಟ್ರಾಸ್ ಕೂಡ ಭಾರತೀಯ ನೆಲದಲ್ಲಿ ಇಂಗ್ಲೆಂಡ್ ಆಟಗಾರರ ಕಳಪೆ ಬ್ಯಾಟಿಂಗ್ ಬಗ್ಗೆ ಕುಟುಕಿದ್ದಾರೆ.

ಮೂರನೇ ಟೆಸ್ಟ್ ಪಂದ್ಯ ಎರಡೇ ದಿನಕ್ಕೆ ಅಂತ್ಯವಾದ ಬಳಿಕ ಸ್ಟ್ರಾಸ್ ಅಹ್ಮದಾಬಾದ್ ಪಿಚ್ ಬಗ್ಗೆ ಟೀಕೆಯನ್ನು ಮಾಡಿದ್ದರು. ನಾಲ್ಕನೇ ಪಂದ್ಯವನ್ನು ಕೂಡ ಅಹ್ಮದಾಬಾದ್‌ನಲ್ಲಿಯೇ ಆಡಿದ್ದರಾದರೂ ಬೇರೆ ಪಿಚ್‌ನಲ್ಲಿ ಆಡಲಾಗುತ್ತಿದೆ. ಈ ಹಿಂದಿನ ಪಂದ್ಯದಂತೆ ಹೆಚ್ಚಿನ ತಿರುವನ್ನು ಚೆಂಡು ಪಿಚ್ ಈ ಪಿಚ್‌ನಲ್ಲಿ ಮೊದಲ ದಿನದಾಟದಲ್ಲಿ ಪಡೆದಿರಲಿಲ್ಲ. ಹಾಗಿದ್ದರೂ ಇಂಗ್ಲೆಂಡ್ 205 ರನ್‌ಗಳಿಸಲಷ್ಟೇ ಶಕ್ತವಾಗಿತ್ತು.

ಭಾರತ vs ಇಂಗ್ಲೆಂಡ್: ಅಂತಿಮ ಟೆಸ್ಟ್, 2ನೇ ದಿನ, Live ಸ್ಕೋರ್ ಮಾಹಿತಿಭಾರತ vs ಇಂಗ್ಲೆಂಡ್: ಅಂತಿಮ ಟೆಸ್ಟ್, 2ನೇ ದಿನ, Live ಸ್ಕೋರ್ ಮಾಹಿತಿ

"ಭಾರತೀಯ ಬೌಲಿಂಗ್ ದಾಳಿ ಅತ್ಯುತ್ತಮವಾಗಿತ್ತು. ನಾವು ಉತ್ತಮ ಗುಣಮಟ್ಟದ ಭಾರತೀಯ ಬೌಲಿಂಗ್ ದಾಳಿಯನ್ನು ನಿರೀಕ್ಷಿಸಿದ್ದೆವು. ಆದರೆ ಸತ್ಯವನ್ನು ನಾವು ಮರೆಮಾಚಲು ಸಾಧ್ಯವಿಲ್ಲ. ಇಂತಾ ಪರಿಸ್ಥಿತಿಯಲ್ಲಿ ಇಂಗ್ಲೆಂಡ್ ತಂಡದ ಬ್ಯಾಟಿಂಗ್ ಗುಣಮಟ್ಟ ಸಾಕಾಗಲಿಲ್ಲ. ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ" ಎಂದಿದ್ದಾರೆ ಆ್ಯಂಡ್ರೋ ಸ್ಟ್ರಾಸ್.

"ಪಿಚ್‌ ಬಗ್ಗೆ, ಎಸೆತಗಳ ಬಗ್ಗೆ ಹಾಗೂ ಅನನುಭವದ ಬಗ್ಗೆ ಎಲ್ಲಾ ರೀತಿಯ ನೆಪಗಳನ್ನು ನೀವು ಯೋಚಿಸಬಹುದು. ಆದರೆ ಭಾರತದಲ್ಲಿ ನೀವು ಗೆಲ್ಲಲೇಬೇಕಾದರೆ ಮೊದಲ ಇನ್ನಿಂಗ್ಸ್‌ನಲ್ಲಿ ನೀವು ರನ್‌ಗಳಿಸಿವು ದಾರಿಯನ್ನು ಹೊಂದಿರಲೇಬೇಕು. ಅದನ್ನು ಇಂಗ್ಲೆಂಡ್‌ಗೆ ಸಾಧಿಸಲು ಸಾಧ್ಯವಾಗಿಲ್ಲ" ಎಂದಿದ್ದಾರೆ ಸ್ಟ್ರಾಸ್.

ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್ಕೊಹ್ಲಿ ಮತ್ತು ಸ್ಟೋಕ್ಸ್ ನಡುವೆ ಮಾತಿನ ಚಕಮಕಿ: ನಿಜಕ್ಕೂ ಆಗಿದ್ದೇನೆಂದು ವಿವರಿಸಿದ ಸಿರಾಜ್

ಇಂಗ್ಲಂಡ್ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಮೂರು ಪಂದ್ಯಗಳಲ್ಲಿ ಭಾರತ 2-1 ಅಂತರದಿಂದ ಮುನ್ನಡೆಯನ್ನು ಸಾಧಿಸಿದೆ. ಅಂತಿಮ ಪಂದ್ಯದಲ್ಲಿ ಇಂಗ್ಲೆಂಡ್‌ಗೆ ಸರಣಿಯನ್ನು ಡ್ರಾ ಗೊಳಿಸಬೇಕಾದರೆ ಗೆಲುವು ಅನಿವಾರ್ಯವಾಗಿದೆ.

Story first published: Friday, March 5, 2021, 11:38 [IST]
Other articles published on Mar 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X